ರಕ್ತದಾನದ ಮಹಾನ್ ಶಕ್ತಿ ಅಭಯಹಸ್ತ ಚಾರಿಟಬಲ್ ಟ್ರಸ್ಟ್



ಅಭಯಹಸ್ತ ಚಾರಿಟಬಲ್ ಟ್ರಸ್ಟ್ (ರಿ) ಉಡುಪಿ, ಎಷ್ಟೋ ಜೀವಗಳಿಗೆ ತುರ್ತು ಸಂದರ್ಭದಲ್ಲಿ ರಕ್ತ ನೀಡಿ ಜೀವ ಕಾಪಾಡಿದೆ. ಇದರ ಮುಂದಾಳತ್ವ ವಹಿಸಿರುವ ರಕ್ತದ ಆಪತ್ಭಾಂಧವ ಸತೀಶ್ ಸಾಲಿಯಾನ್ ಮಣಿಪಾಲ್ ಮತ್ತು ಅವರ ತಂಡದ ಕುರಿತು ರಾಘವೇಂದ್ರ ಕೆ ಅವರು ಬರೆದ ಲೇಖನವಿದು, ಈ ಮಹಾನ್ ಸಾಧಕನಿಗೆ ಆಕೃತಿಕನ್ನಡ ಸಲಾಂ ಹೇಳುತ್ತದೆ…

”ಅಭಯಹಸ್ತ ಚಾರಿಟಬಲ್ ಟ್ರಸ್ಟ್ (ರಿ) ಉಡುಪಿ. ನಿಮ್ಮ ರಕ್ತ ಸಂಗಾತಿ”.

ಈ ಆಧುನಿಕ ಯುಗದಲ್ಲಿ ಏನನ್ನು ಬೇಕಾದರೂ ನಕಲಿ ಮಾಡುವಷ್ಟು ಶಕ್ತರಿದ್ದಾರೆ. ಆದರೆ ನಮ್ಮ ದೇಹದಲ್ಲಿ ಹರಿಯುವ ರಕ್ತವನ್ನ ನಕಲಿಸಲು ಸಾಧ್ಯವಾಗಿಲ್ಲ ಹಾಗೂ ರಕ್ತಕ್ಕೆ ಪರ್ಯಾಯವಾಗಿ ಇನ್ನೂ ಏನನ್ನು ಸೃಷ್ಟಿಸಲು ಮಾನವನಿಂದ ಸಾಧ್ಯವಾಗಿಲ್ಲ. ಅಂತಹ ಪುಣ್ಯಕಾರ್ಯ ರಕ್ತದಾನ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ.

ಸಾಧನೆಯ ಸೇವೆಯಲ್ಲಿ ಎರಡು ವಿಧ :

  • ತನ್ನ ವೈಯುಕ್ತಿಕ ಏಳಿಗೆಯ ಸಾಧನೆ
  • ಸಮಾಜದ ಒಳಿತಿಗಾಗಿ ಮಾಡುವ ಸೇವೆ.

ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ನಮಗೆ ಸೇವೆ ಮಾಡುತ್ತಾ, ಅಳಿದ ಮೇಲೂ ಸಹ ಅವರ ನಿಸ್ವಾರ್ಥ ಸೇವೆ ಅವರಿಂದ ಬದುಕುಳಿದವರ ಮನಸ್ಸಿನಲ್ಲಿ ದೇವರಂತೆ ಬಿಂಬಿತವಾಗಿ ಅಜರಾಮರವಾಗಿ ಉಳಿದುಕೊಳ್ಳುವ ಸಮಾಜ ಸುಧಾರಕರು ಹಾಗೂ ಸಂಘ ಸಂಸ್ಥೆಗಳು ಕೆಲವೇ ಕೆಲವು ನಮಗೆ ಕಾಣಲು ಸಿಗುತ್ತವೆ. ಅಂತಹ ಸಾಲಿನಲ್ಲಿ ಸೇರಿಕೊಳ್ಳುವ ಉಡುಪಿ ಜಿಲ್ಲೆ ದಕ್ಷಿಣ ಕನ್ನಡ ಭಾಗದಲ್ಲಿ ಯಾರು ಊಹಿಸಲಾಗದ ರೀತಿಯಲ್ಲಿ ರಕ್ತದಾನ ಕ್ಷೇತ್ರದ ಮಹಾನ್ ಶಕ್ತಿ ಎಂದರೆ ಅಭಯ ಹಸ್ತ ಚಾರಿಟಬಲ್ ಟ್ರಸ್ಟ್ ರಿಜಿಸ್ಟ್ರರ್ ಉಡುಪಿ.

ಅಭಯ ಹಸ್ತ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು ಸತೀಶ್ ಸಾಲ್ಯಾನ್ ಮಣಿಪಾಲ್

2020 ರ ಕೊರೊನದ ಆರ್ಭಟದ ನಡುವೆ ಪ್ರತಿಯೊಬ್ಬರು ಸಹ ಹೊಸ್ತಿಲು ದಾಟಿ ಹೊರಬರಲು ಹೆದರುತ್ತಿದ್ದ ಸಮಯವದು. ಅಂತಹ ಸಂಧಿಗ್ದ ಸಮಯದಲ್ಲಿ ರಕ್ತದಾನದ ಕ್ರಾಂತಿ‌ ಪುರುಷ ನಾಡೋಜ‌‌ ಜಿ‌ ಶಂಕರ್ ಅವರ ಪ್ರೇರಣೆಯಿಂದ, ಮಾರ್ಚ್ 2020 ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ನಿತ್ಯ ತುರ್ತು ರಕ್ತದಾನಿಗಳ ಅನಿವಾರ್ಯತೆಯನ್ನು ಮನಗಂಡು ರಕ್ತದ ಅಪತ್ಭಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ಹಾಗೂ ರಾಜೇಶ್ ಮೆಂಡನ್ ಬೈಪಾಸ್ ಸಾರಥ್ಯದಲ್ಲಿ ಅಭಯಹಸ್ತ ಹೆಲ್ಪ್ ಲೈನ್ ಎಂಬ ವಾಟ್ಸಾಪ್ ಗ್ರೂಪ್ ಮೂಲಕ ಸೇವೆಗೆ ಇಳಿದು ನಂತರ 2021 ರಲ್ಲಿ ಅಭಯಹಸ್ತ ಚಾರಿಟಬಲ್ ಟ್ರಸ್ಟ್ ಎಂದು ಗುರುತಿಸಿಕೊಂಡಿತು.ಇದರ ಗೌರವ ಅಧ್ಯಕ್ಷರಾಗಿ ಯಶ್ ಪಾಲ್ ಸುವರ್ಣ ಹಾಗೂ ಅಧ್ಯಕ್ಹರಾಗಿ ರಾಜೇಶ್ ಶೆಟ್ಟಿ ಮುನಿಯಾಲು ಅವಿರೋಧ ಆಯ್ಕೆಯಾಗಿರುತ್ತಾರೆ…

This slideshow requires JavaScript.

ನಂತರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ನಿತ್ಯ ತುರ್ತು ರಕ್ತದಾನಿಗಳ ಪೂರೈಕೆಯಲ್ಲಿ ಕಳೆದ ಎರಡು ವರ್ಷದಲ್ಲಿ ಉಡುಪಿ ಜಿಲ್ಯಾದ್ಯಂತ ರಕ್ತದಾನ ಕ್ಷೇತ್ರದಲ್ಲಿ ಕ್ರಾಂತಿಯನ್ನು ಹುಟ್ಟುಹಾಕಿ ಉಡುಪಿ, ಮಣಿಪಾಲ ಹಾಗೂ ಕುಂದಾಪುರ ಹಾಗೂ ಕಾರ್ಕಳ ವಿಭಾಗದ ಎಲ್ಲಾ ಆಸ್ಪತ್ರೆಗಳಿಗೆ ಸೂಕ್ತ ಸಂದರ್ಭದಲ್ಲಿ ಯಾವುದೇ ಜಾತಿ,ಮತ ಧರ್ಮಗಳ ಭೇದವಿಲ್ಲದೆ ರಕ್ತದ ವ್ಯವಸ್ಥೆಯನ್ನು ಮಾಡಿ ತನ್ನದೇ ಆದ ಚಾಪನ್ನು ಮೂಡಿಸಸಿರುವ ಅಭಯಹಸ್ತ ಸಂಸ್ಥೆ ಇದೀಗ ಜನರ ಸಹಕಾರದೊಂದಿಗೆ 2ನೇ ವರ್ಷಕ್ಕೆ ದಾಪುಗಾಲಿಟ್ಟಿದೆ. ಈಗಾಗಲೇ ರಕ್ತದಾನ ಕ್ಷೇತ್ರದಲ್ಲಿ ತನ್ನದೇ ಆದ ದಾಖಲೆಯನ್ನು ಮಾಡಿದ್ದು, ಇದುವರೆಗೆ ಉಡುಪಿ, ದಕ್ಷಿಣ ಕನ್ನಡಜಿಲ್ಲೆಯಾದ್ಯಂತಹ ವಿವಿಧ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ 90 ಕ್ಕೂ ಅಧಿಕ ಸ್ವಯಂಪ್ರೇರಿತ ರಕ್ತದಾನ‌ ಶಿಬಿರದ ಆಯೋಜನೆ  ಮಾಡಲಾಗಿದೆ. ಹಾಗೂ 1500ಕ್ಕೂ ಅಧಿಕ ನಿತ್ಯ ತುರ್ತು ರಕ್ತದಾನಿಗಳನ್ನು ಉಡುಪಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಿದೆ. ಕೇವಲ 2 ವರ್ಷಗಳಲ್ಲಿ ಹತ್ತು ಸಾವಿರ ಯೂನಿಟ್ ರಕ್ತದ ಅವಶ್ಯಕತೆಯನ್ನು ಉಡುಪಿ ದ.ಕ ಜಿಲ್ಲೆಯ ಆಸ್ಪತ್ರೆಗಳಿಗೆ ಪೂರೈಸಿ ಇಹಲೋಕದೆಡೆಗೆ ಸಾಗುತ್ತಿದ್ದ ಅದೆಷ್ಟೋ ಜೀವಗಳನ್ನ ಬದುಕಿಸಿದ ಕೀರ್ತಿ ಈ ಟ್ರಸ್ಟ್ ಗೆ ಸಲ್ಲುತ್ತದೆ.

ಇದರ ಮುಂದಾಳತ್ವ ವಹಿಸಿರುವ ರಕ್ತದ ಆಪತ್ಭಾಂಧವ ಸತೀಶ್ ಸಾಲಿಯಾನ್ ಮಣಿಪಾಲ್ ಇವರ ಶ್ರಮ ಹಾಗೂ ನಿಸ್ವಾರ್ಥ ಸೇವೆ, ಅವರ ತಂಡದವರ ಸಹಕಾರ ಹಾಗೂ ಜಿಲ್ಲೆಯ ರಕ್ತದಾನಿ ದೇವರುಗಳ ಸಮ್ಮಿಲನದಿಂದ ಮಾತ್ರ ಇಂತಹ ಒಂದು ಸಾಧನೆ ಸಾಧ್ಯ. ಇವರ ಸೇವೆಗೆ ಶಿರಭಾಗಿ ನಮಿಸುತ್ತಾ ಭಗವಂತ ಇನ್ನಷ್ಟು ಜೀವಗಳಿಗೆ ಮಿಡಿಯುವ ಶಕ್ತಿಯನ್ನ ಕರುಣಿಸಲಿ ಎಂದು ಪ್ರಾರ್ಥಿಸೋಣ.

ಇವರ ಸಾಧನೆಯನ್ನು ಗುರುತಿಸಿ ರಾಜ್ಯದ ಅತ್ಯಂತ ಪ್ರತಿಷ್ಠಿತ ಯುನಿವರ್ಸಿಟಿಗಳಲ್ಲಿ ಒಂದಾದ ಮಣಿಪಾಲ್ ಯೂನಿವರ್ಸಿಟಿ ಅತೀಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವ ಸಂಘಟನೆಗಳಿಗೆ ಕೊಡುವ ಡಾ.ಸತೀಶ್ ಶೆಟ್ಟಿ ಚರಿಟಬಲ್ ಟ್ರಸ್ಟ್ (ರಿ) ಮಣಿಪಾಲ್ ಇವರ ಪ್ರತಿಷ್ಠಿತ ಸನ್ಮಾನವನ್ನು ಅಭಯಹಸ್ತ ಸಂಸ್ಥೆ ತನ್ನದಾಗಿಸಿಕೊಂಡಿದೆ. ಹಾಗೂ ಅಕ್ಟೋಬರ್ 1 2021 ರಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚಾರಣೆಯ ಅಂಗವಾಗಿ ಆರೋಗ್ಯ ಇಲಾಖೆ ಕರ್ನಾಟಕ ಹಮ್ಮಿಕೊಂಡ ಪ್ಯಾಲೇಸ್ ರೋಡ್ ಬೆಂಗಳೂರಿನಲ್ಲಿ ನೆಡೆದ ವರ್ಣರಂಜಿತ ಸಮಾರಂಭದಲ್ಲಿ ರಕ್ತನೀಡಿ ಜಗತ್ತುಗೆಲ್ಲಿಸಿ ಪ್ರೇರಣೆಯೊಂದಿಗೆ ರಾಜ್ಯದಲ್ಲಿ ಅತೀ ಹೆಚ್ಚು ಸ್ವಯಂ ಪ್ರೇರಿತ ರಕ್ತನಾದ ಶಿಬಿರಗಳನ್ನು ಆಯೋಜನೆ ಮಾಡಿದ ಸಂಸ್ಥೆಗೆ ನೀಡು ಪ್ರತಿಷ್ಠಿತ ಪುರಸ್ಕಾರವನ್ನು ಅಭಯಹಸ್ತ ಸಂಸ್ಥೆ ತನ್ನ ಮುಡಿಗೇರಿಸಿಕೊಂಡಿದೆ.

ಈ ನಡುವೆ ಸುಮಾರು ಒಂದು ವರ್ಷಗಳ ಕಾಲ ಯಾವುದೇ ಸಂಘ ಸಂಸ್ಥೆಗಳಿಂದ ದೇಣಿಗೆಯನ್ನು ಪಡೆಯದೆ ಸ್ವಂತ ಖರ್ಚಿನಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದ ಹೆಮ್ಮೆಯ ಅಭಯಹಸ್ತ ಸಂಸ್ಥೆ ನಂತರ ಕಳೆದ ಆಗಸ್ಟ್ 2021 ರಲ್ಲಿ ಅಭಯಹಸ್ತ ಚರಿಟಬಲ್ ಟ್ರಸ್ಟನ್ನು ಹುಟ್ಟುಹಾಕಿ ದಾನಿಗಳ ಸಹಕಾರದೊಂದಿಗೆ ಸಂಸ್ಥೆಯ ನಿತ್ಯ ನಿರಂತರ ಸೇವೆಯನ್ನು ಇಮ್ಮಡಿಗೊಳಿಸಿಕೊಂಡು ಬಂದಿದ್ದಾರೆ.

ಈ ಸಂಸ್ಥೆಯ ಸೇವೆಗೆ ಶಿರಭಾಗಿ ನಮಿಸುತ್ತಾ ಭಗವಂತ ಇನ್ನಷ್ಟು ಜೀವಗಳಿಗೆ ಮಿಡಿಯುವ ಶಕ್ತಿಯನ್ನ ಕರುಣಿಸಲಿ ಎಂದು ಪ್ರಾರ್ಥಿಸೋಣ.


  • ರಾಘವೇಂದ್ರ ಕೆ (ಸಮಾಜ ಸೇವಕರು, Kannadigana Creations ಸಂಸ್ಥಾಪಕರು, ಹವ್ಯಾಸಿ ಬರಹಗಾರರು) ನೊಣಬೂರು

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW