ಅಂದು ಹಾಗೂ ಇಂದು…

ಹಿಂದಿನ ಕಾಲದ ಜೀವನ ಹಾಗೂ ಇಂದಿನ ಜೀವನ ಬದುಕಿಗೂ ಸಾಕಷ್ಟು ಅಂತರವಿದೆ. ಪ್ರೀತಿ  ಭರತ್ ಜವಳಿ ಅವರ ಲೇಖನಿಯಲ್ಲಿ ಅಂದು ಹಾಗೂ ಇಂದಿನ ಬದುಕಿನ ಕಿರು ಚಿಂತನೆಯನ್ನು ತಪ್ಪದೆ ಮುಂದೆ ಓದಿ…

ಹಳೆ ಕಾಲದ ಜನರು ನಮ್ಮ ಕಾಲ ಚೆನ್ನಾಗಿ ಇತ್ತು ಎಂದು ಹಲವಾರು ಬಾರಿ ಹೇಳುವರು. ಅದು ಇಂದಿನ ಯುವಕರಿಗೆ, ಮಂದಿಗೆ ಹಾಸ್ಯಸ್ಪದ ಅನಿಸುತ್ತೆ. ಆದ್ರೆ old is gold ಮಾತು ಚೆನ್ನಾಗಿ ಇದೆ. ಅದೇ ತರಹ ಹಳೇ ಕಾಲದ ಜೀವನ ಚೆಂದ ಎಂದು ಹಿರಿಯರು ಹೇಳುವರು. ಅಂದು ಜೀವನ ರಸಮಯವಾಗಿತ್ತು. ಸಣ್ಣ ಸಣ್ಣ ವಿಷಯ ವಿಚಾರದಲ್ಲಿ ಬ್ರಹ್ಮಾಂಡ ಆನಂದವಿತ್ತು.  ಕಾಲು ನೆಡಿಗೆ, ಉತ್ತಮ ಆಹಾರ, ಉತ್ತಮ  ಅರೋಗ್ಯ ಜೀವನ ಶೈಲಿಯಾಗಿತ್ತು. ಶಿಸ್ತಿನ ಬದುಕು ಅವರದಾಗಿತ್ತು. ಅವಿಭಕ್ತ ಕುಟುಂಬ ಸಾಮಾನ್ಯ ಆಗಿತ್ತು. ಬೇಸಾಯ ಮುಖ್ಯ ಕೆಲಸ ಆಗಿತ್ತು. ಅವ್ರಿಗೆ ಬಾಂಧವ್ಯ ಭಾವ ಬಂಧನ ಬೆಸುಗೆ ಬಹಳ ಗಟ್ಟಿ ಗೊಂದಿನಂತೆ ಅಂಟಿಕೊಂಡು ಇತ್ತು.

ಆದ್ರೆ ಇಂದು ಕೂಡು ಕುಟುಂಬ ಹೆಚ್ಚು ಮಾಯಾ. ನುಕ್ಲಿಯರ್ ಫ್ಯಾಮಿಲಿ ಟ್ರೆಂಡ್ ಇದೆ. ಮುಂದೆ ಆಟೋಮಿಕ್ ಫ್ಯಾಮಿಲಿ ಬರಬಹುದು. ಹಿರಿಯರಿಗೆ ಮೊದಲಿನಂತೆ ಅಷ್ಟು ಗೌರವ ಇಲ್ಲ. ಮನೆ ಮನಗಳಲ್ಲಿ ಭಾವ ಬಂಧನ, ಬೆಸುಗೆ ಆಲ್ಮೋಸ್ಟ್ ಮಾಯಾ ಎಂದರೆ ತಪ್ಪಿಲ್ಲ. ಇಂದಿನ ಆಧುನಿಕ ಲೈಫ್ ಅನೇಕ ಸೌಕರ್ಯ ಸವಲತ್ತು ಶೋಕಿ ನೀಡಿದೆ. ಆದ್ರೆ ಆದ್ರೂ ಮೊದಲಿನ ನಮ್ಮ ಹಳೆಯ ಮುಗ್ದ ದಿನಗಳು, ಅಸಿಂಪಲ್ ಖುಶಿ ಮರಳಿ ತರಲು ಖಂಡಿತ ಅಸಾಧ್ಯ ಎಂದರೆ ತಪ್ಪಿಲ್ಲ. ಇಂದು ವೇಗದ ಯುಗ, ಎಲ್ಲ ವೇಗ instant ಆಗ್ಬೇಕು. ಫಾಸ್ಟ್ ಫುಡ್ ಅಂತ ಇದೆ. ಟ್ರಾಫಿಕ್ ಜಾಮ್ ವೇಗವಾಗಿ ಗಾಡಿ ಓಡಿಸೋದು, ವೇಗ ಅಪಘಾತ.

ಸಾವು ಅಹಿತಕರ etcsamanya. ಮನುಷ್ಯ ಜೀವನ ಬದುಕುಗೆ ಬೆಲೆ ಇಲ್ವಾ ಅನ್ಸುತ್ತೆ. ಮೊನ್ನೆ ನೆಡದ ಘಟನೆ ಮನಸು ಆಘಾತ ಆಗಿದೆ. ಪರಿಚಯ ಹೆಂಗಸು ಭಾಷಣಕಾರರು. ಮೊನ್ನೆ ಶಿವಮೊಗ್ಗ ಟ್ರೈನ್ ನಿಂದ ಮರಳಿ ಬೆಂಗಳೂರು ವಾಪಾಸ್ ಬರುವಾಗ ದುಷ್ಕರ್ಮಿಗಳು ಅವರ ವಡವೆ ಕಿತ್ತು ಟ್ರೈನ್ ಆಚೆ ನೂಕಿ ಎಸದು ಅವರು ಮರಣ ಹೊಂದಿರುವರು. ಸಾಯುವ ವಯಸ್ಸು ಖಂಡಿತಾ ಅಲ್ಲ. ಹೆಂಗಸರಿಗೆ ಸೇಫ್ಟಿ ಇಲ್ವಾ? ಮನುಷ್ಯನಿಗೆ ಸೇಫ್ಟಿ ಇಲ್ವಾ ಅಂತ ಕಲಘಟ್ಟದಲ್ಲಿ ನಾವು ಇರುವುದು ಹಾಗೂ ವ್ಯವಸ್ಥೆ ವಿರುದ್ಧ ಏನ್ಮಾಡದೆ ಅಸಹಾಯಕ ಮೂಕರಾಗಿ ಇರೋದು ನಮಗೆ ಬಹಳ ಹಿಂಸೆ ಅನುಸುತ್ತೆ. ಮಾನವೀಯತೆ ಮೌಲ್ಯ ಸತ್ತೇ ಹೋಗಿದೆ ಅನಿಸುತ್ತೆ. ಕರುಣೆ, ಪ್ರೀತಿ, ಮನ್ಯುಷತ್ವ ಎಲ್ಲಿದೆ ಅನಿಸುತ್ತೆ. ಕೇವಲ ಇದು ಒಂದು ಘಟನೆ ಅಲ್ಲ.

ತಾಂತ್ರಿಕತೆ , ವಿಜ್ಞಾನ ಪ್ರಗತಿ ಆಗಿದೆ. ಅನುಕೂಲತೆ ಆಗಿದೆ. ಆದರೆ ಸಹೃದಯತೆ, ತತ್ವ, ಆದರ್ಶ, ಮೌಲ್ಯ ನಿಜವಾದ ಪ್ರೀತಿ ವಿಶ್ವಾಸ ಮಾಯವಾಗಿ ಸಾಯುತ್ತಿದೆ. ಸ್ವಾರ್ಥ, ದುರಾಸೆ ಅಹಂಕಾರ, ಬೂಟಾಟಿಕೆ, ಅಸತ್ಯ ಅಧರ್ಮ, ಪೊಳ್ಳುತನ, ನಾಟಕೀಯತೆ ವಿಜೃಂಭಣೆ ಆಗುತ್ತಿದೆ. ಪ್ರಾಮಾಣಿಕತೆ ಸತ್ಯ ಅಹಿಂಸೆ ಕಮ್ಮಿ ಆಗುತ್ತಿದೆ. ಎಲ್ಲ ಕ್ಕ್ಷೇತ್ರದಲ್ಲೂ ಶಿಕ್ಷಣ, ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರ ಕಾಲಿಟ್ಟಿದೆ. ಖೇದಕಾರ ಹಾಗೂ ಬಹು ವಿಷಾದನೀಯ ಸಂಗತಿ . ಸುಂದರ ಸಮಾಜ ದೇಶ ಕುಟುಂಬ ಕ್ಕಾಗಿ ಎಲ್ಲ ಜನರು ವರ್ಗದವರು ಸಕಾರಾತ್ಮಕ ಧೋರಣೆ ಯೋಜನೆ ಯೋಚನೆ ಕಾರ್ಯ ಕಾರ್ಯಕ್ರಮ ಮಾಡಬೇಕು. ಒಗ್ಗಟು ಇರಬೇಕು ಈ ನಿಟ್ಟಲ್ಲಿ ಎಂದ್ರೆ ಅತೀ ಶೋಕ್ತಿ ಅಲ್ಲ. ಬನ್ನಿ ಸ್ವಾಸ್ತ್ಯ ಸುಂದರ ಸಮಾಜ ಕಡೆ ಹೆಜ್ಜೆ ಹಾಕೋಣ. ಹಳೇ ದಿನಗಳು ಅಕನಸು ನನಸು ಮಾಡೋಣ ಇದು ಸಾಧ್ಯ ಸಾಧುನಾ ನಂತರ ಮಾತು. ಸರಳ ಸುಂದರ ಆರೋಗ್ಯ್ಕರ ಜೀವನ ಜೀವನ ಶೈಲಿ ಸಂಬಂಧ ಬೆಸಯೋಣ. ಮಾನ್ವಿಯ ಮೌಲ್ಯ ಪ್ರತಿಪಾದನೆ ಆಗಲಿ ದಿಟ್ಟ ಹೆಜ್ಜೆ ಮುಂದೆ ಹಾಕೋಣ.


  • ಪ್ರೀತಿ  ಭರತ್ ಜವಳಿ – ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading