ಬಿಗ್ ಬಾಸ್ ಸೀಸನ್ ೧೧

ಸುದೀಪ್ ಅಣ್ಣಾ ಅಂದ್ರೆ ಎಲ್ಲರಂತೆ ನನಗೂ ಇಷ್ಟ. ಅದರಲ್ಲಿಯೂ ಬಿಗ್ ಬಾಸ್ ನಲ್ಲಿನ ಅವರ ನಿರೂಪಣೆ ಶೈಲಿ ನಡೆ ನುಡಿ ಎಂತವರನ್ನು ಸೆಳೆಯುತ್ತದೆ. ಅದೇ ಬಿಗ್ ಬಾಸ್ ನಲ್ಲಿ ಕಿಚ್ಚನ ಪಂಚಾಯ್ತಿ ಅಂತೂ ಬಿಡದೆ ನೋಡುತ್ತಿದ್ದೆ…ಆದರೆ ಸೀಸನ್ ೧೧ ಬಿಗ್ ಬಾಸ್ ನಲ್ಲಿ ಸುದೀಪ್ ಅಣ್ಣಾ ಯಾಕೋ ಬೇರೆ ರೀತಿ ಕಾಣ್ತಿದ್ದಾರೆ. ಇದು ಬಿಗ್ ಬಾಸ್ ಪ್ರೇಕ್ಷಕಳಾಗಿ ನನ್ನ ಅನಿಸಿಕೆ ಅಷ್ಟೇ.

ಯಾಕೋ ಸುದೀಪ್ ಅಣ್ಣಾ, ಬಿಗ್ ಬಾಸ್ ಸೀಸನ್ 11 ರಲ್ಲಿ ಏನೋ ಬದಲಾದಂತೆ ಕಾಣ್ತಿಲ್ವಾ ?…ವಾರದ ಪಂಚಾಯ್ತಿಯಲ್ಲಿ ಸ್ಪರ್ಧಿಗಳನ್ನ ಹಿಗ್ಗಾ ಮುಗ್ಗ ಜಾಡಿಸ್ತಿಲ್ವಾ… ಬಿಗ್ ಬಾಸ್ ಸೀಸನ್ 10ರವರೆಗೂ ವಾರದ ಪಂಚಾಯತಿಯಲ್ಲಿ ಸ್ಪರ್ಧಿಗಳ ತಪ್ಪನ್ನ ಮೆದುವಾಗಿ ಶಾಲಲ್ಲಿ ಹೊಡೀತಿದ್ದ ನಮ್ಮ ಸುದೀಪ್ ಅಣ್ಣಾ, 11 ರ ಸೀಸನ್ ಪಂಚಾಯ್ತಿಯಲ್ಲಿ ಬೇರೇನೇ ಕಾಣ್ತಾರಪ್ಪಾ…

ಸ್ಪರ್ಧಿಗಳು ಗೆಲ್ಲೋಕೆ ನಾನಾ ರೀತಿ ಗಿಮಿಕ್ ಮಾಡ್ತಾರೆ. ಬಂದವರೆಲ್ಲ ಸರಿಯಾಗಿದ್ದಾರೆ ಅನ್ನೋಕೆ ಆಗೋಲ್ಲ. ನೋಡುಗರನ್ನು ಕೆರಳಿಸುವಷ್ಟು ಸ್ಪರ್ಧಿಗಳಿದ್ದಾರೆ. ಅಂತವರಿಗೆ ನಮ್ಮ ಸುದೀಪ್ ಅಣ್ಣಾ ಏನ್ ನ್ಯಾಯ ಕೊಡ್ತಾರೆ… ಏನೇ ಕೊಟ್ರು ಸರಿಯಾಗಿಯೇ ಕೊಡ್ತಾರೆ ಅಂತ ಶನಿವಾರ, ಭಾನುವಾರ ಕಣ್ಣನ್ನು ದೊಡ್ಡದಾಗಿ ಬಿಡ್ಕೊಂಡು ಕೂಡ್ತಿದ್ವಿ. ಸ್ಪರ್ಧಿಗಳ ಬುದ್ದಿನ್ನ ಇಸ್ತ್ರಿ ಪೆಟ್ಟಿಗೆಯಲ್ಲಿ ಹಾಕಿ ತಿದ್ದಿ ತೀಡಿ ಜಗಾ ಜಗಾ ಅನ್ನೋ ತರ ಮಾಡ್ತಿದ್ದ ನಮ್ಮ ಸುದೀಪ್ ಅಣ್ಣಾ… ಯಾಕೋ ಸೀಸನ್ 11 ಬರ್ತಿದ್ದ ಹಾಗೆ ವರಸೆನೇ ಬದಲಾಗಿಬಿಟ್ಟಿದೆ.

ಸ್ಪರ್ಧಿಗಳು ವಾರ ಪೂರ್ತಿ ಹಣ್ಣಗಾಯಿ ನೀರಗಾಯಿ ಆಗಿ ಸುದೀಪ್ ಅಣ್ಣಾನ ನೋಡ್ಕೋತಾರೆ ಬಿಡು ಅಂತ ಧೈರ್ಯವಾಗಿ ಕೂಡ್ತಿದ್ದ ಸೀಸನ್ 11 ಸ್ಪರ್ಧಿಗಳು ಈಗ ತಮ್ಮ ಸಮಸ್ಯೆ ಯಾರ್ ಮುಂದೆ ಹೇಳೋಣ ಅನ್ನೋಹಾಗೆ ಪೆಚ್ಚಾಡೋ ತರ ಕಾಣ್ತಾರೆ. ಯಾಕಂದ್ರೆ ನ್ಯಾಯ ಅಂದ್ರೆ ಸುದೀಪ್ ಅಣ್ಣಾ ಅನ್ನೋರು. ಈ ಸೀಸನ್ ವಾರದ ಪಂಚಾಯ್ತಿಯಲ್ಲಿ ಸುದೀಪ್ ಅಣ್ಣನೇ ಸ್ಪರ್ಧಿಗಳ ತರ ಎಗರಿ ಎಗರಿ ಪಂಚಾಯ್ತಿ ಕೊಡ್ತಿದ್ರೆ ಸ್ಪರ್ಧಿಗಳು ಕಂಗಾಲ್ ಆಗದೆ ಇನ್ನೇನು?… ಸ್ಪರ್ಧೆಗಳೇನು ದೇವರಂತವರಲ್ಲ. ಒಬ್ಬಬ್ಬರದು ಒಂದೊಂದು ಅವತಾರಗಳು. ಸಿಕ್ಕಾಪಟ್ಟೆ ತೀಟೆಗಳನ್ನ ಮಾಡಿ ಮೈಮೇಲೆ ಹಾಕೊಂಡು ಸುದೀಪ್ ಅಣ್ಣಾನ ಹತ್ರ ಪರಿಹಾರ ಸಿಗುತ್ತೆ ಅಂತ ದೇವರನ್ನ ಕಾಯ್ದoಗೆ ಸ್ಪರ್ಧಿಗಳು ವಾರದ ಕೊನೆ ಕಾಯ್ತಿರತ್ತಾರೆ. ಮೊದಲೆಲ್ಲ ಸೀಸನ್ ನಲ್ಲಿ ತಪ್ಪನ್ನೆಲ್ಲ ಸೂಕ್ಷ್ಮವಾಗಿ ಹೇಳ್ತಿದ್ದ ಸುದೀಪ್ ಅಣ್ಣಾ, ಇದ್ದಕ್ಕಿದ್ದ ಹಾಗೆ ವೈಲೆಂಟ್ ಆಗಿದ್ದಾರೆ ಅನಸ್ತಪ್ಪಾ …ಅದರಲ್ಲೂ ಚೈತ್ರಾಳ ಗ್ರಹಚಾರವೇ ಸರಿ ಇಲ್ಲಾ. ಅವಳನ್ನ ಕಂಡ್ರೆನೇ ಉರಿದು ಬೀಳ್ತಾರೆ ಅಲಾ ನಮ್ಮ ಸುದೀಪ್ ಅಣ್ಣಾ, ನಾನಂತೂ ಚೈತ್ರಾಳ ಪರವಂತೂ ಅಲ್ಲ, ಚೈತ್ರಾಳ ಬಾಯಿಗೂ ಸುದೀಪ್ ಅಣ್ಣಾ ಬೈಯೋಕು ಸರಿಯಾಗಿದೆ. ಆದ್ರೂ ಪಾಪದ ಹೆಣ್ಮಕ್ಕಳು ಬೈಸ್ಕೊಬೇಕಾದ್ರೆ ನನ್ನ ಶಾಲಾ ದಿನಗಳು ನೆನಪಾಗುತ್ತೆ. ನಮ್ಮ ಶಾಲೆಯಲ್ಲಿ ಮಾಸ್ತರ್ ಹೀಗೆ ಬೈತಿದ್ರು. ಹುಡುಗುರು ಸಾರ್…. ಸಾರ್… ಅಂತ ಕೈ ಎತ್ತೋಕೆ ಹೋಗಿ ಮತ್ತೆ ನಾಲ್ಕು ಬೈಗುಳ ಕೇಳ್ಸ್ಕೊ ಬೇಕಿತ್ತು. ಚೈತ್ರಕ್ಕಾನ ಪರಿಸ್ಥಿತಿನೂ ಅದೇ ಆಗಿದೆ.

ಏನೋ ನಮ್ಮ ಹನುಮಂತಣ್ಣಾ ಚಂದಾಗಿ ಆಡ್ಕೊಂಡು ಹೊಂಟಿದ್ದ. ನಮ್ಮ ಸುದೀಪ್ ಅಣ್ಣನ ಕಣ್ಣು ಅವನ ಮೇಲೂ ಬಿತ್ತು. ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಅವರು ನಾನು ಮನೆಗೆ ಹೋಗ್ಬೇಕು ಅಂತ ಸಣ್ಣ ಮಕ್ಳ ತರ ಹಠ ಮಾಡಿದಾಗ, ಸುದೀಪ್ ಅಣ್ಣನೇ ಜನರ ಮತಕ್ಕೆ ಅವಮಾನ ಮಾಡಿದ್ರಿ ಅಂತ ಜನರಿಗೆ ಕ್ಷಮೆ ಕೇಳಿದ್ರು. ಈಗ ನಮ್ಮ ಹನುಮಂತಣ್ಣನಿಗೆ ಬಯ್ಯೋ ಭರದಲ್ಲಿ ಸುದೀಪ್ ಅಣ್ಣಾ ಹೇಳ್ತಾರೆ ಇನ್ನೊಮ್ಮೆ ಹೀಗೆ ಆಟ ಆಡಿದ್ರೆ ಜನ ಓಟ್ ಮಾಡಿ ನಿಮ್ಮನ್ನ ಉಳಸ್ಕೊಂಡಿದ್ರು ಪರವಾಗಿಲ್ಲ … ನಾನೇ ಬಿಗ್ ಬಾಸ್ ಬಾಗಿಲು ತೆರೆಸಿ ನಿಮ್ಮನ್ನ ಹೊರಗೆ ಕಳಸ್ತೀನಿ ಅಂತಾರೆ. ಒಂದೊಂದು ಕಡೆ ಒಂದೊಂದು ವರಸೆ ತೋರಿಸುವ ಸುದೀಪಣ್ಣ.. ಜನರ ಮತದಾನ ಮೇಲಿದ್ದ ಗೌರವ ಹನುಮಂತಣ್ಣನಿಗೆ ಬೈಬೇಕಾದ್ರೆ ಎಲ್ಲಿ ಹೋಯ್ತು?…ಆದ್ರೂ ನಮ್ಮ ಸುದೀಪ್ ಅಣ್ಣಗೆ ಸರಿಯಾಗಿ ಉತ್ತರ ಕೊಡೋದು ಅಂದ್ರೆ ಹನುಮಂತಣ್ಣನೇ.. ಇನ್ನೊಂದು ಸೂಕ್ಷ್ಮವಾಗಿ ಅನ್ನಿಸಿದ್ದು ಬಿಗ್ ಬಾಸ್ ಅವರು ಅಥವಾ ಜನ ಎಷ್ಟೇ ಮತ ಹಾಕಿದ್ರು ಸುದೀಪ್ ಅಣ್ಣನ ಮನಸ್ಸು ಕೇಡ್ತು ಅಂದ್ರೆ ಗೆಲ್ಲೋನು ಗೆಲ್ಲೋಲ್ಲ, ಹಾಗಾಗಿ ಸ್ಪರ್ಧೆಗಳಿಗೆ ಕಿವಿ ಮಾತು ಹೇಳ್ತಿನಿ ನಮ್ಮ ಸುದೀಪ್ ಅಣ್ಣನ ಚಂದಾಗಿ ನೋಡ್ಕೊಳ್ರಿ…ನಮ್ಮ ಸುದೀಪ್ ಅಣ್ಣ ಬದಲಾಗ್ಯಾರೆ…

ಕೊನೇದಾಗಿ ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಇರೋವರೆಗೂ ಅವರಿಗೆ ಅವಮಾನ ಮಾಡೋಕೆ ನಾನು ಬಿಡೋಲ್ಲ ಅಂತಿದ್ದ ಸುದೀಪ್ ಅಣ್ಣಾ, “ನಾನು” ಅನ್ನೋ ಅಹಂಗೆ ಬಿದ್ರಾ…ಅಥವಾ ಇದು ಅವರು ನಡೆಸಿಕೊಡ್ತಿರೋ ಕೊನೆ ಬಿಗ್ ಬಾಸ್ ಅಂತ ಅಣ್ಣಾದು ಈ ಕೊನೆ ಸೀಸನ್ ನಲ್ಲಿ ಬಣ್ಣ ಬಯಲಾಯ್ತಾ…ಯಾವುದು ಗೊತ್ತಿಲ್ಲ… ನಂಗೆ ಬಿಗ್ ಬಾಸ್ 10 ವರೆಗಿದ್ದ ಸುದೀಪ್ ಅಣ್ಣನೇ ಇಷ್ಟಾ… ಸೀಸನ್ 11 ರಲ್ಲಿ ಅಣ್ಣನಿಗೆ ಯಾರೋ ಮಾಟ- ಮಂತ್ರ ಮಾಡಿಸಿದ ಹಾಗಿದೆ. ಹಾಗಾಗಿ ಅಣ್ಣಾ ಬರೀ ಸಿಟ್ಟಗ್ತಾರೆ, ನಾನು… ನಾನು…ಅಂತಾನೆ ಇರತಾರೆ.

ಹೋಗ್ಲಿ, ಎಷ್ಟೇ ಆದ್ರೂ ನಮ್ಮ ಸುದೀಪ್ ಅಣ್ಣನ ಮೇಲಿನ ಪೀರೂತಿ ಕಮ್ಮಿ ಆಗೋಲ್ಲ. ಈಗ ನಮ್ಮಣ್ಣನ ಹೊಸ ಸಿನಿಮಾ “ಮ್ಯಾಕ್ಸ್” ಬಿಡುಗಡೆ ಆಗಿದೆ. ಸುದೀಪ್ ಅಣ್ಣನಿಗೆ ಜೈ ಹೇಳ್ತಾ… ಅಣ್ಣಾ ಇನ್ನಷ್ಟು ಸಿನಿಮಾ ಮಾಡ್ಲಿ ಅಂತ ಶುಭ ಹಾರೈಸುತ್ತೇನೆ.
ನಿಮ್ಮ ಪ್ರೀತಿಯ


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW