ವಚನ ಹಾಗೂ ಜೀವನದ ಅರ್ಥ ತಿಳಿಯರಣ್ಣ

ಪೂಜೆಗೆ ಆಡಂಬರ ಬೇಕಿಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು ಎನ್ನುವ ನಿಲುವು ವಚನಕಾರ ಸೊನ್ನಲಿಗೆ ಸಿದ್ದರಾಮನದು. ವಚನದ ಅರ್ಥವನ್ನು ಅರ್ಥಪೂರ್ಣವಾಗಿ ವಿವರಣೆ ನೀಡಿರುವವರು ಡಾ. ಪ್ರಕಾಶ ಮಂಟೇದ. ಮುಂದೆ ಓದಿ…

ಆಡಂಬರ

ಉಸುರ ಹಿಡಿದು ಮಜ್ಜನಕ್ಕೆರೆವೆನಯ್ಯ ನಿಮಗೆ
ವಿಷಯವ ಮಾದು ಗಂಧವನೀವೆನಯ್ಯ ನಿಮಗೆ
ನೆನಹ ನೆಲೆಗೊಳಿಸಿ ಕೊಡುವೆನು ಕುಸುಮವನು
ತನುಗುನಾಡಿಗಳನುರುಹಿ ದಶಾಂಗದ ಧೂಪವನಿಕ್ಕುವೆನು
ಎನ್ನದೆ ನಿಮಗೆ ಬೋನಕ್ಕೆ ಸವೆವೆ
ಕಪಿಲಸಿದ ಮಲ್ಲಿಕಾರ್ಜುನ
ಹೊರಬಳಕೆಯ ಪೂಜೆಗೆ ಎರಗದೆನ್ನ ಮನವು

ಈ ವಚನ ಸೊನ್ನಲಿಗೆ ಸಿದ್ದರಾಮನದು. ತಮ್ಮ ತಾನು ಮನದ ದುರ್ಗುಣಗಳನ್ನು ಕಳೆಯದೆ ಕೇವಲ ಆಡಂಬರದಲ್ಲಿ ಹೊರಬಳಕೆಯ ಪೂಜೆಯಲ್ಲಿ ನಿರತರಾದವರು ಡಂಭಕರು. ಇಂತಹ ನಿಜಶರಣರಲ್ಲದವರನ್ನು ನನ್ನ ಮನಸ್ಸು ಎರಗದು ಎಂದು ಸಿದ್ದರಾಮ ಖಡಾಖಂಡಿತವಾಗಿ ಹೇಳುತ್ತಾನೆ. ಆಡಂಬರದ ಪೂಜೆ ಹಾಗು ಆಚಾರಗಳಲ್ಲಿ ತೊಡಗಿರುವವರು ಶವಭಕ್ತರಲ್ಲ, ಪದಾರ್ಥಗಳನ್ನು ಅರ್ಪಿಸಿ ಭಕ್ತಿಯನ್ನಾಚರಿಸುವ ಈ ಮಂದಿ ತಮ್ಮನ್ನು ತಾವೇ ಅರ್ಪಿಸಿಕೊಳ್ಳುದ ಭಕ್ತಿಯ ಕ್ರಮವನ್ನು ಅರಿಯದವರು. ಇವರಿಗೆ ಶಿವಾಚಾರ ಶಿವತತ್ವ ತಿಳಿದಿಲ್ಲವೆಂದೇ ಹೇಳುತ್ತಾನೆ.

ಆತನ ಪ್ರಕಾರ ನಿಜವಾದ ಭಕ್ತಿ ಎಂದರೆ ತನ್ನ ಉಸಿರನ್ನೇ ಚೈತನ್ಯದ ಹಾದಿಯಾಗಿಸಿಕೊಂಡು ರಾಗದ್ವೇಷದ ಹಂಗರಿದು ಧ್ಯಾನದ ಮೂಲಕ ನೆನಪನ್ನು ಸಂಘಟಿಸಿ ತಮ್ಮನ್ನೇ ತಾವು ಬೋನ ಅಂದರೆ ನೈವಿದ್ಯವನ್ನಾಗಿ ಅರ್ಪಿಸಿಕೊಂಬುದು ಮಾತ್ರ. ಈ ಉಪಾಧಿಯಲ್ಲಿ ತಮ್ಮ ತನುಮನದ ಆಸೆ ಆಮಿಷಗಳನ್ನು ಕಳೆದುಕೊಂಡು ತಮ್ಮನ್ನು ತಾವೇ ಅರ್ಪಿಸಿಕೊಳ್ಳುವವರು ಮಾತ್ರ ಶಿವಭಕ್ತರು. ಇವರಿಗೆ ಮಾತ್ರ ತಾನು ವಂದಿಸುವೆ ಎಂದು ಹೇಳುವ ಮೂಲಕ ಹೊರವಸ್ತುಗಳನ್ನು ಬಳಸಿ ತಮ್ಮನ್ನರ್ಪಿಸದೆ ಕೇವಲ ಪದಾರ್ಥಗಳನ್ನು ಅರ್ಪಿಸುವ ಆಡಂಬರಿಗಳಿಗೆ ಹೃದಯಶುದ್ಧಿ ಇರಲಾರದು. ಇಂಥವರು ಭಕ್ತರಲ್ಲ. ಡೋಂಗಿಗಳು ಎಂಬುದು ಈ ವಚನದ ಪ್ರಧಾನ ನಿಲುವು.

(ವಚನ ಸಂಗ್ರಹ:  ‘ವಚನ ಮಾರ್ಗ’ ಪುಸ್ತಕ, ಪ್ರಧಾನ ಸಂಪಾದಕರು- ಡಾ.ಶಿವಮೂರ್ತಿ ಮುರುಘಾ ಶರಣರು )


ಡಾ. ಪ್ರಕಾಶ ಮಂಟೇದ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW