ಟೀಕೆ ಮಾಡೋರ್ಗೆಲ್ಲ ಟೀಗೂ ಕಾಸಿರಲ್ಲ..

ಯುವ ಸಿನಿಮಾದ ಮೂಲಕ ಯುವ ರಾಜ್‌ಕುಮಾರ್‌ ಭರವಸೆ ಡೆಲಿವರಿ ಮಾಡಿದ್ದಾರೆ. ಯುವ ಸಿನಿಮಾದ ಕುರಿತು ಯುವಕವಿ ಚೇತನ್ ಗವಿಗೌಡ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…

ಟೀಕೆ ಮಾಡೋರ್ಗೆಲ್ಲ ಟೀಗೂ ಕಾಸಿರಲ್ಲ.. ಕೇರ್ ಎ ಮಾಡಬೇಡ ರಾಜ..

*****

ಎಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ ಆಗಿ ರಾಯಲ್ ಎಂಟ್ರಿ ಕೊಡುವ ಯುವ ಮಾಸ್ ಸಿನಿ ಪ್ರೇಕ್ಷಕರಿಗೆ ಗೋಸ್ಬಂಪ್ಸ್ ಬರಿಸುತ್ತ ಕಟು ಮಸ್ತಾದ ದೇಹ ಹುರಿಗೊಳಿಸಿ ಆಕ್ಷನ್ ದೃಶ್ಯಗಳಲ್ಲಿ ಮಿಂಚು ಹರಿಸುತ್ತಾರೆ.

ಹಾಸ್ಟೆಲ್ – ಲೋಕಲ್ ಹುಡುಗರ ನಡುವಿನ ಕಾಳಗದಲ್ಲೇ ಅರ್ಧ ಸಿನಿಮಾ ಕಳೆದು ಹೋಗಿ, ಸದೃಢವಾದ ಕಥೆ ಇಲ್ಲದೆ ಅನೇಕ ಸ್ಕ್ರೀನ್ ಪ್ಲೇನಲ್ಲೆ ಚಿತ್ರ ತೆರೆಮೇಲೆ ಮಿಂಚುತ್ತೆ. ಫುಡ್ ಡೆಲಿವರಿ ಮಿಡಲ್ ಕ್ಲಾಸ್ ಹುಡ್ಗ ಇಷ್ಟ ಆಗ್ತಾನೆ. ಅಪ್ಪ ಮಗನ ಭಾವನಾತ್ಮಕತೆ ಸಿನಿಮಾದ ಪ್ಲೇಸ್ ಪಾಯಿಂಟ್.

ಮಾಸ್ ಎಂಟ್ರಿ, ಶಿಳ್ಳೆಗಿಟ್ಟಿಸಿಕೊಳ್ಳುವ ಅಬ್ಬರದ ಡೈಲಾಗ್ಸ್.. ಹೀರೋಹಿಸಂ ಪೈಟ್ಸ್.. ಯುವನ ಹವಾ ಎಬ್ಬಿಸಿ ಬೆರಗಾಗಿಸುತ್ತೆ. ಆಕ್ಷನ್, ಡೈಲಾಗ್ ಡೆಲಿವರಿ ಬಿಟ್ಟು ಅಸಲಿ ಕಥೆ ಶುರುವಾಗುವುದೇ ಮಧ್ಯಂತರ ನಂತರ. ಮದ್ಯಮ ಕುಟುಂಬದ ಹುಡ್ಗನ ಹೋರಾಟದ ಜೀವನ, ಎದುರಾದ ಸವಾಲುಗಳು, ಅದರ ಜೊತೆಗೆ ವಿದ್ಯಾಭ್ಯಾಸ ಇದ್ದರೂ ನಿರುದ್ಯೋಗಿಯಾಗಿ ನಂತರ ಫುಡ್ ಡೆಲಿವರಿ ಬಾಯ್ ಆಗಿ ಬದುಕಿನ ಕಷ್ಟ ಜಂಜಾಟಗಳ ಎದುರಿಸಿ ಮಿಡಲ್ ಕ್ಲಾಸ್ ಮಂದಿಯ ಮನ ಗೆಲ್ಲುವಲ್ಲಿ ಯುವ ಯಶಸ್ವಿಯಾಗಿ ಮೇಲು ಗೈ ಸಾದಿಸಿದ್ದಾರೆ..

ಕಾಲೇಜಿನ ಪ್ರಿನ್ಸಿಪಾಲ್ ಆಗಿ ಗೋಪಾಲ್ ದೇಶಪಾಂಡೆ ಅವರು ಜವಾಬ್ದಾರಿ ನಿರ್ವಹಿಸಿದ್ದಾರೆ. ಪಾತ್ರ ಕುತೂಹಲ ಮೂಡಿಸುತ್ತೆ. ಅಪ್ಪನ ಪಾತ್ರಧಾರಿಯಾಗಿ ಅಚ್ಯುತ್ ಎಂದಿನಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸುಧಾರಾಣಿ, ಹಿತ ಅವರ ಅಭಿನಯ ಹಿಡಿಸುತ್ತೆ. ಕುಸ್ತಿಪಟುವಿನ ಕೋಚ್ ಆಗಿ ಕಿಶೋರ್ ಕಾಣ ಸಿಗುತ್ತಾರೆ. ಯುವನ ಏಳು ಬೀಳಿನ ಜೊತೆಗೆ ಕ್ಲೇಮಾಕ್ಸ್ ವರೆಗೂ ಪಾತ್ರ ಜಬರ್ದಸ್ತ್ ಆಗಿ ಪೋಷಣೆ ಮಾಡುತ್ತೆ. ಸಪ್ತಮಿ ಮೇಲೆ ಇಲ್ಲೂ ಕೂಡ ಕ್ರಶ್ ಆಗೋದು ಗ್ಯಾರಂಟಿ. ಮಾಸ್ ಎಂಟ್ರಿ ಸಾಂಗ್ ಜೊತೆಗೆ ಕವಿತೆ.. ಕವಿತೆ.. ಹಾಡು ಮನಸಿಗೆ ಇಷ್ಟ ಆಗುತ್ತೆ.

ಇವೆಲ್ಲವನ್ನು ಬಿಟ್ಟು ವೈಯಕ್ತಿಕವಾಗಿ ಇಷ್ಟವಾಗಿದ್ದು ಯುವನ ಮಾಸ್ ಮ್ಯಾನರಿಸಂ, ಡ್ಯಾನ್ಸ್ ಫೈಟ್, ಅಪ್ಪ ಮಗನ ಸಂಬಂಧ, ಹೀರೋಹಿನ್ ಸಹಪಾಠಿಗಳನೊಂದಿಗಿನ ಹುಲಿ ಕುಣಿತ.. ಮಧ್ಯಮ ಕುಟುಂಬದ ಹುಡುಗನ ಜಂಜಾಟ.. ಕೊನೆಗೆ ಅವನು ಆಯ್ಕೆ ಮಾಡಿಕೊಂಡ ಬದುಕು.. ಮಂಗಳೂರಿನ ಸ್ಲ್ಯಾಂಗ್. ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪುವಿನ ಸ್ವಾದ.. ಅಪ್ಪುವನ್ನು ನೆನಪಿಸುವ ಅನೇಕ ಸಂಗತಿಗಳು ಶುರುವಿನಿಂದ ಕೊನೆವರಿಗೂ ಅಲ್ಲಲ್ಲಿ ನುಸುಳಿ ಹೃದಯವನ್ನ ಅಪ್ಪುತ್ತವೆ..

ಸಂತೋಷ್ ಆನಂದ್ ರಾಮ್ ಈ ಚಿತ್ರದಲ್ಲೂ ಮೋಡಿ ಮಾಡಿದ್ದಾರೆ. ಕೌಟುಂಬಿಕ ಮೌಲ್ಯ ಹೊಂದಿರುವ ಸಿನಿಮಾ, ಮನೆ ಮಂದಿ ಎಲ್ಲ ಸಿನೆಮಾ ಮಂದಿರದಲ್ಲೇ ನೋಡಿ ಕಣ್ತುಂಬಿಕೊಳ್ಳಬೇಕು.. ಒಟ್ಟಾರೆ ಯುವನಿಗೆ ಭರ್ಜರಿ ವೆಲ್ಕಮ್ ಸಿಕ್ಕಿದೆ.

ಬದುಕು ಒಂದು ಹೋರಾಟ, ಆ ಹೋರಾಟ ನಿರಂತರ. ಸಿನಿ ಜರ್ನಿಯ ಮೊದಲ ಹೋರಾಟದ ಹೆಜ್ಜೆಯಲ್ಲಿ ಯುವ ಸಿಳ್ಳೆ ಮತ್ತೆ ಜಪ್ಪಾಳೆ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.. ಜನರ ಅಪ್ಪುಗೆ, ಯಶಸ್ಸು ಇನ್ನೂ ಇತ್ತೇಚ್ಚವಾಗಿ ಸಿಗಲಿ…

ಈ ಸ್ವಗೂ ಸುಮ್ನೆ ಬಂದಿದ್ದಲ್ಲ..
ಈ ರೇಂಜೂss.. ಎಂದು ನಿಲ್ಲೋದಿಲ್ಲ..
ಪವರು ಕಟ್ಟಗಲ್ಲ…
ಒಬ್ಬನೇ ಶಿವ – ಒಬ್ಬನೇ ಯುವ..


  • ಚೇತನ್ ಗವಿಗೌಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading