ದಂತರಹಿತ ಆಫ್ರಿಕನ್ ಎಲಿಫಂಟ್ಸ್ – ಗಿರಿಜಾ ಹೆಗ್ಡೆ



ದಂತಗಳೇ ಇಲ್ಲದ ಮೇಲೆ ಕೊಂದು ಏನು ಮಾಡುತ್ತೀರಿ?…ಮಾನವೀಯತೆ ಮರೆಯದಿರಿ …ಎನ್ನುವ ಸಂದೇಶದ ಜೊತೆಗೆ ಗಿರಿಜಾ ಹೆಗ್ಡೆ ಅವರ ಒಂದು ಪುಟ್ಟ ಲೇಖನ.ಮುಂದೆ ಓದಿ…

ಆನೆಗಳನ್ನು ಕೊಂದು, ದಂತ ಕಡಿದು ಸಾಗಿಸುವ ಆಫ್ರಿಕಾದ ಕಳ್ಳರಿಗೆ, ಪ್ರಕೃತಿಯೇ ಪಾಠ ಹೇಳಹೊರಟಿದೆ. ಅಲ್ಲಿ ಮೂವತ್ತು ವರ್ಷದಿಂದೀಚೆ ಹುಟ್ಟಿದ ಬಹಳಷ್ಟು ಆನೆಗಳು, ದಂತಗಳೇ ಇಲ್ಲದೆ ಹುಟ್ಟುತ್ತಿವೆಯಂತೆ ; ಈ ಮೂಲಕವಾದರೂ ತನ್ನ ಮಕ್ಕಳು ಸುರಕ್ಷಿತವಾಗಿರಲಿ ಎಂದು ಪ್ರಕೃತಿಯೇ ನಿರ್ಧರಿಸಿದಂತೆ.

ಫೋಟೋ ಕೃಪೆ : .ifaw.org

ಪರಿಸರದ ಅಸಮತೋಲನದ ಸಮಸ್ಯೆಯೊಂದನ್ನು, #ಪ್ರಕೃತಿ, ಜೆನೆಟಿಕ್ ಎಂಜಿನೀಯರಿಂಗ್ ಆಗಿ ಬದಲಾಯಿಸಿಕೊಂಡು, ಸಂತತಿ ಮುಂದುವರಿಯಲು ನಿರ್ಧರಿಸಿದ ಅಪರೂಪದ ಸೋಜಿಗವಿದು!

ಮಣ್ಣನ್ನು ಅಗೆಯಲು, ಗಡ್ಡೆಗೆಣಸುಗಳನ್ನು ಬಗೆಯಲು, ಮರದ ಕಾಂಡಗಳನ್ನು ಮುರಿಯಲು, ತನ್ನ ರಕ್ಷಣೆ ಮಾಡಿಕೊಳ್ಳಲು ಅಸ್ತ್ರದಂತಿರುವ ದಂತಗಳೇ ಇಲ್ಲದೇ ನಿ:ಶಸ್ತ್ರವಾದ ಅವು ಬದುಕುವುದು ಹೇಗೋ ಏನೋ? ಇರಲಿ…ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರ!

ದಂತಗಳಿಲ್ಲದ ಆನೆಗಳನ್ನು ಹುಟ್ಟಿಸಿದ ಅದೇ ದೇವರೇ, ಕ್ರೌರ್ಯವಿಲ್ಲದ ಮನುಷ್ಯರನ್ನು ಯಾಕೆ ಹುಟ್ಚಿಸುತ್ತಿಲ್ಲವೋ ಕಾಣೆ! ಜೆನೆಟಿಕ್ ಎಂಜಿನೀಯರಿಂಗ್ ಗೂ ಮೀರಿದ್ದಿರಬೇಕು ಮಾನವ ಕ್ರೌರ್ಯ!

  • ಗಿರಿಜಾ ಹೆಗ್ಡೆ (ಲೇಖಕರು) ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading