ಸೌಂದರ್ಯವನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದು, ನೋಡುಗನ ಕಣ್ಣಿಗಳಿಗೆ ಹಬ್ಬದೂಟ ಮಾಡಿಸುವ ಎಲ್ಲ ಛಾಯಾಗ್ರಾಹಕರಿಗೂ ಆಕೃತಿಕನ್ನಡದಿಂದ ವಿಶ್ವ ಛಾಯಾಚಿತ್ರ ದಿನದ ಶುಭಾಶಯಗಳು….
ಕಿರಣ್ ಭಟ್ ಹೊನ್ನಾವರ
ವೃತ್ತಿಯಲ್ಲಿ ಹವ್ಯಾಸಿ ರಂಗ ಸಂಘಟನಾಕಾರರು, ನಿರ್ದೇಶಕರು, ನಟರು ಆದ ಕಿರಣ್ ಭಟ್ ಹೊನ್ನಾವರ ಅವರು ತಮ್ಮ ಹವ್ಯಾಸಗಳಲ್ಲಿ ಛಾಯಾಚಿತ್ರಕಾರರು. ಛಾಯಾಚಿತ್ರ ತಗೆಯುವುದೆಂದರೆ ಎಲ್ಲಿಲ್ಲದ ಪ್ರೀತಿ. ಅವರಿಗೆ ಕ್ಯಾಮೆರಾ ಕೈಯಲ್ಲಿದ್ದರೆ ಫೋಟೋದಲ್ಲಿಯೇ ವ್ಯಕ್ತಿಯ ಬದಕನ್ನು ತೋರಿಸಿ ಬಿಡುವ ಮಾತ್ರಿಕರು. ಅವರು ತಗೆದಿರುವ ಕೆಲವು ಆಯ್ದ ಚಿತ್ರಗಳು ನಿಮ್ಮ ಮುಂದಿದೆ.
*****
ಸಿದ್ಧರಾಮ ಕೂಡ್ಲಿಗಿ
****
ವೃತ್ತಿಯಲ್ಲಿ ಸಿದ್ಧರಾಮ ಕೂಡ್ಲಿಗಿ ಅವರು ಉಪನ್ಯಾಸಕರು, ಜೊತೆಗೆ ಹವ್ಯಾಸಿ ಛಾಯಾಗ್ರಾಹಕರು. ಅವರು ತಗೆದ ಚಿತ್ರಗಳಲ್ಲಿ ‘ರವಿ ಕಾಣದ್ದನ್ನು ಛಾಯಾಗ್ರಾಹಕ ಕಂಡಂತೆ’ ಕೆಲವು ಛಾಯಾಚಿತ್ರಗಳು ಜೀವನದ ಮೇಲಿನ ಪ್ರೀತಿ, ವಾತ್ಸಲ್ಯ, ಪ್ರಕೃತಿ ಸೌಂದರ್ಯವನ್ನು ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಸಂದೇಶವನ್ನು ರವಾನೆ ಮಾಡುತ್ತವೆ.
ಚಿದಾನಂದ್ ಯುವ ಸಂಚಲನ
****
ಚಿದು ಅವರು ಸದಾ ಪ್ರಕೃತಿಗಾಗಿ ಮಿಡಿಯುವ ಹೃದಯವಂತ ವ್ಯಕ್ತಿ. ಸದಾ ಪ್ರಕೃತಿ ಉಳಿವಿಗಾಗಿ ಆಂದೋಲನಗಳನ್ನು ಮಾಡುತ್ತಾ, ಪ್ರಕೃತಿಯಲ್ಲಿ ಕಾಣುವ ಸುಂದರ ಜೀವಿಗಳು ಮತ್ತು ಸೌಂದರ್ಯವನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿಯುವ ಅದ್ಬುತ ಛಾಯಾಗ್ರಾಹಕ. ಅವರು ತಗೆದಿರುವ ಕೆಲವು ಛಾಯಾಚಿತ್ರಗಳು ಇಲ್ಲಿವೆ :
ಮಾಲತೇಶ ಅಂಗೂರ
****
ವೃತ್ತಿಯಲ್ಲಿ ಪತ್ರಕರ್ತರಾಗಿದ್ದು, ಹವ್ಯಾಸವಾಗಿ ಛಾಯಾಚಿತ್ರಕಾರರಾಗಿದ್ದಾರೆ. ಮಾಲತೇಶ ಅವರು ಆರೋಗ್ಯ ಹೇಗೆ ಇರಲಿ, ಎಷ್ಟೇ ಕೆಲ್ಸದಲ್ಲಿ ಒತ್ತಡವಿರಲಿ ಕೈಗೆ ಕ್ಯಾಮೆರಾ ಸಿಕ್ಕರೆ ಸಾಕು ಪ್ರಾಣಿ, ಪಕ್ಷಿಗಳು ಒಂದಕ್ಕೊಂದು ಚಿತ್ರಗಳನ್ನು ಚಂದ ಮಾಡಿ ತಗೆಯುವುದರಲ್ಲಿ ನಿಪುಣರು. ಅವರ ಆಯ್ದ ಫೋಟೋಗಳು ಇಲ್ಲಿವೆ :
- ಆಕೃತಿ ನ್ಯೂಸ್