‘ಆಳ‌- ದಾಳ‌’ – ರೇಶ್ಮಾ ಗುಳೇದಗುಡ್ಡಾಕರ್ಕನ್ನಡದಲ್ಲಿ ಬರಹಗಳು ಎಂದಿಗೂ ಅಗ್ರಮಾನ್ಯವಾಗಿದ್ದು, ಜಗತ್ತಿನಲ್ಲಿ ಎಲ್ಲೂ ಕಾಣದ ‘ವಚನ‌ ಸಾಹಿತ್ಯ’ ಎಂಬ ಭಂಡಾರ ನಮ್ಮ ಕನ್ನಡದ್ದು ಎಂಬುದು ನಮಗೆ ಬಹು ಹೆಮ್ಮೆ ಕವಿಯತ್ರಿ ರೇಶ್ಮಾಗುಳೇದಗುಡ್ಡಾಕರ್ ಅವರು ಬರೆದ ಸುಂದರ ಕವನ ಓದುಗರ ಮುಂದೆ, ತಪ್ಪದೆ ಓದಿ…

ಕನ್ನಡದಲ್ಲಿ ಬರಹಗಳು ಎಂದಿಗೂ ಅಗ್ರಮಾನ್ಯವಾಗಿವೆ. ಇಲ್ಲಿ ವೈಜ್ಞಾನಿಕ, ಸಾಮಾಜಿಕ, ಮನೋವೈಜ್ಞಾನಿಕ, ರಾಜಕೀಯ, ಅರ್ಥದ ಶಾಸ್ತ್ರ ಹೀಗೆ ಎಲ್ಲ ಪ್ರಕಾರದ ಬರಹಗಳು ನಮಗೆ ಲಭ್ಯ. ಅದೇ ನಮ್ಮ ಕನ್ನಡದ ಆಸ್ತಿ. ಇನ್ನು ಜಗತ್ತಿನಲ್ಲಿ ಎಲ್ಲೂ ಕಾಣದ ವಚನ‌ ಸಾಹಿತ್ಯ ಎಂಬ ಭಂಡಾರ ನಮ್ಮ ಕನ್ನಡದ್ದು ಎಂಬುದು ನಮಗೆ ಬಹು ಹೆಮ್ಮೆ . ಎಷ್ಷು ಓದಿದರೂ ಮತ್ತಷ್ಟು ಪಡೆಯುವ ತಿಳಿವಿನ ಹೊನಲು ಈ ವಚನಗಳು.

ಇಲ್ಲಿ ಚರ್ಚಿಸದ ಆಯಾಮಗಳು ಇಲ್ಲವೇ ಇಲ್ಲ ಎನ್ನುವಂತಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ನಮ್ಮ ಮನೋವಿಕಾಸವನ್ನು ಮಾಡುವಲ್ಲಿ ಶ್ರೇಷ್ಠ ಸ್ಥಾನ ಪಡೆದಿವೆ. “ಮನುಷ್ಯ ಜಾತಿ ತಾನೊಂದೇ ವಲಂ ” ಇದು ಆದಿ ಕವಿ ಪಂಪನ ಪ್ರಸಿದ್ದ ಧೇಯ್ಯ ವಾಕ್ಯ ಇಂತಹ ಇತಿಹಾಸ ಹೊಂದಿರುವ ನಮ್ಮ ಬರಹಗಳು ಇತ್ತೀಚಿಗೆ ಕೋಮು, ಜಾತಿ , ಜನಾಂಗದ ಚರ್ಚೆಗೆ ಪ್ರಕಟವಾಗುತ್ತಿರುವುದು ಅತ್ಯಂತ ಶೋಚನೀಯವಾದದು .

ಸಾಲು ಸಾಲು ಪದವಿಗಳು
ನಿರ್ಥಕವಾದವು
ಬಟ್ಟ ಬಯಲ ಬದುಕಿನಲ್ಲಿ
ಹರಿದ ತುತ್ತಿನ ಚೀಲಕೆ
ಪಾರುಪತ್ಯವಿಲ್ಲದೆ
ಪರದಾಡುತಿಹವು ….

