ಸೋಮನಾಥ ದೇವಾಲಯದ ಒಂದು ಹಿನ್ನೆಲೆ

ಸೋಮನಾಥ ದೇವಾಲಯವು ಗುಜರಾತ್ ರಾಜ್ಯದ ಜುನಾಗಡ ಜಿಲ್ಲೆಯ ಪ್ರಭಾಸದಲ್ಲಿದೆ. ಈ ದೇವಾಲಯವು ಅತ್ಯಂತ ಪುರಾತನವಾದುದು ಮತ್ತು ಮಾಹಿಮಾನ್ವಿತೆ ಹೊಂದಿರುವ ಪುಣ್ಯ ಕ್ಷೇತ್ರವಾಗಿದೆ. ಇದರ ಕುರಿತು ಪಾಂಡುರಂಗ ಕೆ ಎಸ್ ಅವರು ಸಂಗ್ರಹ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಸೋಮನಾಥ ದೇವಾಲಯವು ದಕ್ಷ ಪ್ರಜಾಪತಿ ಅರಸನ 27 ಹೆಣ್ಣು ಮಕ್ಕಳಲ್ಲಿ ಚಂದ್ರನೂ ರೋಹಿಣಿ ಮೇಲೆ ಮನಸ್ಸು ಇಟ್ಟಿರುತ್ತಾನೆ. ಉಳಿದವರನ್ನೂ ಕಡೆಗಣಿಸುತ್ತಾನೆ. ಅದಕ್ಕೆ ಪ್ರಜಾಪತಿ ಕುಪಿತಗೊಂಡು ಅವನಿಗೆ ಕ್ಷಯರೋಗದ ಶಾಪಕೊಡುತ್ತಾನೆ. ಆಗ ಶಾಪವನ್ನು ಕಳೆದುಕೊಳ್ಳಲು ಚಂದ್ರನು ಇಲ್ಲಿ ಲಿಂಗವನ್ನು ಸ್ಥಾಪಿಸಿ ಧ್ಯಾನವನ್ನು ಮಾಡಿ ಶಿವನನ್ನು ಒಲಿಸಿ ಶಾಪ ವಿಮೋಚನೆ ಮಾಡಿಕೊಳ್ಳುತ್ತಾನೆ.

ಚಂದ್ರನ ಧ್ಯಾನವನ್ನು ಮೆಚ್ಚಿ ಶಿವನು ಬಂದ ಕಾರಣ ಈ ದೇವಾಲಯಕ್ಕೆ ಸೋಮನಾಥ ಎಂಬ ಹೆಸರು ಬರುತ್ತದೆ. ಚಂದ್ರನೂ ಶಿವನಿಗೆ ಸ್ವರ್ಣ ಮಂದಿರ, ರಾವಣ ರಜತ, ಶ್ರೀ ಕೃಷ್ಣ ಚಂದನ ಮಂದಿರ ನಿರ್ಮಾಣ ಮಾಡುತ್ತಾರೆ.

ಫೋಟೋ ಕೃಪೆ : google

ಕ್ರಿ ಶಕ 7 ನೆ ಶತಮಾನದಲ್ಲಿ ಮೈತ್ರಕ ವಂಶದ ಧರ್ಮ ಸೇನಾ ಚಂದ್ರನ ಮಂದಿರ ಆಗಲೆ ಜೀರ್ಣಾವಸ್ಥೆಗೆ ಬಂದಿರುತ್ತದೆ, ಮತ್ತಷ್ಟು ನವಿಕರಿಸುತ್ತಾನೆ. ಕ್ರಿ.ಶ 8 ಮತ್ತು 9 ನೇ ಶತಮಾನದಲ್ಲಿ ಅರಬ್ಬರು ನಾಶ ಮಾಡಿದ ನಂತರ ಮರಳುಗಲ್ಲಿನಲ್ಲಿ ದಿವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಿದರು. ಕ್ರಿ.ಶ 941ರಲ್ಲಿ ಸೌರಾಷ್ಟ್ರದ ಪ್ರದೇಶದಲ್ಲಿ ಚಾಲುಕ್ಯರ ಸೋಲಂಕಿ ಎಂಬ ವಂಶದ ಭೀಮದೇವ ಎನ್ನುವವರು ಶಿವನ ಭಕ್ತನಾಗಿದ್ದರು, ಅವರ ಕಾಲದಲ್ಲಿ ಮೂಲ ಸ್ವರೂಪ ಪಡೆಯಿತು.ಮುಂದೆ ಕ್ರಿ ಶಕ 1025 ರಲ್ಲಿ ಘಜನಿ ಮೊಹಮ್ಮದ್ ಸೋನಾಥದ ದೇವಾಲಯದ ಮೇಲೆ ಆಕ್ರಮಣ ಮಾಡಿ ಜ್ಯೋತಿರ್ಲಿಂಗವನ್ನು ನಾಶ ಮಾಡಿದ್ದ ಅವನ ಅಕ್ರಮಣದಿಂದ ಅದೋಗತಿಗೆ ತಲುಪಿ ಅಪಾರವಾದ ನಷ್ಟವಾಗಿತ್ತು. ಇನ್ನೂರು ಮೊಣ ತೂಕವಿದ್ದಂತ ಬಂಗಾರದ ಸರಪಳಿಯಿಂದ ಬಂಗಾರದ ಘಂಟೆ ರತ್ನ ಖಚಿತವಾದ ಎಲ್ಲವನ್ನೂ ದೋಚಿಕೊಂಡು ಹೋದ, ಅಲ್ಲಿಂದ ತಂದಿದ್ದ ಮೂರ್ತಿಗಳನ್ನು ಶಿಲ್ಪೆಗಳನ್ನ ತನ್ನ ಮಸೀದಿಯ ಮೆಟ್ಟಿಲುಗಳನ್ನಾಗಿಯೂ ಒರಳುಗಳನ್ನು ಮಾಡಿಸಿ ಅದಲ್ಲಿ ಗೋ ಮಾಂಸವನ್ನು ರುಬ್ಬಿಸಿ ಹಿಂದುಗಳಿಗೆ ತಿನ್ನಿಸುತ್ತಾ ತನ್ನ ಕ್ರೌರ್ಯದಿಂದ ಮೆರೆದಾಡಿದ, ಇವನ ದಾಳಿಯ ನಂತರ ಗುಜರಾತಿನ ಮಾಳವ ರಾಜನಾದ ಭೋಜ ಭೀಮ ಮತ್ತೆ ಸೋಮನಾಥ ದೇವಾಲಯವನ್ನು ಜೀರ್ಣೋದ್ಧಾರ ಮಾಡುತ್ತಾನೆ.

ಫೋಟೋ ಕೃಪೆ : google

ಕ್ರಿ.ಶ 1300 ರಲ್ಲಿ ಅಲ್ಲವುದ್ದೀನ್ ಖಿಲ್ಜಿ ದ್ವಂಸ ಮಾಡುತ್ತಾನೆ. ಇವನ ದಾಳಿಯ ನಂತರವು ಎಡೆಬಿಡದೆ ಜುನ್ನಾಘಡ್ನಾ ಮಹಾರಾಜ ಮಹಿಪಾಲ ಕ್ರಿ.ಶ 1325ರಲ್ಲಿ ಪುನರ್ಸ್ಥಾಪನೆ ಮಾಡುತ್ತಾನೆ‌. ಮುಂದೆ ಮುಜಾಫರ್ ಶಾ, ಮೊಹಮ್ಮದ್ ಬೆಗಡಾ, ಔರಂಗಜೇಬ, ಹೀಗೆ ಕ್ರಿ.ಶ 1390, 1490, 1530 ಮತ್ತು 1701 ಈ ಎಲ್ಲಾ ಇಸವಿಗಳಲ್ಲಿ ಸಂಪೂರ್ಣ ದ್ವಂಸ ಮಾಡಿದರು.

ಬೆಗಡಾ ಎಂಬಾತ ಗುಡಿಯ ಅವಶೇಷಗಳನ್ನೆ ಬಳಸಿ ಅಲ್ಲೇ ಮಸೀದಿ ಕಟ್ಟುತ್ತಾನೆ. ಇಷ್ಟೆಲ್ಲಾ ಆದಮೇಲೂ ಅಹಲ್ಯಾ ಬಾಯಿ ಹೋಳ್ಕರ್ ಕ್ರಿ ಶ 1783 ರಲ್ಲಿ ತಕ್ಕ ಮಾಟ್ಟಿಗೆ ಜೀರ್ಣೋದ್ಧಾರ ಮಾಡುತ್ತಾರೆ. ಇದಾದ ಮೇಲೆ ಸ್ವಾತಂತ್ರ್ಯ ಬಂದಾಗ ಕನ್ನಯಲಾಲ್ ಮುನ್ಸಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಇವರೆಲ್ಲರೂ ಸೇರಿ ತುಂಬ ದೊಡ್ಡ ಪ್ರಯತ್ನದಿಂದ ದೇವಾಲಯವನ್ನು ಮರುನಿರ್ಮಾಣ ಮಾಡುತ್ತಾರೆ. ಇತಿಹಾಸ ಪ್ರಜ್ಞೆಯಿಂದ ಮಸೀದಿಯನ್ನು ಬೇರೆಡೆ ಸ್ಥಾಪಿಸುತ್ತಾರೆ. ದೇವಾಲಯದ ಶಂಕು ಸ್ಥಾಪನೆಯಿಂದ ಹಿಡಿದು ಗೋಪುರದ ಕಳಸದ ಪೂಜೆಗೆ ಕುಂಬಾಭಿಷೇಕಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಫೋಟೋ ಕೃಪೆ : google

ರಾಜೇಂದ್ರ ಪ್ರಸಾದ್ ಬರುತ್ತಾರೆ ಕ್ರಿಶ 1951 ಮೇ 11 ತಾರೀಖು ಸೋಮನಾಥ ದೇವಾಲಯ ಪುನಃ ಪ್ರತಿಷ್ಠಾನ ಆಗುತ್ತದೆ. ಒಟ್ಟು ಸಾವಿರಾರು ವರ್ಷಗಳ ಕಾಲ ನಿರಂತರವಾಗಿ ನಾಶಕ್ಕೆ ಒಳಗಾಗಿದ್ದರೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೆ ಇತಿಹಾಸ ಮೆರೆದ ದೇವಸ್ಥಾನವೆ ನಮ್ಮ ಸೋಮನಾಥ ದೇವಸ್ಥಾನ. ನಮ್ಮ ಒಂದು ದೇವಾಲಯದ ಇತಿಹಾಸ ಇಷ್ಟು ಕಠೋರ ಮತ್ತು ನಿರ್ದಾಕ್ಷಿಣ್ಯವಾಗಿದೆ ಎಂದಾದರೆ ಇನ್ನೂ ಉಳಿದ ದೇವಾಲಯದ ಇತಿಹಾಸ ಮತ್ತು ನಮ್ಮ ಸಂಸ್ಕಾರದ ಇತಿಹಾಸ ಹೇಗಿದೆಯೆಂದು ಊಹಿಸಲು ಸಾಧ್ಯವಿಲ್ಲ.

ಇಂತಹ ನೈಜ ಇತಿಹಾಸ ನಮ್ಮ ಪಠ್ಯ ಪುಸ್ತಕದಲ್ಲಿ ಮರೆಮಾಚಿದ್ದೇಕೆ? ಎಂಬುದು ಇಂದಿಗೂ ತಿಳಿಯದಾಗಿದೆ. ಹೃದಯ ವೈಶಾಲ್ಯತೆಯೆ ನಮ್ಮ ಅಳಿವಿಗೆ ಕಾರಣ ನಮ್ಮ ನಮ್ಮಲ್ಲೆ ಸೆಣೆಸಾಟವಾಡುವುದು ಮೊದಲಿನಿಂದಲೂ ಇರುವ ಒಂದು ರೋಗವಾಗಿದೆ. ಇದನ್ನೆ ಅಸ್ತ್ರವಾಗಿಸಿಕೊಂಡು ನಮಗೆ ತಿಳಿಯದಂತೆ ನಮ್ಮನ್ನು ಬಗ್ಗು ಬಡಿಯುತ್ತಿದ್ದಾರೆ.

(ವಿಷಯ ಸಂಗ್ರಹ : ಭಾರತೀಯ ಸಂಸ್ಕೃತಿಯ ಸಂಗ್ರಹ )


  • ಬರಹ : ಪಾಂಡುರಂಗ ಕೆ ಎಸ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW