‘ವೀನಸ್ ಫ್ಲೈಟ್ರಾಪ್’ ಮಾಂಸಾಹಾರಿ ಸಸ್ಯದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ…

ವೀನಸ್ ಫ್ಲೈಟ್ರಾಪ್, ಸನ್ ಡೈವ್, ಪಿಚೆರ್ ಇವುಗಳು ಮಾಂಸಾಹಾರಿ ಸಸ್ಯಗಳೆಂದು ಕರೆಯುತ್ತಾರೆ. ಅವುಗಳು ಕೀಟಗಳನ್ನು ರಸ ಹಿರಿ ತಮ್ಮ ಪೌಷ್ಟಿಕಾಂಶವನ್ನು ಪಡೆದುಕೊಳ್ಳುತ್ತದೆ, ವೀನಸ್ ಫ್ಲೈಟ್ರಾಪ್ ಸಸ್ಯದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಮನುಷ್ಯ ಸಸ್ಯಾಹಾರಿಯಾಗಿರಬಹುದು ಅಥವಾ ಮಾಂಸಾಹಾರಿಯಾಗಿರಬಹುದು. ವಿಧ ವಿಧವಾದ ತರಕಾರಿಯನ್ನು ಬಳಸಿ ರುಚಿಕರವಾದ ಅಡುಗೆಯನ್ನು ಮಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಮತ್ತು ಮಾಂಸಾಹಾರಿಗಳು ಪ್ರಾಣಿಗಳ ಮಾಂಸದಲ್ಲಿ ವೈವಿಧ್ಯವಾದ ಪದಾರ್ಥಗಳನ್ನು ತಯಾರಿಸಿ ಸವಿಯುತ್ತಾರೆ. ಅವರವರ ನಾಲಿಗೆಯ ರುಚಿಗೆ ಸಸ್ಯಾಹಾರಿ, ಮಾಂಸಾಹಾರಿಗಳಾಗಿ ಹೋಗಿದ್ದಾರೆ. ಪ್ರಾಣಿಗಳಲ್ಲಿಯೂ ಸಸ್ಯಾಹಾರಿ, ಮಾಂಸಾಹಾರಿಗಳಿವೆ. ಇವೆಲ್ಲವೂ ನಮಗೆ ತಿಳಿದಿರುವ ವಿಚಾರ. ಒಂದು ಸಸ್ಯ ಸೂರ್ಯನ ಬೆಳಕು,ನೀರುಗಳನ್ನೂ ಉಪಯೋಗಿಸಿ ತನ್ನ ಆಹಾರವನ್ನು ತಾನು ತಯಾರಿಸಿಕೊಳ್ಳುತ್ತದೆ ಎಂದು ತಿಳಿದಿದ್ದೇವೆ. ಆದರೆ ಒಂದು ಸಸ್ಯ ಹುಳಗಳನ್ನು ತಿಂದು ತನ್ನ ಆಹಾರವನ್ನು ತಯಾರಿಸುತ್ತವೆ ಎಂದು ಕೇಳಿದರೆ ಅಚ್ಚರಿಯಾಗುತ್ತದೆ.

ಸಸ್ಯಗಳಲ್ಲಿ ಮಾಂಸಾಹಾರಿಗಳಿರುತ್ತವೆ ಎಂದು ನಂಬಲು ತುಸು ಕಷ್ಟವಾಗಬಹುದು. ಇಲ್ಲೊಂದು ಮಾಂಸಾಹಾರಿ ಸಸ್ಯವಿದೆ. ಅದರ ಹೆಸರು ವೀನಸ್ ಫ್ಲೈಟ್ರಾಪ್. ಈ ಸಸ್ಯಗಳು ಇರುವೆಗಳು, ನೊಣಗಳು, ಸೊಳ್ಳೆಗಳು, ಜೀರುಂಡೆಗಳು, ಗೊಂಡೆ ಹುಳುಗಳು, ಜೇಡಗಳು ಮತ್ತು ಸಣ್ಣ ಕಪ್ಪೆಗಳನ್ನು ತಿನ್ನುತ್ತದೆ. ಈ ಸಸ್ಯದ ಮೇಲ್ಮೈಗಳಲ್ಲಿ ಟ್ರೈಕೋಮ್ಸ್ ಎಂದು ಕರೆಯಲ್ಪಡುವ ಕೂದಲಿನಂತಹ ರಚನೆಗಳಿವೆ.  ಕೀಟಗಳು ಈ ಸಸ್ಯದ ಮೇಲೆ ಬಂದು ಕೂತಾಗ ಮತ್ತು  ಮೊದಲ ಬಾರಿ ಟ್ರೈಕೋಮ್ಸ್ ತಗುಲಿದಾಗ ತಕ್ಷಣವೇ  ಮುಚ್ಚಿಕೊಳ್ಳುವುದಿಲ್ಲ. ಅದೇ ಎರಡನೇಯ ಬಾರಿ ಟ್ರೈಕೋಮ್ಸ್ ತಗುಲಿದಾಗ ಬಲೆಯಂತಿರುವ ತನ್ನ ಬಾಯಿಯನ್ನು ೨೦ ನಿಮಿಷದೊಳಗೆ ಮುಚ್ಚಿಕೊಳ್ಳುತ್ತದೆ. ಈ ರೀತಿಯ ಚಲನೆಯನ್ನು ಥಿಗ್ಮೋನಸ್ಟಿ ಎಂದು ಕರೆಯಲಾಗುತ್ತದೆ. ಮತ್ತು ಆ ಕೀಟದಲ್ಲಿನ ರಸವನ್ನು ಹಿಂಡಿ ಕುಡಿದು ಮತ್ತೆ ಯಥಾಪ್ರಕಾರ ತನ್ನ ಮೈಯನ್ನು ಚಾಚಿಕೊಳ್ಳುತ್ತದೆ. ಈ ಸಸ್ಯದಲ್ಲಿ ನಮ್ಮ ಬೆರಳುಗಳನ್ನಿಟ್ಟಾಗ ಯಾವುದೇ ಹಾನಿಯಾಗುವುದಿಲ್ಲ. ಆದರೆ ಹಲವು ಬಾರಿ ಮುಚ್ಚುವ ಪ್ರಯತ್ನವನ್ನು ಮಾಡುವುದರಿಂದ ಸಸ್ಯಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಅವುಗಳನ್ನು ಅನಗತ್ಯವಾಗಿ ಉತ್ತೇಜಿಸುವುದು ಅವುಗಳ ಅಂತ್ಯವನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ. ಇದೊಂದು ವಿಭಿನ್ನ ರೀತಿಯ ಸಸ್ಯವಾಗಿದೆ.

ಫೋಟೋ ಕೃಪೆ : newstimes

ಇದು  ಇತರೆ ಸಸ್ಯಗಳಂತೆ ನೀರು, ಸೂರ್ಯನ ಬೆಳಕು, ಕಾರ್ಬನ್ ಡೈಆಕ್ಸೈಡ್  ಸಹ ಬೇಕು. ಅದರ ಜೊತೆಗೆ ತನ್ನ ಪೌಷ್ಠಿಕಾಂಶಕ್ಕಾಗಿ ಕೀಟಗಳನ್ನು ತಿಂದು ತನ್ನ ಆಹಾರವನ್ನಾಗಿಸಿಕೊಳ್ಳುತ್ತದೆ. ಈ ಸಸ್ಯವು ಮಾಂಸಾಹಾರಿ ಸಸ್ಯವೆಂದೇ ಪ್ರಖ್ಯಾತವಾಗಿದೆ. ಇದನ್ನು ಒಳಾಂಗಣದಲ್ಲಿಯೂ ಕೂಡ ಬೆಳೆಸಬಹುದು. ಸ್ವಲ್ಪ ಮಟ್ಟಿಗೆ ಸೂರ್ಯನ ಬೆಳಕು ಕೂಡ ಬೇಕಾಗುತ್ತದೆ. ಇದನ್ನು ಮನೆಯೊಳಗೇ ಬೆಳೆಯುವುದರಿಂದ ಮನೆಯ ಕೀಟಗಳನ್ನು ನಾಶ ಮಾಡಲು ಸಹಾಯವಾಗುತ್ತದೆ. ಈ ಸಸ್ಯಕ್ಕೆ ಅತಿಯಾದ ಶೀತ ಒಳ್ಳೇದಲ್ಲ. ಹಗಲಿನ ತಾಪಮಾನವು ೭೦ ರಿಂದ ೭೫ ಡಿಗ್ರಿ ಫ್ಯಾರನ್‌ಹೀಟ್ ವರೆಗೆ ಇರಬೇಕು.  ಮತ್ತು ರಾತ್ರಿಯ ಸಮಯದಲ್ಲಿ, ಅವುಗಳು ಬದುಕಲು ಕನಿಷ್ಠ ೫೫ ಎಫ್ ತಾಪಮಾನ ಬೇಕಾಗುತ್ತದೆ. ಆ ಕಾರಣಕ್ಕೆ   ಸಸ್ಯಗಳನ್ನು ಕಿಟಕಿಯಿಂದ ದೂರ ಸರಿಸಬೇಕಾಗಬಹುದು ಅಥವಾ ರಾತ್ರಿಯಲ್ಲಿ ಅವುಗಳನ್ನು ಬೆಚ್ಚಗಾಗಲು ಅವುಗಳನ್ನು ಮುಚ್ಚಬೇಕಾಗುತ್ತದೆ. 

ಫ್ಲೈಟ್ರಾಪ್ (ಡಿಯೋನಿಯಾ ಮಸ್ಸಿಪುಲಾ) ಅಮೇರಿಕ, ಉತ್ತರ ಕೆರೊಲಿನಾ ಮತ್ತು ದಕ್ಷಿಣ ಕೆರೊಲಿನಾದ ಉಪೋಷ್ಣವಲಯದ ಗದ್ದೆ ಪ್ರದೇಶಗಳಲ್ಲಿ ಈ ಸಸ್ಯಗಳು ಹೆಚ್ಚಾಗಿ ಕಾಣಸಿಗುತ್ತವೆ. ಇದನ್ನು ಫ್ಲೋರಿಡಾ ಮತ್ತು ನ್ಯೂಜೆರ್ಸಿ ಸೇರಿದಂತೆ ಕೆಲವು ಪ್ರದೇಶಗಳಿಗೆ ನೀಡಿ ಪರಿಚಯಿಸಲಾಗಿದೆ. ಈ ಸಸ್ಯವು ವಾಟರ್‌ವೀಲ್ ಸಸ್ಯ (ಅಲ್ಡ್ರೊವಾಂಡಾ ವೆಸಿಕುಲೋಸಾ) ಮತ್ತು ಸನ್‌ಡ್ಯೂಸ್ (ಡ್ರೊಸೆರಾ) ಗೆ ನಿಕಟ ಸಂಬಂಧ ಹೊಂದಿದೆ. ಇದನ್ನು ಮಾರಾಟಕ್ಕಾಗಿ ವ್ಯಾಪಕವಾಗಿ ಬೆಳೆಸಿದರೂ, ವೀನಸ್ ಫ್ಲೈಟ್ರಾಪ್ನನ್ನು  ಕೊಳ್ಳುವರ ಸಂಖ್ಯೆ ಅತ್ಯಲ್ಪ. ಮತ್ತು ಅಳಿವಿನಂಚಿನಲ್ಲಿರುವ ಈ ಸಸ್ಯವನ್ನು ಪರಿಶೀಲಿಸಲಾಗುತ್ತಿದೆ .

ಫೋಟೋ ಕೃಪೆ :Science Facts

ಈ ಸಸ್ಯವು ದೊಡ್ಡ ಕೀಟಗಳನ್ನು ಜೀರ್ಣಿಸಿಕೊಳ್ಳಲು ಒಂದು ವಾರಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.ಇದು ಸೀಮಿತ ಜೀವನವನ್ನು ಮಾತ್ರ ಹೊಂದಿದ್ದಾರೆ.ವರ್ಷ ವರ್ಷವು ಹೂವು ಅರಳುತ್ತವೆ. ಹೂವುಗಳು ಬಿಳಿಯಾಗಿರುತ್ತವೆ.ಹೂವುಗಳು ಅಂತಿಮವಾಗಿ ಬೀಜವಾಗಿ ಮಾರ್ಪಾಡಾಗುತ್ತದೆ. ಇದನ್ನು ಬೆಳೆಯಲು ಸಸ್ಯದ ಸುತ್ತಲೂ ಪಾಚಿ ಗಿಡಗಳು,ಮರಳು ಬೇಕು. ಅವುಗಳು ತೇವಾಂಶವನ್ನು ಹಿಡಿದಿಡುತ್ತದೆ. ಸ್ವಲ್ಪ ಮಂದವಾದ ಆಮ್ಲೀಯ ಆಧಾರಿತ ಮಣ್ಣಿನ ಅಗತ್ಯವಿರುತ್ತದೆ. ಬೀಜದಿಂದ ಫ್ಲೈಟ್ರಾಪ್‌ಗಳನ್ನು ಬೆಳೆಸುವುದು ಅಸಾಧ್ಯ. ಬದಲಾಗಿ ಸಣ್ಣ ಸಸ್ಯ ದಿಂದ ಬೆಳೆಯುವುದು ಉತ್ತಮ. ಅವುಗಳನ್ನು ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಸ್ಥಳೀಯ ನರ್ಸರಿಯಿಂದ ಖರೀದಿಸಬಹುದು.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW