ವರ್ತಮಾನದ ತಲ್ಲಣ, ಸ್ತ್ರೀ ಸಂವೇದನೆಯ ಪ್ರತಿಧ್ವನಿ (ಭಾಗ೨)

ಸಮಾಜದಲ್ಲಿ ಹೆಣ್ಣು ಮತ್ತು ಹೆಣ್ಣಿನ ಸುತ್ತ ಇರುವ ವ್ಯವಸ್ಥೆಯನ್ನು, ಅಲ್ಲಿರುವ ಕಟ್ಟುಪಡುಗಳು, ಟೀಕೆಗಳು ಹಾಗೂ ತಾವು ಅವುಗಳನ್ನು ಮೀರಿ ಬದುಕು ಕಟ್ಟಿಕೊಂಡ ಬಗೆಯನ್ನು ತಮ್ಮದೇ ಆದ ದನಿಯಲಿ ಮಹಿಳೆಯರು ಅವಲೋಕಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ರೇಷ್ಮಾ ಗುಳೇದಗುಡ್ಡಕರ್ ಅವರು ತಮ್ಮ ಲೇಖನಿಯಲ್ಲಿ ಹೆಣ್ಣಿನ ಧ್ವನಿಯನ್ನು ಓದುಗರ ಮುಂದಿಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…

  • ರಶ್ಮಿ ಡಿಸೋಜ, ಬೆಂಗಳೂರು

ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಮಹಿಳೆಯರು ಸಂಪ್ರದಾಯ ಮತ್ತು ಸಂಸ್ಕಾರಗಳಿಗೆ ಬಲಿಯಾಗುತ್ತಿದ್ದಾರೆ. ಮತ್ತು ಈ ಆಚರಣೆಗಳೊಂದಿಗೆ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಹೆಣ್ಣಿನ ಮೇಲೆ ಮಾತ್ರ ಹೇರಿಕೆ ಮಾಡಿರುವದು ವಿಷಾದನೀಯವಾಗಿದೆ.

ಆದರೆ ಸೃಷ್ಟಿಯಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಭೇದವಿಲ್ಲ . ಪುರುಷರು ಗರ್ಭದಲ್ಲಿ ಮಹಿಳೆಯರಿಗಿಂತ ಭಿನ್ನವಾಗಿರುವುದಿಲ್ಲ….ಇಲ್ಲಿ ಎಲ್ಲರು ಸಮಾನವಾಗಿ ಹುಟ್ಟುತ್ತಾರೆ. ಆದರೂ ಎಲ್ಲ ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ನು ಎಲ್ಲಾ ಸಮುದಾಯದಲ್ಲಿಯೂ ಮಹಿಳೆಯಾರನ್ನೇ ಗುರಿಯಾಗಿಸಿವೆ ಇದು ಹೇಗೆ ನ್ಯಾಯಯುತವಾಗಿದೆ?. ಎಂಬಾವುದನ್ನು ಎಲ್ಲಾರು ಅವಲೋಕನ ಮಾಡಿಕೊಳ್ಳಬೇಕಿದೆ.

ಆಚರಣೆಗಳ ಹೆಸರಿನಲ್ಲಿ ಯಾವುದೇ ಕಾರ್ಯವನ್ನು ಮಾಡಲು ಮಹಿಳೆಯನ್ನು ನಿರ್ಭಂಧಿಸುವುದಕ್ಕಿಂತ ಅವಳ ಸ್ವಂತ ಆಯ್ಕೆಗೆ ಬಿಡಬೇಕು, ಅವಳ ನಿರ್ಧಾರವನ್ನು ಇತರರು ಗೌರವದಿಂದ ಸ್ವೀಕರಿಸಬೇಕು.

ವಿವಾಹಿತ ಮಹಿಳೆ ಅಥವಾ ಒಂಟಿ ಮಹಿಳೆ ಹೇಗೆ ಇರಬೇಕು ಎಂಬ ನಿಯಮ ಮಾಡಿದವನು ದೇವರಲ್ಲ. ಬದಲಿಗೆ ಈ ಪುರುಷ ಸಮಾಜ. ನೀವು ಕುಂಕುಮವನ್ನು ಇಟ್ಟರೆ ಭಾರತೀಯರು / ಹಿಂದೂ / ವಿವಾಹಿತರು ಇತ್ಯಾದಿ ಎಂಬುದನ್ನು ಅಥವಾ ಅವುಗಳನ್ನು ಧರಿಸದಿದ್ದರೆ ನೀವು ಬೇರೆ ಧರ್ಮ / ವಿಧವೆ? ಎಂಬ ನಿಯಮಗಳು ದೇವರಿಂದ ನಿರ್ಮಿಸಲಾಗಿದೆಯೇ ? ಇಲ್ಲ ನಾವು ಮಾನವರು ಈ ರೂಢಿಗಳನ್ನು ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನುಮಾಡಿದ್ದೇವೆ. ಮತ್ತು ಅವುಗಳನ್ನು ಪಾಲಿಸಿಕೊಂಡು ಬೇದ ಭಾವವನ್ನು ಮಾಡಿಕೊಂಡು ಬರುತ್ತಿದ್ದೇವೆ.

ವಿವಾಹಿತ ಅಥವಾ ಅವಿವಾಹಿತ ಮಹಿಳೆ ಹೇಗೆ ಕಾಣಬೇಕು ಅಥವಾ ಹೇಗೆ ವರ್ತಿಸಬೇಕು ಅಥವಾ ಹೇಗೆ ಬದುಕ ಬೇಕು ಎಂದು ತೀರ್ಮಾನಿಸುವ ಹಕ್ಕನ್ನು ಯಾರು ಯಾರಿಗೂ ನೀಡಿಲ್ಲ.ಅದು ಅವರ ಪ್ರಜ್ಞಾಪೂರ್ವಕ ಮತ್ತು ಅವಳ ಸ್ವಂತ ಇಚ್ಛೆಯ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ನಾಗರೀಕ ಸಮಾಜ ಮನಗಣಬೇಕಿದೆ.

****

  • ಆಶಾ ಸುರಿಗೇನಹಳ್ಳಿ, ಬರಹಗಾರರು, ತುಮಕೂರು.

ಯಾಕೆ ಬೊಟ್ಟಿಟ್ಟಿಲ್ಲ? ಬಳೆ ಹಾಕಿಲ್ಲ? ತಾಳಿಸರ ಯಾಕಾಕಿಲ್ಲ?…….ಅಂತ ನೂರು ಪ್ರಶ್ನೆ ಕೇಳುವುದಕ್ಕಿಂತ; ಕಣ್ಣು ಒಳಗಡೆ ಹೋಗಿದ್ದಾವೆ, ಅನಿಮಿಕ್ ಆಗಿದ್ಯೇನೋ? ಬಾ! ಚೆಕಪ್ ಗೆ ಹೋಗೋಣ. ತುಂಬಾ ಸುಸ್ತಾದಂತೆ ಕಾಣಿಸ್ತಿದ್ಯ? ಸ್ವಲ್ಪ ರೆಸ್ಟ್ ಮಾಡು. ಮಗು ಯಾಕೋ ರಾತ್ರಿ ನಿದ್ದೆ ಕೊಟ್ಟಂಗಿಲ್ಲ, ಇನ್ನು ಸ್ವಲ್ಪವೊತ್ತು ಮಲಗು!.ಎಂಬ ಮಾತುಗಳು ಗಂಡಿನ ಬಾಯಲ್ಲಿ ಬರುವದಿಲ್ಲ .

ಎಷ್ಟೇ ಆಧುನಿಕ ಸೌಲಭ್ಯಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದರೂ ತಿಂಗಳ ಮುಟ್ಟಿನ ದಿನಗಳು ಕಿರಿಕಿರಿಯೆನಿಸೋ ಆ ದಿನಗಳಲ್ಲಿ ನಿಂಗೆ ಎಷ್ಟು ಸಾಧ್ಯವೊ ಅಷ್ಟು ಕೆಲಸ ಮಾಡು ಅಂತ ಮಾರ್ಜಿನ್ ಕೊಡುವ ಗಂಡಸು ಪ್ರತಿಯೊಬ್ಬ ಹೆಣ್ಣಿಗೂ ಸಿಗಬೇಕು.

ಅಕಸ್ಮಾತ್ ಅಂತ ಗಂಡು ಸಿಗದೇ ಇರೋರು ಏನ್ ಮಾಡಬೇಕು ಅನ್ನೋ ಪ್ರಶ್ನೆಗೆ, ಮುಂದೇನು? ಅಂತ ಯೋಚಿಸೋ ದುರ್ಬಲ/ನೊಂದ ಮಹಿಳೆಯರಿಗೆ ಗಂಡಿನ ಸಂಗವಿಲ್ಲದೆ, ಜೀವನವನ್ನು ನಡೆಸುವುದ್ಹೇಗೆ? ಅನ್ನೋದನ್ನ ದಿಟ್ಟವಾಗಿ ಸಮಾಜಕ್ಕೆ ಸಾಬೀತುಪಡಿಸಬೇಕು. ಎಂಥಾ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಕೆಲವೊಮ್ಮೆ ಹೆಣ್ಣೊಬ್ಬಳೇ ಇರಬೇಕಾಗುತ್ತದೆ.ನಿರಾಶೆ ಅವಕಾಶ ಯಾವ ಹೆಣ್ಣು ಕೊಡಬಾರದು ಟೀಕೆ, ನಿಂದನೆಗಳಿಗೆ ಹೆದರಿ ಬಲಿಯಾಗಬಾರದು.
ಟೀಕಿಸುವವರಿಗೆ ನಿಂದಿಸುವವರಿಗೆ, ನೈಜ ಸತ್ಯ ಬೇಕಿರುವುದಿಲ್ಲ ಅವಳಿಗೆ ಕಾಣುವುದು ಏನಿದ್ದರೂ ಹೆಣ್ಣಿನ ಸಂತೋಷ ಅದನ್ನು ಕುಗ್ಗಿಸುವ ಕೆಲಸ ಮಾಡುತ್ತಾರೆ.

ಓರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ ।
ಧರ್ಮಸಂಕಟಗಳಲಿ, ಜೀವಸಮರದಲಿ ।।
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ ।
ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ।।

ಡಿವಿಜಿಯವರ ಮೇಲಿನ ಕಗ್ಗದಂತೆ, ಬದುಕು ನಿಂತ ನೀರಲ್ಲ ಏನೇ ಸಮಸ್ಯೆ ಬಂದರೂ ದಿಟವಾಗಿ ಎದುರಿಸಿ ಮುನ್ನಡೆಯಿರಿ, ಇದಕ್ಕೆ ಶಿಕ್ಷಣ ಅತೀ ಅಗತ್ಯ
ಹೆಣ್ಣು ಕಲಿಯಬೇಕು.ಛಲದಿಂದ ಮುಂದೆ ಸಾಗಬೇಕು.

ಪ್ರತಿಯೊಬ್ಬ ಮಹಿಳೆಯು ಸ್ವಾವಲಂಬಿಯಾಗಿ ಬದುಕಬೇಕಾದರೆ ಶಿಕ್ಷಣ ಅವಳಿಗೆ ಮೂಲ ಬೇರಾಗಬೇಕು; ಹಾಗೂ ಜೀವನಾನುಭವ ಬದುಕಿಗೆ ಉಸಿರಾಗಬೇಕು.


  • ರೇಶ್ಮಾ ಗುಳೇದಗುಡ್ಡಾಕರ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW