ಸಿರಿಧಾನ್ಯಗಳ ಕುರಿತು ಆಯುರ್ವೇದದಿಂದ ವೈಜ್ಞಾನಿಕ ಮಾಹಿತಿ

ಸಿರಿಧಾನ್ಯಗಳ  ಕುರಿತು ಆಯುರ್ವೇದದಿಂದ ವೈಜ್ಞಾನಿಕ ಮಾಹಿತಿ ಆಹಾರದ ಸ್ವಭಾವ ಮತ್ತು ಆಹಾರ ಸೇವನೆಯ ಸಮಯದಲ್ಲಿ ಮನುಷ್ಯನ ಮತ್ತು ಆಹಾರದ ನಡುವೆ ನಡೆಯುವ ಜೈವಿಕ ಪರಸ್ಪರ ಕ್ರಿಯೆಯ ಸ್ಥಿತಿಯ ಸ್ವರೂಪವನ್ನು ಬಹುಶಃ ಆಯುರ್ವೇದ ವಿಜ್ಞಾನ ಮಾತ್ರ ವಿವರಿಸಿದೆ. ಡಾ.ಪ್ರಕಾಶ ಬಾರ್ಕಿ ಅವರು ಇನ್ನಷ್ಟು ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ… 


ಡಾ. ರೆಮ್ಯಾ ಕೃಷ್ಣನ್ ದಂಪತಿಗಳು

ಯಾವುದೇ ರೀತಿಯ ಆಹಾರ ಅದು ಎಷ್ಟೇ ಪೌಷ್ಟಿಕವಾಗಿದ್ದರೂ, ಅದು ಮನುಷ್ಯನಿಗೆ ಪ್ರಯೋಜನಕಾರಿಯಾಗಲು :

* ಮಾನವನ ಜೀರ್ಣಕ್ರಿಯೆ,
* ಚಯಾಪಚಯ,
* ರೋಗನಿರೋಧಕ ಸ್ಥಿತಿ,
* ಆಂತರಿಕ ಮತ್ತು ಬಾಹ್ಯ ವಿಸರ್ಜನಾ ವ್ಯವಸ್ಥೆಯ ದಕ್ಷತೆ
* ನಿರ್ದಿಷ್ಟ ರೀತಿಯ ಸಂಭಾವ್ಯ ರೋಗಗಳು.
* ಆಹಾರ ಸೇವನೆಯ ಸಮಯದಲ್ಲಿ ಅಸ್ತಿತ್ವದಲ್ಲಿರುವ ನಿರ್ದಿಷ್ಟ ರೀತಿಯ ಕಾಯಿಲೆಯ ಸ್ಥಿತಿ ಮತ್ತು ಹಂತ,
* ಸೇವಿಸುವವನ ದೈಹಿಕ ಚಟುವಟಿಕೆ ಇತ್ಯಾದಿ ಅವಲಂಬಿಸಿದೆ.

ಆಯುರ್ವೇದದ ಪ್ರಾಚೀನ ವಿಜ್ಞಾನಿಗಳು ಆಹಾರದ ಗುಣಲಕ್ಷಣ ಮತ್ತು ಮಾನವ ದೇಹದೊಂದಿಗಿನ ಪರಸ್ಪರ ಕ್ರೀಯೆಯನ್ನು ಪರಿಗಣಿಸಿ, ಮೂಲಭೂತ ಮತ್ತು ಅನ್ವಯಿಕ (Applied) ಸಂಶೋಧನೆಗಳನ್ನು ನಡೆಸಿ ಆಯುರ್ವೇದ ವೈದ್ಯಕೀಯ ಗ್ರಂಥಗಳಲ್ಲಿ ವ್ಯವಸ್ಥಿತವಾಗಿ ದಾಖಲಿಸಲಿಸಿದ್ದಾರೆ. ಅದರ ಆಧಾರದ ಮೇಲೆ “ಸಿರಿಧಾನ್ಯಗಳ”ಗಳನ್ನು ವಿವರಿಸಲಾಗಿದೆ.


ಫೋಟೋ ಕೃಪೆ : google

ಸಿರಿಧಾನ್ಯಗಳು ಸ್ವಭಾವದಿಂದ ಸಾಮಾನ್ಯವಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತವೆ ಮತ್ತು ಜೀವಕೋಶಗಳಲ್ಲಿ ಚಯಾಪಚಯವನ್ನು(metabolism) ನಿಧಾನಗೊಳಿಸುತ್ತವೆ. ಸಿರಿಧಾನ್ಯಗಳನ್ನ ದಿನ ನಿತ್ಯ ಸೇವಿಸಿದರೆ ತಮ್ಮ ಸಹಜ ಜೈವಿಕ ಸ್ವಭಾವದಿಂದ ಆಂತರಿಕ ಮತ್ತು ಬಾಹ್ಯ ವಿಸರ್ಜನಾ ವ್ಯವಸ್ಥೆಯ ಕಾರ್ಯ ವಿಧಾನಗಳನ್ನು ದುರ್ಬಲಗೊಳಿಸಬಹುದು ಮತ್ತು ರಕ್ತನಾಳಗಳಲ್ಲಿ ನಿರ್ಜಲೀಕರಣ (dehydration) ಉಂಟು ಮಾಡುವ ಮೂಲಕ ಅಥವಾ ಜೀರ್ಣಕ್ರಿಯೆ ಮತ್ತು metabolism (ಚಯಾಪಚಯ) ಕುಂಠಿತಗೊಳಿಸಿ ರಕ್ತದೊತ್ತಡವನ್ನು (Blood pressure) ಪ್ರಚೋದಿಸಬಹುದು.

(ಯಾರಲ್ಲಿ ಏನಾಗುತ್ತದೆ ಎಂಬುದು ಸಂಪೂರ್ಣವಾಗಿ ವ್ಯಕ್ತಿಯನ್ನು, ಸಂಭಾವ್ಯ ರೋಗಗಳು, ನಿರ್ದಿಷ್ಟ ರೀತಿಯ ಕಾಯಿಲೆಗಳನ್ನು ಅವಲಂಬಿಸಿದೆ, ಇದರಲ್ಲಿ ಯಾವುದಾದರೂ ಅಥವಾ ಇವೆಲ್ಲವೂ ಸಾಧ್ಯತೆಗಳಿವೆ).


ಫೋಟೋ ಕೃಪೆ : google

ಒಂದು ಸಾರೆ ಸೇವಿಸುವುದರಿಂದ ಈ ಸಮಸ್ಯೆಗಳು ಉಂಟಾಗದೆ ಇರಬಹುದು, ಇವುಗಳ ನಿತ್ಯ ಸೇವನೆಯಿಂದ ಈ ತೊಂದರೆಗಳು ಉಂಟಾಗುತ್ತವೆ. ರಾಗಿ ಸ್ವಭಾವದಿಂದ ಉರಿಯೂತ (inflammation)ಮತ್ತು ಚಯಾಪಚಯ ಏರುಪೇರು ಮತ್ತು ಹಾರ್ಮೋನುಗಳ ಅಸಮರ್ಪಕ ಕ್ರೀಯೆಯ ಸ್ಥಿತಿ ಮತ್ತು ಹಂತಕ್ಕೆ ಹೊಂದಿಕೊಳ್ಳುವುದಿಲ್ಲ. ಆದ್ದರಿಂದ ಇವುಗಳನ್ನು ದಿನನಿತ್ಯ ಸೇವಿಸುವ ಜನರು ನಿಶ್ಚಿತವಾಗಿ ತಮ್ಮ ಕಾಯಿಲೆಗಳ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿಕೊಳ್ಳುವರು.
ನಾವು ಒಬ್ಬ ವ್ಯಕ್ತಿಯಲ್ಲಿ ಪೋಷಕಾಂಶಗಳನ್ನು ತುಂಬಲು ಮತ್ತು ಅವನನ್ನು ಆರೋಗ್ಯವಂತನನ್ನಾಗಿ ಮಾಡಲು ಸಾಧ್ಯವಿಲ್ಲ. ಮನುಷ್ಯ ರೋಬೋಟ್ ಅಲ್ಲ. ಸೂಕ್ತವಾದ ಜೀರ್ಣಕ್ರಿಯೆ, ಚಯಾಪಚಯ, ಹೀರಿಕೊಳ್ಳುವಿಕೆ ಮತ್ತು ಶಕ್ತಿ ಉತ್ಪಾದನೆಗೆ ದೇಹದ ಸೂಕ್ತ ಆಂತರಿಕ ವಾತಾವರಣವು ಯಾವುದೇ ಆಹಾರ ಉದ್ದೇಶಿತ ಪ್ರಯೋಜನಗಳನ್ನು ಉತ್ಪಾದಿಸಲು ಕಡ್ಡಾಯವಾಗಿದೆ.

ಆದ್ದರಿಂದ ಆಯುರ್ವೇದ ವಿಜ್ಞಾನದ ಪುರಾವೆಗಳ ಪ್ರಕಾರ ಸಿರಿ ಧಾನ್ಯಗಳನ್ನು “ಸೂಪರ್ ಫುಡ್” ಎಂದು ಪರಿಗಣಿಸಲಾಗುವುದಿಲ್ಲ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪೋಸ್ಟ್ ಮಾಡಲಾಗಿದೆ.

milletsfactsinayurveda

ಮೂಲ ಲೇಖಕರು: Dr. Remya Krishnan
BAMS, MD(Ayu), PhD
Associate professor and Head of the department
Department of Clinical Pharmacology
Rajiv Gandhi Ayurveda Medcical College,
( Govt. Of Puducherry Institution), Mahe

drremyaraj@gmail.com

For original post :
https://m.facebook.com/story.php?story_fbid=6680422985308047&id=100000212362539&mibextid=Nif5oz


  • ಡಾ.ಪ್ರಕಾಶ ಬಾರ್ಕಿ – ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು, ಕಾಗಿನೆಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW