ವಿಚಾರ ಬದಲಾಗಲಿ… ಬದುಕೇ ಬದಲಾಗುತ್ತೆ

ಯಾರದೋ ಬರಹ ಓದಿ ಇಷ್ಟವಾಯಿತೋ! ಒಂದು ಲೈಕ್ ಒತ್ತಿ. ಸಾಧ್ಯವಾದರೆ ಒಂದು ಕಾಮೆಂಟ್ ಮಾಡಿ. ನಿಮ್ಮ ಒಂದು ಪ್ರೋತ್ಸಾಹ ಅವರನ್ನು ಇನ್ನಷ್ಟು ಬರೆಯಲು ಪ್ರೋತ್ಸಾಹಿಸಬಹುದು. ಇನ್ನೂ ಉತ್ತಮ ಬರಹಗಾರರನ್ನಾಗಿ ಮಾಡಬಹುದು. ನೋಡಿಯೂ ಸುಮ್ಮನೆ ಮುಂದೆ ಸಾಗುವ ಸಾಧಾರಣ ಮನಸಿನ ಮನಸುಳ್ಳವರು ನಾವಾಗಬಾರದು. ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೆ ಸ್ಫೂರ್ತಿ ನೀಡುವ ಲೇಖನವನ್ನು ತಪ್ಪದೆ ಮುಂದೆ ಓದಿ…

ನಮ್ಮ ಬದುಕು ನಮ್ಮ ವಿಚಾರಗಳ ಮೇಲೆ ನಿಂತಿದೆ. ವಿಚಾರಗಳು ಬದಲಾಗದ ಹೊರತು ಬದುಕು ಬದಲಾಗದು. ವಿಚಾರಗಳ ಎತ್ತರದ ಆಧಾರದ ಮೇಲೆ ಬದುಕು ಮತ್ತು ಮನುಷ್ಯನ ವ್ಯಕ್ತಿತ್ವ ನಿರ್ಧಾರವಾಗುತ್ತದೆ.

ಇನ್ನೊಬ್ಬರ ವಿಚಾರಗಳಿಗೆ ಸದಾ ಕಿವಿ ಕೊಡುವ ಮನೋಭಾವ ನಮ್ಮದಾಗಿದ್ದರೆ ಆ ವಿಚಾರಗಳು ಯೋಗ್ಯವೇ ಎಂಬುದನ್ನು ಮೊದಲು ಪರಿಶೀಲಿಸಲು ಮರೆಯಬಾರದು. ಒಂದು ವೇಳೆ ಯಾರದೊ ಮೇಲಿನ ಅಂಧ ಶ್ರದ್ಧೆಯಿಂದ ಅವರ ಕೆಟ್ಟ ವಿಚಾರಗಳಿಗೆ ಕಿವಿ ಕೊಟ್ಟೆವೋ, ನಮ್ಮ ಸ್ವಂತಿಕೆ ಮತ್ತು ಸ್ವಾಭಿಮಾನ ಎರಡೂ ಹಾಳಾಗಿ ಅಂತವರ ಗುಲಾಮರಂತೆ ವರ್ತಿಸಲು ಪ್ರಾರಂಭಿಸುತ್ತೇವೆ. ನಮ್ಮ ಬದುಕು ಅವರ ಕೀಳು ಯೋಚನೆಯ ಮಟ್ಟ ಮೀರಿ ಬೆಳೆಯಲಾರದು. ಒಂದು ವೇಳೆ ಉತ್ತಮ ವಿಚಾರಗಳಿಗೆ ತಲೆದೂಗುವವರಾಗಿದ್ದರೆ ನಮಗೆ ಗೊತ್ತಿಲ್ಲದಂತೆ ನಮ್ಮ ಬದುಕು ಬದಲಾಗುತ್ತಾ ಹೋಗುತ್ತದೆ.

ಒಂದು ಊರಲ್ಲಿ ಒಬ್ಬ ಕುಂಬಾರನಿದ್ದ. ಅವನು ಮಣ್ಣಿನ ವಸ್ತುಗಳನ್ನು ಮಾಡುತ್ತ ಜೀವನ ಸಾಗಿಸುತ್ತಿದ್ದ. ಅವನು ಮಣ್ಣಿನಿಂದ ಜನರಿಗೆ ತಂಬಾಕು ಸೇದಲು “ಚಿಲುಮೆ”ಗಳನ್ನು ತಯಾರಿಸುತ್ತಿದ್ದ.

 

ಒಂದು ದಿನ ಅವನ ಹೆಂಡತಿ ಬಂದು ನಾನೊಂದು ವಿಚಾರ ಹೇಳುವೆ ಈ “ಚಿಲುಮೆ” ಮಾಡುವುದರ ಬದಲು “ಮಡಿಕೆ”ಯನ್ನು ಮಾಡು. ಹೇಗಿದ್ದರೂ ಬೇಸಿಗೆ ಬರುತ್ತಿದೆ. ಜನರಿಗೆ ತಣ್ಣೀರು ಬೇಕಾಗುತ್ತದೆ. ಹೀಗಾಗಿ ಮಡಿಕೆಗಳು ಈ ಚಿಲುಮೆಗಳಿಗಿಂತ ಹೆಚ್ಚಿನ ರೀತಿಯಲ್ಲಿ ವ್ಯಾಪಾರವಾಗುತ್ತವೆ. ನಮ್ಮ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳುತ್ತದೆ ಎಂದಳು. ಕುಂಬಾರನಿಗೆ ಅವನ ಹೆಂಡತಿ ಹೇಳಿದ ವಿಚಾರ ಸರಿ ಎನಿಸಿತು. ತಕ್ಷಣವೇ ಆ ಚಿಲುಮೆ ಮಾಡುವುದರ ಸಲುವಾಗಿ ಕಲಸಿದ ಮಣ್ಣನ್ನು ಮಡಿಕೆಯಾಕಾರವಾಗಿ ಪರಿವರ್ತಿಸಲು ಪ್ರಾರಂಭಿಸಿದ.

ಫೋಟೋ ಕೃಪೆ : google

ಆಗ ಆ ಮಣ್ಣು ಕುಂಬಾರನಿಗೆ ಕೇಳಿತು. “ಓಯ್! ಏನು ಮಾಡುತ್ತಿರುವೆ ನೀನು? ಚಿಲುಮೆಯಾಗಬೇಕಾದ ನಾನು ಮಡಿಕೆಯಾಗುತ್ತಿರುವೆ? ಇದೇನು ಮಾಡುತ್ತಿರುವೆ ನೀನು?” ಎಂದು.

ಆಗ ಕುಂಬಾರನು ಆ ಮಣ್ಣಿಗೆ “ಓ ಮಣ್ಣೇ! ನನ್ನ ಹೆಂಡತಿಯ ಮಾತಿಂದ ನನ್ನ ವಿಚಾರ ಬದಲಾಯಿತು” ಎಂದ.

ಆಗ ಮಣ್ಣು ಹೇಳಿತು “ನಿನ್ನದೇನೋ ವಿಚಾರ ಬದಲಾಯಿತು. ಆದರೆ ಆ ವಿಚಾರದಿಂದ ಇಲ್ಲಿ ನನ್ನ ಬದುಕೇ ಬದಲಾಯಿತು. ನನ್ನ ಅಂತರಂಗದಲ್ಲಿ ಬೆಂಕಿಯನ್ನು ತುಂಬಿಕೊಂಡು ಬೆಂಕಿಯನ್ನೇ ಉಗುಳುತ್ತಿದ್ದ ನಾನು, ಈಗ ನನ್ನೊಳಗೆ ತಂಪನ್ನು ತುಂಬಿಕೊಂಡು ಜನರಿಗೂ ತಂಪನ್ನೆರೆಯುವ ಮಡಿಕೆ ನಾನಾದೆ” ಎಂದಿತು.

ಹೀಗೆ ಬದುಕಿನ ಬದಲಾವಣೆಗೆ ಬದಲಾಗಬೇಕಿದೆ ನಮ್ಮ ವಿಚಾರಗಳು. ಯಾರದೋ ಬರಹ ಓದಿ ಇಷ್ಟವಾಯಿತೋ! ಒಂದು ಲೈಕ್ ಒತ್ತಿ. ಸಾಧ್ಯವಾದರೆ ಒಂದು ಕಾಮೆಂಟ್ ಮಾಡಿ. ನಿಮ್ಮ ಒಂದು ಪ್ರೋತ್ಸಾಹ ಅವರನ್ನು ಇನ್ನಷ್ಟು ಬರೆಯಲು ಪ್ರೋತ್ಸಾಹಿಸಬಹುದು. ಇನ್ನೂ ಉತ್ತಮ ಬರಹಗಾರರನ್ನಾಗಿ ಮಾಡಬಹುದು. ಇನ್ನೊಬ್ಬರನ್ನು ಪ್ರೋತ್ಸಾಹಿಸುವ ನಿಮ್ಮ ವಿಚಾರ ಮತ್ತೊಬ್ಬರು ನೋಡಿ ಕಲಿಯಬಹುದು. ಅದೇ ಗುಣ ನಿಮ್ಮ ಮನೆ ಮಕ್ಕಳು ಕಲಿಯಬಹುದು. ಸಂಕುಚಿತ ಮನಸಿಗಿಂತ ವಿಕಸ್ಮಿತ ಮನಸು ಉತ್ತಮವಲ್ಲವೇ!! ಉತ್ತಮ ಸಮಾಜದ ಪರಿಕಲ್ಪನೆ ನಮ್ಮ ಪ್ರತಿಯೊಬ್ಬರ ವಿಚಾರಗಳ ಹರಿಯುವಿಕೆಯಲ್ಲಿದೆ.

ನೋಡಿಯೂ ಸುಮ್ಮನೆ ಮುಂದೆ ಸಾಗುವ ಸಾಧಾರಣ ಮನಸಿನ ಮನಸುಳ್ಳವರು ನಾವಾಗಬಾರದು. ಜಾಣ ಕುರುಡುತನ ತೋರುವ ವಿಚಾರಗಳು ನಾವು ಹೊಂದಿದಲ್ಲಿ ಇತರರೂ ನಮಗೆ ಅದನ್ನೇ ಮಾಡುತ್ತಾರೆ ಎನ್ನುವ ಅರಿವು ನಮಗಿರಬೇಕು. ಹೀಗೆ ಒಬ್ಬರಿಗೊಬ್ಬರು ಕುರುಡರಾದರೆ, ಎಲ್ಲರೂ ಜಾಣರಾಗದೆ ದಡ್ಡರಾಗುತ್ತೇವೆ. ಇಡೀ ಸಮಾಜ ಕುರುಡುತನದಲ್ಲಿ ಸಾಗುತ್ತಾ ಹೋಗುತ್ತದೆ.

ಕೊನೆಯ ಪಕ್ಷ ಒಳ್ಳೆಯ ವಿಚಾರಗಳು ನಮ್ಮಿಂದ ಹೊರಹೊಮ್ಮದಿದ್ದರೂ ಸರಿಯೇ ಇನ್ನೊಬ್ಬರನ್ನು ಕಾಲೆಳೆಯುವ, ನಿರುತ್ಸಾಹಗೊಳಿಸುವ, ಧೈರ್ಯಗೆಡಿಸುವ ವಿಚಾರಗಳು ನಮ್ಮಿಂದ ಹೊರ ಹೋಗದಿರಲಿ. ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ, ಪರಿವರ್ತಿಸುತ್ತಾ ಸಾಗುವ ಸ್ವಂತಿಕೆಯ ವಿಚಾರಗಳು ನಮ್ಮದಾಗಲಿ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW