ಎಳೆಯ ಎಳೆಗೂ ಹಾಡು ಹೇಳಿ ತಾನು ನಕ್ಕು ನಲಿಯಿತು…ಕವಿ ನಾಗರಾಜ ಬಿ.ನಾಯ್ಕ ಅವರ ಸುಂದರ ಲೇಖನವನ್ನು ತಪ್ಪದೆ ಮುಂದೆ ಓದಿ…
ಧಾರೆಯಂತೆ
ಹರಿದು ಬಂದು
ಮನಸ್ಸಿನಾಳ ತುಂಬಿ ನಿಂದು
ಮಣ್ಣ ಬೇರ ಚಿಗುರ ಸೇರಿ
ಮರವಾಗಿ ನಿಂತಿತು
ಹಸಿರು ಚಿಗುರಿ
ಎಲೆ ತುಂಬಿ ಹೂ ಹರಡಿ
ಹಕ್ಕಿ ಕೂಗಿ ಕರೆಯಿತು.
ಹಣ್ಣು ಕಾಯಿ
ತುಂಬಿಕೊಂಡು
ಒಳಿತು ನೆರಳು
ಅಂಟಿಕೊಂಡು
ಬದುಕು ಭಾವ
ಕೂಡಿಕೊಂಡು
ಎಳೆಯ ಎಳೆಗೂ
ಹಾಡು ಹೇಳಿ
ತಾನು ನಕ್ಕು ನಲಿಯಿತು.
ಗಾಳಿ ಬೀಸಿದಾಗಲೆಲ್ಲಾ
ಕಂಪು ತಂಪು ಸೇರಿಕೊಂಡು
ಮುಗಿಲ ಮೋಡ ಹನಿಗಳಾಗಿ
ಮತ್ತೆ ಧರೆಗೆ ಇಳಿಯಿತು
ಒಲವ ಹಂಚಿ ಕವಿತೆ ತಾನು
ಭಾವವಾಗಿ ಉಳಿಯಿತು
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.
