ನಾನೆಲ್ಲೆಲ್ಲೂ ಇರುವೆ !
ಎಲ್ಲರೊಳೂ ಬೆರೆವೆ !
ಸವಾ೯ಂತಯಾ೯ಮಿ ! !
ಯುಗೇ ಯುಗೇ ಸಂಭವಾಮಿ ! ! !
ಹಿಡಿದಿಡಬೇಡಿ !
ನನ್ನೊಳಗೇ ಅಡಗಿಬಿಡಿ !
ನಾನೇ ನೀವಾಗಿಬಿಡಿ ? !
ನಿಮ್ಮೊಳಗೇ ನೀವು ತೊಡಗಿಬಿಡಿ ? !
“ಮಾ ಫಲೇಷು ಕದಾಚನ”
ಬರಬೇಕಾಗಿತ್ತು ಬಂದಾಗಿದೆ !
ಬಂದ ಕಾರಣ ತಿಳಿಯಬೇಕಿದೆ ?
ಹೋಗುವ ಹಾದಿ ಹುಡುಕಬೇಕಿದೆ !
ಬಾಗಿಲು ಕಿಟಕಿಗಳ ಕೆಡುಹಬೇಕಿದೆ ! ?
“ಧಮ೯ ಸಂಸ್ಥಾಪನಾಥಾ೯ಯ”
ವಸುದೈವ ಕುಟುಂಬ ಪರಿಕಲ್ಪನೆಯೇ?
ವಿಶ್ವ ಬಂಧುತ್ವ ಬರೀ ಭ್ರಾಂತಿಯೇ ? ! !
ಅರಿತರೆ ವಿಶ್ವಶಾಂತಿ !
ಮರೆತರೆ ಮತ್ತೆ ಕ್ರಾಂತಿ ?
“ಅಭ್ಯುತ್ಥಾನಂ ಅಧಮ೯ಸ್ಯ”
ಅಲ್ಲವಿದು ಬರಿ ಭಾಷ್ಯ ? !
ಮತಿಯ ಗತಿಯ ಮರೆಯದಿರು
ಮೆರೆದರೆ ನೋಡು ಪರಿಹಾಸ್ಯ
ದಿನವೂ ಕಾಣುತಿಹೆ ಕಣ್ಣೆದುರು ! ?
ಮತ್ತೊಂದು ಮನ್ವಂತರದತ್ತ
ಮರಳಬಹುದು ಮರಳಿ ಮಣ್ಣಿಗೆ !
ಇತ್ತೊಂದು ಹೀಗೆ ಎಂಬುದರತ್ತ
ಮುಂಬಹರ ಕಲ್ಪನೆಯ ಕಣ್ಣಿಗೆ !
“ಪರಿತ್ರಾಣಾಯ ಸಾಧೂನಾಂ
ವಿನಾಶಾಯಚ ದುಷ್ಕೃತಾಂ”
ಏ ! ? ನಾನು ನಾನೇ
ನೀ ! ? ನೀನು ನೀನೆ
ನಿನ್ನೊಳಗೆ ನಾನಿರುವೆ
ನನ್ನೊಳಗೇ ನೀ ಬರುವೆ !
ನನ್ನೇಕೆ ಮರೆತಿರುವೆ ! ?
ಹೋಗು ಹೋಗು ಸುತ್ತಾಡು ! ?
ನಿನ್ನ ಕಮ೯ಗಳಿಗೆ ಕೊಳ್ಳಿ ಇಡು !
ಕೊನೆಗೊಮ್ಮೆ ಮಹಾಮರಕೆ
ಬಳ್ಳಿಯಾಗಿ ಸುತ್ತಿಬಿಡು !
ಮಳ್ಳಿಯಂತಾಡಬೇಡ ಇದು
ಸುಳ್ಳಿನ ಸುಡುಗಾಡು ! ?
ನಿನ್ನ ನಿಜ ಆಡುಂಬೊಲ
ನನ್ನೆದೆಯ ನೆಲ!
ನೆನಪಿರಲಿ ನಿತ್ಯ ಸಕಲ,
ಮತ್ತೆ ಬಂದ ಬಯಲ!
ಮರೆಯದಿರು , ಎಷ್ಟೇ
ಉಟ್ಟರೂ ನೀ ಬೆತ್ತಲ ! !
- ಸುರೇಶ ಕೋರಕೊಪ್ಪ
