ಹಾವಿನ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸತ್ಯಗಳುಹಾವು ನೋಡಿದರೆ ಸಾಕು, ದೊಡ್ಡ ಗಂಡಾಂತರ ಕಾದಿದೆ ಎಂದು ತಿಳಿದುಕೊಳ್ಳುವವರಿದ್ದಾರೆ. ಹಾವು ನೋಡಿ ಭಯಗೊಳ್ಳುವವರೂ ನಮ್ಮಲ್ಲಿ ಹೆಚ್ಚು. ಅಲ್ಲದೇ, ಸುಖಾ ಸುಮ್ಮನೆ ಅದನ್ನು ಹಾನಿ ಮಾಡುವವರೂ ನಮ್ಮಲ್ಲೇನೂ ಕಮ್ಮಿ ಇಲ್ಲ. ಇಂಥ ಹಾವಿನ ಬಗ್ಗೆ ಕೆಲವು ಮಾಹಿತಿಗಳನ್ನು ವೈಲ್ಡ್ ವಿಜಯ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…….

ಹಾವು ಪಾಪದ ಜೀವ. ಸುಮ್ ಸುಮ್ನೆ ಯಾರಿಗೂ ತೊಂದರೆ ಕೊಡೋದಿಲ್ಲ.

  • ಬೇಸಿಗೆಯಲ್ಲಿ ಹಾವಿಗೆ ಕಣ್ಣು ಕಾಣುವುದಿಲ್ಲ: ಬೇಸಿಗೆಯಲ್ಲಿ ಹಾವಿನ ಕಣ್ಣು ಮಿಲ್ಕ್ ಗ್ರೇ- ಬ್ಲೂ ಬಣ್ಣಕ್ಕೆ ಬದಲಾಗುತ್ತದೆ. ಅಲ್ಲದೇ ಕೆಲವು ಹಾವುಗಳ ಹೊರ ಚರ್ಮ ಮಾತ್ರ ಬಿಸಿಲಿಗೆ ಮುಖ ಮುಚ್ಚುವಂತೆ ಮಾಡುತ್ತದೆ. ಇದು ಹಾವನ್ನು ಸುಡುವ ಬಿಸಿಲಿನಿಂದ ಕಾಪಾಡುತ್ತದೆ. ಇದರಿಂದ ಹಾವಿಗೆ ಕಣ್ಣು ಕಾಣುವುದಿಲ್ಲವೆಂದರ್ಥವಲ್ಲ. ಬಾಣಂತಿ ಹಾವಿನ ಒಣಗಿದ ಚರ್ಮ ಅಂದರೆ ಪೊರೆ ಬಿಡುತ್ತದೆ.

 

  • ಹಾವು ಮೊಟ್ಟೆ ಕಾಯುತ್ತದೆ: ಇಟ್ಟ ಮೊಟ್ಟೆಗೆ ಕಾವು ಕೊಟ್ಟು, ಹಾವು ಕಾಪಾಡಿಕೊಳ್ಳುತ್ತದೆ ಎಂಬುವುದು ತಪ್ಪು ಕಲ್ಪನೆ. ಹಾವಿನಿಂದ ಹೊರ ಬರುವ ಮೊಟ್ಟೆಗೆ ಯಾವ ತೊಂದರೆಯೂ ಆಗಿರುವುದಿಲ್ಲ. ಹುಟ್ಟುವಾಗ ಹಾವು ಸಾಯುವುದೂ ಕಡಿಮೆ. ಈ ಎಲ್ಲ ನೈಸರ್ಗಿಕ ಪ್ರಕ್ರಿಯೆಗಳಿಂದ ತಾಯಿ ಹಾವಿಗೆ, ತನ್ನ ಮೊಟ್ಟೆ ಹಾಗೂ ಮಗುವಿನೊಂದಿಗೆ ಬಾಂಧವ್ಯ ಬೆಳೆಯುವುದು ಕಡಿಮೆ.ಪೈಥಾನ್ ಹಾವು ಒಂದು ಸಲಕ್ಕೆ 20-90 ಮೊಟ್ಟೆ ಇಡುತ್ತವೆ. ಅಷ್ಟೂ ಮೊಟ್ಟೆಗಳಿಂದ ಮರಿ ಹೊರ ಬರುವವರೆಗೂ ಕಾವು ನೀಡಿ ಕಾಪಾಡುತ್ತದೆ. ಬೇರೆ ಹಾವು ಈ ರೀತಿ ಮಾಡುವುದಿಲ್ಲ.

ಫೋಟೋ ಕೃಪೆ : youtube

  • ಹಾವು ಬಾಯಲ್ಲಿಟ್ಟು ಮೊಟ್ಟೆ ಕಾಪಾಡಿಕೊಳ್ಳುತ್ತದೆ: ನೋಡಿದವರು ತಾಯಿ ಹಾವು ಜನ್ಮ ನೀಡಿ, ತನ್ನ ಮರಿಗಳನ್ನು ರಕ್ಷಿಸಲು ಬಾಯಲ್ಲಿ ಇಟ್ಟುಕೊಳ್ಳುತ್ತವೆ ಎಂದು ನಂಬಿರುತ್ತಾರೆ. ಆದರೆ, ಜನ್ಮ ನೀಡಿದಾಕ್ಷಣ ತಾಯಿ ಹಾವಿನ ದೇಹದಲ್ಲಿ ಶಕ್ತಿಯೇ ಇರುವುದಿಲ್ಲ. ಇದರಿಂದ ತನ್ನ ಮರಿಗಳನ್ನೇ ತಿನ್ನುತ್ತದೆ.

 

  • ನೀರಲ್ಲಿ ಹಾವು ಕಚ್ಚುವುದಿಲ್ಲ: ನಿಂತ ನೀರಲ್ಲಾಗಲಿ ಹರಿಯುವ ನೀರಲ್ಲಾಗಲಿ ಹಾವು ಕಚ್ಚುವುದಿಲ್ಲ ಎಂಬುವುದೂ ತಪ್ಪು. ನೀರಲ್ಲಿಯೇ ವಾಸಿಸುವ ಹಾವು ನೀರಲ್ಲಿರುವ ಮೀನುಗಳನ್ನೇ ತಿಂದು ಜೀವಿಸುತ್ತವೆ ಅವು. ಎಂಥದ್ದೇ ಜೀವರಾಶಿಯನ್ನಾದರೂ ನೀರಲ್ಲೇ ಕೊಂದು ತಿನ್ನುತ್ತವೆ.

ಫೋಟೋ ಕೃಪೆ : reptilecentre

  • ಬಾಲ ಮುಟ್ಟಿದರೆ ಕಚ್ಚುತ್ತದೆ: ಹಾವಿನ ಕೋಪ ಬಾಲದಲ್ಲಿ ವ್ಯಕ್ತವಾಗುತ್ತವೆ. ಆದರೆ, ಆ ಗುಣಕ್ಕೆ ಕಾರಣವೂ ಇದೆ. ಕಾಡಲ್ಲಿ ವಾಸಿಸುವ ಹಾವಿನ ಬಾಲ ಬಣ್ಣ ಬಣ್ಣದ್ದಾಗಿರುತ್ತದೆ. ತನ್ನ ಬಾಲವನ್ನು ನಿಧಾನವಾಗಿ ಅಲುಗಾಡಿಸಿ ಕಪ್ಪೆ, ಚಿಟ್ಟೆ ಹಾಗೂ ಇನ್ನಿತರ ಪ್ರಾಣಿ-ಪಕ್ಷಿಗಳನ್ನು ಆಕರ್ಷಿಸುತ್ತವೆ. ನಂತರ ಅದನ್ನೇ ಆಹಾರ ಮಾಡಿಕೊಳ್ಳುತ್ತದೆ.

 

  • ಮರಿ ಹಾವಲ್ಲಿ ವಿಷ ಹೆಚ್ಚು: ಆಗಷ್ಟೇ ಬೆಳೆಯುತ್ತಿರುವ ಹಾವುಗಳಲ್ಲಿ ವಿಷದ ಪ್ರಮಾಣ ಬೆಳೆಯುತ್ತಿರುತ್ತದೆ ಎಂದೇ ನಂಬುತ್ತಾರೆ. ಆದರೆ ಅದು ತಪ್ಪು. ಏಕೆಂದರೆ ಮರಿ ಹಾವುಗಳಲ್ಲಿ ವಿಷದ ಪ್ರಮಾಣ ಕಡಿಮೆ. ಹಾಗೂ ಬೆಳೆದ ಹಾವುಗಳಲ್ಲಿ ಬಹಳ ವರ್ಷಗಳಿಂದ ವಿಷವಿದ್ದು, ಅದು ಕಚ್ಚಿದಾಕ್ಷಣ ದೇಹಕ್ಕೆ ಸುಲಭವಾಗಿ ಹರಿಯುತ್ತದೆ.

  • ವೈಲ್ಡ್ ವಿಜಯ್ (ಪರಿಸರ ಸಂರಕ್ಷಕ, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW