ಹಾಸ್ಯಕ್ಕೆ ಇಂತಹದ್ದೇ ವಿಷಯಬೇಕು ಅಂತಿಲ್ಲ…ದಿನನಿತ್ಯ ಬದುಕಿನಲ್ಲಿ ಹಾಸ್ಯ ಸನ್ನಿವೇಶಗಳು ನಡೆಯುತ್ತಲೇ ಇರುತ್ತವೆ, ಅದನ್ನು ಸ್ವಾದಿಸುವ ಮನಸ್ಸು ನಮ್ಮಲ್ಲಿರಬೇಕು ಎನ್ನುವುದಕ್ಕೆ ಒಂದು ಹಾಸ್ಯ ಪ್ರಸಂಗವನ್ನು ಇಟ್ಟುಕೊಂಡು ರಾಘವೇಂದ್ರ ಪಿ ಅಪರಂಜಿ ಅವರು ಬರೆದ ಸುಂದರವಾದ ಈ ಪುಟ್ಟ ಕತೆಯನ್ನು ತಪ್ಪದೆ ಓದಿ…
ಬದುಕಿನಲ್ಲಿ ನಮ್ಮ ಸುತ್ತಮುತ್ತ ಅನೇಕ ಪ್ರಸಂಗಗಳು ನಡಿತಾನೆ ಇರ್ತಾವೆ. ಹಾಗೆ ನಡೆದಂತ ಪ್ರಸಂಗಗಳು ನಮ್ಮ ಮನಸ್ಸನ್ನು ಉಲ್ಲಾಸವಾಗಿ, ಆನಂದವಾಗಿ ಇರಿಸಲು ತನ್ನದೇ ಆದ ಪ್ರಭಾವವನ್ನು ಬೀರತ್ತವೆ.
ಹಾಗೆ ನಮ್ಮಸುತ್ತಮುತ್ತ ನಡೆದ ಹಾಸ್ಯ ಚಟಾಕಿಗಳನ್ನು ಹಂಚಿಕೊಂಡಾಗ ಅದಕ್ಕೆ ಮತ್ತಷ್ಟು ಮೆರಗು ಬರುತ್ತೆ. ಅಂತಹ ಒಂದು ಪ್ರಸಂಗ ನಾನು ಹುಬ್ಬಳ್ಳಿಯ ಅಮರಗೋಳದಲ್ಲಿ ವಾಸಿಸುತ್ತಿರುವ ಅಪಾರ್ಟ್‌ಮೆಂಟ್ ನಲ್ಲೂ ಒಮ್ಮೆ ನಡೆಯಿತು. ನಾವು ವಾಸಿಸೋದು ಮೊದಲ ಮಹಡಿಯಲ್ಲಿ. ನಾನು ಮಾರ್ಕೇಟ್ ಗೆ ಹೋಗಿ, ಮನೆಗೆ ವಾಪಸ್ಸು ಬರುವಾಗ ನಮ್ಮ ಮನೆ ಪಕ್ಕದಲ್ಲಿದ್ದ ಆಂಟಿಗೆ ಸೆಕ್ಯುರಿಟಿಗೆ ಏನೋ ಹೇಳಬೇಕಿತ್ತು. ಸೆಕ್ಯುರಿಟಿ ಹೆಸರು ಬಸು ಅಂತ.
ಹುಬ್ಬಳ್ಳಿಯಲ್ಲಿ ಯಾರಿಗಾದ್ರೂ ಕರಿಯುವಾಗ ಮರ್ಯಾದೆ ಕೊಡಲಿಕ್ಕೆ ರೀ…. ಶಬ್ದ ಬಳಸ್ತಾರೆ. ಅದರಂತೆ ಅವರು ಬಸುರಿ… ಬಸುರಿ… ಅಂತ ಕರಿಯುತ್ತಿದ್ದರು. ಅಷ್ಟೋತ್ತಿಗಾಗಲೇ ಕಾಕತಾಳೀಯ ಎಂಬಂತೆ ಮನೆಯ ಕೆಳಗೆ ಒಬ್ಬರು ಗರ್ಭಿಣಿ ನಿಂತಿದ್ದರು. ಅವರು ತಮಗೆ ಅಂದುಕೊಂಡು ನನಗೆ ಈಗ ಮೂರು ತಿಂಗಳರಿ…. ಅಂದ್ಲು. ಈ ಮಾತ ಕೇಳಿ ಅಂಟಿಗೂ ನಗು ತಡಿಲಿಕ್ಕೆ ಆಗಲಿಲ್ಲ. ಕಿಸಕ್ಕನೆ ನಕ್ಕು ಮನೆಯೊಳಗೆ ಓಡಿ ಹೋದ್ರು…
- ರಾಘವೇಂದ್ರ ಪಿ ಅಪರಂಜಿ