ಕತೆಗಾರ ತಂಬ್ರಳ್ಳಿ ರಾಮನಮಲಿ ಅವರ ‘ಪುಷ್ಪಾಂಜಲಿ’ ಪುಸ್ತಕ ಮೇ ೨೫, ೨೦೨೨ ರಂದು ಬಿಡುಗಡೆಗೊಳ್ಳಲಿದ್ದು, ಸರ್ವರಿಗೂ ಸ್ವಾಗತವಿದೆ. ತಪ್ಪದೆ ಎಲ್ಲರೂ ಬನ್ನಿ…
ಹಿರಿಯ ಸಾಹಿತಿಗಳಾದ ತಂಬ್ರಳ್ಳಿ ರಾಮನಮಲಿ ಅವರು ಸದಭಿರುಚಿಯ ಸಾಹಿತ್ಯದ ಓದು, ಬರವಣಿಗೆ, ತಿರುಗಾಟ ಇವೆಲ್ಲವನ್ನೂ ಇಳಿಯ ವಯಸ್ಸಿನಲ್ಲಿ ಉಳಿಸಿಕೊಂಡು ಹೋಗುತ್ತಿದ್ದಾರೆ. ತಮ್ಮ ಕ್ರಿಯಾತ್ಮಕ ಚಲನಶೀಲತೆಯಿಂದ ಬೇರೆಯವರಿಗೆ ಮಾದರಿಯಾಗಿದ್ದು, ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಸಾಹಿತ್ಯಲೋಕದಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ.
ಮೊಮ್ಮಗನೊಂದಿಗೆ ಕತೆಗಾರ ತಂಬ್ರಳ್ಳಿ ರಾಮನಮಲಿ
‘ನಾನು ನನ್ನದು’ ಎನ್ನುವುದಕ್ಕಿಂತ ‘ನಾವು ನಮ್ಮವರು’ ಎನ್ನುವ ತತ್ವ ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದವರು ತಂಬ್ರಳ್ಳಿ ರಾಮನಮಲಿಯವರು. ‘ಪ್ರತಿ ಬರಹಗಾರನು ಒಬ್ಬ ಒಳ್ಳೆಯ ಓದುಗ ಎನ್ನುವುದು ಅವರ ಮಾತು, ಹಾಗಾಗಿ ಅವರ ಮನೆ ಪುಸ್ತಕ ಬಂಡಾರವಾಗಿದೆ. ಬಹುದಿನಗಳ ನಂತರ ಅವರು ಬರೆದ ‘ಪುಷ್ಪಾಂಜಲಿ’ ಅನುವಾದಿತ ಕತೆಗಳು ಪುಸ್ತಕ ಎರಡು ವರ್ಷಗಳ ನಂತರ ಓದುಗರ ಮಡಿಲಿಗೆ ಅರ್ಪಿಸಲಾಗುತ್ತಿದೆ.
ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವಿದ್ದು, ಎಲ್ಲ ಸಾಹಿತ್ಯಾಸಕ್ತರು ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
ಕಾರ್ಯರ್ಕ್ರಮದ ವಿವರ ಕೆಳಗಿನಂತಿದೆ :
- ರೇಶ್ಮಾಗುಳೇದಗುಡ್ಡಾಕರ್