ಓಡುತಿಹದುದು ಕಾಲ
ಎಲ್ಲ ಸಂಕಟವ ತುಂಬಿಕೊಂಡು
ಹೊಸ ಸಂದಿಗ್ಧ ತೆಯ ತಂದುಕೊಂಡು
ಶರವೇಗಧಿ ನಮ್ಮಗಳ
ವಸ್ಸನ್ನು ಹೊತ್ತುಕೊಂಡು ……

ಎತ್ತನೋಡಿದರು ಕೇಳುವರು
ಅನುಭವ ,ಹಣ ,ಪರಂಪರೆಯ ಗುರುತ
ಆದರೂ ನಮ್ಮಲ್ಲಿ ನಾವಿದ್ದೇವೆ ಎನ್ನು ತಲೆ
ಬರಿದಾಗುತ್ತಿದ್ದೆವೆ …..!
ದಿಕ್ಕು ದಿಕ್ಕುಗಳಲ್ಲಿ ವ್ಯಾಪಿಸಿರುವ
ಭ್ರಷ್ಟತೆಯ ಬಲಿಯನ್ನು ಕಂಡೂ
ಮುನ್ನುಗ್ಗುತ್ತೇವೆ ……

ದವಾಯಿಗೆ ಕಾಸಿಲ್ಲ
ಕನಸುಗಳಿಗೆ ಸಮಯವಿಲ್ಲ ….!
ಆದರೂ ನಮಗೆ ಕೆಲಸವಿಲ್ಲ ….
ಹೇಳುವದೇನು ಯುವ ಮನಗಳ
ತಲ್ಲಣ ಕೇಳುವರಿಲ್ಲ …..

ಸಾಮಾಜಿಕ ಪ್ರಜ್ಞೆ
ಬೌದ್ಧಿಕ ಅರಿವನ್ನು ನೀಡುವ ಬರಹಗಳು
ಇಗ ಪೈಪೋಟಿ ಗೆ ಬಿದ್ದು
ಪ್ರಕಟವಾಗುತ್ತಿವೆ
ನಿರುತ್ತರವಾಗಿ….
ಯುವ ಒಡಲಾಳದ
ಆಳ-ಅಗಲಕೂ
ಪ್ರತೀಕಾರದಿ ಕಿಚ್ಚನು,…
ಬಹುತ್ವ ಭಾತರದ ಹೆಸರ ಪಠಿಸುತಲಿ…..??

ಸರ್ ನಮಗೆ ಬೇಕಿಲ್ಲ
ಕೋಮುದಳ್ಳುರಿಯ ನಂಜು
ಓದಿ ಮನತುಂಬಿ ಕೊಳ್ಳಲು
ನಾವು ಬದ್ದರಿಲ್ಲ ……
ಓದುಗರೆಂದರೆ ಸುಮನೆ ಅಲ್ಲ .

ಸುಮ್ಮನೆ ಹಂಚುವದಾದರೆ
ಭಿತ್ತರಿಸಿ ವೈಜ್ಞಾನಿಕ ಹರಿವನು
ಶೂನ್ಯ ಸಂಪಾದನೆಯ
ಜ್ಞಾನವನ್ನು
ವಸಿ ಸುಧಾರಿಸುವ ನಾವು
ನಮ್ಮಲ್ಲರ ದಾರುಣಗಳ ದೂರವಿಟ್ಟು ……

ಬೆಳೆಯುವ ನಾವು ಬೌಧಿಕವಾಗಿ
ಬೆಳೆಸುವ ನಾವು ಎದೆಗೆ ಬಿದ್ದ ಅಕ್ಷರವನು
ಸಮಾನತೆಯ ಕೊಳದಲಿ‌ ಮಿಂದೆಳಿಸುವ


  • ರೇಶ್ಮಾಗುಳೇದಗುಡ್ಡಾಕರ್
0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW