ಎವೊಲ್ವುಲುಸ್ ಆಲ್ಸಿನೋಯ್ಡ್ಸ್ ಸಸ್ಯವನ್ನು ಒಣಗಿಸಿ ಮಾಡಿದ ಪುಡಿ 3 – 6 ಗ್ರಾಮ್ ನಷ್ಟು ಹಸುವಿನ ಹಾಲಿನಲ್ಲಿ ಬೆರೆಸಿ ಒಂದು ತಿಂಗಳು ಸೇವನೆಮಾಡಿದಲ್ಲಿ ಜ್ಞಾಪಕ ಶಕ್ತಿ ಜಾಸ್ತಿಯಾಗುತ್ತೆ. ಮಂಜುನಾಥ್ ಪ್ರಸಾದ್ ಅವರು ಸಸ್ಯದ ಮಹತ್ವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ….
ಇದು ನಾವು ಸಾಮಾನ್ಯವಾಗಿ ಕರೆಯುವ ವಿಷ್ಣುಕಾಂತಿ ಅಥವಾ ವಿಷ್ಣು ಕ್ರಾಂತಿ ಎಂಬ ಎಲ್ಲೆಡೆ ಬೆಳೆಯುವ ಸಸ್ಯ. Slender dwarf morning glory ಎಂಬುದು ಇಂಗ್ಲಿಷ್ ಹೆಸರು. ವ್ಯಜ್ಞಾನಿಕ ಹೆಸರು : Evolvulus alsinoides. Convolvulace ಕುಟುಂಬ. ಇತರೆಡೆ ಬೇರೆ ಬೇರೆ ಹೆಸರುಗಳಿವೆ. ನಮ್ಮಲ್ಲಿ ಹೆಚ್ಚಾಗಿ ಎಲ್ಲಾ ಕಡೆ ಒಣ ಹಾಗೂ ಬರಡು ಭೂಮಿಯಲ್ಲಿ, ರಸ್ತೆ ಬದಿಗಳಲ್ಲಿ, ಕಲ್ಲು ಬಂಡೆಗಳ ಸಂದುಗಳಲ್ಲಿ ತಿಳಿ ನೀಲಿಯಿಂದ ಗಾಢ ನೀಲಿಹೂವು ಬಿಡುವ ಈ ಸಸ್ಯ ಸಾಮಾನ್ಯ.
ಬಿಳಿ ಹಾಗೂ ಗುಲಾಬಿ ಬಣ್ಣದ ಹೂವು ಬಿಡುವ ಸಸ್ಯ ಸ್ವಲ್ಪ ಅಪರೂಪ. ವರ್ಷವಿಡೀ ಹೂವು ಬಿಡುತ್ತದೆ. ಆದರೆ ಇತ್ತೀಚೆಗೆ ಮನೆ, ತೋಟಗಳಲ್ಲಿ ಅಲಂಕಾರಿಕ ಬಳ್ಳಿಯಾಗಿ ಬೆಳೆಸುತ್ತಿರುವುದರಿಂದ ಕಪ್ಪು, ಕೆಂಪು ಅಲ್ಲದೆ ಹಲವಾರು ಚಿತ್ರ ವಿಚಿತ್ರ ಬಣ್ಣಗಳ ಹೈಬ್ರಿಡ್ ಹೂವುಗಳನ್ನು ಬೆಳೆಸುತ್ತಿದ್ದಾರೆ. ಆದರೆ ಔಷಧೀಯ ಗುಣಗಳಿಗೆ ನೀಲಿ ಬಣ್ಣದ, ನೈಸರ್ಗಿಕವಾಗಿ ಬೆಳೆದ ಹೂವು ಮತ್ತು ಸಸ್ಯವೇ ಆಗಬೇಕು.
ಇದರ ಸಾರದಲ್ಲಿ Scopotetin, Umbelliferone ಹಾಗೂ Scopolin ಎಂಬ ಔಷಧೀಯ ವಿಶಿಷ್ಟವಾದ ರಾಸಾಯನಿಕಗಳಿದ್ದು ಅವೆಲ್ಲವೂ ಮೆದುಳಿಗೆ, ನರಮಂಡಲಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವ ಗುಣ ಹೊಂದಿವೆ.
ಮನೋ ರೋಗಕ್ಕೆ ಒಳಗಾದವರ ಚಿಕಿತ್ಸೆಗೆ ನಾಟಿ ಮದ್ದಾಗಿ ಈ ಸಸ್ಯದ ಹೂವಿನ ಸೇವನೆ ಮಾಡಬೇಕು, ಅಲ್ಲದೆ ಬುದ್ಧಿಶಕ್ತಿ ಬೆಳೆಯಲು brain tonic ರೀತಿ ಬಳಕೆ ಮಾಡಬಹುದು (Used as Psychotropic and Nootropic ).
ಸಸ್ಯವನ್ನು ಒಣಗಿಸಿ ಮಾಡಿದ ಪುಡಿ 3 – 6 ಗ್ರಾಮ್ ನಷ್ಟು ಹಸುವಿನ ಹಾಲಿನಲ್ಲಿ ಬೆರೆಸಿ ಒಂದು ತಿಂಗಳು ಸೇವನೆಮಾಡಿದಲ್ಲಿ ಜ್ಞಾಪಕ ಶಕ್ತಿ ಜಾಸ್ತಿಯಾಗುತ್ತೆ. ಆತಂಕ (anxity / stress) ಕಮ್ಮಿಯಾಗುತ್ತೆ.
ಸಸ್ಯದ ಬೇರಿನಿಂದ ಮಾಡಿದ ಕಷಾಯದಲ್ಲಿ antivirus, antibacterial ಗುಣಗಳಿದ್ದು ಎಲ್ಲಾ ತರಹದ ಜ್ವರಕ್ಕೆ ಉತ್ತಮ ಮನೆಮದ್ದು. ಹಾಗೂ ರಕ್ತ ಶುದ್ಧಿಕಾರಕ. UTI – Urinery Track Infection ಗೆ ಸಹಾ ಉತ್ತಮ ಮನೆಮದ್ದು.
ಜ್ವರ : ಎರಡು ಅಳತೆ ನೀರಿಗೆ, ಇಡೀ ಗಿಡವನ್ನು 3 ಹಿಡಿಯಷ್ಟು ಚೆನ್ನಾಗಿ ತೊಳೆದು ಹೆಚ್ಚಿಕೊಂಡು ಹಾಕಿ. ನಂತರ ಒಂದು ಹಿಡಿ ತುಳಸಿ ಎಲೆಗಳನ್ನು ಸೇರಿಸಿ, ಒಂದು ಅಳತೆಗೆ ಇಂಗುವಸ್ಟು ಇಳಿಸಿ ಶೋಧಿಸಿ ಕುಡಿಯಬೇಕು. ಆಗತಾನೆ ಕಿತ್ತ ಎಲೆಗಳನ್ನು, ಹೂವುಗಳ ಸಹಿತ ರುಬ್ಬಿ ಕೂದಲ ಬುಡದಲ್ಲಿ ಹಚ್ಚಿ ವಾರಕ್ಕೆರಡು ಸಲ ಮೃದುವಾಗಿ ಮಸಾಜ್ ಮಾಡಿಕೊಳ್ಳುತ್ತಿದ್ದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಬಿಳಿ ಕೂದಲು ಕಮ್ಮಿಯಾಗುತ್ತೆ. ಇದನ್ನು 3 – 4 ವಾರ ಸತತವಾಗಿ ಮಾಡಬೇಕು. ಅಥವ ಸಣ್ಣಗೆ ತುಂಡು ಮಾಡಿದ ಗಿಡವನ್ನು ಕೊಬ್ಬರಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ನೀರು ಇಂಗುವವರೆಗೂ ಕುದಿಸಿ, ಶೋಧಿಸಿ ಇಟ್ಟುಕೊಂಡು ಪ್ರತಿದಿನ ಹಚ್ಚಬೇಕು.
ಗಿಡದ ಕಷಾಯದ ಸೇವನೆ ಅಧಿಕ ರಕ್ತದೊತ್ತಡ ಕಮ್ಮಿಮಾಡುವುದು. ಆದರೆ hypertension – BP ಇರುವವರು ಸರಿಯಾದ ಮಾರ್ಗದರ್ಶನ ಸಹಿತ ಸೇವಿಸಬೇಕು. ಸೇವನೆಯ ಪ್ರಮಾಣ ಹೆಚ್ಚಾದರೆ low BP ಆಗುವ ಸಂಭವವಿದೆ. ಕಷಾಯದ ಸೇವನೆ ಆಮಶಂಕೆ ( dysentery) ನಿವಾರಿಸುತ್ತದೆ ಅಲ್ಲದೆ ಮೂಲವ್ಯಾದಿ ( piles ) ಗೆ ಪರಿಹಾರ. ಮಲಬದ್ಧತೆ ( constupation ) ಸಹ ಗುಣವಾಗುತ್ತದೆ.
ಒಣಗಿದ ಎಲೆಗಳನ್ನು ಬೀಡಿ / ಸಿಗರೇಟು ತರಹ ಸುರುಳಿ ಸುತ್ತಿ ಸೇದಿದಲ್ಲಿ ಆಸ್ತಮಾ, bronchitis, ದೀರ್ಘಕಾಲದ ಕೆಮ್ಮು, ಕಫ ನಿವಾರಣೆ ಆಗುವುದು. ಹಸಿ ಎಲೆಗಳನ್ನು ಸ್ವಲ್ಪ ಕಚ್ಚಿ / ಜಜ್ಜಿ ಇಟ್ಟುಕೊಂಡಲ್ಲಿ ಹಲ್ಲು ನೋವು ಉಪಶಮನವಾಗುತ್ತೆ. ಅಲ್ಲದೆ ಪೂರ್ತಿಯಾಗಿ ( ಬೇರು ಸಮೇತ ) ಮಾಡಿದ ಕಷಾಯ ನಿಯಮಿತವಾಗಿ ಸೇವಿಸುವುದರಿಂದ ನಮ್ಮ ದೇಹದ ರೋಗ ನಿಯಂತ್ರಣ ಶಕ್ತಿ ( immunity ) ಜಾಸ್ತಿಯಾಗುತ್ತೆ. ನಮ್ಮ ಕೆಲವು ಭಾಗಗಳಲ್ಲಿ ಹಾಗೂ ಪಕ್ಕದ ಗೋವಾ ಎಲೆಗಳಿಂದ ಅನ್ನದ ಜೊತೆ ತಿನ್ನಲು ತಂಬುಳಿ ಸಹಾ ಮಾಡುತ್ತಾರೆ.
- ಮಂಜುನಾಥ್ ಪ್ರಸಾದ್