“ವ್ಯತಿರಿಕ್ತ” ಕಾದಂಬರಿ ಪರಿಚಯ – ಹೆಚ್ ವಿ ಮೀನ

ವಿವೇಕಾನಂದ ಕಾಮತ್ ಅವರ “ವ್ಯತಿರಿಕ್ತ” ಕಾದಂಬರಿ ಕುರಿತು ಲೇಖಕಿ ಹೆಚ್ ವಿ ಮೀನ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. “ವ್ಯತಿರಿಕ್ತ” ಕಾದಂಬರಿಯ ನಾಯಕ ಸಂತೋಷನ ಆಸೆಗಳೇ ವ್ಯತಿರಿಕ್ತ. ತಪ್ಪದೆ ಮುಂದೆ ಓದಿ…

ಕಾದಂಬರಿ : “ವ್ಯತಿರಿಕ್ತ”
ಲೇಖಕರು : ಶ್ರೀ ವಿವೇಕಾನಂದ ಕಾಮತ್
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಷನ್ಸ್
ಬೆಲೆ : 285/-
(M)9880029547
9945939436

Empty mind is devil’s workshop ಎಂಬ ಗಾದೆಯಂತೆ ನಿರ್ಲಿಪ್ತ ಮನಸಿನವನ ರೋಚಕ ಕಥೆಯೇ “ವ್ಯತಿರಿಕ್ತ”.

ಪ್ರತೀ ಕ್ಷಣ ನಮ್ಮ ಒಂದೊಂದು ತಪ್ಪುಗಳು ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಆತ್ಮಸಾಕ್ಷಿಯನ್ನು ಕಾಡುತ್ತಲೇ ಇರುತ್ತವೆ. ಪಾಪ ಪ್ರಜ್ಞೆಇಂದ ಬದುಕಿದ್ದೂ ಸತ್ತಂತೆ ಜೀವಿಸಿ, ಸಾವಿನ ಬಾಗಿಲು ತೆರೆದರೆ ಸಾಕಪ್ಪಾ ಎಂದು ಇಚ್ಚಿಸುವವರು ಅದೆಷ್ಟೋ ಮಂದಿ ಅದರೆ, ಸಾವಿನ ಹಾಸಿಗೆಯಲ್ಲಿದ್ದು ತಾವು ಬದುಕಿ ಮತ್ತಷ್ಟು ದಿನಗಳು ಜೀವಿಸಬೇಕೆಂಬ ಆಸೆಯನ್ನು ಪಡುವ ಆತ್ಮಗಳನ್ನು ಕೂಡ ನೋಡುತ್ತೇವೆ. ಸಾವಿನ ಇವೆರಡು ಭಾವಗಳು ಸಹಜ. ಸಾವು ಲಿಖಿತ. ಆದರೇ..”ವ್ಯತಿರಿಕ್ತ” ಕಾದಂಬರಿಯ ನಾಯಕ ಸಂತೋಷನ ಆಸೆಗಳೇ ವ್ಯತಿರಿಕ್ತ.

ಕೈತುಂಬಾ ಸಂಬಳ, ಇರಲು ಒಳ್ಳೆ ಮನೆಇದ್ದರೂ ತನ್ನವರಿಂದ ದೂರವಿದ್ದ ಸಂತೋಷನು ನಿರ್ಲಿಪ್ತನಂತೆ ಯಾವುದೇ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ತೋರದೆ ಒಂಟಿತನವನ್ನು ಬಯಸುತ್ತಿದ್ದ. ತನಗೆ ಪರಿಚಯವಿದ್ದ ಹುಡುಗಿ ಪ್ರಿಯಂವದಾಳೊಂದಿಗೆ ಯಾವುದೇ ಭಾವನಾತ್ಮಕತೆಯನ್ನು ಹೊಂದದೆ “ಲೀವ್ ಇನ್ ರಿಲೇಷನ್ ಶಿಪ್” ಸಂಬಂಧವನ್ನು ಬೆಸೆಯುತ್ತಾನೆ. ಜೊತೆಗೆ ಒಂದು ಅಗ್ರಿಮೆಂಟ್ ಅನ್ನು ಕೂಡ ಮಾಡಿಕೊಳ್ಳುತ್ತಾನೆ. ಆ ಅಗ್ರಿಮೆಂಟ್ ಪ್ರಕಾರ ಒಂದು ವರುಷದಲ್ಲಿ ಅವರ ಸಂಬಂಧ ಮುಗಿದಿರುತ್ತದೆ. ಪ್ರೀತಿಯಿಂದ ಸಂತೋಷನಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದ ಪ್ರಿಯಂವದಾ ಸಂತೋಷನನ್ನು ಬಿಟ್ಟಿರಲಾರದೆ ಮದುವೆಯಾಗಲು ಹಂಬಲಿಸುತ್ತಾಳೆ. ಆದರೇ….ಯಾವುದೇ ಭಾವನೆಗಳಿಗೆ ಬೆಲೆಕೊಡದೆ ಇರುತ್ತಿದ್ದ ಸಂತೋಷ, ಕೇವಲ ದೈಹಿಕ ತೃಪ್ತಿಗಾಗಿ ಪ್ರಿಯಂವದಳೊಂದಿಗೆ ಇದ್ದವನು, ಮದುವೆಗೆ ಒಪ್ಪದೆ ತನ್ನ ಕರಾರಿನ ಪ್ರಕಾರ ಅವಳಿಂದ ದೂರ ಸರಿದು ಒಂಟಿಯಾಗಿರಲು ಇಚ್ಚಿಸುತ್ತಾನೆ.

ಇದಲ್ಲದೆ ತನ್ನ ಕಂಪನಿಯ ನಿಯಮಗಳಿಗೂ ಕೂಡ ಹೊಂದಿಕೊಳ್ಳಲು ಇಷ್ಟ ಪಡದ ಸಂತೋಷ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಂಪೂರ್ಣವಾಗಿ ಸ್ವತಂತ್ರನಾಗುತ್ತಾನೆ. ನಂತರ ಜೀವನದ ಆನಂದವನ್ನು ಸವಿಯಲು ತನ್ನ ಒಡಹುಟ್ಟಿದ ಸಹೋದರರಿದ್ದರೂ ಅವರಿಂದ ದೂರವಿದ್ದು ಕ್ರಮೇಣ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ. ತನ್ನ ಎಲ್ಲಾ ಜವಾಬ್ದಾರಿಗಳಿಂದ ದೂರವಿರಬೇಕೆಂಬ ಮನಸ್ಥಿತಿ ಉಳ್ಳ ಸಂತೋಷನಿಗೆ ತಾನು ಆಯ್ಕೆ ಮಾಡಿಕೊಂಡಿದ್ದ “ಸ್ವತಂತ್ರ ಜೀವನವು” ಕೂಡ ಕೆಲವು ದಿನಗಳಲ್ಲಿಯೇ ಬೇಸರ ತರಿಸುತ್ತದೆ.

ಹೀಗೆ ಒಂಟಿತನ ಹಾಗೂ ತನ್ನ ಇಚ್ಛೆಗಳಿಗೆ ಅನುಸಾರವಾಗಿ ಆಯ್ಕೆ ಮಾಡಿಕೊಂಡಿದ್ದ ಜೀವನ ಶೈಲಿಯಲ್ಲಿ ಯಾವುದೇ ಥ್ರಿಲ್ ಅಥವಾ ರೋಮಾಂಚನ ಸಿಗುತ್ತಿಲ್ಲವೆಂದು, ಜೀವನದಲ್ಲಿ ಸಂತೋಷವನ್ನು ಅನುಭವಿಸಲು ಯಾವುದಾದರೊಂದು ರೋಚಕವಾದ ಮಾರ್ಗವನ್ನು ಹುಡುಕುತ್ತಿದ್ದ ಸಂತೋಷನು ಆಯ್ಕೆ ಮಾಡಿಕೊಂಡ ದಾರಿ……”ಸಾವು”.

ಆದರೇ……

ಸಾವಲ್ಲೂ “ಥ್ರಿಲ್” ಸಿಗಬೇಕು ಎಂದು ಯೋಚಿಸಿದ ಸಂತೋಷನು ತನ್ನ ಸಾವಿಗೆ ತಾನೇ ಗೂಗಲ್ ಮೂಲಕ “ಸುಪಾರಿ ಕಿಲ್ಲರ್” ಒಬ್ಬನನ್ನು ಸಂಪರ್ಕಿಸಿ, ತನ್ನ ಸಾವಿನಲ್ಲಿ ಖುಷಿಯನ್ನು ಪಡೆಯಬೇಕು ಎಂದು ತಾನೇ ಸುಪಾರಿಯನ್ನು ಕೊಟ್ಟು ತನ್ನ ಸಾವನ್ನು ನಿರೀಕ್ಷಿಸುತ್ತಿದ್ದವನಿಗೆ…… ಥ್ರಿಲ್ ಸಿಗುವ ಸಾವು ದೊರಕಿತೆ!????

ಹುಟ್ಟು ಸಾವಿನತನಕ ನಾವು ಒಂಟಿ ಎಂಬ ಭಾವನೆ ಇಂದ ಹೊರಬಂದು ನಮ್ಮ ಸ್ನೇಹಿತರೊಂದಿಗೆ ಮತ್ತು ಒಡಹುಟ್ಟಿದವರೊಂದಿಗೆ ಒಳ್ಳೆಯ ಸಂಬಂಧವನ್ನು ಬೆಳೆಸಬೇಕು. ಇದು ಸಾಧ್ಯವಾಗದಿದ್ದಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿಯೋ ಅಥವಾ ನಮಗೆ ಸಂತೋಷತರುವ ಯಾವುದಾದರೊಂದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ನಾವು ಮಾಡುವ ಕೆಲಸವನ್ನು ಗೌರವಿಸಿ ಆಸಕ್ತಿಯನ್ನು ತೋರಿದರೆ ನಮ್ಮ ಮನಸ್ಸು ಉಲ್ಲಾಸವಾಗಿರುತ್ತದೆ.

ಕಾದಂಬರಿಯ ನಾಯಕ ಸಂತೋಷನ ವಿಲಕ್ಷಣ ಚಿಂತನೆಗಳಿಂದ ಅವನಿಗೆ ಸಂಬಂಧಗಳಲ್ಲಿ ಸಿಗದೇ ಇದ್ದ ರೋಚಕತೆ ಅವನು ಆಯ್ದು ಕೊಂಡ ಸಾವಿನ ಹಾದಿ ಅವನಿಗೆ ರೋಚಕತೆ ತಂದುಕೊಟ್ಟಿತೇ!!!???

ಶ್ರೀ ವಿವೇಕಾನಂದ ಕಾಮತ್ ಅವರ ಸರಳ ಕಥನ ಶೈಲಿಯುಲ್ಲಿ ಪ್ರತೀ ಒಂದು ಹಂತದಲ್ಲೂ ಕುತೂಹಲವನ್ನು ಹೆಚ್ಚಿಸುತ್ತಾ ಓದುಗರಿಗೆ ಬರಹದಲ್ಲಿ ಹೊಸತನವನ್ನು ಅನುಭವಿಸುವಂತೆ ಮಾಡುವ ಸಸ್ಪೆನ್ಸ್ ಥ್ರಿಲರ್ “ವ್ಯತಿರಿಕ್ತ” ಕಾದಂಬರಿಯನ್ನು ಎಲ್ಲರೂ ಕೊಂಡು ಓದಿ.

ಶ್ರೀ ವಿವೇಕಾನಂದ ಕಾಮತ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಹಾಗೂ ಶುಭಾಶಯಗಳನ್ನು ತಿಳಿಸುತ್ತಾ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಅವರಿಗೆ, ಶ್ರೀ ವೀರ ಪುತ್ರ ಶ್ರೀನಿವಾಸ್ ಹಾಗೂ ವೀರಲೋಕ ಸಂಸ್ಥೆಯವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.


  • ಹೆಚ್ ವಿ ಮೀನ – ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW