ಸ್ಟೆಪ್ ಕಟ್ ಹೋಗಿ ಆಯ್ತು ಇನ್ನೊಂದು….

ಪಾರ್ಲರ್ ಗೆ ಆಕೆ ಬಂದು ಸ್ಟೆಪ್ ಕಟ್ ಮಾಡಿ ಅಂದಳು, ನಾನು ಕೂಡಾ ಆಯ್ತು ಅಂತ ಕತ್ತರಿ ಹಿಡಿದೇ ಬಿಟ್ಟೆ, ಆಮೇಲೆ ನೋಡಿ… ನನ್ನ ಬೆವರು ಹನಿಬಿಡೋಕೆ ಶುರು ಆಯ್ತು…ಕಾರಣ ಏನು ಅಂತ ತಪ್ಪದೆ ಮುಂದೆ ಓದಿ…

ಏನೋ ಮಾಡಲು ಹೋಗಿ ಆದ ಎಡವಟ್ಟು ಇದು ನಾನು ಸೌಂದರ್ಯ ತಜ್ಞೆಯಾಗಿ ಪಾರ್ಲರ್ ನಡೆಸುತ್ತಿದ್ದ ಸಮಯದ ಘಟನೆ. ಯಾವುದೇ ವಿದ್ಯೆ ಆಗಲಿ ಕಲಿತ ಕೂಡಲೇ ನಾವೇನೂ ತಜ್ಞರಾಗಲು ಸಾಧ್ಯವಿಲ್ಲ. ಬಲವಾದ ಅನುಭವ ಪಡೆದ ಮೇಲೇನೇ ನಾವು ತಜ್ಞರಾಗುವುದು ಮಾತ್ರ ಸಾಧ್ಯ.

ಸೌಂದರ್ಯ ತಜ್ಞೆಯ ಕೆಲಸದಲ್ಲಿ ಕೂದಲು ಕತ್ತರಿಸುವುದು ಒಂದು ಕಲೆ. ಹಾಗೆಯೇ ನನ್ನ ಪಾರ್ಲರ್ ಗೆ ಒಬ್ಬ ಹೆಂಗಸು ಬಂದು ಆಗಿನ ಕಾಲದ ‘ಸ್ಟೆಪ್ ಕಟ್’ ಮಾಡಲು ಹೇಳಿದಳು. ಹೆಚ್ಚೇನೂ ಅನುಭವವಿರದ ಹೊಸತಾಗಿ ಪಾರ್ಲರ್ ತೆರೆದ ನಾನು, ನನ್ನಿಂದಾಗೋಲ್ಲ ಅನ್ನಲು ಸ್ವಾಭಿಮಾನ ಅಡ್ಡ ಬಂದು ಸರಿ ಎಂದು ಕೂದಲನ್ನು ಸೀಳು ಸೀಳಾಗಿ ಮೇಲಕ್ಕೆ ಸಿಕ್ಕಿಸಿ, ಒಂದೊಂದೇ‌ ಸ್ಟೆಪ್ ಕತ್ತರಿಸಲು ಶುರು ಮಾಡಿದೆ. ಅದೇನೋ ಸ್ಟೆಪ್ ಕಟ್ ಹೋಗಿ ಬಾಬ್ ಕಟ್ ತರಹ ಕಾಣ ತೊಡಗಿದಾಗ ಫಜೀತಿಗಿಟ್ಟು ಕೊಂಡಿತು.

ಫೋಟೋ ಕೃಪೆ : lovedbycurls

ಆಕೆಯೂ ಎದ್ದು ನಿಂತು ಎದುರಿಗೆ ಕನ್ನಡಿಯನ್ನು ಹಿಡಿದು ಹಿಂದಿನ ಕನ್ನಡಿಯಲ್ಲಿ ತನ್ನ ಕೂದಲನ್ನು ನೋಡ ತೊಡಗಿದಳು. ನನಗೆ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರು ಆಯಿತು. ಸುಮಾರು ಹೊತ್ತು ಕನ್ನಡಿ ತಿರುಗಿಸಿ ತಿರುಗಿಸಿ ನೋಡಿದರೂ ಬಹುಶಃ ಆಕೆಗೆ ಬೇಕಾದ ಸ್ಟೆಪ್ಸ್‌ ಕಾಣದೇ ಇದ್ದಾಗ ” ಆಂಟೀ” ಅಂದಳು.

ಈಗ ಬೈತಾಳೇನೋ ಅಂದುಕೊಂಡ ನನಗೆ ಆಕೆ ” ಆಂಟೀ… ಸ್ಟೆಪ್ಸ್ ಸ್ವಲ್ಪ ಕಮ್ಮಿ ಕಾಣ್ತದೆ ಅಲ್ವಾ” ಅಂದಾಗ, ಇನ್ನು ನಾನು ಸ್ಟೆಪ್ಸ್ ಮಾಡ್ತಾ ಕೂತರೆ ಇವಳ ತಲೆ ಬೋಳಾಗುವುದು ಖಂಡಿತ ಎಂದು ಬುದ್ಧಿವಂತಳಂತೆ ” ನೋಡು ಮಗಾ ಸ್ಟೆಪ್ಸ್ ಹೆಚ್ಚು ಕಾಣಲು ತಲೆಯಲ್ಲಿ ಕೂದಲೂ ಹೆಚ್ಚಿಗಿರಬೇಕು,, ನಿನ್ನ ಕೂದಲು ಸ್ವಲ್ಪ ತೆಳು, ಹಾಗಾಗಿ ಕೆಲವೇ ಸ್ಟೆಪ್ಸ್ ಮಾಡಿದ್ದೇನೆ. ತಲೆಗೆ ಚೆನ್ನಾಗಿ ಮೆಂತೆ, ಕರಿಬೇವು ಸೊಪ್ಪು ಹಾಕಿ ಬಿಸಿ ಮಾಡಿದ ಎಣ್ಣೆಯನ್ನು ಹಚ್ಚುತ್ತಾ ಹೋಗು,ಆಗ ಕೂದಲೂ ದಪ್ಪ ಆಗುತ್ತದೆ, ಸ್ಟೆಪ್ಸ್ ಕೂಡಾ ಹೆಚ್ಚು ಮಾಡ ಬಹುದು ಎಂದು ತಜ್ಞೆಯಂತೆ ನುಡಿದಾಗ ಹಣ ಕೊಟ್ಟು ಸುಮ್ಮನೆ ಹೋದಳು. ನಾನೋ ಬದುಕಿದೆಯಾ ಬಡಜೀವವೇ ಅಂತ ಸುಮ್ಮನೆ ಕುಳಿತೆ.

ಮತ್ತೆ ಎಂದೂ ಆಕೆ ನನ್ನ ಪಾರ್ಲರಿನತ್ತ ಮುಖ ಮಾಡಲಿಲ್ಲ ಪಾಪ…


  • ವಸುಧಾಪ್ರಭು, ಮುಂಬೈ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW