ಒಂದು ಅವಕಾಶವ ಕೊಡು ನಿನ್ನನ್ನು ಮಗುವಂತೆ ನೋಡಿಕೊಳ್ಳುವೆ ಪ್ರತಿ ಕ್ಷಣವ… ತಾಯಿಗಾಗಿ ಯುವಕವಿ ವಿಕಾಸ್. ಫ್. ಮಡಿವಾಳರ ಅವರು ಬರೆದ ಪ್ರೇಮಭರಿತ ಕವಿತೆಯ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಅಮ್ಮ ನೀ ನನ್ನ ದೇವರು…
ನಿನ್ನ ಕರುಳಿನ ಕುಡಿಯು ನಾ
ನಿನ್ನ ಮಡಿಲಿನ ನಗುವು ನಾ
ನಿನ್ನ ಪ್ರೀತಿಗೆ ಪುನೀತಳು ನಾ
ನೀ ನನ್ನ ದೇವರು..
ನಿನ್ನ ಎದೆಯಲಿ ಬೆಚ್ಚಗೆ ಮಲಗಿ ಬೆಳೆದವಳು ನಾನು.
ಏನೆ ಕಷ್ಟ ಬಂದರು ಕೈ ಹಿಡಿದು ಜೊತೆಯಾಗಿ ನಡೆದೆ ನೀನು.
ಪುಟ್ಟ ಪುಟ್ಟ ಹೆಜ್ಜೆ ಇಡುವಾಗ ನೋಡಿ ನಗೆ ಬೀರಿದ್ದೆ.
ಎಡುವಿದಾಗೊಮ್ಮೆ ನಾ ನಿನ್ನ ಹೆಸರನ್ನೆ ಕೂಗಿದ್ದೆ.
ತಪ್ಪು ಮಾಡಿದಾಗೊಮ್ಮೆ ನೀ ಕೊಟ್ಟ ಏಟನ್ನು ಹೇಗೆ ಮರಿಯಲಿ.
ನನಗು ಗೊತ್ತು ನಾ ಅತ್ತಾಗ ನೀನು ಅಳುತಿದ್ದೆ ಮರೆಯಲ್ಲಿ.
ಬೇಸರವಾದಾಗೆಲ್ಲ ಜೊತೆಗಿದ್ದೆ ಗೆಳತಿಯಂತೆ.
ನಿನ್ನ ಪಡೆದ ನಾನೇ ಪುಣ್ಯವಂತೆ.
ಮನಬಿಚ್ಚಿ ಕೇಳುವೆನು ಕೊಡು ಒಂದು ಅವಕಾಶವ.
ಮಗುವಂತೆ ನೋಡಿಕೊಳ್ಳುವೆ ನಿನ್ನ ಪ್ರತಿ ಕ್ಷಣವ.
ಋಣವ ತೀರಿಸಲಾರೆ ಒಂದೆ ಜನ್ಮದಲ್ಲಿ.
ಎಂದೆಂದೂ ಋಣಿಯಗಿರುವೆ ನನ್ನ ಕೊನೆ ಉಸಿರಲ್ಲಿ.
ಇಂತಿ ನಿಮ್ಮ ಪ್ರೀತಿಯ
- ವಿಕಾಸ್. ಫ್. ಮಡಿವಾಳರ