ಪ್ರಾಣ ಪಕ್ಷಿ ಹಾರಿ ಹೋಯಿತು… ಉಗ್ರರ ಅಟ್ಟಹಾಸದ ವರ್ತನೆಗೆ… ಪ್ರತಿಕಾರ ಜ್ವಾಲೆ ಮನದೊಳಗೆ… ಎಲ್ಲೆಲ್ಲೂ ಮೌನ ತಲೆದೂಗಿದೆ…ಕವಿಯತ್ರಿ ರೇಣುಕಾ ವಾಯ್.ಎ. ಅವರ ಭಾವನಾತ್ಮಕ ಕವನವನ್ನು ತಪ್ಪದೆ ಮುಂದೆ ಓದಿ…
ಧರ್ಮದ ಹೆಸರಿನಲ್ಲಿ ಸಾಗಿದೆ
ಉಗ್ರರ ಹೋರಾಟ ಊರಾಚೆ
ಅಧರ್ಮದ ಹಾದಿ ತುಳಿಯುತ್ತಿದೆ
ಮಾನವೀಯತೆ ಇಲ್ಲಿ ಮರೀಚಿಕೆ.
ರಜೆಯ ಮಜಾ ಮಾಡೋಕೆ
ಸಾಗಿತು ಪಯಣ ದೂರ ದೂರಕೆ
ಕಣ್ಮನ ಸೆಳೆಯುವ ಕಾಶ್ಮೀರ ನಾಡಿಗೆ
ಮನದುಂಬಿ ಆನಂದ ಹೊಂದೋಕೆ.
ಪರಿಸ್ಥಿತಿ ಕೈಮೀರಿ ಹೋಯಿತು
ಸುರಿಮಳೆ ಗುಂಡಿನ ದಾಳಿಗೆ
ಪ್ರಾಣ ಪಕ್ಷಿ ಹಾರಿ ಹೋಯಿತು
ಉಗ್ರರ ಅಟ್ಟಹಾಸದ ವರ್ತನೆಗೆ
ಪತಿ ಕಳೆದುಕೊಂಡ ವನಿತೆ
ಪರದಾಡುತ್ತಿದ್ದಾಳೆ ದಿಕ್ಕು ತೋಚದೆ
ಪ್ರತಿಕಾರ ಜ್ವಾಲೆ ಮನದೊಳಗೆ
ಎಲ್ಲೆಲ್ಲೂ ಮೌನ ತಲೆದೂಗಿದೆ.
- ರೇಣುಕಾ ವಾಯ್.ಎ.
