“ಸು” ಕಾದಂಬರಿ ಮಲಯಾಳಂಗೆ ಅನುವಾದ



ಪ್ರಸನ್ನ ಸಂತೇಕಡೂರು ಅವರ “ಸು” ಕಾದಂಬರಿ ಮಲಯಾಳಂಗೆ ಅನುವಾದಗೊಂಡಿದ್ದು, ಇದೇ ಭಾನುವಾರ ಏಪ್ರಿಲ್ ೧೦, ೨೦೨೨ ಲೋಕಾರ್ಪಣೆಗೊಳ್ಳಲಿದೆ. ಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ…

ಮೂಲ ಲೇಖಕರು : ಪ್ರಸನ್ನ ಸಂತೇಕಡೂರು
ಅನುವಾದಕರು : ಸುಧಾಕರನ್ ರಾಮಂತಳಿ
ಪುಸ್ತಕ : “ಸು” ಕಾದಂಬರಿ
ಪ್ರಕಾಶಕರು: ಕೈರಳಿ ಪುಸ್ತಕ ಪ್ರಕಾಶನ
ದಿನಾಂಕ: ೧೦/೦೪/೨೦೦೨೨
ಸ್ಥಳ :  ಕೈರಳಿ ನಿಲಯಂ ಸಭಾಂಗಣ, ವಿಮಾನಪುರ, 560017.
ಸಮಯ :ಬೆಳಿಗ್ಗೆ ೧೦: ೩೦

‘ಸು’ ಕಾದಂಬರಿಯ ಕನ್ನಡದ ಮುಖಪುಟ

‘ಸು’ ಕಾದಂಬರಿಕಾರ ಪ್ರಸನ್ನ ಸಂತೇಕಡೂರು

‘ಸು’ ಕಾದಂಬರಿಯ ಮಲಯಾಳಂ ಮುಖಪುಟ

‘ಸು’ ಮಲಯಾಳಂ ಅನುವಾದಕ ಸುಧಾಕರನ್ ರಾಮಂತಳಿ

ಇದೆ ಭಾನುವಾರ ಏಪ್ರಿಲ್ ಹತ್ತರಂದು ಬೆಳಿಗ್ಗೆ ೧೦: ೩೦ ಕ್ಕೆ ಬೆಂಗಳೂರಿನ ವಿಮಾನಪುರದಲ್ಲಿರುವ ಕೈರಳಿ ನಿಲಯಂ ಸಭಾಂಗಣದಲ್ಲಿ “ಸು” ಕಾದಂಬರಿಯ ಮಲಯಾಳಂ ಭಾಷೆಯ ಅನುವಾದದ ಬಿಡುಗಡೆ ಕಾರ್ಯಕ್ರಮವಿದೆ. ಕೈರಳಿ ಪುಸ್ತಕ ಪ್ರಕಾಶನ (ಕಣ್ಣೂರು, ಕೇರಳ) ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಲೇಖಕರಾದ ಎಸ್. ದಿವಾಕರ್ ರವರು “ಸು” ಕಾದಂಬರಿಯ ಕುರಿತು ಮಾತನಾಡಲಿದ್ದಾರೆ.

“ಸು” ಕಾದಂಬರಿಯ ಅನುವಾದಕರಾದ ಶ್ರೀ ಸುಧಾಕರನ್ ರಾಮಂತಳಿಯವರು ಮಲಯಾಳಂ ಓದುಗರಿಗೆ ಕೃತಿಯ ಪರಿಚಯ ಮಾಡಿಕೊಡುತ್ತಾರೆ. ಜೊತೆಗೆ ಕಿರು ಸಂವಾದ ಕೂಡ ಇರುತ್ತದೆ. ಎಲ್ಲರೂ ಕಾರ್ಯಕ್ರಮಕ್ಕೆ ಬನ್ನಿ, ತಮ್ಮ ಕುಟುಂಬದವರನ್ನು ಆತ್ಮೀಯರನ್ನು, ಗೆಳೆಯ ಗೆಳತಿಯರನ್ನು ಕರೆತನ್ನಿ.


  • ಆಕೃತಿ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading