‘ವಾಡಾಪಾವ್ ಕಟ್ಟಿಂಗ್ ಚಾಯ್’ ಪುಸ್ತಕ ಪರಿಚಯ

ಕಥೆಗಾರರಾದ ಕುಮಾರಸ್ವಾಮಿ ತೆಕ್ಕುಂಜ ಅವರ ಕಥಾ ಸಂಕಲನದ ಕುರಿತು ಹೇಮಂತ್ ಪಾರೇರ ಅವರು ಬರೆದಿರುವ ಒಂದು ಪುಟ್ಟ ಬರಹವನ್ನು ತಪ್ಪದೆ ಓದಿ..

ಪುಸ್ತಕ : ವಾಡಾಪಾವ್ ಕಟ್ಟಿಂಗ್ ಚಾಯ್
ಪ್ರಕಾರ : ಕಥಾ ಸಂಕಲನ
ಲೇಖಕರು : ಕುಮಾರಸ್ವಾಮಿ ತೆಕ್ಕುಂಜ
ಪ್ರಕಾಶನ : ಜಾಗೃತಿ ಪ್ರಿಂಟರ್ಸ್

ವಡಾಪಾವ್ ಕಟ್ಟಿಂಗ್ ಚಾಯ್ ಪುಸ್ತಕ ನನ್ನ ಕೈ ಸೇರಿ ಹಲವು ದಿನಗಳು ಕಳೆದರೂ ಓದಲು ಪುರುಸೊತ್ತು ಸಿಕ್ಕಿರಲಿಲ್ಲ . ಇಂದು ವಡಾಪಾವ್ ಸವಿಯುವ ಸೌಭಾಗ್ಯ ನನ್ನದಾಯಿತು .
ಕುಮಾರಸ್ವಾಮಿ ತೆಕ್ಕುಂಜ ರವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಾಗದ ಅರಂಬೂರಿನವರು . ಮುಂಬೈ , ಬೆಂಗಳೂರು ಸೇರಿದಂತೆ ಹಲವು ಕಡೆ ,ಆಟೋಮೊಬೈಲ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ . ಕೆಲವು ವರ್ಷಗಳ ಹಿಂದೆ ನಿವೃತ್ತಿ ಹೊಂದಿ , ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು , ಸಾಹಿತ್ಯ ಲೋಕದಲ್ಲಿ ನೆಲೆ ಕಂಡುಕೊಂಡಿದ್ದಾರೆ.

‘ವಡಾಪವ್ ಪಾವ್ ಕಟ್ಟಿಂಗ್ ಚಾಯ್’ ಪುಸ್ತಕವು ಹನ್ನೆರಡು ವಿಭಿನ್ನ ರೀತಿಯ ಕಥೆಗಳನ್ನು ಒಳಗೊಂಡ ಕಥಾ ಸಂಕಲನವಾಗಿದೆ .

ಊರು ಬಿಟ್ಟು ಮುಂಬೈ ನಗರ ಸೇರಿ , ಜೀವನ ಕಂಡುಕೊಳ್ಳುವ ನಿಟ್ಟಿನಲ್ಲಿ , ಹೊಸದಾದ ನಗರದ ಪರಿಸ್ಥಿತಿಗೆ ಹೊಂದಿಕೊಂಡು ಪರಿಪಾಟಲು ಅನುಭವಿಸುವ ಮತ್ತು ಅ ಸಮಯದಲ್ಲಿ ಅಸರೆಯಾಗುವ ಹೊಸ ಸ್ನೇಹಿತರ ಸಹಾಯವನ್ನು ಯಾತವತ್ತಾಗಿ ಕಥೆಯೊಳಗೆ ಮನೋಜ್ಞವಾಗಿ ಚಿತ್ರಿಸಿದ್ದಾರೆ . ಹಂತ ಹಂತವಾಗಿ ನಗರ ಜೀವನಕ್ಕೆ ಒಗ್ಗಿಕೊಂಡು ನೆಲೆನಿಂತು , ಅಲ್ಲಿಯೇ ಬದುಕು ಕಟ್ಟಿಕೊಂಡ ಕಥೆ ಓದಿಸಿಕೊಂಡು ಹೋಗುತ್ತದೆ .

ಸೌದಾಮೀನಿ ಪ್ರಸಂಗ , ದಕ್ಷಿಣ ಕನ್ನಡದ ಯಕ್ಷಗಾನ ಬಯಲಾಟದ ತಳುಕಿನೊಡನೆ ಬಳೆಯ ಸದ್ದು , ಕೃಷ್ಣ ಸೌದಾಮೀನಿಯ ಪ್ರಣಯ ಪ್ರಸಂಗ , ಬಳೆ ವ್ಯಾಪಾರದ ಜೊತೆಗೆ , ಜೀವನದ ಸಂದಿಗ್ಧತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ .

(ವಾಡಾಪಾವ್ ಕಟ್ಟಿಂಗ್ ಚಾಯ್ ಲೇಖಕ ಕುಮಾರಸ್ವಾಮಿ ತೆಕ್ಕುಂಜ)

ಎಲ್ಲಾ ಕಥೆಗಳನ್ನು ಲೇಖಕರು , ತಮ್ಮ ವೃತ್ತಿ ಜೀವನದ ಮದ್ಯೆ ಹಾಸುಹೊಕ್ಕಾದ ಹಲವು ಬಗೆಯ ಸ್ಥಳೀಯ ಜನ ಜೀವನ ಶೈಲಿಯನ್ನು ಮನದಲ್ಲಿಟ್ಟುಕೊಂಡು ,ಕಲ್ಪನೆಯ ಬಾವವನ್ನು ಸೂಪ್ತವಾಗಿ ಲೇಪಿಸಿ ಕಥಾವಸ್ತುವಾಗಿ ಚಿತ್ರಿಸಿ , ಹೆಣೆದಿದ್ದಾರೆ ಎನ್ನಿಸುತ್ತದೆ.

ಬೆಳ್ಳಿಯ ಕರಿಮಣಿ , ಮೇಲ್ನೋಟಕ್ಕೆ ಹೆಣ್ಣಿನ ಅಸಹಾಯಕತೆ ಮತ್ತು ಅನಿವಾರ್ಯತೆಗಳ ಮದ್ಯೆ ಜೀವನದ ಮಜಲುಗಳು ವಿಧಿಯಿಲ್ಲದೆ ಸಾಗುತಿದೆ ಎನ್ನಿಸುತ್ತದೆ . ಆದರೆ ಭಾವನಾತ್ಮಕವಾಗಿ ಮನ ಕಲಕುವಂತೆ ಮಾಡಿಬಿಡುತ್ತದೆ. ಮುಂಬೈಯಿಂದ ಶುರುವಾಗಿ , ಮತ್ತೆ ಮುಂಬೈ ನಮ್ಮದೆ ಎಂದು ವಡಾಪಾವ್ ಕಟ್ಟಿಂಗ್ ಚಾಯ್ ಸವಿಯುವಂತೆ ಮಾಡಿದ ಕುಮಾರಸ್ವಾಮಿ ತೆಕ್ಕುಂಜರವರಿಗೆ ಧನ್ಯವಾದಗಳು.


  • ಹೇಮಂತ್ ಪಾರೇರ, ಯಡವನಾಡು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW