ಕೃಷಿಕರ ಒಡನಾಡಿ ಅಲೆಮಾರಿ ಕಮ್ಮಾರರು – ಟಿ. ಶಿವಕುಮಾರ್

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಪ್ರದೇಶಗಳಲ್ಲಿ ಈಗ ಅಲೆಮಾರಿ ಕಮ್ಮಾರರ ಸಾಮ್ರಾಜ್ಯವಾಗಿದೆ. ದೂರದ ಮಹಾರಾಷ್ಟ್ರ ರಾಜ್ಯದ ಔರಂಗಬಾದ್‍ನಿಂದ ಬಂದ ಹತ್ತಾರು ಅಲೆಮಾರಿ ಕುಟುಂಬಗಳು ಈ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರ ಬದುಕಿನ ಕುರಿತು ಲೇಖಕ ಟಿ. ಶಿವಕುಮಾರ್ ಅವರು ಬರೆದ ಲೇಖನ ತಪ್ಪದೆ ಓದಿ…

ಸಾಮಾನ್ಯವಾಗಿ ಮಳೆ ಬಿದ್ದ ತಕ್ಷಣ ರೈತರ ಕೃಷಿ ಚಟುವಟಿಕೆಗಳು ಪ್ರಾರಂಭ ಆ ಸಮಯದಲ್ಲಿ ಕೃಷಿ ಪ್ರದೇಶಗಳನ್ನು ಹುಡುಕಿಕೊಂಡು ವಲಸೆ ಬರುವ ಇವರು ಕೃಷಿ ಕಾರ್ಮಿಕರ ಸಲಕರಣೆಗಳನ್ನು ತಯಾರಿಸುವಲ್ಲಿ ನಿರತರಾಗುತ್ತಾರೆ. ಇವರು ಮಾಡಿದ ಕೃಷಿ ಉಪಕರಣ ಕೊಳ್ಳಲು ಅಕ್ಕ ಪಕ್ಕದ ರೈತರು ಮುಗಿಬೀಳುತ್ತಾರೆ. ಅಗಾ ಒಂದು ರೀತಿ ಕೃಷಿ ಮೇಳದಂತೆ ಕಾಣುತ್ತದೆ. ಕೆಲ ರೈತರು ಹೂಸ ಸಲಕರಣೆಗಳನ್ನು ಕೊಂಡರೆ ಇನ್ನು ಕೆಲ ರೈತರು ಹಳೆಯ ಕಬ್ಬಿಣವನು(ವಾಹನಗಳ ಬ್ಲೇಡ್‍ಸೆಟ್) ಕೊಟ್ಟು ತಮಗೆ ಬೇಕಾದ ಸಲಕರಣೆಗಳನ್ನು ಮಾಡಿಸಿಕೊಳ್ಳುತ್ತಾರೆ.

ಕೆಲ ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಕಮ್ಮಾರಿಕೆ,ಬಡಗಿತನ,ಚಮ್ಮಾರಿಕೆ ಹೀಗೆ ಹಲವು ಕಸಬುಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದರು. ಮತ್ತು ತಮ್ಮ ಮೂಲ ಸ್ಥಾನದಲ್ಲಿ ಇದ್ದು ಕೊಂಡು ಸುಖಮಯ ಜೀವನ ಸಾಗಿಸುತ್ತಿದ್ದರು. ಈ ಕಸುಬನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಜನರಿಗೆ ರೈತರು ತಾವು ಬೆಳೆದ ಬೆಳೆಯಲ್ಲಿ ಸ್ವಲ್ಪಪಾಲು ನೀಡುತ್ತಿದ್ದರು.ಇದರಿಂದ ಆ ಕಸುಬನ್ನು ಮಾಡುತ್ತಿದ್ದ ಜನರು ಸುಖಮಯ ಜೀವನ ಸಾಗಿಸುತ್ತಿದ್ದರು.ಆದರೆ ಇಂದಿನ ಆಧುನಿಕ ಯಾಂತ್ರಿಕ ಬದುಕಿನಲ್ಲಿ ನಾವು ಪ್ರತಿಯೊಂದು ಕೆಲಸಕ್ಕೂ ಯಂತ್ರಗಳನ್ನು ನಂಬಿಕೊಂಡಿದ್ದೇವೆ. ಕಮ್ಮಾರಿಕೆಯಂತಹ ಕೆಲಸವನ್ನು ನಂಬಿಕೊಂಡು ಬದುಕುತ್ತಿದ್ದ ಜನ ಬೇರೆ ಬೇರೆ ಉದೋಗವನ್ನು ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ. ಈಗಾಗಿ ಹಳ್ಳಿಯ ರೈತರು ಕೃಷಿ ಉಪಕರಣಗಳನ್ನು ತಯಾರಿಸಿಕೊಳ್ಳಲು ದೂರದ ಪಟ್ಟಣಗಳಿಗೆ ಅಲೆಯುವಂತಾಗಿದೆ. ಇಂತಹ ಸಂದರ್ಭಗಳಲ್ಲಿ ಕುದುರೆಗಾಡಿಗಳ ಮೇಲೆ ಗಾಳಿಯಂತ್ರ, ದೊಡ್ಡ ದೊಡ್ಡ ಸುತ್ತಿಗೆಗಳು, ಪಾತ್ರೆ-ಪಗಡೆಗಳು,ಇತ್ಯಾದಿಗಳನ್ನು

ಹೇರಿಕೊಂಡು ಊರಿಂದ ಊರಿಗೆ ಅಲೆಯುವ ಇವರು ಕಮ್ಮಾರಿಕೆಯನ್ನು ನಂಬಿಕೊಂಡು ಪಟ್ಟಣ ಹಳ್ಳಿಗಳಲ್ಲಿ ಕೆಲ ತಾಸುಗಳಲ್ಲಿ ರೈತರಿಗೆ ಬೇಕಾದ ಕಂದೀಲು, ಗುದ್ದಲಿ, ಪಿಕಾಸಿ, ಕೊಡಲಿ, ರಂಟೆ, ಕುಂಟೆ, ಕೂರಿಗೆ, ಕುರ್ಚಿಗೆ ಇಷ್ಟೇ ಅಲ್ಲಾ ಚಕ್ಕಡಿಗೆ ಬೇಕಾದ ಹಳಿ ಹಾಕುವುದರಿಂದ ಹಿಡಿದು ಇತರೆ ಸಲಕರಣೆಗಳನ್ನು ತಯಾರಿಸಿಕೊಟ್ಟು ಮತ್ತೇ ಮುಂದಿನ ಊರಿಗೆ ಪ್ರಯಾಣಿಸುತ್ತಾರೆ.

ಈ ಅಲೆಮಾರಿ ಕುಟುಂಬದ ಪುರುಷರು ಕುಲುಮೆಯಲ್ಲಿ ಹದಗೊಳಿಸಿದರೆ, ಮಹಿಳೆಯರು ಕಾಯಿಸಿ ಹದಗೊಳಿಸಿದ ಕಬ್ಬಿಣಕ್ಕೆ ದೊಡ್ಡ ಸುತ್ತಿಗೆಯಿಂದ ಏಟು ಹಾಕುತ್ತಾರೆ. ನೆತ್ತಿಯ ಮೇಲೆ ಸುಡು ಬಿಸಿಲಿನ ಜೊತೆಗೆ ಆಗಾಗ ತುಂತುರು ಮಳೆ ಹನಿ, ಎದುರಿಗಿರುವ ಕುಲುಮೆಯ ಬೆಂಕಿಯ ಜ್ವಾಲೆಯ ಚುರುಕು, ಪೆಟ್ಟು ಹಾಕುವ ಹೆಂಗಳೆಯರಿಗೆ ಬಳಲಿಕೆ ಎನ್ನುವುದೇ ಇರುವುದಿಲ್ಲ. ತಮ್ಮ ಜೊತೆಯಲ್ಲಿ ಬಂದ ಮಕ್ಕಳಿಗೆ ಮನೆಮನೆ ತಿರುಗಿ ಇದ್ದಿಲು ತರುವ ಕಾಯಕ ಮತ್ತು ಗಾಳಿ ಯಂತ್ರ ತಿರುಗಿಸುವ ಕೆಲಸ. ಈ ಕುಲುಮೆಯ ನೆರಳಲ್ಲಿ, ಕುಲುಮೆಯ ಬಿಸಿಯಲ್ಲಿ ಬೆಳೆಯುತ್ತಿರುವ ಹಸುಗೂಸುಗಳು. ಇದು ಈ ಅಲೆಮಾರಿ ಕುಟುಂಬಗಳ ದೈನಂದಿನ ಬದುಕಿನ ಚಿತ್ರ.

ಈ ಅಲೆಮಾರಿಗಳು ಮೂಲತಃ ಮಹಾರಾಷ್ಟ್ರದವರಾದರು ಮರಾಠಿ ಭಾಷೆಯ ಜೊತೆಗೆ ಅಲ್ವ ಸ್ಪಲ್ಪ ಕನ್ನಡವನ್ನು ಮಾತಾನಾಡುತ್ತಾರೆ. ದಿನವೊಂದಕ್ಕೆ 200 ರಿಂದ 500 ರೂಗಳವರೆಗೆ ಸಂಪಾದಿಸುವ ಇವರು ಅದರಲ್ಲಿ ಸ್ವಲ್ಪ ಹಣ ಇದ್ದಿಲಿಗೆ ಖರ್ಚು ಮಾಡಿದರೆ. ಇನ್ನು ಸ್ವಲ್ಪ ಹಣ ಇವರ ದಿನನಿತ್ಯ ಕುಡಿತಕ್ಕೆ ಹೋಗುತ್ತದೆ. ಶ್ರಮಕ್ಕೆ ತಕ್ಕ ಹಣ ಬಂದರೂ ಹರುಕು ಜೋಪಡಿ ನೆಲವೇ ಹಾಸಿಗೆ ನಿಲ್ಲುವುದಕ್ಕೆ ಸರಿಯಾದ ನೆಲೆಯಿಲ್ಲ ಮಳೆ ಬಿಸಿಲಿನಲ್ಲಿ ಕಷ್ಟಪಡಬೇಕಾಗುತ್ತದೆ. ಕಮ್ಮಾರಿಕೆಯನ್ನು ನಂಬಿಕೊಂಡು ಒಂದೂರಿನಿಂದ ಮತ್ತೋಂದೂರಿಗೆ ಅಲೆಯುವುದರಿಂದ ಶಿಕ್ಷಣದಿಂದಲೂ ದೂರ ಉಳಿಯುವಂತಾಗಿದೆ.

ಈ ಅಲೆಮಾರಿಗಳು ಈ ಉದ್ಯೋಗದೊಂದಿಗೆ ನಾಡ ತುಂಬಾ ಓಡಾಡುತ್ತಿರುವ ಇವರು ತಮ್ಮ ಕುಟುಂಬದ ಸದಸ್ಯರನ್ನು ಕಾಣುವುದು 7-8 ತಿಂಗಳಿಗೊಮ್ಮೆ. ಸ್ತ್ರಿ, ಪುರುಷ, ಮಕ್ಕಳೆನ್ನದೆ ದೈಹಿಕ ಶ್ರಮವನ್ನು ನೆಚ್ಚಿಕೊಂಡು ಬದುಕುತ್ತಿರುವ ಅಲೆಮಾರಿ ಕಮ್ಮಾರರು ಕೃಷಿಕರ ಒಡನಾಡಿಗಳು, ನಶಿಸುತ್ತಿರುವ ಕಮ್ಮಾರಿಕೆಯಿಂದ ಇವರ ಕುಲುಮೆಗಳು ಆಪಾರ ಬೇಡಿಕೆ ಇದ್ದರೂ ಒಂದೆಡೆ ನಿಂತು ಬದುಕುವಷ್ಟು ಆದಾಯವಿಲ್ಲ!


  • ಟಿ. ಶಿವಕುಮಾರ್ (ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ) ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW