ಮುನಿಸನು ತೊರೆಯಲು ಚಾಕೊಲೇಟ್ ಕರಾಮತ್ತು…ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಜಗತ್ತನ್ನು ಆವರಿಸಿದೆ
ಚಾಕೊಲೇಟ್ ಮತ್ತು
ಮುನಿಸನು ತೊರೆಯಲು
ಅದರದೇ ಕರಾಮತ್ತು
ಸುತ್ತಿದ ಕಾಗದದಲೂ
ನಮ್ಮ ಸೆಳೆವ ಹಿಕ್ಮತ್ತು
ಜಾಹೀರಾತಿನ ಆದಾಯಕೂ ಅದರದೇ ಮಹತ್ತು
ತಿಂದು ತಿಂದು ತಣಿಯದ ಮಕ್ಕಳಿಗೆ
ಹಲ್ಲಿನಲ್ಲಿ ಎಲ್ಲ ತೂತು.
ಊಟ ಸೇರದೆ ಬೊಜ್ಜಿನದೇ
ತೀವ್ರ ಆಪತ್ತು..
ಓ..ಚಾಕಲೇಟ್ ಏನಿದು ನಿನ್ನ
ಮಹಿಮೆ
ಅಂಗಡಿಯಲ್ಲಿ ಮೊದಲ ನೋಟಕ್ಕೇ ಸೆಳೆವ ನಿನ್ನ ಗರಿಮೆ
ದುಡ್ಡಿಲ್ಲದವರ ಬಾಯಲ್ಲಿ
ನೀರೂರಿಸುವೆ ನೀ ಸರಿಯೆ
ಹಣವುಳ್ಳವರಿಗಾಗಿಯೇ ನೀನು ಮೀಸಲೆ…
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
