ಎಲೆಯಲ್ಲಿ ಆರಳಿದ ರಾಷ್ಟ್ರಗೀತೆ – ಟಿ.ಶಿವಕುಮಾರ್

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೊಸಮಂಜು ಗ್ರಾಮದ ತೃಪ್ತಿ ಮಂಜುನಾಥ ನಾಯ್ಕ ಹುಟ್ಟು ಪ್ರತಿಭೆ, ಅವರ ಪ್ರತಿಭೆಗೆ ಸಾಕ್ಷಿಯಂತೆ ಒಂದೇ ದಿನದಲ್ಲಿ ಎಲೆಯಲ್ಲಿ ರಾಷ್ಟ್ರಗೀತೆ ಬರೆದು ‘ಇಂಡಿಯಾ ಬುಕ್ ಆಫ್ ರೆಕಾಡ್’ ಪುಸ್ತಕದಲ್ಲಿ ದಾಖಲೆ ಮಾಡಿದ್ದಾಳೆ. ಅವರ ಸಾಧನೆ ಕುರಿತು ಟಿ.ಶಿವಕುಮಾರ್ ಅವರು ಬರೆದ ಲೇಖನವನ್ನು ತಪ್ಪದೆ ಓದಿ…

ಪ್ರತಿ ವ್ಯಕ್ತಿಯ ಜೀವನದಲ್ಲಿ ಅಭಿವೃದ್ಧಿ ಹೊಂದಲು ಆಸಕ್ತಿ, ಶ್ರಮ ಮತ್ತು ಆರ್ಥಿಕ ಸಹಾಯಗಳೇ ಮೆಟ್ಟಿಲುಗಳು. ಒಬ್ಬ ವ್ಯಕ್ತಿಗೆ ತನ್ನ ಜೀವನಮಟ್ಟ ಸುಧಾರಿಸಿಕೊಳ್ಳಲು ಹಲವಾರು ಅವಕಾಶಗಳು ದೊರೆಯಬಹುದು. ಆದರೇ ಇಲ್ಲದ ಅವಕಾಶಗಳನ್ನು ಗುರುತಿಸಿ ಬಳಸಿಕೊಳ್ಳುವ ಚಾಣಾಕ್ಷತನ ಕೆಲವರಿಗೆ ಸಾಧನೆಯ ಮೆಟ್ಟಿಲುಗಳಾಗುತ್ತವೆ. ಇಂಥ ಸಾಧನೆಗೆ ಹೆಸರಾದವರು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೊಸಮಂಜು ಗ್ರಾಮದ ತೃಪ್ತಿ ಮಂಜುನಾಥ ನಾಯ್ಕ ಹೆಣ್ಣು ಎಂದರೆ ಮನೆ ಕೆಲಸಕ್ಕೆಷ್ಟೇ ಲಾಯಕ್ಕು ಎನ್ನುವವರು ಈಗಲೂ ಇದ್ದಾರೆ. ಅಂಥಹದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇದ್ದು ಒಂದೇ ದಿನದಲ್ಲಿ ಎಲೆಯಲ್ಲಿ ರಾಷ್ಟ್ರಗೀತೆ ಬರೆದು ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಪುಸ್ತಕದಲ್ಲಿ ದಾಖಲೆ ಮಾಡಿದ್ದಾರೆ ತೃಪ್ತಿ ನಾಯ್ಕ್.

This slideshow requires JavaScript.

ಹುಟ್ಟೂರಾದ ಹೊಸಮಂಜುವಿನಲ್ಲಿ ಪ್ರಾಥಮಿಕ ಶಾಲೆಯನ್ನು ಕಲಿತು ಸಿದ್ದಾಪುರದಲ್ಲಿ ಪ್ರೌಢ ಮತ್ತು ಪದವಿಯನ್ನು ಮುಗಿಸಿ ಈಗ ಕಾರವಾರೆದ ಶಿವಾಜಿ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಬಿಎಡ್ ಕಲಿಯುತ್ತಿರುವ ತೃಪ್ತಿ ನಾಯ್ಕ್ ಎಲೆಯಲ್ಲಿ ಕಲೆಯನ್ನು ಅರಳಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಿಂದ ಬಂದ ತೃಪ್ತಿ ಹವ್ಯಾಸಕ್ಕೆಂದು ಮಾಡುತ್ತಿದ್ದ ಈ ಕಲೆ ಈಗ ಪ್ರವೃತ್ತಿಯಾಗಿ ಮಾರ್ಪಟ್ಟಿದೆ. ಈ ಒಂದು ಕಲೆಗೆ ತಂದೆ ಮಂಜುನಾಥ ನಾಯ್ಕ್ ತಾಯಿ ಮೋಹಿನಿ ನಾಯ್ಕ್ ಮಗಳ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕಥೆ, ಕವನ ಪ್ರಂಬಂಧ ಬರೆಯುವ ಹವ್ಯಾಸವನ್ನು ಹೊಂದಿದ್ದ ತೃಪ್ತಿ ಕ್ರಮೇಣ ಕಲೆಯ ಕಡೆ ಗಮನಹರಿದು ಎಲ್ಲರೂ ಪೇಪರ್ ಗಳಲ್ಲಿ ಚಿತ್ರವನ್ನು ಬಿಡಿಸುತ್ತಾರೆ ನಾನೇಕೆ ಎಲೆಗಳಲ್ಲಿ ಚಿತ್ರಾರವನ್ನು ಬಿಡಿಸಬಾರದು ಎಂದು ಒಂದು ಪ್ರಯೋಗಕ್ಕೆ ಮುಂದಾಗಿ ಈಗ ಸರಾಗವಾಗಿ ಎಲೆಗಳಲ್ಲಿ ಚಿತ್ತಾರವನ್ನು ಬಿಡಿಸುವುದರ ಜೊತೆಯಲ್ಲಿಯೇ ಅಕ್ಷರಗಳನ್ನು ಬಿಡಿಸಿ ಸೈ ಎನಿಸಿಕೊಂಡಿದ್ದಾರೆ ತೃಪ್ತಿ ನಾಯ್ಕ್. ಇವರ ತಾಯಿಯೂ ಸಹ ರಂಗೋಲಿ ಹಸಿಕಲೆ ಪ್ರವೀಣೆಯಾಗಿದ್ದು ತಾಯಿಯ ಕಲೆಯಲ್ಲಿಯೇ ಮಗಳು ಪರಿಣಿತಿಯನ್ನು ಪಡೆದಿದ್ದಾರೆ.

ಕೃಷಿಕ ಕುಟುಂಬವಾಗಿರುವುದರಿಂದ ಹೊಲ, ಗದ್ದೆ, ತೋಟಗಳ ನಡುವಿನ ಸಂಬಂಧ ಅದು ಜೀವಾನಾನುಬಂಧ ದಿನಬೆಳಗಾದರೆ, ನೋಡುವುದೇ ತೋಟದ ಬದಿಗಳಲ್ಲಿ ಇರುವ ಗಿಡ-ಗಂಟೆಗಳ ಎಲೆಗಳನ್ನು ಇವುಗಳನ್ನೇ ಕಲೆಗೆ ತಳಪಾಯವಾಗಿಸಿಕೊಂಡಿದ್ದಾರೆ ತೃಪ್ತಿ ನಾಯ್ಕ್, ಕೋವಿಡ್ 19 ಲಾಕ್‍ಡೌನ್ ಅವಧಿಯಲ್ಲಿ ಎಲ್ಲೂ ಹೋಗಾದ ಕಾರಣ ಮೊದಲೇ ದೂಢಿಸಿಕೊಂಡು ಬಂದಿದ್ದ ಈ ಕಲೆಯ ಹುಚ್ಚು ಆ ಸಮಯದಲ್ಲಿ ಹೆಚ್ಚಾಗಿ ಎಲೆಗಳಲ್ಲಿ ಸುಂದರವಾಗಿ ಅನೇಕ ಪ್ರಾಣಿ ಪಕ್ಷಿಗಳ ಚಿತ್ರಗಳು ಎಲೆಗಳಲ್ಲಿ ಅರಳಲು ಪ್ರಾರಂಭವಾದವು ಎನ್ನುತ್ತಾರೆ ತೃಪ್ತಿ ನಾಯ್ಕ್.

ಲೀಪ್ ಕಲೆಯೂ ಚಿತ್ರ ಕಲಾ ಪ್ರಕಾರಗಳಲ್ಲಿನ ಒಂದು ವಿಶಿಷ್ಟ ಕಲೆಯಾಗಿ ಹೆಸರೇ ಸೂಚಿಸುವಂತೆ ಎಲೆಗಳನ್ನು ಬಳಸಿಕೊಂಡು ನಮಗೆ ಬೇಕಾಗಿರುವ ಚಿತ್ರವನ್ನು ಇಟ್ಟು ಉಳಿದ ಭಾಗವನ್ನು ತೆಗೆದು ಹಾಕಲಾಗುತ್ತದೆ ಅತ್ಯಂತ ನಾಜೂಕಾಗಿರುವ ಈ ಒಂದು ಕಲೆ ದೊಡ್ಡ ತಪಸ್ಸು ಇದ್ದ ಹಾಗೆ ಇದಕ್ಕೆ ಏಕಾಗ್ರತೆ ಮತ್ತು ನೈಪುಣ್ಯತೆ ಬೇಕು ಎನ್ನುವ ತೃಪ್ತಿ ನಾಯ್ಕ್, ಜೀವನದಲ್ಲಿ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನವುದು ಇವರ ಮನದ ಆಸೆ ಈಗ ಇವರ ಕಲೆ ‘ಇಂಡಿಯಾ ಬುಕ್ ಆಫ್ ರೆರ್ಕಾಡ್’ಪುಸ್ತಕದಲ್ಲಿ ದಾಖಲಾಗಿರುವುದು ಸಂತಸ ತಂದಿದೆ ಎನ್ನುತ್ತಾರೆ ತೃಪ್ತಿ ನಾಯ್ಕ್. ಇವರ ಸಾಧನೆಯನ್ನು ಗುರುತಿಸಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂಧಿಸಿದ್ದಾರೆ ಅಷ್ಟೇ ಅಲ್ಲದೇ ಅನೇಕ ಸಂಘ ಸಂಸ್ಥೆಗಳು ತೃಪ್ತಿ ಅವರಿಗೆ ಅವರನ್ನು ಅಭಿನಂದಿಸಿದ್ದಾರೆ.


  • ಟಿ.ಶಿವಕುಮಾರ್ (ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ) ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW