ನಮ್ಮ ಹೆಮ್ಮೆ ಚಿದಂಬರ್ ರಾವ್ ಜಂಬೆ

 ರಂಗಾಯಣದ ಮಾಜಿ ನಿರ್ಧೇಶಕರಾದ ಚಿದಂಬರ್ ರಾವ್ ಜಂಬೆ ಅವರನ್ನು ಭೇಟಿ ಮಾಡಿದ ಲೇಖಕ ಅರುಣ್ ಪ್ರಸಾದ್ ಅವರು ಅವರೊಂದಿಗಿನ ಅಮೂಲ್ಯ ಕ್ಷಣವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ… 

ಇತ್ತೀಚಿಗೆ ಚಿದಂಬರ್ ರಾವ್ ಜಂಬೆ ಅವರು ಶಿವಮೊಗ್ಗದಿಂದ ಅವರ ಭಾವ ನಿವೃತ್ತ ಭಾರತೀಯ ಸೈನ್ಯದ ಲಕ್ಷ್ಮೀನಾರಾಯಣರ ಜೊತೆ ಬಂದಿದ್ದರು.ಸುಮಾರು 25 ವರ್ಷದ ಹಿಂದೆ ಅಂದಾಜು 1997 ರಲ್ಲಿ ಹೆಗ್ಗೋಡಿನಲ್ಲಿ ಚರಕ ಸಂಸ್ಥೆಯ ಪ್ರಸನ್ನ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು, ಕಾರಣ ಅವರ ಮತ್ತು ನೀನಾಸಂ ಕೆ. ವಿ.ಸುಬ್ಬಣ್ಣ ಅವರ ನಡುವೆಯ ವ್ಯವಹಾರಿಕ ಭಿನ್ನಾಭಿಪ್ರಾಯ, ಇನ್ನಾವುದೋ ಚೆಕ್ ಕೇಸ್ ಅಂತಲೂ ಇನ್ನೂ ಕೆಲವರು ಪ್ರಸನ್ನರ ಪರ ಇರುವವರು ಕೆ.ವಿ.ಸುಬ್ಬಣ್ಣನವರ ಅಸಹಕಾರ ಮುಂತಾದ ಸುದ್ದಿಗಳಾಗಿತ್ತು.

ಆಗ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಪಕ್ಷೇತರರಾಗಿ ಲೋಕಸಭಾ ಸದಸ್ಯರಾಗಿದ್ದರು. ಅವರ ಚುನಾವಣೆಗೆ ಮತ್ತಿಕೊಪ್ಪದ ಸಹಕಾರಿ ಬಂದು ಹರನಾಥ ರಾಯರ ನೇತೃತ್ವವಾಗಿತ್ತು. ಆ ಕಾರಣದಿಂದ ಒಂದು ಸಂಜೆ ಅವರು ನನ್ನ ಕರೆದುಕೊಂಡು ಉಪವಾಸ ಸತ್ಯಾಗ್ರಹಿ ಚರಕ ಪ್ರಸನ್ನರ ಭೇಟಿಗೆ ಹೋಗಿದ್ದರು.

ಅವರ ಅಭಿಪ್ರಾಯಗಳನ್ನ ಕೇಳಿ ನಂತರ ಹೋಗಿದ್ದು ಆಗ ನೀನಾಸಂ ಪ್ರಾಂಶುಪಾಲರಾದ ಚೆದ೦ಬರ್ ರಾವ್ ಜಂಬೆ ಮನೆಗೆ ಹೋಗಿದ್ದೆವು. ಎಲ್ಲರ ಉದ್ದೇಶ ಚರಕ ಪ್ರಸನ್ನರ ಉಪವಾಸ ಅಂತ್ಯಗೊಳಿಸಿ ಸುಖಾಂತ್ಯಗೊಳಿಸುವ ಸದುದ್ದೇಶವಾಗಿತ್ತು. ಈ ನೆನಪಿನ ಘಟನೆಯ 25 ವರ್ಷದ ನಂತರ ನನ್ನ ಮತ್ತು ಜಂಬೆಯವರ ಈ ಭೇಟಿ ಆಯಿತು.

ನಂತರ 2001 ರಲ್ಲಿ ಸಾಗರ ತಾಲೂಕಿನ ಹೆಗ್ಗೋಡಿನ ಚರಕ ಪ್ರಸನ್ನರು ರಂಗಾಯಣದ ನಿರ್ದೇಶಕರಾಗಿ ಆಯ್ಕೆಯಾದರು. 2003 ರಲ್ಲಿ ಸರ್ಕಾರದ ವಾರ್ಷಿಕ ಅನುದಾನದ ಕಡಿತ ಕುರಿತು ಪ್ರತಿಭಟಿಸಿ ರಾಜೀನಾಮೆ ನೀಡಿದಾಗ ರಾಜ್ಯ ಸರ್ಕಾರ ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಜಂಬೆಯವರನ್ನು ಇವರಿಬ್ಬರೂ ಒಂದೇ ಊರಿನವರು ಎಂಬುದು ವಿಶೇಷ.

ರಂಗಾಯಣದ ನಾಲ್ಕನೇ ನಿರ್ದೇಶಕರಾದ ನಂತರ ಚಿದಂಬರ್ ರಾವ್ ಜಂಬೆ ರಾಷ್ಟ್ರಮಟ್ಟದಲ್ಲಿ ಕ್ರಿಯಾಶೀಲರಾದರು. ನಂತರ 2015ರಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಸ್ಟೀಕರಿಸಿದರು.

ನಾನು ಅವರ ಪ್ರತಿ ಫೇಸ್ಬುಕ್ ಪೋಸ್ಟ್ ನೋಡುತ್ತೇನೆ. ಇತ್ತೀಚೆಗೆ ಅವರ ಪೋಸ್ಟ್ ಒಂದು ವಿಶೇಷವಾಗಿತ್ತು. ಅದು ಉತ್ತರ ಕರ್ನಾಟಕದ ಸಿದ್ಧಿ ಜನಾಂಗದ ಕಲಾವಿದರಾದ ಗಿರಿಜಾ ಸಿದ್ದಿ, ಗೀತಾ ಸಿದ್ಧಿ, ಗಿರೀಶ್ ಸಿದ್ದಿ, ರೇಣುಕಾ ಸಿದ್ದಿ, ಪ್ರಶಾಂತ ಸಿದ್ದಿ, ಭಾಗ್ಯ ಸಿದ್ಧಿ ಮುಂತಾದವರು ಹೊರ ಜಗತ್ತಿಗೆ ಬರಲು ಕಾರಣವಾಗಿದ್ದು 1984ರಲ್ಲಿ ಇವರು ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿಯಲ್ಲಿ ಸಿದ್ದಿ ಜನಾ೦ಗದವರಿಗಾಗಿ Things Fall Apart ಕಾದಂಬರಿ ಆದಾರಿತ ನಾಟಕ ಇವರು ಮಾಡಿಸಿದ್ದರು, ಶಿರನಾಲೆ ಕಾಡಿನ ಮಧ್ಯ ಕೊಳ್ಳಿ ಬೆಳಕಿನಲ್ಲಿ ನಡೆಸಿದ ಆ ನಾಟಕ ಪ್ರದರ್ಶನ ಆ ಕಾಲಕ್ಕೆ ಒಂದು ಹೊಸ ಅನುಭವ ಆಗಿತ್ತಂತೆ.

ಈ ನಾಟಕದ ಮುಖ್ಯ ಪಾತ್ರ ಒಕೊಂಕಾ ಮತ್ತು ದೇವಿ ಪಾತ್ರದಾರಿಗಳಾಗಿದ್ದ ಸಿದ್ಧಿ ಜನಾಂಗದ ಬಾಬು (ಪರಶುರಾಮ ಗಿರಗೋವಿ) ಅವರ ತಂಗಿ ಕುಸುಮಾ ಮತ್ತು ಅವರ ಮಗಳು ರೇಣುಕಾ ಅತ್ಯುತ್ತಮ ನಟನೆ ಮಾಡಿದ್ದರಂತೆ ಅವತ್ತು ಮಂಚಿಕೇರಿಯ ರಾಜೇಶ್ವರಿ ಪ್ರೌಢಶಾಲೆಯಲ್ಲಿ ನಡೆದ ಔಪಚಾರಿಕ ಸಬೆಯಲ್ಲಿ ಮೊದಲ ಬಾರಿ ಮಾತಾಡಿದ ಕುಸುಮಾ “ಈ ನಾಟಕ ನಮ್ಮನ್ನು ಹೊರ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಿದೆ” ಎಂದಿದ್ದರಂತೆ ಅದರ ಮುಂದಿನ 35 ವರ್ಷದಲ್ಲಿ ಸಿದ್ದಿ ಜನಾ೦ಗದ ಕಲಾವಿದರು ನಾಟಕ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ ಇದಕ್ಕೆ ಚಿದಂಬರ್ ರಾವ್ ಜಂಬೆ ಕಾರಣಕರ್ತರು ಕೂಡ.

ಅವರ ಭೇಟಿ ನನಗೆ ತುಂಬಾ ಸಂತೋಷ ತಂದಿತು. ಅವರು ದೆಹಲಿಯ NSD ವ್ಯಾಸಂಗ ಮಾಡಿದ್ದಾರೆ. ಹೆಗ್ಗೋಡಿನ ನೀನಾಸಂ ಪ್ರಾಂಶುಪಾಲರಾಗಿ, ರಂಗಾಯಣದ ನಿರ್ದೇಶಕರಾಗಿ, ಸಿದ್ದಿ ಬುಡಕಟ್ಟು ಜನಾಂಗದ ಸಿದ್ಧಿ ಕಲಾವಿದರ ಹೊರಜಗತ್ತಿಗೆ ಪರಿಚಯಿಸಿದವರು ಮತ್ತು ಕೇಂದ್ರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು .

ಚಿದಂಬರ್ ರಾವ್ ಜ೦ಬೆ ಶಿವಮೊಗ್ಗ ಜಿಲ್ಲೆಯ ನಮ್ಮ ಸಾಗರ ತಾಲ್ಲೂಕಿನವರು ಎಂಬುದು ನನಗೆ ಹೆಮ್ಮೆ.  ಪ್ರಚಾರ – ಪ್ರಶಸ್ತಿಗಳಿಂದ ದೂರವಿರುವ ರಾಷ್ಟ್ರ ಮಟ್ಟದ ರಂಗಕರ್ಮಿ ಜಂಬೆಯವರು ನಮ್ಮ ತಾಲ್ಲೂಕಿನವರು ಎಂಬುದು ನನಗೆ ಹೆಮ್ಮೆ ಅವರ ಆಗಮನ ಕೂಡ ಅಷ್ಟೇ ಖುಷಿಯ ಸಂಗಾತಿ.


  • ಅರುಣ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW