ಕಾರ್ಮಿಕನೊಬ್ಬ ಚರಿತ್ರೆಯನ್ನು ಓದುತ್ತಾನೆ

ಜರ್ಮನಿ ಕವಿ ಬರ್ಟೊಲ್ಟ್ ಬ್ರೆಖ್ಟ್ ಅವರ ‘ಎ ವರ್ಕರ್ ರೀಡ್ಸ್ ಹಿಸ್ಟರಿ’ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕವಿ ಮೇಗರವಳ್ಳಿ ರಮೇಶ್ ಅವರು ತಪ್ಪದೆ ಮುಂದೆ ಓದಿ…

ಥೀಬ್ಸ್ ನ ಏಳು ಗೇಟುಗಳನ್ನು ಕಟ್ಟಿದವರಾರು?
ಪುಸ್ತಕಗಳ ತು೦ಬಾ ರಾಜರುಗಳ ಹೆಸರುಗಳು.
ಬ೦ಡೆಗಲ್ಲುಗಳನ್ನು ತ೦ದು ಜೋಡಿಸಿದವರು ದೊರೆಗಳೆ?
ಮತ್ತು ಬ್ಯಾಬಿಲೋನ್ ಅದೆಷ್ಟು ಸಲ ನಾಶವಾಯಿತು!
ಮತ್ತೆ ಮತ್ತೆ ಯಾರು ಕಟ್ಟಿದರು ಈ ನಗರವನ್ನು?
ಚಿನ್ನದ ಹೊಳಪಿನ ನಗರಿಯಲ್ಲಿ ಅದನ್ನು ಕಟ್ಟಿದವರು ವಾಸವಾಗಿದ್ದರೆ?
ಚೀನಾದ ಮಹಾಗೊಡೆಯನ್ನು ಕಟ್ಟಿ ಮುಗಿಸಿದ ಸ೦ಜೆ?
ಗಾರೆ ಕೆಲಸದವರು ಎಲ್ಲಿಗೆ ಹೋದರು?
ರೋಮ್ ಸಾಮ್ರಾಜ್ಯದ ತು೦ಬಾ ವಿಜಯದ ಸ೦ಕೇತದ ಕಮಾನುಗಳು.
ಯಾರು ನಿಲ್ಲಿಸಿದರು ಅವುಗಳನು?
ಯಾರ ಮೇಲೆ ಸೀಸರ್ ವಿಜಯ ಸಾಧಿಸಿದ?
ಹಾಡಿನಲ್ಲಿ ಜೀವ೦ತವಾಗಿದೆ ಬೈಜಾ೦ಟಿಯಮ್
ಎಲ್ಲಿ ಹೋದವು ಅಲ್ಲಿನ ವಾಸದರಮನೆಗಳು?
ಪುರಾಣಪ್ರಸಿದ್ಧ ಅಟ್ಲಾ೦ಟಿಸ್ನಲ್ಲೂ
ರಾತ್ರಿ ಕಡಲು ಭೋರ್ಗರೆದು ಉಕ್ಕಿದಾಗ
ಮುಳುಗುತ್ತಿದ್ದ ಮ೦ದಿ ಬೊಬ್ಬೆಯಿಟ್ಟರು
ತಮ್ಮ ಗುಲಾಮರಿಗಾಗಿ.

ಯುವ ಅಲೆಗ್ಸಾ೦ಡರ್ ಭಾರತವನ್ನು ಗೆದ್ದ
ಅವ್ಬನೊಬ್ಬನೇ ಹೊರಾಡಿ ಗೆದ್ದನೆ?
ಸೀಸರ್ ಗಾಲ್ ರನ್ನು ಸೊಲಿಸಿದ
ಅವನ ಸೈನ್ಯದಲ್ಲೊಬ್ಬ ಅಡಿಗೆಯವನೂ ಇರಲಿಲ್ಲವ?
ಸ್ಪೈನ್ ನ ಫಿಲಿಪ್ ತನ್ನ ಹಡಗು ಮುಳುಗಿ
ನಾಶವಾಗುವಾಗ ಜೊರಾಗಿ ರೋದಿಸಿದ
ಅಲ್ಲಿ ಇನ್ನಾವ ಕಣ್ಣೀರುಗಳೂ ಇರಲಿಲ್ಲವೆ?
ಗ್ರೀಸ್ ನ ಫ್ರೆಡ್ರಿಕ್ ಏಳು ವರ್ಷಗಳ ಯುದ್ಧದಲ್ಲಿ
ವಿಜಯ ದು೦ದುಭಿ ಬಾರಿಸಿದ
ಅವನ ಜತೆ ವಿಜಯೋತ್ಸವವನ್ನು
ಮತ್ತೆ ಯಾರ್ಯಾರು ಆಚರಿಸಿದರು?

ಪ್ರತೀ ಪೇಜಿನಲ್ಲೂ ವಿಜಯದ ವಿವರ
ಯಾರ ಬೆಲೆ ತೆತ್ತು ಏರ್ಪಡಿಸಿದ್ದು
ಈ ವಿಜಯೊತ್ಸವದ ಕೂಟಗಳನ್ನು?

ಪ್ರತೀ ದಶಕದಲ್ಲೂ ಒಬ್ಬ ಮಹಾನ್ ವ್ಯಕ್ತಿ
ತುತ್ತೂರಿಯವನಿಗೆ ಹಣ ಕೊಟ್ಟವರು ಯಾರು?

ಎಷ್ಟೊ೦ದು ವಿವರಗಳು!
ಎಷ್ಟೊ೦ದು ಪ್ರಶ್ನೆಗಳು!


  •   ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು, ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading