ಮತದಾರನೆಂಬ ನಾಯಕ – ಲೇಖನ್‌ ನಾಗರಾಜ್

ಯುವಶಕ್ತಿ ಪ್ರಬಲವಾಗಿದೆ.ಆಲೋಚನಾ ಶಕ್ತಿ ಮಾಡುವಷ್ಟು ಪ್ರಜೆಗಳು ಶಕ್ತರಾಗಿದ್ದಾರೆ. ತುಂಬಾ ಸಂತೋಷದ ವಿಷಯ.ಆದರೆ ಚುನಾವಣೆ ಸಂದರ್ಭದಲ್ಲಿ ಯುವಕರು ಮುಖ್ಯವಾಗಿ ಗಮನಿಸಬೇಕಾಗಿದ್ದು, ಯಾರದೋ ಸ್ವಾರ್ಥಕ್ಕೆ ಗುಂಪು ಕಟ್ಟಿ ಹೋರಾಟ ಮಾಡಿದರೆ, ಮುಂದೆ ತಮ್ಮ ಕುಟುಂಬಕ್ಕೆ ಆಧಾರ ಯಾರು ಎನ್ನುವುದು ಪ್ರಶ್ನೆ ಮಾಡಿಕೊಳ್ಳಿ ಎನ್ನುತ್ತಾ, ಲೇಖನ್‌ ನಾಗರಾಜ್ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

2023 ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಎಂ.ಎಲ್‌.ಎ ಹುದ್ದೆಗೆ ಸಾಕಷ್ಟು ಜನ ಅರ್ಜಿ ಹಾಕಿದಾರೆ. ನೇಮಕಾತಿ ಪ್ರಕ್ರಿಯೆ ಸದ್ಯದಲ್ಲೆ ಪ್ರಾರಂಭ. ವಿದ್ಯಾರ್ಹತೆ ಅವಶ್ಯಕತೆ ಇಲ್ಲಾ, ಹೈಟ್‌, ವೇಟ್‌ ಸಂಬಂಧ ಇಲ್ಲಾ, ರನ್ನಿಂಗ್‌,ಲಾಂಗ್‌ ಜಂಪ್‌ ಇಲ್ಲವೆ ಇಲ್ಲಾ. ಆಶ್ವಾಸನೆಯೊಂದೆ ಅಭ್ಯರ್ಥಿಯ ಅರ್ಹತೆ.

ಮತದಾರ ತನ್ನ ಅಮೂಲ್ಯವಾದ ಮತಾದಾನ ಮಾಡುತ್ತಾನೆ. ಅಭ್ಯರ್ಥಿ ಗೆದ್ದು ಬೀಗುತ್ತಾನೆ. ಇದು ಇಲ್ಲಿಯವರೆಗಿನ ಚುನಾವಣೆಯಾಗಿತ್ತು. ಆದರೆ ಈಗ ಮತದಾರ ಬದಲಾಗಿದಾನೆ. ಯುವಶಕ್ತಿ ಪ್ರಬಲವಾಗಿದೆ. ಆಲೋಚನಾ ಶಕ್ತಿ ಮಾಡುವಷ್ಟು ಪ್ರಜೆಗಳು ಶಕ್ತರಾಗಿದ್ದಾರೆ. ತುಂಬಾ ಸಂತೋಷದ ವಿಷಯ. ಆದರೂ ನಮ್ಮ ಪ್ರಜೆಗಳು ಇನ್ನಷ್ಟು ಪ್ರಬಲರಾಗಬೇಕು. ಪ್ರಜಾ ನಾಯಕನ ಕರ್ತವ್ಯಗಳೇನು ಎಂಬುದನ್ನು ಅರಿತುಕೊಳ್ಳಬೇಕು. ಇಂದಿಗೂ ಕೆಲವು ಕಡೆ ಆಶ್ವಾಸನೆ ನಂಬಿ ಮತ ನೀಡುವವರಿದ್ದಾರೆ, ಹಣಕ್ಕೆ ಮತ ನೀಡುವವರಿದ್ದಾರೆ. ಎಷ್ಟೋ ಕಡೆ ತಮ್ಮನ್ನೆ ತಾವು ಮಾರಿಕೊಂಡು ಮತ ಚಲಾಯಿಸುವವರು ಇದ್ದಾರೆ. ದಯವಿಟ್ಟು ಇಂತಹ ಮತದಾನವನ್ನು ಸ್ಟಾಪ್‌ ಮಾಡಿ. ಅಭ್ಯರ್ಥಿಯ ಕೆಲಸ ನೋಡಿ ಮತ ನೀಡಿ, ಅಭ್ಯರ್ಥಿಯ ಯೋಗ್ಯತೆ ನೋಡಿ ಮತ ಚಲಾಯಿಸಿ. ಯಾಕಂದ್ರೆ ನಮ್‌ ಭಾರತದ ನಿಜವಾದ ನಾಯಕರು ಮತ ಪಡೆದವರಲ್ಲಾ. ಮತದಾನ ಮಾಡುವವರು ಎಂಬುದು ನೆನಪಿರಲಿ. ಮತದಾರ ಯೋಗ್ಯನಾಗಿದ್ದರೆ ಮಾತ್ರ ಯೋಗ್ಯ ನಾಯಕ ನಮಗೆ ಸಿಗುತ್ತಾನೆ. ಇಲ್ಲವಾದಲ್ಲಿ ಅಯೋಗ್ಯರ ಆಡಳಿತದ ಅವಧಿಯಲ್ಲಿ ಜೀವನ ಮಾಡಬೇಕಾಗುತ್ತದೆ. ಜಾಗ, ಜಾತಿ, ಅವನು ನಮ್ಮವನು, ನಮಗೆ ಮಾತ್ರ ಒಳ್ಳೇದನ್ನು ಮಾಡುತ್ತಾನೆ ಎಂಬ ಮನೋಸ್ಥಿತಿಯಿಂದ ಮತದಾನ ಮಾಡುವ ಪಧತಿಯನ್ನು ಬಿಟ್ಟು ಬಿಡಿ. ಮರಗಳೆಲ್ಲಾ ನಮ್ಮವನು ಎಂದು ಕೊಡಲಿ ಕಾವಿಗೆ ಮತ ನೀಡಿದರೆ, ಪರಿಣಾಮ ಕಾಡು ಕ್ಷೀಣಿಸುವುದು ಸಹಜ. ನಿಜವಾದ ಪ್ರಜಾ ನಾಯಕ ಯಾವ ಜಾಗ,ಜಾತಿ ಸಹಕಾರವಿಲ್ಲದೆ, ತನ್ನ ಪ್ರಜೆಗಳ ಸುಖಕ್ಕಾಗಿ ಕೆಲಸ ಮಾಡುತ್ತಾನೆ. ಸ್ವಾರ್ಥ ರಾಜಕಾರಣಿ ಮಾತ್ರ, ಜನಗಳ ಮಧ್ಯೆ ಕೋಮು ಗಲಭೆ, ವೈಮನಸ್ಸನ್ನು ತಂದಿಟ್ಟು ಮತ ಪಡೆಯಲು ಪ್ರಯತ್ನಿಸುತ್ತಾನೆ. ಅಂತವ್ರ ನರಿ ಬುದ್ಧಿಗೆ ನೀವು ಬಾಯಿಗೆ ಬೀಳುವ ದ್ರಾಕ್ಷಿ ಆಗಬೇಡಿ. ಮತದಾನ ಮಾಡುವ ಮುಂಚೆ ಒಮ್ಮೆ ಯೋಚಿಸಿ. ಐದು ವರ್ಷದ ಹಿಂದೆ ನಮ್ಮ ಪರಿಸ್ಥಿತಿ, ನಮ್ಮ ಊರಿನ ಪರಿಸ್ಥಿತಿ ಹೇಗಿತ್ತು. ರಸ್ತೆಗಳು ಮೊದಲು ಹೇಗಿದ್ದವು. ಈಗ ಹೇಗಾಗಿದೆ. ನಮ್ಮ ಮೂಲಭೂತ ಸೌಕರ್ಯಗಳು ಹೇಗೆ ಸುಧಾರಿಸಿದೆ, ನಮ್ಮ ಸಮಸ್ಯೆಗಳು ಯಾವ ರೀತಿ ಬಗೆಹರಿದಿದೆ. ಎಂಬುದನ್ನು ಒಮ್ಮೆ ಅವಲೋಕಿಸಿ. ನಂತರ ಅಭ್ಯರ್ಥಿಗೆ ಮತ ಕೊಡಿ.

ಫೋಟೋ ಕೃಪೆ : spot.ph

ಒಬ್ಬ ನಾಯಕ ತನ್ನ ಐದು ವರ್ಷದ ಅವಧಿಯಲ್ಲಿ, 70%-80% ತನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾನೆ ಅಂದ್ರೆ, ಅವನಿಗೆ ಮುಂದೆ ನಾಯಕನಾಗುವ ಅರ್ಹತೆ ಇದೆ ಎಂಬುದನ್ನು ತಿಳಿದುಕೊಳ್ಳಬಹುದು. ಮತ್ತೆ ನಾಯಕನಾದರೆ, ಉಳಿದ 20%, 30% ಕೆಲಸವನ್ನು ಮುಗಿಸುತ್ತಾನೆ ಎನ್ನುವ ನಂಬಿಕೆ ಇಡಬಹುದು. ಅದುಬಿಟ್ಟು ಮಾಡಿರುವುದೆ 30% ಕೆಲಸ ಎಂದಾದರೆ, ಮತ್ತೆ ಅವನನ್ನೆ ಆಯ್ಕೆ ಮಾಡಿದರೆ ಇನ್ನು ಐದು ವರ್ಷದ ಅವಧಿಯಲ್ಲಿ 30% ಕೆಲಸ ಮಾಡಿ ಮುಂದೆ ಅವಕಾಶಕ್ಕಾಗಿ ನಿಮ್ಮ ಕಾಲು ಹಿಡಿಯುತ್ತಾನೆ. ಮತ್ತೆ ಭರವಸೆಯ ಸುಳ್ಳು ಪೊಳ್ಳು ಮಾತನ್ನಾಡುತ್ತಾನೆ. ಅಂತಹ ಅಭ್ಯರ್ಥಿಗೆ ನಾಯಕನಾಗುವ ಯಾವ ಯೋಗ್ಯತೆ ಇರುವುದಿಲ್ಲಾ ನೆನಪಿರಲಿ. ಯಾವುದೆ ವ್ಯಕ್ತಿಗಾದರು ತನ್ನ ಕ್ಷೇತ್ರದಲ್ಲಿ ನೂರಕ್ಕೆ ನೂರು ಕೆಲಸ ಮಾಡಿ ಜಯ ಗಳಿಸುವುದು ಸಾಧ್ಯವಾಗುವುದಿಲ್ಲಾ. ಕಾರಣ, ವಿರೋಧ ಪಕ್ಷಗಳ ಅಡೆ ತಡೆ, ಕೆಲವೊಂದು ಜನರಿಂದ ಅಡ್ಡಿ, ಅನುದಾನದ ಕೊರತೆಗಳು ಎದುರಾಗುವುದು ಸಹಜ. ಇವೆಲ್ಲದರ ನಡುವೆ ತನ್ನ ಕ್ಷೇತ್ರಕ್ಕೆ ಶೇಕಡಾ 80% ರಷ್ಟು ಕೆಲಸ ಮಾಡಿ ತೋರಿಸಿದ್ದಾನೆ ಅಂದ್ರೆ, ಅಂತವನು ನಾಯಕನಾಗುವುದಕ್ಕೆ ಯೋಗ್ಯನೆ ಎಂದರ್ಥ. ಕಾರಣಗಳನ್ನಾ ಹೇಳಿ ಅವಕಾಶ ಪಡೆಯವವನು, ಮುಂದೆ ಕಾರಣಕರ್ತನಾಗಿರ್ತಾನೆ ಹೊರತು, ಜನರಿಗೆ ಯೋಗ್ಯ ನಾಯಕನಾಗಿರುವುದಿಲ್ಲಾ. ಮತ್ತೊಂದು ಮುಖ್ಯವಾದ ವಿಷಯ ಮತದಾರ ಸದೃಢನಾಗಿದ್ದರೆ ಮಾತ್ರ ಕ್ಷೇತ್ರ ಕೂಡ ಪ್ರಬಲವಾಗೋಕೆ ಸಾಧ್ಯ. ಹಣದ ಆಸೆಗೆ, ಆಮೀಷಕ್ಕೆ ಬಲಿಯಾಗಿ ಮತ ಚಲಾಯಿಸಿದರೆ, ಊರಾಗಾಲಿ,ನಾವಾಗಲಿ ಉದ್ಧಾರ ಆಗೋಕೆ ಹೇಗೆ ಸಾಧ್ಯ.

ಫೋಟೋ ಕೃಪೆ : economictimes

ಒಬ್ಬ ಅಭ್ಯರ್ಥಿ ಐದು ವರ್ಷಕ್ಕೊಮ್ಮೆ ಮತ ಪಡೆಯಲು ಒಬ್ಬ ಮತಗಾರನಿಗೆ ಐದು ಸಾವಿರ ಕೊಡುತ್ತಾನೆ ಎಂದಾದರೆ ಊಹಿಸಿಕೊಳ್ಳಿ, ವರ್ಷಕ್ಕೆ ಒಂದು ಸಾವಿರ ಅವನು ನಿಮಗೆ ನೀಡುವ ಸಂಬಳ. ದಿನಕ್ಕೆ,ತಿಂಗಳಿಗೆ ನಿಮ್ಮ ಮತಕ್ಕೆ ಕೂಲಿ ಎಷ್ಟಾಗುತ್ತದೆ ಎಂಬುದನ್ನು ನೀವೆ ಲೆಕ್ಕ ಹಾಕೋಳ್ಳಿ. ಆದರೆ, ಅವನು ಅದರಿಂದ ಪಡೆಯುವ ಲಾಭ. ನಿಮಗೆ ಬರುವ ಸೌಲಭ್ಯದಲ್ಲಿ ಪಾಲು, ನಿಮ್ಮ ಊರಿನ ಕಾಮಗಾರಿಯಲ್ಲಿ ಪಾಲು, ಆದರೆ ನೀವುಗಳು ಮಾತ್ರ ಐದುಸಾವಿರಕ್ಕೆ ನಿಮ್ಮನ್ನೆ ಮಾರಿಕೊಂಡು ಕತ್ತಲೆಯಲ್ಲಿ ಬಾಳು. ಇಂದಿನ ರಾಜಕಾರಣಿಗಳು ಸಹ ಮತದಾರನ ಬುದ್ಧಿ ಶಕ್ತಿ ಮೇಲೆ ತಾವು ಬುದ್ಧಿವಂತರಾಗುತ್ತಿದಾರೆ. ಹೆಚ್ಚಿನದಾಗಿ ಯುವಶಕ್ತಿ ತಮ್ಮ ಕಡೆಗೆ ಸೆಳೆಯುವ ಪ್ರಯತ್ನ ಅತಿಯಾಗಿ ನಡೆಯುತ್ತಿದೆ. ಕಾರಣ ಯುವಶಕ್ತಿ ಮನಸ್ಸು ಮಾಡಿದರೆ, ಎಂತಹ ಅಭ್ಯರ್ಥಿಯಾದರು ಗೆದ್ದೆ ಗೆಲ್ಲುತ್ತಾನೆ ಎನ್ನುವ ಭರವಸೆ. ಯಾಕಂದರೆ, ಯುವಕರು ಸಂಘ ಕಟ್ಟುತ್ತಾರೆ, ಗುಂಪು ಕಟ್ಟುತ್ತಾರೆ. ಎತ್ತಿ ಕಟ್ಟಿದರೆ ಹೋರಾಟ ಕೂಡ ಮಾಡಲು ಮುಂದಾಗುತ್ತಾರೆ. ಇದೆ ಕೆಲವೊಂದು ಸ್ವಾರ್ಥ ರಾಜಕಾರಣಿಗಳ ಅಸ್ತ್ರವಾಗಿದೆ. ಇದರಲ್ಲಿ ಯುವಕರು ಮುಖ್ಯವಾಗಿ ಗಮನಿಸಬೇಕಾಗಿದ್ದು, ಯಾರದೋ ಸ್ವಾರ್ಥಕ್ಕೆ ನಾವು ಗುಂಪು ಕಟ್ಟಿ ಹೋರಾಟ ಮಾಡಿದರೆ, ಮುಂದೆ ನಮ್ಮ ಕುಟುಂಬ ಸುಖವಾಗಿ ಇರತ್ತಾ. ನಮಗೆ ಹೆಚ್ಚು ಕಡಿಮೆ ಆದರೆ, ನಮ್ಮನ್ನು ಎತ್ತಿ ಕಟ್ಟಿರೋ ರಾಜಕಾರಣಿ ಬಂದು ನಮ್ಮನೆಯವ್ರನ್ನಾ ನೋಡ್ಕೋಳ್ತಾನ. ನೋಡ್ಕೋಳ್ತಾನೆ ಎಂದಾದರೆ, ಇಲ್ಲಿವರೆಗು ಎಷ್ಟೋ ಜನಾ ಸಂಘ ಕಟ್ಟಿ ಜೀವ ಕಳ್ಕೊಂಡಂತಹ ಯುವಕರು ಇದ್ದಾರೆ. ಅವರ ಮನೆಯೆ ಪರಿಸ್ಥಿತಿಯನ್ನೊಮ್ಮೆ ನೋಡಿ. ಕೇಳಿ ಯುವಕರೇ ದೇಶದ ಭವಿಷ್ಯ, ರಾಜ್ಯದ ಭವಿಷ್ಯ, ನಿಮ್ಮ ಊರಿನ ಭವಿಷ್ಯ, ರಾಜಕಾರಣಿಯ ಭವಿಷ್ಯ ಇರುವುದು ನಿಮ್ಮ ಕೈಯಲ್ಲಿ. ಎರಡೆರಡು ಗುಂಪು ಘರ್ಷಣೆ, ಸಂಘರ್ಷಗಳನ್ನಾ ಬಿಟ್ಟು. ನೀವು ಒಗ್ಗಟ್ಟಾಗಿ, ಒಂದಾಗಿ, ಬುದ್ಧಿವಂತಿಕೆಯಿಂದ ಮತ ಚಲಾಯಿಸಿದರೆ. ಊರಿನ ಅಭಿವೃದ್ಧಿ, ದೇಶದ ಅಭಿವೃದ್ಧಿ ಎರಡು ಸಾಧ್ಯ. ಪಕ್ಷ ನೋಡಿ ಮತ ಹಾಕಬೇಡಿ, ಆಶ್ವಾಸನೆ ನಂಬಿ ಮೋಸ ಹೋಗಬೇಡಿ, ಅಭ್ಯರ್ಥಿಯ ಕೆಲಸ ನೋಡಿ. ಯಾರೋ ಒಬ್ಬ ಬರ್ತಾನೆ ನಮಗೆಲ್ಲಾ ಒಳ್ಳೇದು ಮಾಡ್ತಾನೆ ಅನ್ನೋ ನಂಬಿಕೆ ಬಿಟ್ಟು ಬಿಡಿ. ಇಲ್ಲಿವರೆಗು ನಮಗೋಸ್ಕರ ಏನ್‌ ಒಳ್ಳೇದು ಮಾಡಿದಾನೆ ಎನ್ನುವುದನ್ನು ನೋಡಿ. ಹೊಸ ಅಭ್ಯರ್ಥಿ ತನಗೆ ಒಂದು ಅವಕಾಶ ಕೊಡಿ ಅಂದಾಗ. ಅವನ ಯೋಗ್ಯತೆ ಮೊದಲು ಅಳತೆ ಮಾಡಿ. ತನ್ನ ನೆರೆ ಹೊರೆಯವರೊಂದಿಗೆ ಮೊದಲು ಹೇಗಿದ್ದ, ಈಗ ಹೇಗಿದಾನೆ ಎಂಬುದನ್ನು ಅವಲೋಕಿಸಿ, ತನ್ನ ಊರಿನಲ್ಲಿ ಅವನ ಗೌರವ ಎಷ್ಟಿದೆ ಎಂಬುದನ್ನು ನೋಡಿ. ಆಮೇಲೆ ಯೋಗ್ಯ ಅನಿಸಿದರೆ ಅವನಿಗೆ ಅವಕಾಶ ಕೊಡಿ. ಅದು ಬಿಟ್ಟು ಟೊಳ್ಳು ಮಾತಿಗೆ, ಎಣ್ಣೆ ಕಾಸಿಗೆ ಮರುಳಾಗಬೇಡಿ.

ಫೋಟೋ ಕೃಪೆ : hindustantimes

ಯಾವುದೇ ಅಭ್ಯರ್ಥಿ ವೈಯಕ್ತಿಕವಾಗಿ ಒಬ್ಬರಿಗೆ ಮಾತ್ರ ಕೆಲಸ ಮಾಡುತ್ತಾನೆ ಎಂದಾದರೆ, ಅವನು ಊರಿನ ಉದ್ಧಾರಕ್ಕೆ ನಿಷ್ಪ್ರಯೋಜಕ ಎಂದೆ ಅರ್ಥ. ಅಂತವನಿಂದ ಯಾವ ಒಳ್ಳೇಕಾರ್ಯವು ನಿಮ್ಮ ಊರಿಗೆ ಸಾಧ್ಯವಿಲ್ಲಾ. ಬರಿ ಸಭೆ ಸಮಾರಂಭಕ್ಕೆ ಅಷ್ಟೆ ಅವನ ಕಾರ್ಯ ಸೀಮಿತ. ಅಂತವರನ್ನು ಆಯ್ಕೆ ಮಾಡುವುದರಿಂದ ಯಾವ ಪ್ರಯೋಜನವು ಇಲ್ಲಾ. ಈಗ ಡಿಜಿಟಲ್‌ ಯುಗ ಇದಾಗಿದೆ. ಇಲ್ಲಿ ಹೇಳುವಂತಾದ್ದು ಏನು ಇಲ್ಲಾ. ಮತದಾನದ ಬಗ್ಗೆ ಮತದಾರನ ಬಗ್ಗೆ ಮತ ಪಡೆಯುವವನ ಬಗ್ಗೆ ಎಲ್ಲಾ ನಿಮಗೆ ತಿಳಿದಿರುತ್ತದೆ. ಯಾರೋ ಅಪರಚಿತರು ಮನೆಗೆ ಬಂದರೆ ಕಳ್ಳನೋ, ಮಳ್ಳನೋ ಅಂತಾ ಹತ್ತು ಬಾರಿ ಯೋಚ್ನೆ ಮಾಡ್ತೀವಿ. ನಾಯಕನ ಆಯ್ಕೆಯಲ್ಲು ಸ್ವಲ್ಪ ಹಾಗೆ ಯೋಚ್ನೆ ಮಾಡಿ. ಇವಾಗ ಪಕ್ಷ ಅನ್ನೋದು ಒಂದು ಬ್ರಾಂಡ್‌ ಕಂಪನಿ ತರಾ ಆಗೋಗಿದೆ. ಇಂತ ಪಕ್ಷಕ್ಕೆ ಓಟು ಕೊಟ್ಟರೆ ಜನ ಉದ್ಧಾರ ಆಗ್ತಾರೆ ಅನ್ನೋ ಮನೋಭಾವನೆ ತುಂಬಾ ಜನರಲ್ಲಿದೆ. ಅದು ಎಷ್ಟು ಸತ್ಯಾನೊ ಸುಳ್ಳೊ. ಆದ್ರೆ ಒಂದು ಮರದಲ್ಲಿ ಎಲ್ಲವೂ ಒಳ್ಳೇ ಹಣ್ಣು ಸಿಗತ್ತೆ ಅಂದ್ಕೋಳೊದು ತಪ್ಪು. ಕೆಲವೊಂದು ಕೊಳೆತ ಹಣ್ಣು ಇರೋದು ಸಹಜ. ಅದಕ್ಕೆ ಒಳ್ಳೇ ಹಣ್ಣನ್ನಾ ಮಾತ್ರ ಆಯ್ಕೆ ಮಾಡಿ. ತಿನ್ನಲು ಯೋಗ್ಯವಾದ ಹಣ್ಣಿಗೆ ಮತ ನೀಡಿ. ಇತರೆ ಹಣ್ಣುಗಳನ್ನು ಹಾಳು ಮಾಡುವ ಕೊಳೆತ ಹಣ್ಣನ್ನು ಬುಟ್ಟಿಗೆ ಹಾಕಿದರೆ ನಷ್ಟ ನಮಗೆ. ಯೋಚಿಸಿ ಮತ ಚಲಾಯಿಸಿ, ನಾಯಕನ ಆಯ್ಕೆ ಮಾಡಿ.


  • ಲೇಖನ್‌ ನಾಗರಾಜ್, ಹೊನ್ನಾವರ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW