ಮಗಳಿಗೆ ಮುವತ್ತಾದರು ಯಾರು ಒಪ್ಪಿರಲಿಲ್ಲ. ಬಂದ ಹುಡುಗ ಒಪ್ಪಿದರೆ ಮಗಳು ಬೇಡ ಎನ್ನುತ್ತಿದ್ದಳು. ಆದರೆ ಈ ಸರಿ ಮಗಳಿಗೆ ಬೈದು ಬುದ್ದಿ ಹೇಳಿ ಮದುವೆಗೆ ಒಪ್ಪಿಸಿ ಮದುವೆ ಮಾಡಿದ್ದರು, ಮುಂದೇನಾಯಿತು ತಪ್ಪದೆ ಓದಿ…
ಕೃಷ್ಣಂಭಟ್ಟರ ಮನೆಯಲ್ಲಿ ಮಗನ ಮದುವೆ ಮುಗಿಸಿ ಸೊಸೆ ಜಯಂತಿಯನ್ನು ಮನೆತುಂಬಿಸಿಕೊಂಡು ಒಂದು ದಿನ ಕಳೆದಿತ್ತು. ಬೆಳಿಗ್ಗೆಯಿಂದಲೇ ಸಡಗರ ಸಂಭ್ರಮ ಬೀಗರು ಇನ್ನೇನು ಒಂಬತ್ತಕ್ಕೆಲ್ಲ ಬರುವರಂತೆ ಬೆಳಿಗ್ಗೆ ಆರಕ್ಕೆ ಹೊರಟಿರುವರು. ಬೆಂಗಳೂರು ಮೈಸೂರಿಗೆ ಕೇವಲ ಮೂರು ಗಂಟೆ ಪ್ರಯಾಣ.
ಮೊದಲ ಮಗಳ ಮಗ ರಾಜು ಅಜ್ಜಿ ಅವರೆಲ್ಲ ಬಂದರು ಬೇಗ ಬನ್ನಿ ಎಂದು ಕೂಗಿದ.
ಎರಡನೆ ಮಗಳು ವಸಂತ ಏಳು ತಿಂಗಳ ಚೊಚ್ಚಲ ಬಸರಿ ನಿಧಾನವಾಗಿ ಹೊರಗಡೆ ಬಂದಳು. ಆರತಿ ಎತ್ತಲು ಹಿರಿಯ ಮಗಳು ರಮಾ ಜೊತೆಗೆ ಭಟ್ಟರ ಹೆಂಡತಿ ರಾಧಮ್ಮ ಸೇರಿಕೊಂಡರು. ಬೀಗರನ್ನು ಒಳ ಕೂರಿಸಿ ಬೆಳಗಿನ ಉಪಹಾರಕ್ಕೆ ಕರೆದರು. ರಾಮಾ ಜೋಯಿಸರ ಕಣ್ಣೆಲ್ಲ ಮಗಳು ಇನ್ನು ಬರಲಿಲ್ಲವಲ್ಲ ಎಂಬ ಆತಂಕದೆ ನೋಡುತ್ತಿತ್ತು.
ಲಕ್ಷ್ಮಿ ನಿನ್ನ ಮಗಳನ್ನು ಕರಿಯೆ ಎಂದರು ಜೋಯಿಸರು. ಸ್ನಾನ ಮುಗಿಸಿ ಬಂದ ಮಗಳನ್ನು ಅಮ್ಮ, ಅಪ್ಪ, ಅಕ್ಕ, ತಂಗಿ, ನೆಂಟರು ಸುತ್ತುವರೆದು ಆರೋಗ್ಯ ವಿಚಾರಿಸುತ್ತಿರುವಾಗ ಜೊತೆಯಲ್ಲಿ ಬಂದಿದ್ದ ಪಕ್ಕದ ಮನೆಯ ಸಖೇಶಿ ಗೌರಮ್ಮ ಮನೆಯನ್ನೆಲ್ಲ ಅಳಿದು ಸುರಿದು ಜಂತಿ ಎಣಿಸಿ ಲೆಕ್ಕಾಚಾರ ಮಾಡಿ ತಿಂಡಿ ತಿನ್ನಲು ಕುಳಿತವರು. ಲೋ… ರಾಮು ಈ ಸಂಬಂಧ ಅಷ್ಟೇನು ಹೇಳಿಕೊಳ್ಳುವ ಹಾಗೆ ಇಲ್ಲ ಬಿಡು.
ಮಧ್ಯಮ ವರ್ಗಕ್ಕೂ ಸ್ವಲ್ಪ ಕಡಿಮೆಯೇ ಎಲ್ಲಾರು ಇರುವ ಒಂದು ಮಗನ ಸಂಬಳದ ಮೇಲೆ ನಿಂತಿದ್ದಾರೆ. ಎರಡು ಹೆಣ್ಣು ಮಕ್ಕಳು ಬೇರೆ, ನಿನ್ನ ಮಗಳು ಈ ಜನ್ಮದಲ್ಲಿ ಅದೇನು ಸುಖ ಪಡುತ್ತಾಳೊ… ಆ ದೇವರು ಶ್ರೀನಿವಾಸನೆ ಬಲ್ಲ.
ಹಳೆಯ ಜಂತಿಗಳು, ಈಗಲೋ ಆಗಲೋ ಬೀಳುವಂತಿರುವ ಮಣ್ಣಿನ ಗೋಡೆಗಳು ಎಂದು ಜೋಯಿಸರ ಮತ್ತು ಲಕ್ಷ್ಮಿಯ ಕಿವಿಯಲ್ಲಿ ಶಂಖನಾದ ಊದಿದರು.
ಪಾಪ ಜೋಯಿಸರ ಹೆಂಡತಿಯ ಕಷ್ಟ ಹೇಳತೀರದು, ಮಗಳಿಗೆ ಮುವತ್ತಾದರು ಯಾರು ಒಪ್ಪಲಿಲ್ಲ. ಹುಡುಗ ಒಪ್ಪಿದರೆ ಮಗಳು ಬೇಡ ಎನ್ನುವ ರಾಗ ಶುರು ಮಾಡಿ ಜೋಯಿಸರು ಸಾಕಷ್ಟು ಬೈದು ಲಕ್ಷ್ಮಿಯವರು ಅತ್ತು ಕರೆದು ಈ ಮದುವೆಗೆ ಒಪ್ಪಿಸಿದ್ದರು. ಈ ಮುದುಕಿ ಮತ್ತೆ ಕಿತಾಪತಿ ಮಾಡಿ ಇನ್ನೇನು ಅನಾಹುತ ಆಗುವುದೊ ಎಂದು ಹೆದರಿ ಗೌರಮ್ಮ ನಿಗೆ ಸ್ವಲ್ಪ ಗದರಿದ ಹಾಗೆ ಸುಮ್ಮನಿರುವಂತೆ ಹೇಳಿ ಸಂಜೆ ಆಗುತ್ತಿದ್ದಂತೆ ಮಗಳು ಅಳಿಯನಿಗೆ ಮನೆಗೆ ಬರುವಂತೆ ಹೇಳಿ ಬೀಗರಿಗೆ ಮಗಳು ಅಳಿಯನನ್ನು ಕಳಿಸುವಂತೆ ಶಿಫಾರಸು ಮಾಡಿ ಬೆಂಗಳೂರಿನ ಕಡೆಗೆ ಹೊರಟೆಬಿಟ್ಟರು.
- ಶಶಿಕುಮಾರ್.ಎಂ.ಎ – ವೃತ್ತಿಯಲ್ಲಿ ರೈಲ್ವೆ ಉದ್ಯೋಗಿಯಾಗಿದ್ದು, ಹವ್ಯಾಸಗಳು ಚುಟುಕು,ಕವನ, ನ್ಯಾನೊ ಕಥೆ, ಚಿಕ್ಕ ಕಥೆಗಳನ್ನು ಬರೆಯುವುದು, ಫೋಟೋಗ್ರಫಿ, ಮೈಸೂರು.