ಅರುಣಿಮಾ ಎಡಗಾಲು ಕತ್ತರಿಸಿ ಹೋದರು ಮೌಂಟ್ ಎವರೆಸ್ಟ್ ಹತ್ತಿಯೇ ಬಿಟ್ಟಳು. ಆ ದಿಟ್ಟ ಹೆಣ್ಣುಮಗಳ ಸಾಹಸಗಾಥೆಯ ಕುರಿತು ಲೇಖಕಿ ಪಾರ್ವತಿ ಜಗದೀಶ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ದೈಹಿಕ ನ್ಯೂನತೆಗಳು ಸಾಧನೆಯ ಮೇಲೆ ಯಾವ ಪರಿಣಾಮವನ್ನೂ ಬೀರಲಾರವು ಅಚಲವಾದ ಶ್ರದ್ದೆ ಆತ್ಮವಿಶ್ವಾಸ ಇದ್ದರೆ….ಅರುಣಿಮಾ ಎದೆಯಲ್ಲಿ ಆರದ ಕಿಚ್ಚೋoದನ್ನು ಕಾಪಾಡಿಕೊಂಡಳು ಎಡಗಾಲು ಕತ್ತರಿಸಿಕೊಂಡು ಬಲಗಾಲಿನ ತುಂಬಾ ಫ್ಯಾಕ್ಚರ್ ಆಗಿ ಎಮ್ಸ್ ಆಸ್ಪತ್ರೆಯಲ್ಲಿ ಆಕೆಯನ್ನು ನೋಡಲು ಬರುತ್ತಿದ್ದವರ ಅನುಕಂಪದ ಮಾತುಗಳು ಸಾಕಷ್ಟು ಆದರೇ ಆಕೆ ಒಂದು ಕ್ಷಣವೂ ತಾನಿನ್ನು ನಿರುಪಯುಕ್ತ ಜೀವ ಅಂದುಕೊಳ್ಳಲೇ ಇಲ್ಲ ಆದರೇ ಆಕೆಗೆ ತಾನು ಹಿಂದಿನಂತೆ ಫುಟ್ಬಾಲ್ ಆಡಲು ಸಾಧ್ಯವಿಲ್ಲ ಎಂಬುದು ಮನವರಿಕೆ ಆಗಿತ್ತು ಅಕೆ ಬೇರೇನಾದರೂ ಮಾಡಲು ನಿರ್ಧರಿಸಿದಳು ಇಂಪಾಸಿಬಲ್ ಎಂದು ಬೇರೆಯವರು ಹೇಳಬಹುದಾಗಿದ್ದ ವಿಚಾರದ ಕಡೆಯೇ ಈಕೆಯ ಲಕ್ಷ್ಯ ಮೌಂಟ್ ಎವರೆಸ್ಟ್ ನ್ನು ಏರುತ್ತೇನೆ ಎಂದೇ ಹೇಳಿಕೊಂಡಳು ಈಕೆಯ ಅಛಲ ನಿರ್ಧಾರ ಹೇಗಿತ್ತು ಎಂದರೆ ಆಕೆ ಹಾಗೇ ನಿರ್ಧಾರ ತೆಗೆದುಕೊಳ್ಳುವಾಗ ಆಕೆಗೆ ನೆಡೆಯಲೂ ಸಹ ಬರ್ತಾ ಇರಲಿಲ್ಲ..

ಕೃತಕ ಕಾಲು ಜೋಡಿಸಿಕೊಂಡು ಆಸ್ಪತ್ರೆಯಿಂದ ಹೊರಬಿದ್ದ ಆಕೆ ಮಾಡಿದ ಮೊದಲ ಕೆಲಸ ಎವರೆಸ್ಟ್ ಶಿಖರ ಏರಿದ ಮೊದಲ ಭಾರತೀಯ ಮಹಿಳೆ ಬಚೆಂದ್ರಿಪಾಲ್ ಅವರನ್ನು ಭೇಟಿಯಾಗಿದ್ದು ನೋಡಿದ ತಕ್ಷಣ ಈ ಹುಡುಗಿಯ ಛಲದಿಂದ ಎಷ್ಟು ಪ್ರಭಾವಿತರಾದರೆಂದರೆ ” ನೀನು ಈಗಾಗಲೇ ನಿನ್ನ ಮನಸ್ಸಿನಿಂದ ಎವರೆಸ್ಟ್ ಏರಿ ಆಗಿದೆ ಈಗ ಅದನ್ನು ದೈಹಿಕವಾಗಿ ಏರಿ ಜಗತ್ತಿಗೇ ತೋರಿಸಬೇಕಿದೆ ಅಷ್ಟೇ ” ಎಂದರು. ನಂತರ ಅರುಣಿಮಾ ಯಾತ್ರೆ ಆರಂಭವಾಯ್ತು ಉತ್ತರಾಕ್ಷಿಯಲ್ಲಿರುವ ನೆಹರು ಇನ್ಸಿಟ್ಯೂಟ್ ಆಫ್ ಮೌಂಟೆನಿಯರಿಂಗ್ನಲ್ಲಿ ಒಂದು ವರ್ಷದ ತರಬೇತಿ ಪಡೆದು ದೈಹಿಕ ದೃಡತೆ, ಶಿಲಾರೋಹಣ, ಆಕ್ಸಿಜನ್ ಸಿಲಿಂಡರ್ಗಳ ಬಳಕೆ , ಪರ್ವತ ಹವಾಮಾನಕ್ಕೆ ಒಗ್ಗಿಕೊಳ್ಳುವಿಕೆ ಎಲ್ಲದರಲ್ಲೂ ಪಳಗಿದಳು ಎವೆರೆಸ್ಟ್ ಏರುವ ಮುನ್ನ ಲಡಾಖ್ ಪರ್ವತ ಕಾಂಗ್ರಿ ನೇಪಾಳದ ಐಲ್ಯಾಂಡ್ ಪಿಕ್ ಏರಿ ಇಳಿದಳು 2013 ಮೇ 21 ರಂದು 52 ದಿನಗಳ ನಡಿಗೆಯ ಬಳಿಕ ಜಗತ್ತಿನ ಅತ್ಯಂತ ಎತ್ತರದ ಶಿಖರ ಆಕೆಯ ಕಾಲ ಕೆಳಗಿತ್ತು. ಇಳಿದ ಬಳಿಕ ಆಕೆ ಮೊದಲು ಕರೆ ಮಾಡಿದ್ದು ಬಚೇoದ್ರಿಪಾಲ್ ರಿಗೆ ಇಬ್ಬರ ಕಣ್ಣಲ್ಲೂ ಸಂತೋಷದ ಕಣ್ಣೀರು ತುಂಬಿ ಬಂದಿತ್ತು.

ಫೋಟೋ ಕೃಪೆ : google
ಇದರ ನಂತರ ತನ್ನ ಕನಸನ್ನು ವಿಸ್ತರಿಸಿಕೊಂಡಳು ಜಗತ್ತಿನ ಎಲ್ಲಾ ಖಂಡಗಳ ದೊಡ್ಡ ಪರ್ವತಗಳನ್ನು ಏರುವುದು ಮೌಂಟ್ ವಿನ್ಸoಟ್ ಏರುವ ಮೂಲಕ ಸಾಕ್ಷಾತ್ಕರಿಸಿಕೊಂಡಳು . ಏಷ್ಯಾದ ಮೌಂಟ್ ಎವರೆಸ್ಟ್ ( 8548 ಮೀ ), ಯುರೋಪ್ ನ ಮೌಂಟ್ ಎಬ್ರಸ್ (5642 ಮೀ), ಆಪ್ರಿಕಾದ ಮೌಂಟ್ ಕಿಲಿಮಾಂಜರೋ (5895 ಮೀ ), ಆಷ್ಟ್ರೇಲಿಯಾದ ಮೌಂಟ್ ಕೊಸಿಸ್ಕೊ (2228 ಮೀ ),ದಕ್ಷಿಣ ಆಪ್ರಿಕಾದ ಮೌಂಟ್ ಆಂಕೋಕಾವಿ (6960 ಮೀ ) ಗಳನ್ನು ಏರಿದ್ದಾಳೆ ನಂತರ ಅಂಟಾರ್ಟಿಕಾದ ಮೌಂಟ್ ವಿನ್ಸನ್ ( 4892 ಮೀ ) ಸಹ ಏರಿದ್ದಳು.
2012 ರಲ್ಲಿ ಆಕೆಗೆ ಮದುವೆಯಾಯ್ತು ಆದರೇ ಆ ವಿವಾಹ ಹೆಚ್ಚು ಕಾಲ ಬಾಳಲಿಲ್ಲ ಕೆಲವೇ ದಿನಗಳಲ್ಲಿ ಆಕೆ ಗಂಡನಿಗೆ ವಿಚ್ಚೇದನ ನೀಡಿದಳು. ನಂತರ ಈಕೆಯ ಆರೈಕೆಯನ್ನು ಈಕೆಯ ಅಣ್ಣನೇ ನೋಡಿಕೊಂಡ ಎವೆರೆಸ್ಟ್ ಏರಿದ ಬಳಿಕ ಯು. ಪಿ ಯ ಉನ್ನಾವೊದಲ್ಲಿ ವಿಕಲಾಂಗರಿಗೆ ಒಂದು ಸ್ಪೋರ್ಟ್ಸ್ ಅಕಾಡಮೆಯನ್ನು ತೆರೆದಳು ತನ್ನಂತೆಯೇ ಅಂಗ ಕಳೆದುಕೊಂಡವರ ಕನಸುಗಳನ್ನು ನನಸು ಮಾಡುವ ಉದ್ದೇಶ ಆ ಅಕಾಡಮೆಯದಾಗಿತ್ತು ಇದಕ್ಕೆ ನಿಧಿ ಸಂಗ್ರಹಣೆ ಮಾಡುವಲ್ಲಿ ತನಗೆ ಬಂದ ಪ್ರಶಸ್ತಿ ಪುರಸ್ಕಾರಗಳು ಗೌರವ ಧನ ಎಲ್ಲವನ್ನೂ ಅದಕ್ಕಾಗಿ ಮೀಸಲಿಟ್ಟಳು.

ನಮ್ಮಲ್ಲೇ ಎಷ್ಟೋ ಜನ ನಾವುಗಳೇ ನಮಗೆ ಜೀವನದಲ್ಲಿ ಎದಿರಾಗುವ ಕಷ್ಟಗಳೇ ದೊಡ್ಡವು ಎಂದು ಭಾವಿಸುತ್ತೇವೆ. ಅಂತದರಲ್ಲಿ ದುರಂತ , ಅವಮಾನ ಸೋಲಿನ ಅಗ್ನಿದಿವ್ಯದಿಂದ ಎದ್ದು ಬಂದ ಭಾರತೀಯ ಮಹಿಳೆಯರನ್ನು ಹೆಸರಿಸುವುದಾದರೆ ಮೊದಲ ಸಾಲಿನಲ್ಲಿ ನಿಲ್ಲುವ ಅರುಣಿಮಾ ಸಿನ್ಹಾ ನಿಸ್ಸoಶಯವಾಗಿ ಬೆಟ್ಟದಂತಹ ಗುಂಡಿಗೆಯ ದಿಟ್ಟ ಮಹಿಳೆ ಅನ್ನುವದರಲ್ಲಿ ಯಾವ ಸಂಶಯವೂ ಇಲ್ಲವೆಂದೇ ನನ್ನ ಅಭಿಪ್ರಾಯ. ಇದೊಂದು ಸುದೀರ್ಘ ಲೇಖನವಾದರೂ ಓದಲೇಬೇಕಾದ ಲೇಖನ ನನಗಂತೂ ಅತೀವ ಪ್ರೇರಣಾದಾಯಕ ನಾನೂ ಬಹಳಷ್ಟು ಇಷ್ಟ ಪಟ್ಟ ಬರೆದ ಲೇಖನ.
ಬೆಟ್ಟದಂತಹ ಛಲದ ಅರುಣಿಮಾ ಸಿನ್ಹ ಕಥೆ ಪ್ರಪಂಚದ ಎಲ್ಲಾ ಖಂಡಗಳ ಎತ್ತರದ ಪರ್ವತಗಳನ್ನು ಏರುವ ಕನಸು ನನಸಾಗಿಸಿಕೊಂಡ ನೈಜ ಕಥೆ. ಛಲವೇ ಮನುಷ್ಯ ರೂಪ ತಾಳಿ ನಿಂತಂತ ಹುಡುಗಿ ಅರುಣಿಮಾ ಅಂಟಾರ್ಟಿಕಾದ ಅತ್ಯಂತ ಎತ್ತರವಾದ ಪರ್ವತ “ಮೌಂಟ್ ವಿನ್ಸನ್ ” ನ ತುತ್ತ ತುದಿಯನ್ನು ಏರಿ ನಿಂತಳು ಹಾಗೂ ” ಮೌಂಟ್ ವಿನ್ಸನ್ ” ಏರಿದ ಮೊದಲ ವಿಕಲಾಂಗ ಸ್ತ್ರೀ ಎನಿಸಿಕೊಂಡಳು. ಬೆಟ್ಟಗಳ ಮೇಲೆ ಬೆಟ್ಟಗಳನ್ನೇ ತನ್ನ ಕಾಲಡಿಯಲ್ಲಿ ಮೆಟ್ಟಿ ನಿಲ್ಲುತ್ತಿರುವ ಅರುಣಿಮಾ ದುರಂತಗಳನ್ನು ದಿಕ್ಕರಿಸಿ ಗೆಲ್ಲುವ ಮನುಷ್ಯನ ಛಲಕ್ಕೆ ಒಂದು ರೂಪಕದಂತಿದ್ದಾಳೆ. ಏರಿ ಇಳಿಯುವ ತನ್ನ ಸಂಕಲ್ಪವನ್ನು ಈಡೇರಿಸಿಕೊಂಡು ನಗುತ್ತಲೇ ಇದ್ದಾಳೆ.

ಛಲಗಾತಿ ಅರುಣಿಮಾ ಹುಟ್ಟಿದ್ದು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ ಈಕೆ ಕ್ರೀಡಾ ಸ್ಫೂರ್ತಿಯ ಖನಿಯಾಗಿದ್ದಳು ಬೆಳೆಯುತ್ತಾ ರಾಷ್ಟ್ರ ಮಟ್ಟದ ವಾಲಿಬಾಲ್ ಮತ್ತು ಪುಟ್ಬಾಲ್ ಆಟಗಾರ್ತಿ ಕೂಡ ಹೌದು 2011ರಲ್ಲಿ ಕೇಂದ್ರ ಔದ್ಯಮಿಕ ಭದ್ರತಾ ದಳ (ಸಿ. ಐ. ಎಸ್. ಎಫ್ ) ಪರೀಕ್ಷೆ ಬರೆಯಲು ಡೆಲ್ಲಿಗೆ ಹೋಗುವುದಕ್ಕೆ ಲಖನೌ ದಿಂದ ಪದ್ಮಾವತಿ ಎಕ್ಸ್ಪ್ರೆಸ್ ರೈಲು ಏರಿದಳು ಬರೇಲಿಯ ಬಳಿ ಇಬ್ಬರು ಸರಾಗಳ್ಳರು ಆಕೆ ಹಾಕಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಕುತ್ತಿಗೆಗೆ ಕೈ ಹಾಕಿದರು ಈಕೆ ಪ್ರತಿಭಟಿಸಿದರೂ ಕಳ್ಳರು ಆಕೆಯನ್ನು ದೂಡಿ ಕೆಳಗೆ ಬೀಳಿಸಿದರು ಕೆಳಗೆ ಬಿದ್ದಿದಷ್ಟೇ ಗೊತ್ತು ನಂತರ ಏನಾಯ್ತು ಎಂದು ತಿಳಿದಿಲ್ಲವೆಂದು ನಂತರ ಅವಳೇ ಹೇಳಿದ್ದು ಪಕ್ಕದ ಹಳಿಯಲ್ಲಿ ರಭಸದಿಂದ ಬರುತ್ತಿದ್ದ ಇನ್ನೊಂದು ರೈಲು ಈಕೆಯ ಎಡಗಾಲ ಮೇಲೆ ಹಾದುಹೋಗಿ ಪ್ರಜ್ಞೆ ತಪ್ಪಿದ ಅರುಣಿಮಾ ಎಚ್ಚರ ಆದಾಗ ಡೆಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿದ್ದಳು ಜಜ್ಜಿ ಹೋಗಿದ್ದ ಆಕೆಯ ಎಡಗಾಲನ್ನು ಕತ್ತರಿಸಲಾಗಿತ್ತು.

ಫೋಟೋ ಕೃಪೆ : google
ದುರಂತವನ್ನು ಗಾಢಗೊಳಿಸುವಂತೆ ರಾಷ್ಟ್ರ ಮಟ್ಟದ ಆಟಗಾರ್ತಿಯಾಗಿದ್ದ ಈಕೆಗೆ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ 25000 ರೂಪಾಯಿ ಪರಿಹಾರ ಕೊಡಿಸಿ ಕೈ ತೊಳೆಯಲು ಯತ್ನಿಸಿತು ಜೊತೆಗೆ ಅಪಘಾತಕ್ಕೆ ಸಂಬಂದಿಸಿದಂತೆ ಈಕೆಯನ್ನೇ ಅಪರಾಧಿಯನ್ನಾಗಿಸಿ ಸಲ್ಲಬೇಕಾದ ಪರಿಹಾರ ಉದ್ಯೋಗವನ್ನು ಲಪಟಾಯಿಸಲು ಯತ್ನಿಸಿತು. ಯು. ಪಿ ಪೊಲೀಸ್ರು ತನಿಖೆ ನೆಡಸಿ ಬೇರೆ ಕಥೆ ಕಟ್ಟಿದರು ಟಿಕೆಟ್ ಇಲ್ಲದೆ ಪ್ರಯಾಣ ಮಾಡುವಾಗ ಟಿ. ಸಿ ಯಿಂದ ತಪ್ಪಿಸಿಕೊಂಡು ಸಿಕ್ಕಿಬೀಳುವ ಆತಂಕದಿಂದ ರೈಲಿನಿಂದ ಜಿಗಿದಾಗ ಈ ಅಪಘಾತವಾಗಿದೆ ಆತ್ಮಹತ್ಯೆಯ ಪ್ರಯತ್ನ ಮಾಡಿರಬೇಕು ಅನ್ನುವ ಹೇಳಿಕೆ ಇವೆಲ್ಲಕ್ಕೂ ರಾಷ್ಟ್ರ ಮಟ್ಟದಲ್ಲಿ ಟೀಕೆ ಶುರುವಾದಾಗ ಎಚ್ಚತ್ತು ಪರಿಹಾರ ನಿಧಿಯನ್ನು 2 ಲಕ್ಷಕ್ಕೆ ಏರಿಸಿ ರೈಲ್ವೆ ಇಲಾಖೆಯಲ್ಲಿ ಒಂದು ಉದ್ಯೋಗ ಸಹ ನೀಡಿದರು. ” ನಾನು ಅಂದಿನ ಟಿಕೆಟ್ ನ್ನು ಇಂದಿಗೂ ಸಹ ಜೋಪಾನವಾಗಿಟ್ಟುಕೊಂಡಿದ್ದೇನೆ.ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಹೃದಯದವಳು ನಾನಲ್ಲ ” ಎಂದು ಅರುಣಿಮಾ ಹೇಳಿಕೆ ಅಷ್ಟೇ ಅಲ್ಲ ಕೃತಿಯಲ್ಲೂ ದೃಢವಾಗಿ ಸಾರಿದಳು ಸುಳ್ಳಿನ ಪೊಲೀಸ್ರ ಬಳಿ ಮತ್ತೆಂದೂ ಆಕೆ ಹೋಗಲೂ ಇಲ್ಲ ಪ್ರಕರಣದ ಬಗ್ಗೆ ಕೂಡ ವಿಚಾರ ಮಾಡಲಿಲ್ಲ ತಪ್ಪಿತಸ್ತರನ್ನು ಕ್ಷಮಿಸಿದ್ದೇನೆ ಎಂದಷ್ಟೇ ಹೇಳಿದಳು.
- ಪಾರ್ವತಿ ಜಗದೀಶ
