ನಿಂದನೆಗಳಿಗೆ ಕಿವಿ ಕೊಟ್ಟರೆ ಸಾಧಿಸಲು ಅಸಾಧ್ಯ, ಜೀವನಕ್ಕೆ ಸ್ಫೂರ್ತಿ ನೀಡುವಂತಹ ಹನಿಗವನಗಳನ್ನು ಕವಿಯತ್ರಿ ಪವಿತ್ರ ಗೀತಾ ಅವರು ಬರೆದಿದ್ದಾರೆ. ಓದಿ ಸಾಧ್ಯವಾದರೆ ಜೀವನದಲ್ಲಿ ಅಳವಡಿಸಿಕೊಳ್ಳಿ…
ಬೇರೆಯವರ ಮನ ನೋಯಿಸಿ
ಬೀಗುವುದು #ಅಹಂಕಾರ
ಅರಿತು, ಒಲಿಸಿಕೊಂಡರೆ ಸದಾಚಾರ
****
ನಿಂದನೆಗಳಿಗೆ ಕಿವಿ ಕೊಟ್ಟರೆ ಗುರಿ
ಮುಟ್ಟುವುದು ಸಾಧ್ಯವೇ ಇಲ್ಲ ,
ಕಿವುಡಾಗಿಬಿಡಿ , ಆಡಿಕೊಳ್ಳುವವರು
ಪರಚಿಕೊಳ್ಳುತ್ತಲೇ ಇರಲಿ, ನೀವು
ಗಮ್ಯದೆಡೆಗೆ ದೃಷ್ಟಿ ನೀಡಿ
****
ಅಡೆತಡೆಗಳಿಗೆ ಹಿಮ್ಮೆಟ್ಟಿದರೆ ಜೀವನ ದುಸ್ತರ
ಧೈರ್ಯದಿ ಮುನ್ನುಗ್ಗಿ ಎದುರಿಸಿದರೆ
ಬದುಕು ಸುಖಸಾರ…
- ಪವಿತ್ರ ಗೀತಾ ( ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಯತ್ರಿ )
