ವರ್ತಮಾನದ ತಲ್ಲಣ, ಸ್ತ್ರೀ ಸಂವೇದನೆಯ ಪ್ರತಿಧ್ವನಿ (ಭಾಗ ೫)

ಸಮಾಜದಲ್ಲಿ ಹೆಣ್ಣು ಮತ್ತು ಹೆಣ್ಣಿನ ಸುತ್ತ ಇರುವ ವ್ಯವಸ್ಥೆಯನ್ನು, ಅಲ್ಲಿರುವ ಕಟ್ಟುಪಡುಗಳು, ಟೀಕೆಗಳು ಹಾಗೂ ತಾವು ಅವುಗಳನ್ನು ಮೀರಿ ಬದುಕು ಕಟ್ಟಿಕೊಂಡ ಬಗೆಯನ್ನು ತಮ್ಮದೇ ಆದ ದನಿಯಲಿ ಮಹಿಳೆಯರು ಅವಲೋಕಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ರೇಶ್ಮಾ ಗುಳೇದಗುಡ್ಡಕರ್ ಅವರು ತಮ್ಮ ಲೇಖನಿಯಲ್ಲಿ ಹೆಣ್ಣಿನ ಧ್ವನಿಯನ್ನು ಓದುಗರ ಮುಂದಿಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…

  • ಧ್ವನಿ : ವಿಭಾ ವಿಶ್ವನಾಥ್, ಯುವ ಬರಹಗಾರರು, ಹಾಸನ.

“ಮೊಲೆ, ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ Birthday
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ!”

–  ರಾಮನಾಥ

ಜೇಡರ ದಾಸಿಮಯ್ಯನ ಈ ವಚನವನ್ನು ಕೇಳಿದಾಗ ಗಂಡು ಹಾಗೂ ಹೆಣ್ಣು ಇಬ್ಬರನ್ನು ಗುರುತಿಸುವುದು ಇದೇ ಆಧಾರದ ಮೇಲೆಯೇ ಅಲ್ಲವಾ? ಎಂದೆನ್ನಿಸದಿರದು. ಆತ್ಮಕ್ಕಿಲ್ಲದ ಲಿಂಗದ ಹಂಗು ದೇಹಕ್ಕೆ ಮಾತ್ರ. ಈ ಲಿಂಗತ್ವ ಆಧಾರದಲ್ಲಿ ವ್ಯತ್ಯಾಸ ಗುರುತಿಸುವಿಕೆ ಇಂದು ಇಲ್ಲಿಯೇ ನಿಲ್ಲದು.

ಹೆಣ್ಣೆಂದರೆ ಹೀಗೆಯೇ ಇರಬೇಕು ಎನ್ನುವ ಕಟ್ಟುಪಾಡುಗಳು ಮುಂದುವರಿಯುತ್ತವೆ. ಧಾರಾಳವಾಗಿ ಹೆಚ್ಚು ಧೈರ್ಯ ಪ್ರದರ್ಶಿಸುವ , ಮುಂದಾಳತ್ವಕ್ಕೆ ಮುಂದಾಗುವ ಹೆಣ್ಣನ್ನು ಗಂಡುಬೀರಿ ಎಂದು ಅಬ್ಬರಿಸುತ್ತಾರೆ.

ಆದರೆ ಗಂಡು ಕೊಂಚ ನಾಚಿದರೆ, ಹೆಚ್ಚು ಅಲಂಕಾರ ಮಾಡಿಕೊಂಡರೆ, ಎಲ್ಲರಿಗೂ ಕಾಣುವಂತೆ ಅತ್ತರೆ “ಹೆಣ್ಣಿಗ” “ರಾಮ “ಎಂದೂ ಹಣೆಪಟ್ಟಿ ನೀಡಿಬಿಡುತ್ತಾರೆ!

ಹೆಣ್ಣಿಗೆ ಧೈರ್ಯ ಪ್ರದರ್ಶಿಸುವ, ಮುಂದಾಳತ್ವ ವಹಿಸಿ ಮುಂದೆ ಸಾಗುವ ಹಕ್ಕಿಲ್ಲವಾ..? ತನ್ನ ಧೈರ್ಯ, ಬುದ್ಧಿವಂತಿಕೆಯಿಂದ ತನ್ನ ವ್ಯಕ್ತಿತ್ವವನ್ನು ಅನಾವರಣಗೊಳಿಸಿಕೊಳ್ಳುವುದಕ್ಕೆ ಕೊಕ್ಕೆ ಏಕೆ ? ಈ ಟೀಕೆ, ಟಿಪ್ಪಣಿಗಳನ್ನು ಮೀರಿ ಮುಂದೆ ಸಾಗಿದರೂ ಗಂಡಿಗೆ ಸಿಗದ ಮನ್ನಣೆ, ಪ್ರಶಸ್ತಿ, ಅಧಿಕಾರಗಳು ಸಿಕ್ಕಾಗ ಅವಳು ಅದನ್ನು ತನ್ನ ಪ್ರತಿಭೆಯಿಂದಲೇ ಪಡೆದುಕೊಂಡಿದ್ದರೂ ಅವಳ ಕುರಿತು ಅಸಹನೆ ಕುಕ್ಕುಲಾತಿ ಅದಕ್ಕೊಂದು ಕೊಂಕು. ಅವಳ ಚಾರಿತ್ರ್ಯದ ಕುರಿತು ಮಾತನಾಡುತ್ತಾರೆ. ಅವಳಿಗೆ ಕೆಲಸದ ಸ್ಥಳದಲ್ಲಿ ಮಾನಸಿಕ ಕಿರುಕುಳ ಶುರುವಾಗಬಹುದು.

ಹೆಣ್ಣು ಉದ್ಯೋಗದಲ್ಲಿದ್ದಾಗ ಅನುಭವಿಸುವ ಹಿಂಸೆಗಳಲ್ಲಿ ಮಾನಸಿಕ ಕಿರುಕುಳ ಒಂದು ಬಗೆಯಾದರೆ, ದೈಹಿಕ ಕಿರುಕುಳ ಮತ್ತೊಂದು ಬಗೆಯದ್ದು. ದೈಹಿಕ ಕಿರುಕುಳದ ಕುರಿತು ಅವಳೇನಾದರೂ ಮಾತನಾಡಿದರೆ ತಪ್ಪು ಅವಳದ್ದೇ ಎಂಬಂತೆ ಮಾತನಾಡುವ ಮಂದಿ ಅವಳನ್ನೇ ಕುಗ್ಗಿಸಬಹುದು.

ಈ ರೀತಿಯ ಘಟನೆಗಳು ಹೆಣ್ಣಿನ ಶೀಲ, ಚಾರಿತ್ರ್ಯವನ್ನೇ ಪ್ರಶ್ನಿಸುವಂತೆ ಮಾಡುವಾಗ ನನ್ನಲ್ಲಿ ಉದ್ಭವಿಸುವ ಪ್ರಶ್ನೆ “ಗಂಡಿಗೆ ಏಕೆ ಈ ಶೀಲ, ಚಾರಿತ್ರ್ಯದ ಕುರಿತ ಭಯವಿಲ್ಲ..?”

ಇಷ್ಟೇ ಅಲ್ಲ, ಈ ಲೈಂಗಿಕ ಕಿರುಕುಳ ಅತ್ಯಾಚಾರವಾಗಿ ಬದಲಾದಾಗ ಆಪಾದನೆ ಬರುವುದು ಹೆಣ್ಣಿನ ಮೇಲೆಯೇ.. ಅವಳು ಅಷ್ಟೊತ್ತಿನಲ್ಲಿ ಹೊರಗೇಕೆ ಹೋಗಬೇಕಿತ್ತು ? ಅವಳು ಪ್ರಚೋದನಕಾರಿಯಾದ ಬಟ್ಟೆ ಧರಿಸುವ ಅಗತ್ಯವಿತ್ತೇ ? ಹೀಗೆ ಪ್ರಶ್ನೆಗಳ ಸರಮಾಲೆಯೇ ಶುರುಮಾಡುತ್ತಾರೆ.

ಆದರೆ, ಏನೂ ಅರಿಯದ ಪುಟ್ಟ ಹೆಣ್ಣು ಹಸುಳೆಗಳ ಮೇಲೆಯೂ ಅತ್ಯಾಚಾರವಾಗುವಾಗ ಅದಕ್ಕೇನು ಹೇಳಬಲ್ಲರು ? ಇಷ್ಟೇ ಅಲ್ಲದೆ, ಅತ್ಯಾಚಾರ ಮಾಡಿದ ಆಪರಾಧಿಯೊಂದಿಗೇ ಆ ಹುಡುಗಿಯ ಮದುವೆ ಮಾಡುವ ತೀರ್ಮಾನ ಮಾಡಿದಾಗ ಗಂಡಿನ ಅಪರಾಧಕಲ್ಲ ಅಲ್ಲಿ ಶಿಕ್ಷೆಯಾಗಿದ್ದು.. ಬದಲಾಗಿ, ಅಲ್ಲಿ ಶಿಕ್ಷೆ ಅನುಭವಿಸುವುದು ಹೆಣ್ಣು. ಕೆಲವರು ಈ ರೀತಿ ಶಿಕ್ಷೆ ಅನುಭವಿಸಿದರೆ. ಇನ್ನೂ ಎಷ್ಟೋ ಹೆಣ್ಣು ಮಕ್ಕಳ ಮನೆಯಲ್ಲಿ ಆ ಕುರಿತು ಸುದ್ದಿ ಹೊರಹೋಗಲು ಬಿಡುವುದೇ ಇಲ್ಲ. ಅಪರಾಧಿ ಅದೆಷ್ಟು ಆರಾಮವಾಗಿ ತಪ್ಪಿಸಿಕೊಳ್ಳಬಲ್ಲನೋ.. ಅಷ್ಟೇ ಸುಲಭವಾಗಿ ಮತ್ತೊಂದು ಅಂತಹದ್ದೇ ಅಪರಾಧವನ್ನೂ ಮಾಡಬಲ್ಲನು.

ಮಿತಿ ಹೇರುವ ಸುತ್ತಮುತ್ತಲಿನ ಸಮಾಜದಿಂದ ಮಿತಿಯನ್ನು ದಾಟಿ ಬೆಳೆಯಬಲ್ಲ ಹೆಣ್ಣಿಗೆ ಬಹಳ ಮುಖ್ಯವಾದದ್ದು ಮಾನಸಿಕ ಸ್ಥೈರ್ಯ. ದೈಹಿಕ ಸಧೃಢತೆ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ, ಮಾನಸಿಕ ಸ್ಥೈರ್ಯವೂ ಅಷ್ಟೇ ಮುಖ್ಯ. ತನ್ನವರಿಂದಲೇ ಅದು ಸಿಕ್ಕಾಗ ಅವಳಲ್ಲಿ ಉಂಟಾಗುವ ಆತ್ಮವಿಶ್ವಾಸದ ಗುಣಮಟ್ಟ ವಿಶಿಷ್ಟವಾದದ್ದು. ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ ಸಮಾಜದ ಕಣ್ಣು ಸಹಾ ಹೌದು.

*****

  • ಧ್ವನಿ : ಅಮೃತ ಎಂ ಡಿ

”ಅಡಿಗೆ ಮನೆಯಾಚೆಗೂ ಬದುಕಿದೆ, ಆ ಬದುಕು ಅರ್ಥವತ್ತಾಗಿ ಸಾಗಿದೆ.
ಕಣ್ಣೀರ ಅಂತ್ಯದ ಆಚೆಗೂ ಜೀವನ ಜಿನುಗಿದೆ ಆ ಜೀವನ ಮಾದರಿ ಆಗಿ ನಿಂತಿದೆ,
ಎಲ್ಲ ಸಿಟ್ಟು ಸೆಡವುಗಳ ಆಚೆಗೂ ಸಮಾಜ ಪ್ರೀತಿ ಅರಳಿದೆ,
ಆ ಪ್ರೀತಿ ಮನ ಮನಗಳ ನಡುವೆ ಸೇತುವೆ ಕಟ್ಟಿದೆ.
ಕೊಂಡಿ ಆಗಿದೆ, ಬೆಸುಗೆ ಬೆಸೆದಿದೆ.
ಎಲ್ಲವನ್ನೂ ಮೀರಿ, ದಾಟಿ ಬದುಕಿನ ಗಮ್ಯ ಸೇರುವ ಧಾಟಿ ಬದಲಾಗಿದೆ ಅಷ್ಟೇ”

ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತೆ ಎಂಬುದೆಲ್ಲ ಹೇಳಲು ಕೇಳಲು ಅಷ್ಟೇ ಸಮಂಜಸ. ಅನುಭವ, ವಾಸ್ತವ ಬೇರೇನೋ ಹೇಳ ತೊಡಗುತ್ತದೆ. ಪುರುಷ ಸಮಾಜದ ಹಕ್ಕು, ಒತ್ತಾಯ ಇಂದು ನೆನ್ನೆಯದಲ್ಲ. 12ನೆ ಶತಮಾನ ದಾಟಿ 21 ನೆ ಶತಮಾನಕ್ಕೆ ಕಾಲಿಟ್ಟರು ಅಂತಹದ್ದೇ ಹಕ್ಕು, ದಬ್ಬಾಳಿಕೆ,ಬೇರೆ ಸ್ವರೂಪದಲ್ಲಿ ಹೆಣ್ಣನ್ನು ಶೋಷಣೆಗೆ ಒಳಪಡಿಸಿ ನಲುಗಿಸುತ್ತಲೆ ಇದೆ.

ಇಲ್ಲಿ ಬಂಧನ ಎಂದು ನೇರವಾಗಿ ಕಾಣುತ್ತಿಲ್ಲ, ಕಾಣದ ಕೈ ಬಂಧಿಸುತ್ತಲು ಇಲ್ಲ. ನಮ್ಮವರು, ನಮ್ಮನ್ನು, ನಮ್ಮ ಗಮನಕ್ಕೆ ತರದೆ ಪ್ರೀತಿ ಎಂಬ ಪದದಿಂದ ಸಂಕೋಲೆ ಹಾಕುತ್ತಾ ಇದ್ದಾರೆ.

ಆ ಸಂಕೋಲೆಯನ್ನು ಪ್ರೀತಿ ಇಂದ, ನಮ್ಮದೆ ಔನ್ನತ್ಯಗಳ ಕಾರ್ಯದಿಂದ ಬಿಡಿಸಿ ಕೊಳ್ಳಬೇಕು. ಮುಂದುವರೆದ ಜೀವನದಲ್ಲಿ ಸಂಸಾರದ ಜವಾಬ್ದಾರಿ ಎಂದು ಕಟ್ಟಳೆಗಳು ಸೃಷ್ಟಿ ಆಗುತ್ತದೆ.
ಅಂದುಕೊಂಡಂತೆ ಜೀವನ ನಡೆಯಬೇಕು ಎಂದರೆ, ದೃಷ್ಟಿ, ದೃಶ್ಯ ಅಲ್ಲ ಬದಲಾಗ ಬೇಕಿರೋದು, ಆಲೋಚನೆಗಳು, ನಡೆದು ಕೊಳ್ಳಬೇಕಾದ ನಡವಳಿಗಳು, ತಾಯಿ, ಅಕ್ಕ-ತಂಗಿಗೆ ಸಿಗುವ ಗೌರವ ಮನ್ನಣೆ, ತನ್ನನ್ನೇ ಜೀವ ಜೀವನ ಎಂದು ಬಂದ ಜೀವ ಕೂಡ ಒಂದು ಮನೆಯ ದೀಪ ಎಂಬುದು ಅರಿವಾದಾಗ ಅಲ್ಲಿ ಮಹತ್ತರ ಬದಲಾವಣೆ ಕಾಣಬಹುದು.

ಈಗ ಬದಲಾಗಿ ನಿಲ್ಲಬೇಕಾಗಿರುವುದು ಒಂದು ಕಡೆಯ ಎತ್ತಲ್ಲ, ಎರಡು ಕಡೆಯ ಜೋಡೆತ್ತು. ಒಬ್ಬ ಮನುಷ್ಯನಿಗೆ ನೀ ಪ್ರೀತಿಯನ್ನೇ ಧಾರೆ ಎರೆಯುತ್ತಿರು, ಆ ಮನುಷ್ಯ ನಿನ್ನನ್ನು ವಿನಾಕಾರಣ ಎಷ್ಟು ದ್ವೇಷಿಸಬಹುದು..? ಎಲ್ಲವೂ ಸರಿ ಇಲ್ಲ, ಆಗಾಗಿ ಜೀವನ ಏರು ಪೇರಾಯಿತು ಎನ್ನುವ ಮೊದಲು ನಿನ್ನ ಕಡೆಯಿಂದ ಜರುಗಿದ ಕಾರ್ಯ ಆದ್ರೂ ಏನು..?
ನಿನ್ನ ಜೀವನದ ಹಳಿ ಕದಲಲು ಕಾರಣ ಏನು .? ದೂರುವುದು ಬಿಟ್ಟು ಸಮಸ್ಯೆಗೆ ಕಾರಣ, ಪರಿಹಾರ ಹುಡುಕಿದರೆ ಭಾವನೆಗಳಿಗೆ ಮನ್ನಣೆ ಮತ್ತು ಗೌರವ ಎರಡು ಸಹ ಸಿಗಬಹುದು
ಎಲ್ಲ ಕ್ರಿಯೆಗೂ ಪ್ರತಿ ಕ್ರಿಯೆ ಸಿಕ್ಕೆ ಸಿಗುತ್ತದೆ , ಸಂಭಾಳಿಸುವ ರೀತಿ ಇಂದ ಪರಿಣಾಮ ಬೇರೆ ಬೇರೆ ಆಗಿರುತ್ತದೆ.

ನೀ ಒಲವ ಹೊತ್ತು ನಿಂತರೆ ನಿನ್ನೆಡೆಗೆ ಎಷ್ಟೆಂದು ಕಲ್ಲು ತೂರಿಯಾರು..?
ನೀ ಸಹನೆ ಒಟ್ಟಿಗೆ, ಸಮಸ್ಯೆಗೆ ಪರಿಹಾರವನ್ನು ಹುಡುಕಿ ನಿಂತರೆ ಎಷ್ಟೆಂದು ದೂರಿ ಯಾರು .?


  • ರೇಶ್ಮಾ ಗುಳೇದಗುಡ್ಡಕರ್
0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW