ಬದುಕೆಂಬ ಗಣಿತ..! – ಎ.ಎನ್.ರಮೇಶ್. ಗುಬ್ಬಿ

“ಇದು ಜೀವನ ಗಣಿತದ ಕವಿತೆ. ಜೀವದ ಸಂಖ್ಯಾಶಾಸ್ತ್ರದ ಭಾವಗೀತೆ. ಬದುಕನ್ನು ಗಣಿತಪಾಠಗಳೊಂದಿಗೆ ಸಮೀಕರಿಸುತ್ತಾ ಓದಿ. ಜೀವನದ ಪ್ರತಿ ಸಂಗತಿಗಳನ್ನು ಸಂಖ್ಯಾ ಶಾಸ್ತ್ರದ ನಿಯಮಗಳೊಂದಿಗೆ ತಾಳೆ ಹಾಕುತ್ತಾ ನೋಡಿ. ಅಗಣಿತ ಬದುಕಿನೊಳಗಿನ ಗಣಿತದ ದರ್ಶನವಾವುದು. ಏನಂತೀರಾ..?” – ಪ್ರೀತಿಯಿಂದ ಎ.ಎನ್. ರಮೇಶ್. ಗುಬ್ಬಿ.

ಬದುಕೆಂದರೆ ಇಲ್ಲಿ
ಅನುದಿನ.. ಅನುಕ್ಷಣ…

ಅನುಭವದ ಸಂಕಲನ
ಆಯಸ್ಸಿನ ವ್ಯವಕಲನ
ಅರಿವಿನ ಗುಣಾಕಾರ
ಕಾಲದ ಭಾಗಾಕಾರ.!

ಊಹಿಸಲಾಗದ ನೋವು
ನಲಿವುಗಳ ಅಂಕಗಣಿತ
ಅರ್ಥವಾಗದ ದುರಾದೃಷ್ಟ
ಅದೃಷ್ಟಗಳ ಬೀಜಗಣಿತ.!

ತಿಳಿಯಲಾಗದ ಹಣೆಬರಹ
ಅಂಗೈಗೆರೆಗಳ ರೇಖಾಗಣಿತ
ನಿತ್ಯ ಅನಿರೀಕ್ಷಿತ ಆಕಸ್ಮಿಕ
ಅತಿವಿಸ್ಮಯಗಳ ಅಗಣಿತ.!

ಎಂದೂ ಬಿಡಿಸಲಾಗದ
ಅನೂಹ್ಯ ಸಮೀಕರಣ
ವಿಧಾತನ ಈ ಜೀವಗಣಿತ
ಅವನಿಗಷ್ಟೇ ಚಿರಪರಿಚಿತ.!


  • ಎ.ಎನ್.ರಮೇಶ್. ಗುಬ್ಬಿ  (ಲೇಖಕರು, ಕವಿಗಳು), ಕೈಗಾ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW