ಲಾರ್ಡ್ ರಿಪ್ಪನ್ ಸ್ಮರಣೆಯ ರಿಪ್ಪನ್ ಪೇಟೆ ಸಮೀಪದ ಅರಸಾಳು ರೈಲು ನಿಲ್ದಾಣದ ಹೆಸರು ಆರ್. ಕೆ. ನಾರಾಯಣರ ಸ್ಮರಣೆಯ ಮಾಲ್ಗುಡಿ ರೈಲು ನಿಲ್ದಾಣ. ಇಲ್ಲಿ ಶಂಕರ್ ನಾಗ್ ದೂರದರ್ಶನಕ್ಕಾಗಿ ಮಾಲ್ಗುಡಿ ಡೇಸ್ ಚಿತ್ರೀಕರಣ ಮಾಡಿದ್ದರು. ರಿಪ್ಪನ್ ಪೇಟೆ ಎಂದು ನಾಮಕರಣ ಮಾಡಲು ಕಾರಣವೇನು ? ಲೇಖಕ ಅರುಣ್ ಪ್ರಸಾದ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಅರಸಾಳು ರೈಲುನಿಲ್ದಾಣ ಇನ್ನು ಮುಂದೆ ಮಾಲ್ಗುಡಿ ರೈಲು ನಿಲ್ದಾಣ ಅರಸಾಳು ಎಂಬ ಸಣ್ಣ ಹಳ್ಳಿ ಶಿವಮೊಗ್ಗ ಹೊಸನಗರ ಮಧ್ಯದ ದಟ್ಟ ಅರಣ್ಯದಲ್ಲಿದೆ. ಸ್ವಾತಂತ್ರ ಪೂವ೯ದಲ್ಲಿ ಜೋಗ ಜಲಪಾತ ಸಂಪಕಿ೯ಸಲು ರೈಲು ಮಾಗ೯ ನಿಮಾ೯ಣ ಪ್ರಾರಂಭವಾದಾಗ ಅರಸಾಳು ರೈಲು ನಿಲ್ದಾಣದ ಪ್ರಸ್ತಾಪ ಇರಲಿಲ್ಲ.
ಮೂಡುಕೊಪ್ಪ (ನಂತರ ರಿಪ್ಪನ್ ಪೇಟೆ ಎ೦ಬ ಹೆಸರಾಯಿತು) ರೈಲು ನಿಲ್ದಾಣ ಪ್ರಸ್ತಾವನೆಯಲ್ಲಿ ಸೇರಿತ್ತು, ಅಲ್ಲಿಂದ ಆನಂದಪುರಂ, ಸಾಗರ, ತಾಳಗುಪ್ಪ ರೈಲು ಮಾಗ೯ದ ಯೋಜನೆ ಅದು ಆಗಿತ್ತು.
ಫೋಟೋ ಕೃಪೆ : google
ರೈಲು ಮಾರ್ಗದ ಸರ್ವೆ ಪರಿಶೀಲನೆಗೆ ಬ್ರಿಟಿಷ್ ಅಧಿಕಾರಿಗಳು ಇಲ್ಲಿಗೆ ಬಂದಾಗ ಈ ಭಾಗದ ಪ್ರಮುಖರೆಲ್ಲ ಸೇರಿ ಅವರನ್ನು ಸನ್ಮಾನಿಸಿ ಅವರಿಗೆ ಸುಮಾರು 50 ವಷ೯ದ ಹಿಂದೆ ವೈಸ್ ರಾಯ್ ಆಗಿದ್ದ ಲಾರ್ಡ್ ರಿಪ್ಪನ್ (ಅಧಿಕಾರಾವಧಿ1880-1884) ಈ ಊರಿನಲ್ಲಿ ಶಿಕಾರಿಗಾಗಿ ತಂಗಿದ್ದ ಸವಿ ನೆನಪಿಗಾಗಿ ಲಾಡ್೯ ರಿಪ್ಪನ್ ರ ಹೆಸರನ್ನ ಚಿರಸ್ಥಾಯಿಗೊಳಿಸಲು ತಮ್ಮ ಮೂಡುಕೊಪ್ಪ ಎಂಬ ಹಳ್ಳಿಗೆ ರಿಪ್ಪನ್ ಪೇಟೆ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದಾಗ ರೈಲ್ವೆ ಕಾಮಗಾರಿ ಉಸ್ತವಾರಿಯ ಬ್ರಿಟಿಷ್ ಅಧಿಕಾರಿಗಳು ಸಂಪ್ರೀತರಾಗುತ್ತಾರೆ. ಈ ರೀತಿ ಅಧಿಕಾರಿಗಳನ್ನು ಒಲೈಸಿ ಊರ ಪ್ರಮುಖರು ಒಂದು ಮನವಿ ನೀಡುತ್ತಾರೆ. ಅದೇನೆಂದರೆ ತಮ್ಮ ಊರಿಗೆ ಯಾವುದೇ ಕಾರಣಕ್ಕೂ ರೈಲು ಮಾಗ೯ ಹಾಕಬಾರದಾಗಿ ಮನವಿ ಮಾಡುತ್ತಾರೆ. ಅದಕ್ಕೆ ಸಕಾರಣವಾಗಿ ರೈಲು ಮಾಗ೯ದಿಂದ ರೈಲು ನಿಲ್ದಾಣ ರಿಪ್ಪನ್ ಪೇಟೆಯಲ್ಲಿ ಆದರೆ ರೈಲಿನಲ್ಲಿ ಬರುವ ಪ್ರಯಾಣಿಕರಿಂದ ಪ್ಲೇಗ್ ರೋಗ ಬಂದು ಹರಡುವುದರಿಂದ ಸಾವು ನೋವು ಊರಲ್ಲಿ ಉಂಟಾಗುತ್ತೆ ಎ೦ದು ವಿನಂತಿಸುತ್ತಾರೆ.
ಫೋಟೋ ಕೃಪೆ : google
ಈ ರೀತಿ ಮೂಡ ನಂಬಿಕೆ ಬ್ರಿಟಿಷ್ ಅಧಿಕಾರಿಗಳಿಗೆ ಇರದಿದ್ದರು ಈ ಊರಿನ ಜನರು ಲಾರ್ಡ್ ರಿಪ್ಪನ್ ಹೆಸರು ಅವರ ಊರಿಗೆ ಇಟ್ಟಿದ್ದರಿಂದ ಈ ಜನರ
ಪ್ರೀತಿಗಾಗಿ ರಿಪ್ಪನ್ ಪೇಟೆ ರೈಲು ಮಾರ್ಗ ನಿಲ್ದಾಣ ರದ್ದು ಮಾಡುತ್ತಾರೆ. ರೈಲು ಮಾಗ೯ ಅರಸಾಳಿನಿಂದಲೇ ಕೆಂಚನಾಲಮಾಗ೯ವಾಗಿ ಆನಂದಪುರಂಗೆ ಸಂಪಕಿ೯ಸುವ ಬದಲಿ ಮಾಗ೯ ನಿಮಿ೯ಸುತ್ತಾರೆ ಹಾಗಾಗಿ ಅರಸಾಳು ರೈಲು ನಿಲ್ದಾಣ ಮಾಡುತ್ತಾರೆ.
ಅರಸಾಳು ಈಗಲೂ ಮೀಸಲು ಅರಣ್ಯದ ಮದ್ಯ ಇದೆ, 1970ರ ದಶಕದಲ್ಲಿ ಖೆಡ್ಡಮಾಡಿ ಪುಂಡು ಆನೆ ಹಿಡಿದಿದ್ದರು, ಬ್ರಿಟಿಷರು ನಿಮಿ೯ಸಿರುವು ಬೃಹತ್ ಸಾಗುವಾನಿ ಪ್ಲಾಂಟೇಶನ್ ಇದೆ, ಅರಣ್ಯ ಅಧಿಕಾರಿಗಳ ಬಿಡದಿ, ಕಚೇರಿಗಳಿದೆ, ಚಚ್೯ ಇದೆ. ಈಗ ಅರಸಾಳು ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ ಮತ್ತು ಈ ಮಾಗ೯ದ ಪ್ರಮುಖ ಊರಾಗಿದೆ. ಈ ಊರನ್ನ ಕನ್ನಡದ ಖ್ಯಾತ ನಟ, ನಿದೇ೯ಶಕ ಶಂಕರ್ ನಾಗ್ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಕನ್ನಡಿಗ R.K.ನಾರಾಯಣ್ ರ ಮಾಲ್ಗುಡಿ ಡೇಸ್ ಎಂಬ ಕಥೆಯನ್ನ ದೂರದಶ೯ನಕ್ಕೆ ದಾರಾವಾಹಿ ಮಾಡಿದಾಗ ಅರಸಾಳು ರೈಲು ನಿಲ್ದಾಣ ಚಿತ್ರಿಕರಣಕ್ಕೆ ಬಳಸಿಕೊಂಡಿದ್ದರು.
ಫೋಟೋ ಕೃಪೆ : google
ಕನ್ನಡದ ನಟ ಸಾವ೯ಭೌಮ ಡಾ.ರಾಜ್ ಕುಮಾರರ ಅಕಸ್ಮಿಕ ಸಿನಿಮಾ ಕೂಡ ಇಲ್ಲಿ ಚಿತ್ರೀಕರಣ ಮಾಡಿದ್ದರು. ನಂತರ ಮೀಟರ್ ಗೇಜ್ ರದ್ದು ಮಾಡುವ ಪೂವ೯ದಲ್ಲಿ ಅರಸಾಳು ರೈಲು ನಿಲ್ದಾಣವನ್ನ ರದ್ದು ಮಾಡಿದ್ದರು, ಬ್ರಾಡ್ ಗೇಜ್ ಪರಿವತ೯ನೆಗೆ ರೈಲ್ವೇ ಇಲಾಖೆ ಈ ಮಾಗ೯ ನಷ್ಟ ಅಂತ ರೈಲು ಮಾಗ೯ವನ್ನ ರದ್ದು ಮಾಡಿತ್ತು, ನಂತರ ಜನರ ಹೋರಾಟ ಒತ್ತಾಯಗಳಿಗೂ ರೈಲ್ವೇ ಇಲಾಖೆ ಮಣಿಯಲಿಲ್ಲ ಆಗ ಮುಖ್ಯಮಂತ್ರಿಗಳಾಗಿದ್ದ ನಮ್ಮ ಜಿಲ್ಲೆಯವರೆ ಆದ ಯಡಿಯೂರಪ್ಪ ಕೆ ರೈಡ್ ಯೋಜನೆಯಲ್ಲಿ ರಾಜ್ಯ ಸಕಾ೯ರದ ಸಹಭಾಗಿತ್ವದಲ್ಲಿ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಮಾಗ೯ ನಿಮಿ೯ಸಲು ಕಾರಣಕತ೯ರಾದರು.
ಫೋಟೋ ಕೃಪೆ : google
ಈಗ ಅವರ ಮಗ ರಾಘವೇಂದ್ರ ಸಂಸದರಾಗಿ ಎಲ್ಲಾ ರೈಲು ನಿಲ್ದಾಣಗಳ ಮೇಲ್ದಜೆ೯ಗೇರಿಸುತ್ತಿದ್ದು ಅರಸಾಳು ರೈಲು ನಿಲ್ದಾಣ ಕೂಡ ನವೀಕರಣಗೊಳಿಸಿ ಮಾಲ್ಗುಡಿ ಡೇಸ್ ಸ್ಮರಣಾಥ೯ ಅರಸಾಳು ನಿಲ್ದಾಣ “ಮಾಲ್ಗುಡಿ ಅರಸಾಳು” ಎ೦ದು ಪುನರ್ ನಾಮಕರಣ ಮಾಡಿದ್ದಾರೆ.
ಇಲ್ಲಿ ಮಾಲ್ಗುಡಿ ಧಾರಾವಾಹಿಯ ಆರ್.ಕೆ.ನಾರಾಯಣರ ಕಥೆಯ ಪಾತ್ರಗಳು ಶಂಕರ್ ನಾಗ್ ಅವರ ದಾರಾವಾಹಿಯ ಸ್ಮರಣೆಗಾಗಿ ಮ್ಯೂಜಿಯಂ ಕೂಡ ನಿರ್ಮಿಸಿದ್ದಾರೆ ಇದನ್ನು ನೋಡಲು ದೂರ ದೂರದಿಂದ ಪ್ರವಾಸಿಗಳು ಬರುತ್ತಾರೆ. ಆದರೆ ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲುಗಳು ನಿಲ್ಲುವುದಿಲ್ಲ ಎಂಬುದು ವಿಷಾದನೀಯ.
- ಅರುಣ್ ಪ್ರಸಾದ್