“ಅನ್ನದಾತ” ಕವನ – ಡಾ. ಅಶೋಕ ಕುಮಾರ ಎಸ್

ಹೇಳುವರು ರೈತ ದೇಶದ ಬೆನ್ನೆಲುಬೆಂದು ಪುಂಡ ಪುಡಾರಿಗಳು ಮೊಸಳೆ ಕಣ್ಣೀರು ತಂದು ವಂಚನೆಯ ಹಾದಿಯಲ್ಲಿ ಬಾಚಿಕೊಂಡು ತಿಂದು….ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರ ಲೇಖನಿಯಲ್ಲಿ ಮೂಡಿ ಬಂದ ಲೇಖನವನ್ನು ತಪ್ಪದೆ ಮುಂದೆ ಓದಿ…

ಬೆವರಿಗೆ ಬೆಲೆಯಿಲ್ಲಿಂದು
ದುಷ್ಟರು ದುಡಿಯದೆ ಕುಂತು ತಿಂದು
ದುಡಿಯಲು ರೈತನಿಗೆ ಮಾಡುವರು ಮುಂದು.

ಅನ್ನವನಿಕ್ಕುವನು ದುಡಿದು ತಂದು
ತಿಂದು ತೇಗುವವು ಹದ್ದು ಕಾಗೆಗಳು ಬಂದು
ಉರುಳಿಗೆ ಕೊರಳೊಡ್ಡಿದ ರೈತ ಮನನೊಂದು.

ಬರಗಾಲದ ಬವಣೆ ಬಂದು
ರೈತ ದುಃಖದಿಂದ ಕಣ್ಣೀರು ತಂದು
ಅಳಿದುಳಿದ ಬೆಳೆ ಕಾಡು ಮೃಗಗಳು ತಿಂದು.

ನಂಬಿ ಬೀಜ ಬಿತ್ತುವನು ತಂದು
ರೈತನಿಗೆ ತಿಳಿಯಲಿಲ್ಲ ಬೀಜ ನಕಲಿಯೆಂದು
ಮೋಸಕ್ಕೆ ಮಮ್ಮಲ ಮರುಗುವನು ಮನನೊಂದು.

ಹೇಳುವರು ರೈತ ದೇಶದ ಬೆನ್ನೆಲುಬೆಂದು
ಪುಂಡ ಪುಡಾರಿಗಳು ಮೊಸಳೆ ಕಣ್ಣೀರು ತಂದು
ವಂಚನೆಯ ಹಾದಿಯಲ್ಲಿ ಬಾಚಿಕೊಂಡು ತಿಂದು.

ಮಧ್ಯವರ್ತಿ ಪ್ರತಿಫಲವ ತಿಂದು
ದುಡಿವ ರೈತನ ಬೆವರಿಗೆ ಫಲವೆಂದು
ಮಾತಲ್ಲಿ ಹೇಳುವರು ಅನ್ನದಾತ ಮುಂದು.

ಸುರಿವ ಬೆವರಲ್ಲಿ ಮಿಂದು
ಅನ್ನ ನೀಡುವನು ಬಾಗಿಲಿಗೆ ತಂದು
ಬದುಕುವನು ತನ್ನಾಸೆಗಳ ಜೀವಂತ ಕೊಂದು.


  • ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ, ಯಾದಗಿರಿ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading