ಅನಿತಾರವರನ್ನು ಕೈ ಹಿಡಿದ ‘ಕನ್ನಡ’



ಅನಿತಾ ಮೂಲತಃ ಮರಾಠಿಗರು. ಆದರೆ ತಮ್ಮ ಆರ್ಥಿಕತೆಯನ್ನು ಸುಧಾರಿಸಲು ಸ್ವಂತ ಟುಟೋರಿಯಲ್ ತೆರೆಯುತ್ತಾರೆ. ಅದರ ವಿಶೇಷತೆಯೇನೆಂದರೆ ಕನ್ನಡ ಬಾರದ ಮಕ್ಕಳಿಗೆ ಕನ್ನಡ ಪಾಠ ಮಾಡುತ್ತಾರೆ. ಇದರಿಂದ ಅವರು ಉತ್ತಮ ಗಳಿಕೆ ಶುರುವಾಗುತ್ತದೆ. ಕನ್ನಡ ಭಾಷೆ ಅವರ ಕೈ ಹಿಡಿದ ಕತೆಯನ್ನು ಲೇಖಕ ರಘುರಾಂ ಅವರು ಲೇಖನದ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…

”ನೀವು ಪ್ರೀತಿಸುವ ಕೆಲಸವನ್ನು ಆಯ್ಕೆ ಮಾಡಿಕೊಳ್ಳಿ, ಆಗ ಒಂದು ದಿವಸವೂ ನಿಮ್ಮ ಜೀವನದಲ್ಲಿ ಕೆಲಸ ಮಾಡುವ ಅವಶ್ಯಕತೆ ಇರುವುದಿಲ್ಲ- ಕನ್ಫ್ಯೂಶಿಯಸ್.”

#ಖಾನಾಪುರ, #ಮಹಾರಾಷ್ಟ್ರ ಮತ್ತು #ಕರ್ನಾಟಕದ ಗಡಿ ಪ್ರದೇಶ. ಹಾಗಾಗಿ ಅಲ್ಲಿ ಮರಾಠಿ ಮತ್ತು ಕನ್ನಡ ಮಾತನಾಡುವ ಜನರು ಇದ್ದಾರೆ. ಮರಾಠಿ ಜನರ ಮಕ್ಕಳು ಮರಾಠಿ ಮಾತನಾಡಿದರೂ ಅಲ್ಲಿನ ಆಡಳಿತ ಭಾಷೆ ಕನ್ನಡ ಆಗಿರುವುದರಿಂದ ಅವರಿಗೆ ಕನ್ನಡ ಕಲಿಯುವ ಅವಶ್ಯಕತೆ ಇದೆ. ಇಂತಹ ಪ್ರದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಶ್ರೀಮತಿ ಅನಿತಾರವರು ಅಲ್ಲಿನ ಮಕ್ಕಳಿಗೆ ಕನ್ನಡ ಕಲಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಶ್ರೀಮತಿ ಅನಿತಾರವರು ಮೂಲತಃ ಮರಾಠಿಗರು. ಆದರೂ ಅವರಿಗೆ ಕನ್ನಡ ಕಲಿತ್ತಿದ್ದರು. ಅವರ ಮನೆಯವರು ಮರಾಠಿ ಉಪನ್ಯಾಸಕರು. ಅಲ್ಲಿಯ ಮಕ್ಕಳ ಅವಶ್ಯಕತೆಗೆ ಅನುಗುಣವಾಗಿ ಕನ್ನಡ ಟುಟೋರಿಯಲ್ ಒಂದನ್ನು ನಡೆಸುವ ಯೋಚನೆ ಮಾಡುತ್ತಾರೆ. ಅದು ಅವರ ಮನೆಯವರಿಗೂ ಸಹಾಯ ಮಾಡಿದಂತೆ ಆಗುತ್ತದೆ ಎಂಬ ಯೋಚನೆ ಮಾಡಿರುತ್ತಾರೆ. ತಮ್ಮ ಮನೆಯ ಟೇರೆಸ್ನಲ್ಲಿ ರೂ.50,000/- ಸ್ವತಃ ದುಡ್ಡು ಖರ್ಚುಮಾಡಿ ನವೀಕರಣ ಮಾಡಿಸಿ, 2010ರಲ್ಲಿ ಪ್ರಾರಂಭ ಮಾಡುತ್ತಾರೆ.



ಅವರು 2013ರಲ್ಲಿ #ಮಹಿಳಾ_ಉದ್ಯಮಿ_ಸಂಸ್ಥೆಯವರು ನಡೆಸುವ ಉದ್ಯಮಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದು ತಮ್ಮ ಟುಟೋರಿಯಲ್ ನ್ನು ನೊಂದಣಿ ಮಾಡಿಸಿ ಪರವಾನಿಗೆ ಪಡೆಯುತ್ತಾರೆ. ಅವರು ಒಳ್ಳೆಯ ರೀತಿಯಲ್ಲಿ ಕಲಿಸುವ ಪಾಠ ಒಬ್ಬರಿಂದ ಇನ್ನೊಬ್ಬರಿಗೆ ಬಾಯಿ ಮಾತಿನಲ್ಲಿ ಹರಡುತ್ತದೆ. ಇನ್ನು ಹೆಚ್ಚಿನ ರೀತಿಯಲ್ಲಿ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಹಾಯಕ್ಕೆ ಮನವಿ ಮಾಡಿದಾಗ, ಅವರಿಗೆ ಮೂರು ತಿಂಗಳ ಅವಧಿಗೆ ಕೋರ್ಸ್ ಮಾಡಲು ಸಹಾಯ ಮತ್ತು ರೂ.15,000/- ಸ್ಟೈಫಂಡ್ ಕೊಡುತ್ತಾರೆ.

ಇವರು ಕನ್ನಡ ಶಾಲೆಯನ್ನು ನಿಸ್ವಾರ್ಥ ಭಾವದಿಂದ ನಡೆಸುತ್ತಾ ಕನ್ನಡ ಸೇವೆ ಮಾಡುವ ಬಗೆ ನಿಜವಾಗಲೂ ಶ್ಲಾಘನೀಯ ಮತ್ತು ಅನುಕರಣೀಯ. ಬನ್ನಿ ನಾವೆಲ್ಲಾ ಶ್ರೀಮತಿ ಅನಿತಾರಂತಹವರ ಜೊತೆಗೊಡಿ ಕನ್ನಡದ ಸೇವೆ ಮಾಡೋಣ.

(ಫೋಟೋ ಕೃಪೆ : ಮಹಿಳಾ ಉದ್ಯಮಿಗಳ ಸಂಸ್ಥೆ)


  • ಎನ್.ವಿ.ರಘುರಾಂ (ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading