ಕೈಲಾಸಂ ಜನ್ಮದಿನದ ನೆನಪಿಗೆ – ರಘುನಾಥ್ ಕೃಷ್ಣಮಾಚಾರ್

ತುಂಡು ಪಂಚೆಯುಟ್ಟ ಕೈಲಾಸಂ ಸೈಕಲ್ ಸವಾರಿ ಮಾಡುವಾಗ ಅವರ ಪಂಚೆಯ ತುದಿ ಸೈಕಲ್ ಚೈನಿಗೆ ಸಿಕ್ಕಿ ಹಾಕಿಕೊಂಡು ಇವರು ಪಂಚೆ ಬಿಚ್ಚಲಾರದೆ ಸೈಕಲ್ ನಿಂದ ಇಳಿಯಲಾರದೆ ಪರದಾಡುತ್ತಾರೆ.ಕಡೆಗೂ ಸೈಕಲ್ ನಿಂದ ಇಳಿಯಲು ಸಾಧ್ಯ ವಾಗುವುದು ಪಂಚೆ ಬಿಚ್ಚಿದ ನಂತರವೇ . ಹೀಗೆ ಕೈಲಾಸಂ ಅವರ ಸಾಕಷ್ಟು ಹಾಸ್ಯಚಟಾಕಿಗಳನ್ನು ನೆನಪಿಸುತ್ತಾ, ಇಂದು ಅವರ ಜನ್ಮದಿನ, ಅವರ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ಓದುಗರೊಂದಿಗೆ ಲೇಖನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬತ್ತಲಾಗದೆ ಬಯಲು ‌ಸಿಕ್ಕದಿಲ್ಲಿ: ಕೈಲಾಸಂ ಒಂದು ಸಲ ರಾಶಿ ಯವರೊಡನೆ ಸೈಕಲ್ ತುಳಿಯಿತ್ತಾ ಹೋಗುತ್ತಿದ್ದರು. ಒಬ್ಬ ಕೋಟು ಪಂಚೆ ತೊಟ್ಟ ವ್ಯಕ್ತಿ ಸೈಕಲ್ ತುಳಿಯುತ್ತಿದ್ದಾಗ, ಅವರ ಪಂಚೆ ಸೈಕಲ್ ನ ಚಕ್ರ ಕ್ಕೆ ಸಿಕ್ಕಿಕೊಳ್ಳುತ್ತದೆ.ಪಂಚೆ ಬಿಚ್ಚದೆ ಸೈಕಲ್ ನಿಂದ ಇಳಿಯಲಾಗದೆ ಪರದಾಡುತ್ತಿರುವ ಅವರನ್ನು ನೋಡಿ ಕೈಲಾಸಂ ಒಂದೇ ಸಮನೆ ನಗತೊಡಗುತ್ತಾರೆ. ಇದರಿಂದ ಕಕ್ಕಾಬಿಕ್ಕಿಯಾದ ರಾಶಿ ಯವರಿಗೆ ಕೈಲಾಸಂ ಅವರ ವರ್ತನೆ ವಿಚಿತ್ರವಾಗಿ ಕಾಣಿಸುತ್ತದೆ. ಅವರ ನಗು ನಿಂತಮೇಲೆ ಅದಕ್ಕೆ ಕಾರಣವನ್ನು ಕೇಳುತ್ತಾರೆ. ಆಗ ಕೈಲಾಸಂ ತಮ್ಮ ಹಿಂದಿನ ನೆನಪನ್ನು ರಾಶಿಯವರಿಗೆ ಮುಂದಿನಂತೆ ಬಿಚ್ಚಿಡುತ್ತಾರೆ.

ಒಮ್ಮೆ ಇದೆ ರೀತಿ ತುಂಡು ಪಂಚೆಯುಟ್ಟ ಕೈಲಾಸಂ ಸೈಕಲ್ ಸವಾರಿ ಮಾಡುವಾಗ ಅವರ ಪಂಚೆಯ ತುದಿ ಸೈಕಲ್ ಚೈನಿಗೆ ಸಿಕ್ಕಿ ಹಾಕಿಕೊಂಡು ಇವರು ಪಂಚೆ ಬಿಚ್ಚಲಾರದೆ ಸೈಕಲ್ ನಿಂದ ಇಳಿಯಲಾರದೆ ಪರದಾಡುತ್ತಾರೆ.ಕಡೆಗೂ ಸೈಕಲ್ ನಿಂದ ಇಳಿಯಲು ಸಾಧ್ಯ ವಾಗುವುದು ಪಂಚೆ ಬಿಚ್ಚಿದ ನಂತರವೇ . ಇದನ್ನೆಲ್ಲಾ ನೋಡುತ್ತಿದ್ದ ಕೋಟುಧಾರಿಯೊಬ್ಬರು ಸಾರ್ವಜನಿಕವಾಗಿ ಹೀಗೆ ಬೆತ್ತಲಾಗಲು ನಾಚಿಕೆಯಾಗುವುದಿಲ್ಲವೆ ಎಂದು ಕೇಳಿದಾಗ , ತನ್ನ ಕಷ್ಟ ತನಗೆ ಎಂದು ಪರದಾಡುತ್ತಿದ್ದ ಕೈಲಾಸಂಗೆ ಆ ವ್ಯಕ್ತಿಯ ಮೇಲೆ ಅಸಾಧ್ಯ ಕೋಪ ಬರುತ್ತದೆ. ” ನಾಚಿಕೆ ಯಾಗಬೇಕಾದುದು ನನಗೊ ನಿಮಗೊ” ಎಂದು ಆ ವ್ಯಕ್ತಿಯ ಮೇಲೆ ಹರಿಹಾಯುತ್ತಾರೆ.ಇದಕ್ಕೆ ಉತ್ತರಿಸಲಾರದ ಆ ವ್ಯಕ್ತಿ ಓಡಿ ಹೋಗುತ್ತಾರೆ. ಯಾರಿಗೆ ಸಾರ್ವಜನಿಕವಾಗಿ ಬೆತ್ತಲಾಗಲು ಸಾಧ್ಯವಿಲ್ಲವೋ ಅವರು ಸಾರ್ವಜನಿಕರನ್ನು ಬತ್ತಲಾಗಿಸಲು ಸಾಧ್ಯವಿಲ್ಲ. ಆದ್ದರಿಂದ ಕೈಲಾಸಂ ಸ್ವತಃ ತಾವು ಬತ್ತಲಾಗಿ ತನ್ನ ಸಮಾಜವನ್ನು ನಿರ್ವಿಕಾರವಾಗಿ ಬತ್ತಲಾಗಿಸುತ್ತಾರೆ. ಮತ್ತು ಬತ್ತಲಾಗದೆ ಮುಕ್ತಿಯೇ ಇಲ್ಲ. ವ್ಯಕ್ತಿಗಾಗಲಿ ಸಮಾಜಕ್ಕಾಗಲಿ ಎಂದು ಸಾಧಿಸಿ ತೋರಿಸುವುದೇ ಕೈಲಾಸಂ ಬದುಕು ಬರಹಗಳ ದರ್ಶನ ವೆಂದು ನನಗೆ ಅನ್ನಿಸಿದೆ.

ಫೋಟೋಕೃಪೆ : google

ಇದಕ್ಕೆ ಅವರು ಎರಡು ಮಾರ್ಗೋಪಾಯಗಳನ್ನು ಹುಡುಕಿಕೊಳ್ಳುತ್ತಾರೆ.ತಾನು ಬೆಳೆದು ಬಂದ ಬ್ರಾಹ್ಮಣ ಸಮಾಜದ ಮಧ್ಯಮ ವರ್ಗದ ಓರೆ ಕೋರೆಗಳನ್ನು, ಪೂರ್ವಾಗ್ರಹಗಳನ್ನು ಬಯಲಾಗಿಸುತ್ತಾರೆ. ಅವರ ಕನ್ನಡ ಆಂಗ್ಲೋ ನಾಟಕ ಗಳ ಮೂಲಕ. ಅವರ ‘ ಟೊಳ್ಳು ಗಟ್ಟಿ, ಪೋಲಿ ಕಿಟ್ಟಿ,’ ಹುತ್ತದಲಿಹುತ್ತ’ ಬಂಡ್ವಾಳವಿಲ್ಲದ ಬಡಾಯಿ’ ಸೂಳೆ’ ಮೊದಲಾದ ನಾಟಕಗಳ ಮೂಲಕ. ಹಾಸ್ಯದ ಹರಿಗೋಲಿನಿಂದ ಕಣ್ಣೀರಿನ ತೊರೆಯನ್ ದಾಟುತ್ತಾರೆ.ಮತ್ತು ಕಣ್ಣಿಗೆ ಹತ್ತಿದ್ದ ಪೊರೆಗಳನ್ನು ಕಳಚುತ್ತಾರೆ. ಪೋಲಿ ಕಿಟ್ಟಿ ಎಂದು ಎಲ್ಲರಿಂದ ಕರೆಸಿಕೊಳ್ಳುತ್ತಿದ್ದವನು ಕಡೆಗೆ ತನ್ನ ಜೀವವನ್ನೇ ಪಣಕ್ಕೊಡ್ಡಿ ಬೆಂಕಿಯಲ್ಲಿ ಹಾದು ಮಗುವಿನ ಜೀವವನ್ನು ತೊಟ್ಟಿಲಿನ ಸಮೇತ ಹೊರಗೆ ತಂದು ಬದುಕಿಸುತ್ತಾನೆ. ಆದರೆ ಅವನ ತಂದೆ ಯ ಮುದ್ದಿನ ಮಗನಾದ ಪುಸ್ತಕ ದ. ಹುಳು ಮಾಧುವಾದರೋ ತನ್ನ ಪುಸ್ತಕ ಗಳನ್ನು ಮಾತ್ರ ಎದೆಗವಚಿಕೊಂಡು ಪಾರಾಗುತ್ತಾನೆ. ಅಂದಿನ ಶಿಕ್ಷಣ ಪದ್ದತಿಯ ವಿಡಂಬನೆ ಅನನ್ಯ. ಈ ಪರಿಯಲ್ಲಿ ಬೇರಾರಿಂದಲೂ ಆಗಿಲ್ಲ ಎಂಬುದು ಕೈಲಾಸಂ ರ ಸೂಕ್ಷ್ಮ ದೃಷ್ಟಿ ಯ ಹಿರಿಮೆಯಾಗಿದೆ. ಬೆಂದ ಮನೆಯಲ್ಲಿ ಗಳ ಹಿರಿಯುವ ,ಆತ್ಮ ರತಿಯನ್ನು ಬೆಳೆಸುವ, ಗುಲಾಮ ಗಿರಿಯನ್ನು ಪೋಷಿಸುವ ಅಂದಿನ ಇಂಗ್ಲಿಷ್ ಶಿಕ್ಷಣ ದ ಕಟುವಿಮರ್ಶೆ ಇದಕ್ಕಿಂತ ‌ಬೇರೆಯಾಗಿರಲು ಸಾಧ್ಯವಿಲ್ಲ ಎಂದು ನನ್ನ ಗುರುಗಳಾದ ಡಾ.ಕೆ .ಮರುಳಸಿದ್ದಪ್ಪನವರು ತಮ್ಮ ನಾಟಕ ವಿಮರ್ಶೆ ಯಲ್ಲಿ ಸ್ಪಷ್ಟ ಪಡಿಸಿ ಅದರ ಐತಿಹಾಸಿಕ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ಅದೇ ರೀತಿಯಲ್ಲಿ ಅವರು ಮೊತ್ತ ಮೊದಲ ಬಾರಿಗೆ ವಿಧವೆಯೊಬ್ಬಳನ್ನು ರಂಗಪ್ರವೇಶ ಮಾಡಿಸುವುದರ ಇಡೀ ಕನ್ನಡ ರಂಗಭೂಮಿಗೆ ಆ ಮೂಲಕ ತನ್ನ ಸಮಾಜ ಕ್ಕೆ ಒಂದು ಶಾಕ್ ನ್ನು ಕೊಡುತ್ತಾರೆ

ಇದಕ್ಕೆ ಮುನ್ನ ಮತ್ತು ಆನಂತರ ವು ಕನ್ನಡ ರಂಗ ಭೂಮಿಯ ಲ್ಲಿ ಯಾರೂ ಆ ಧೈರ್ಯ ವನ್ನು ಮಾಡದಿರುವುದು ಕೈಲಾಸಂ ಅನನ್ಯತೆಗೆ ಸಾಕ್ಷಿ ಅವರಂತೆ ರಂಗದ ಮೇಲೆ ಬ್ರಾಹ್ಮಣ ಸಮಾಜದ ದುಃಸ್ಥಿತಿಯನ್ನು ಪ್ರದರ್ಶನ ಮಾಡಿದವರು ಇನ್ನೊಬ್ಬ ರಿಲ್ಲ.ಆದರೆ ಇದೆ ಸಂದರ್ಭದಲ್ಲಿ ಬೇಂದ್ರೆಯವರ ತಮ್ಮ ಪುಟ್ಟ ವಿಧವೆ’ ಕವನ ದಲ್ಲಿ’ ಜಾರ ಕೃಷ್ಣ ನ ಕಥೆಗೆ ಕೋಡು ಮೂಡಿತ್ತು’ಎನ್ನುವುದರ ಮೂಲಕ ಇದೆ ಪರಿಣಾಮವನ್ನು ಸಾಧಿಸುತ್ತಾರೆ .

‌‌ ‌ಅವರ. ‘ಸೂಳೆ ‘ ನಾಟಕದಲ್ಲಿ ಬರುವ ಸೂಳೆ ತನ್ನ ಮಗಳಾದರೂ ಅದಕ್ಕೆ ಬಲಿಪಶುವಾಗದಿರಲಿ ಎಂದು ಅವಳಿಗೆ ತನ್ನ ಕೈಯಾರೆ ವಿಷ ಕುಡಿಸಿ, ತಾನು ಕುಡಿಯುವ ಮೂಲಕ ತನ್ನ ನ್ನು ಈ ಸ್ಥಿತಿಗೆ ತಂದ ಸಮಾಜದ ಮೇಲೆ ಸೇಡು ತೀರಿಸಿಕೊಳ್ಳುವಳು .ಇದನ್ನು ಕೆಲವರು ಮೆಲೊಡ್ಡಾಮಾಟಿಕ್ ಎಂದು ಕೆಲವರು ಕರೆದರೆ, ಕೆಲವರು ಶೇಕ್ಸ್ ಪಿಯರ್ ಪ್ರಭಾವವನ್ನು ಗುರುತಿಸುವರು.ಇದೆ ಕೆಲಸ ವನ್ನು ಶಿವರಾಮ ಕಾರಂತರು ತಮ್ಮ ಸೂಳೆ ಸಂಸಾರ ಎನ್ನುವ ಕಾದಂಬರಿ ಯಲ್ಲಿ ವಿಡಂಬನೆ ಮೂಲಕ ಸಾಧಿಸುತ್ತಾರೆ. ಆದ್ದರಿಂದ ಇದಕ್ಕೆ ಐತಿಹಾಸಿಕ ಮಹತ್ವವಿದೆ.

ಫೋಟೋಕೃಪೆ :google

ಅವರ ಇಂಗ್ಲಿಷ್ ನಾಟಕಗಳಲ್ಲಿ ತಮ್ಮ ಸಮಾಜ ವನ್ನು ಬಿಟ್ಟು, ತಮಗಿಂತ ಕೆಳವರ್ಗದ ಸಮಾಜ ತಮ್ಮ ಸಮಾಜದಿಂದಾಗಿ ಪಟ್ಟ. ಪಾಡುಗಳನ್ನು ಚಿತ್ರಿಸುವ ಸಾಧನ ವಾಗಿ ಮಾಡಿಕೊಂಡು ಇಡೀ ವಿಶ್ವದ ಮುಂದೆ ತಮ್ಮ ಸಮಾಜವನ್ನು ಬತ್ತಲಾಗಿಸುತ್ತಾರೆ. ಏಕಲವ್ಯ ನನ್ನ ಕುರಿತು ಬರೆದ ಪರ್ಪಸ್ ಮತ್ತು ಕರ್ಣನನ್ನು ಕುರಿತು ಬರೆದ ಕರ್ಣ ಆರ್ ಎ ಬ್ರಾಹ್ಮಿಣ್ಸ ಕರ್ಸ್ ಇದಕ್ಕೆ ಸಾಕ್ಷಿ. ಪರ್ಪಸ್ ನಾಟಕದಲ್ಲಿ ತನ್ನ ಮುದ್ದಿನ ಜಿಂಕೆ ಮರಿಗಳನ್ನು ಕ್ರೂರ ತೋಳ ಗಳ ಪಾರು ಮಾಡುವ ವಿದ್ಯೆಯನ್ನು ಪಡೆಯಲು,ಏಕಲವ್ಯ ದ್ರೋಣಾಚಾರ್ಯ ರ ಬಳಿಗೆ ಬಂದರೆ, ಅವರು ನಿಷಾದ ನಾದ ಅವನಿಗೆ ವಿದ್ಯೆ ಕಲಿಸುವುದು ಸಾಧ್ಯವಿಲ್ಲ ಎನ್ನುವರು. ಆದರೆ ಛಲ ಬಿಡದ ತ್ರಿವಿಕ್ರಮ ನಂತೆ ಏಕಲವ್ಯ ದ್ರೋಣ ರ ಮಣ್ಣಿನ ಮೂರ್ತಿ ಎದುರು ಸಾಧನೆ ಮೂಲ ಕ ಜೀವಂತವಾಗಿರುವ ದ್ರೋಣನನ್ನು ಮೀರಿ ವಿದ್ಯೆ ಕಲಿಯುತ್ತಾನೆ.ಅದನ್ನು ಕಂಡು ಹೊಟ್ಟೆಕಿಚ್ಚಿನಿಂದ ಸಾಯುವ ಅರ್ಜುನನಿಗೆ , ಕೊಟ್ಟ ಮಾತನ್ನು ಉಳಿಸುವ ಸಲುವಾಗಿ ಏಕಲವ್ಯನ ಬಳಿಗೆ ಬಂದು, ಹೆಬ್ಬೆರಳು ಗುರು ದಕ್ಷಿಣ ಪಡೆದು ತಮ್ಮ ಮಾತನ್ನು ಉಳಿಸಿಕೊಳ್ಳುವರು .

ಇದೆ ರೀತಿಯಲ್ಲಿ ಕರ್ಣನನ್ನು ತನ್ನ ಬಯಕೆಯನ್ನು ತಡೆಯಲಾರದೆ ಕುಂತಿ ಲೋಕಾಪವಾದಕ್ಕೆ ಹೆದರಿ ಗಂಗೆಗೆ ಎಸೆಯುತ್ತಾಳೆ.ಅವನಿಗೆ ಪರಶುರಾಮ ನಿಂದ ಕಲಿತದ್ದಕ್ಕೆ ಸಿಕ್ಕಿದ್ದು ಘೋರ ಶಾಪ.ದುರ್ಯೋಧನ ನಿಂದ ದ್ರೌಪದಿಯನ್ನು ಕಾಪಾಡಲು ಹೊರಟ ಅವನಿಗೆ ಸಿಕ್ಕ ಬಿರುದು ಸೂತಸುತ ಎಂದು.ಹೀಗೆ ಪರಶುರಾಮ ರ ಶಾಪ ಮತ್ತು ಕುಂತಿ ದ್ರೌಪದಿಯರ ಹೀನ ನಡವಳಿಕೆ ಕರ್ಣನ ಬದುಕಿಗೆ ಮಾರಕವಾಗಿ ಪರಿಣಮಿಸಿತು. ಹೀಗೆ ಕೈಲಾಸಂ ತಮ್ಮ ಸಮಾಜದ ಹುಳುಕುಗಳಿಗೆ ತಮ್ಮ ಅಸದೃಶವಾದ ವಿಡಂಬನೆಯಿಂದ ಕನ್ನಡಿ ಹಿಡಿಯುವ ಮೂಲಕ ಒಂದು ಕಾಯಕಲ್ಪ ವನ್ನು ಉಂಟು ಮಾಡಿದರು. ಶ್ರೀ ರಂಗರು ತಮ್ಮ ‘ ಹರಿಜನ್ವಾರ’ ದ ಮೂಲಕ ಬ್ರಾಹ್ಮಣ ಸಮುದಾಯವನ್ನು ರೊಚ್ಚಿಗೆಬ್ಬಿಸಿದರು ಅ ದೇ ಸಂದರ್ಭದಲ್ಲಿ ಎಂಬುದು ಸಮಕಾಲೀನ ಸಮಾಜಕ್ಕೆ ಅಂದಿನ ಲೇಖಕ ರು ಸಮಾನವಾಗಿ ಸ್ಪಂದಿಸಿದ ದ್ಯೋತಕವಾಗಿದೆ.ಮುಂದೆ ಅನಂತಮೂರ್ತಿಯವರು ತಮ್ಮ ಸಂಸ್ಕಾರ ಕಾದಂಬರಿಯ ಮೂಲಕ ಇದೆ ಪರಂಪರೆಯನ್ನು ಮುಂದುವರೆಸಿಕೊಂಡು ಹೋದರು ಎಂಬುದು ಕೈಲಾಸಂ ಪರಂಪರೆ ಅನುಸ್ಯೂತವಾಗಿ ಮುಂದುವರಿದುದಕ್ಕೆ ಸಾಕ್ಷಿಯಾಗಿದೆ. ಅಂತೆಯೇ ಕೈಲಾಸಂ ಕನ್ನಡದ ಮಟ್ಟಿಗೆ ಬತ್ತಲಾರದ ಗಂಗೆಯಾಗಿಯೆ ಉಳಿಯುತ್ತಾರೆ. ಕನ್ನಡ ಪ್ರಹಸನ ಪಿತಾಮಹ ಎಂದು ತಮಗೆ ತಾವೇ ಕೊಟ್ಟು ಕೊಂಡ ಬಿರುದು ಸಾರ್ಥಕ ವಾಗುವಂತೆ ಮಾಡಿದ್ದಾರೆ. ಇಂದಿಗೂ ಅವರನ್ನು ಮೀರಿಸುವ ಇನ್ನೊಬ್ಬ ಪ್ರಹಸನ ಕಾರ ಕನ್ನಡದ ಲ್ಲಿ ಬಂದಿಲ್ಲ- ‘ಕನ್ನಡಕ್ಕೆ ಒಬ್ಬನೇ ಕೈಲಾಸಂ’.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW