‘ಮಂಡಲ ಕಲೆ’ ಯಲ್ಲಿ ಶೃತಿ ಮೀಟಿದಾಗ

ವೈದ್ಯೆ ಡಾ.ಮಂಜುಳಾ ಅವರ ಮಗಳು ಕುಮಾರಿ ಶೃತಿ ಕಟ್ಟಿಯ ಕೈ ಚಳಕದಲ್ಲಿ ಅರಳಿದ ‘ಮಂಡಲ ಕಲೆ’. ಗೋಲಾಕಾರದಲ್ಲಿ ಭಿನ್ನ ವಿಭಿನ್ನವಾಗಿ ಚಿತ್ರಿಸಿಕೊಂಡು ನಿಂತಿರುವ, ಕಣ್ಮನ ಸೆಳೆಯುವ ಚುಕ್ಕಿ, ಗೆರೆ, ವೃತ್ತಗಳ ಬಳಸಿಕೊಂಡು ಬಳುಕಿ ನಿಂತ ಕಲಾಹಂದರ, ಶೃತಿ ಕಟ್ಟಿ ಅವರ ‘ಮಂಡಲ ಕಲೆ’ ಕುರಿತು ಡಾ.ಪ್ರಕಾಶ ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಮೊನ್ನೆ ರವಿವಾರ “ಸಂಕ್ರಾಂತಿ ದಿನ” ಧಾರವಾಡಕ್ಕೆ ಪಾದ ಬೆಳೆಸಿದ್ದೆ. ಆವತ್ತು ಸುಮಾರು 10 ವರ್ಷಗಳ ನಂತರ ಡಿಗ್ರಿ ಸಹಪಾಠಿ “ಡಾ. ಮಂಜುಳಾ ಕಟ್ಟಿ”ಯವರನ್ನ ಭೇಟಿಯಾಗಲು ಅಚಾನಕ್ಕಾಗಿ ಅವರ ಮನೆಗೋಗಿದ್ದೆ. ರುಚಿಕಟ್ಟಾದ ತುಪ್ಪದ ದೋಸೆ, ಚಹಾದ ನಂತರ ಇಷ್ಟುದ್ದ ಮಾತುಕತೆ. ಡಿಗ್ರಿ ದಿನಗಳು ಮತ್ತು ಇಷ್ಟು ವರ್ಷದ ಬದುಕ ಸುಖದುಃಖ ದಿನಗಳ ಮೆಲುಕು…

ಆವಾಗ…

ನನ್ನ ದೃಷ್ಟಿ ನೆಟ್ಟಿದ್ದು ಪಕ್ಕದಲ್ಲಿ ನಿಂತಿದ್ದ ಗೋಡೆಯಡೆಗೆ ಜೋತುಬಿದ್ದ ಫೋಟೊಗಳತ್ತ. “ಅಸಂಖ್ಯ ಚುಕ್ಕಿ, ಚಿಕ್ಕ ಉದ್ದದ ಗೆರೆಗಳು, ಬಣ್ಣಗಳು ಕುಸುರಿಗೊಂಡು ತಮ್ಮೊಳಗೆ ತಾವು ಗಿರಕಿ ಹೊಡೆಯುತ್ತಾ.. ವೃತ್ತಾಕಾರದಲ್ಲಿ ಚೆಂದದ ಭಾವ, ಹಿತ ನೀಡುವ ಚಿತ್ರಪಟಗಳು”.

ನನ್ನ ದೃಷ್ಟಿಯನ್ನಲ್ಲದೆ, ತಟ್ಟನೇ ಸಂಪೂರ್ಣ ಏಕಾಗ್ರತೆಯನ್ನು ಬಸಿದುಕೊಂಡು ನೋಡಿಸಿಕೊಂಡವು. ಏಕದಮ್ ಚೈತನ್ಯ ತುಂಬಿದಂತಾಗಿ “ವ್ಹಾವ್”!! ಎನ್ನುವ ಉದ್ಗಾರ ಹೊರಡುವಂತೆ ಮಾಡಿದ, ಇದೇನು? ಇದರ ಅರ್ಥ ಹೀಗಾ..? ಇದ್ಯಾವ ಚಿತ್ರಕಲೆ? ಎನ್ನುವ ಪ್ರಶ್ನೆಗಳ ಸುರಿಮಳೆಗಯ್ಯುವಂತೆ ಮಾಡಿದ ಚಿತ್ರಪಟಗಳು.

ಗೋಲಾಕಾರದಲ್ಲಿ ಭಿನ್ನ ವಿಭಿನ್ನವಾಗಿ ಚಿತ್ರಿಸಿಕೊಂಡು ನಿಂತಿರುವ, ಕಣ್ಮನ ಸೆಳೆಯುವ ಚುಕ್ಕಿ, ಗೆರೆ, ವೃತ್ತಗಳ ಬಳಸಿಕೊಂಡು ಬಳುಕಿ ನಿಂತ ಕಲಾಹಂದರ.

ಇದೇನು..? ಇದ್ಯಾವ ಚಿತ್ರಕಲೆ? ಎನ್ನುವ ನನ್ನ ಪ್ರಶ್ನೆಗೆ ಉತ್ತರವಾಗಿದ್ದು “ಮಂಡಲ ಕಲೆ”.

ನಾ “ಮಂಡಲ ಕಲೆ”ಯನ್ನು ಚಿತ್ರಪಟದಲ್ಲಿ ನೋಡಿದ್ದು ಇದೇ ಮೊದಲು. ಪುರಾತನ ದೇವಸ್ಥಾನಗಳ ಗೋಡೆ, ಕಂಬಗಳ ಮೇಲೆ, ಚಾವಣಿಯಲ್ಲಿ ವೃತ್ತಾಕಾರದ ಕುಸುರಿ ಕಲೆ ನೋಡಿದ್ದ ನೆನಪು ಮೆದುಳಲ್ಲಿ ಮಿಂಚಿತು.

ನನ್ನ ಸಹಪಾಠಿ ವೈದ್ಯೆ ಡಾ.ಮಂಜುಳಾ ಮಗಳು ಕುಮಾರಿ “ಶೃತಿ ಕಟ್ಟಿ”ಯ ಕೈ ಚಳಕದ ಝಲಕ್ ಇವು. BCA ಪದವಿಧರೆಯಾದ “ಶೃತಿ”, ಬಿಡುವು ಸಿಕ್ಕಿದಾಗಲೆಲ್ಲ “ಮಂಡಲ ಕಲೆ”,

“ಕಸೂತಿ”, ಬಳಸದೆ ಬಿಸಾಡಿದ ವಸ್ತುಗಳಿಂದ ಅಲಂಕಾರ, ವಿಶಿಷ್ಟ ರೂಪ ಕೊಟ್ಟು, ಚೆಂದನೆಯ ಕಲಾಕೃತಿ ರಚಿಸುವ ಚಾಣಾಕ್ಷೆ.

ಕಾಲೇಜು ಗೆಳತಿ/ಯರಿಗೆ, ತಂದೆ-ತಾಯಿಗೆ ತನ್ನದೆ ಶೈಲಿಯ “ಗಿಫ್ಟ್” ಕೊಡಲು ಕಂಡುಕೊಂಡ ದಾರಿಯಿದು. ಅವಳ ಕ್ರೀಯಾಶಿಲತೆಗೆ ಹಿಡಿದ ಕೈಗನ್ನಡಿ. “ಶೃತಿ”ಯ ಕಲೆ ನೋಡಿ ನಾನಂತೂ ಬೆರಗಾಗಿದ್ದು ಖರೆ. ಅವಳ ಕ್ರೀಯಾಶಿಲತೆಗೆ ಇನ್ನಷ್ಟೂ ಹೊಳಪು ತುಂಬಿದರೆ ಅದ್ಭುತ ಕಲೆಗಾರಿಕೆ ಮೈದಳೆಯುವುದು.

(ಕಲಾ ನಿಪುಣರು ಮಾರ್ಗದರ್ಶನ ಮಾಡಿದರೂ ಸಾಕು)

ಮೊಬೈಲ್ ಕವರ್, ವಿವಿಧ ಬಣ್ಣಗಳ ಚಿತ್ರಪಟಗಳು, ಗ್ರೀಟಿಂಗ್ ಕಾರ್ಡುಗಳು, ಕೈ ಚೀಲ, ಪೆನ್ ಸ್ಟ್ಯಾಂಡ್, ನೀರಿನ ಬಾಟಲ್ ಮುಂತಾದವುಗಳ ಮೇಲೆ ವಿವಿಧ ಶೈಲಿಯ “ಮಂಡಲ ಕಲೆ” ಅರಳಿಸಿದ್ದಾಳೆ ಶೃತಿ.

ಅಷ್ಟೇ ಅಲ್ಲದೇ..

ಹಳೆಯ ಕನ್ನಡಿಯ ಅಂಚಿಗೆ ಕಸೂತಿ, ಕಸವಾದ ಕಪ್ಪೆಚಿಪ್ಪುಗಳಿಂದ ಸಹ ಅಲಂಕಾರ ಹೊಮ್ಮಿಸಿದ್ದಾಳೆ.

“ಮಂಡಲ ಕಲೆ” ನನಗೆ ಪರಿಚಯಿಸಿದ್ದು ಅವಳೇ…

ಮಂಡಲ ಎಂದರೇ “ವೃತ್ತ” ಎಂದರ್ಥ.

“ಮಂಡಲ ಕಲೆ” ಪುರಾತನವಾದದ್ದು ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಅನಾದಿ ಕಾಲದಿಂದಲೂ “ಶ್ರದ್ಧಾಪೂರ್ವಕವಾಗಿ” ಬೆಳೆಸಿಕೊಂಡು ಬಂದ ಕಲೆ.

ನಾಲ್ಕನೇಯ ಶತಮಾನದಿಂದಲೇ ಟಿಬೆಟ್, ಭಾರತ, ಚೀನಾ, ಜಪಾನ್, ನೇಪಾಳ ಮೊದಲಾಗಿ ಹಲವು ಏಷಿಯಾ ದೇಶಗಳಲ್ಲಿ ಮಂಡಲಗಳ ರಚನೆ ಅಸ್ತಿತ್ವದಲ್ಲಿತ್ತು ಎಂಬ ಮಾಹಿತಿಯಿದೆ. ನಮ್ಮ ದೇಶದಲ್ಲಿನ ಅನೇಕ ಹಿಂದೂ ದೇವಾಲಯಗಳಲ್ಲಿ ಮತ್ತು ಬೌದ್ಧ ಧರ್ಮದ ದೇವಸ್ಥಾನಗಳಲ್ಲಿ ಅಲಂಕಾರಿಕವಾಗಿ ಬಳಸಿದ್ದಾರೆ.

ಧಾರ್ಮಿಕವಾಗಿ “ಮಂಡಲ” ಚಿತ್ರಗಳನ್ನು ಹೋಮ, ಹವನ, ಯಾಗ-ಯಜ್ಞಗಳ ಆಚರಣೆಯ ಸಂದರ್ಭದಲ್ಲಿ ಬಿಡಿಸುವುದು ವಾಡಿಕೆ. ಶಾಸ್ತ್ರೀಯವಾಗಿ ಧಾರ್ಮಿಕ ನಂಬಿಕೆಯಿಂದ ಮಂಡಲಗಳನ್ನು ರಚಿಸುವರು.

ಇದೇ ಸಿದ್ಧಾಂತ ಅನುಸರಿಸಿ ವಿಭಿನ್ನ ರೀತಿಯಲ್ಲಿ, ಕ್ರೀಯಾತ್ಮಕ ಶೈಲಿಯಲ್ಲಿ ನೋಡುಗನ ಮನಸೆಳೆವ ಚುಕ್ಕೆ, ಗೆರೆ ಸಂಯೋಜನಾತ್ಮಕ ವಿಶಿಷ್ಟ ಚಿತ್ರಕಲೆಯೇ “ಮಂಡಲ ಕಲೆ”.
“ಮಂಡಲ ಕಲೆ” ದೀರ್ಘ ಸಮಯ, ಏಕಾಗ್ರತೆ, ನಿಖರತೆ, ಕ್ರೀಯಾಶೀಲತೆ ಬಯಸುವ ಕಲೆ. ಇದೊಂದು ದಿವ್ಯ ಧ್ಯಾನ. ಸಂಶೋಧನೆಗಳ ಪ್ರಕಾರ ಸಮ, ಪಾರ್ಶ್ವ, ವೃತ್ತ ರೇಖಾಚಿತ್ರಗಳನ್ನು ಬಿಡಿಸುವುದು ಮತ್ತು ವಿವಿಧ ಬಣ್ಣ ತುಂಬುವ ದೀರ್ಘ ಕ್ರಿಯೆಯಿಂದ,

“ಮಂಡಲ” ಹಾಕುವಾಗ ಸೂಕ್ಷ್ಮ ರೇಖೆಗಳನ್ನು ತಾಸುಗಟ್ಟಲೆ ಗಮನಿಸಿ ಕಲೆಯ ಮೇಲೆ ಸಂಪೂರ್ಣ ಏಕಾಗ್ರತೆ ನೆಟ್ಟಿರುವುದರಿಂದ ದೇಹದಲ್ಲಿ ಕಾರ್ಟಿಸೋಲ್ (cortisol) ಹಾರ್ಮೋನ್ ಮಟ್ಟವು ಕಡಿಮೆಯಾಗಿ, ಮೇಲಾಟೊನಿನ್ (melatonin) ಎಂಬ ಹಾರ್ಮೋನ್ ಬಿಡುಗಡೆಯಾಗುವುದರಿಂದ ನಿದ್ರೆ ಹೆಚ್ಚಾಗುವುದು ಮತ್ತು ಮಾನಸಿಕ ಒತ್ತಡದಿಂದ ನಿರಾಳತೆ ದೊರಕುವುದು.

ನಿಯಮಿತವಾಗಿ “ಮಂಡಲ ಕಲೆ” ಅಭ್ಯಾಸ ಮಾಡಿದರೆ, ರೋಗ ನಿರೋಧಕ ಶಕ್ತಿ ಹೆಚ್ಚುವುದು, ರಕ್ತದೊತ್ತಡ ನಿಯಂತ್ರಣವಾಗುತ್ತೆ, ಆತಂಕ, ಒತ್ತಡರಹಿತ ಉತ್ತಮ ನಿದ್ರೆಯನ್ನು ಪಡೆಯಲು ಪರಿಣಾಮಕಾರಿಯಾಗಿದೆ. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಮಂಡಲ ಚಿತ್ರಿಸುವುದು ಮತ್ತು ಬಣ್ಣಗಳಿಂದ ಅಲಂಕರಿಸುವುದು ಒಂದು ಅತ್ಯುತ್ತಮ ಹವ್ಯಾಸವೆಂದು ಸಂಶೋಧನೆಗಳು ಸಾಬೀತುಪಡಿಸಿವೆ.

ಮನಸ್ಸಿಗೆ ಕಿರಿಕಿರಿ ಉಂಟಾದಾಗ, ಮನಸ್ಸು ತಿಳಿಗೊಳಿಸಲು… ಒಂದಷ್ಟು ಚಿತ್ರ ಬರೆದು ಆ ಒತ್ತಡವನ್ನು ಹೊರಹಾಕಲು, ಋಣಾತ್ಮಕ ಆಲೋಚನೆಗಳನ್ನು ದೂರವಾಗಿಸಲು “ಮಂಡಲ ಕಲೆ” ಒಂದು ಉತ್ತಮ ಮಾಧ್ಯಮಮೊನ್ನೆ ರವಿವಾರ “ಸಂಕ್ರಾಂತಿ ದಿನ” ಧಾರವಾಡಕ್ಕೆ ಪಾದ ಬೆಳೆಸಿದ್ದೆ. ಆವತ್ತು ಸುಮಾರು 10 ವರ್ಷಗಳ ನಂತರ ಡಿಗ್ರಿ ಸಹಪಾಠಿ ಭೇಟಿಯಾಗಲು ಅವರ ಮನೆಗೆ ನಡೆದಿದ್ದೆ. ರುಚಿಕಟ್ಟಾದ ದೋಸೆ, ಚಹಾದ ನಂತರ ಅದು ಇಷ್ಟುದ್ದ ಮಾತುಕತೆ. ಡಿಗ್ರಿ ದಿನಗಳು ಮತ್ತು ಇಷ್ಟು ವರ್ಷದ ಬದುಕ ಸುಖದುಃಖ ದಿನಗಳ ಮೆಲುಕು…
ಆವಾಗ…

ನನ್ನ ದೃಷ್ಟಿ ನೆಟ್ಟಿದ್ದು ಪಕ್ಕದಲ್ಲಿ ನಿಂತಿದ್ದ ಗೋಡೆಯಡೆಗೆ “ಅಸಂಖ್ಯ ಚುಕ್ಕಿ, ಚಿಕ್ಕ ಉದ್ದದ ಗೆರೆಗಳು, ಬಣ್ಣಗಳು ಕುಸುರಿಗೊಂಡು ತಮ್ಮೊಳಗೆ ತಾವು ಗಿರಕಿ ಹೊಡೆಯುತ್ತಾ.. ವೃತ್ತಾಕಾರದಲ್ಲಿ ಚೆಂದದ ಭಾವ, ಹಿತ ನೀಡುವ ಚಿತ್ರಪಟಗಳು”

ನನ್ನ ದೃಷ್ಟಿಯನ್ನಲ್ಲದೆ, ತಟ್ಟನೇ ಸಂಪೂರ್ಣ ಏಕಾಗ್ರತೆಯನ್ನು ಬಸಿದುಕೊಂಡು ನೋಡಿಸಿಕೊಂಡವು. ಏಕದಮ್ ಚೈತನ್ಯ ತುಂಬಿದಂತಾಗಿ “ವ್ಹಾವ್”!! ಎನ್ನುವ ಉದ್ಗಾರ ಹೊರಡುವಂತೆ ಮಾಡಿದ, ಇದೇನು? ಇದರ ಅರ್ಥ ಹೀಗಾ..? ಇದ್ಯಾವ ಚಿತ್ರಕಲೆ? ಎನ್ನುವ ಪ್ರಶ್ನೆಗಳ ಸುರಿಮಳೆಗಯ್ಯುವಂತೆ ಮಾಡಿದ ಚಿತ್ರಪಟಗಳು.

ಗೋಲಾಕಾರದಲ್ಲಿ ಭಿನ್ನ ವಿಭಿನ್ನವಾಗಿ ಚಿತ್ರಿಸಿಕೊಂಡು ನಿಂತಿರುವ, ಕಣ್ಮನ ಸೆಳೆಯುವ ಚುಕ್ಕಿ, ಗೆರೆ, ವೃತ್ತಗಳ ಬಳಸಿಕೊಂಡು ಬಳುಕಿ ನಿಂತ ಕಲಾಹಂದರ.

ಇದೇನು..? ಇದ್ಯಾವ ಚಿತ್ರಕಲೆ? ಎನ್ನುವ ನನ್ನ ಪ್ರಶ್ನೆಗೆ ಉತ್ತರವಾಗಿದ್ದು “ಮಂಡಲ ಕಲೆ”.

ನಾ “ಮಂಡಲ ಕಲೆ”ಯನ್ನು ಚಿತ್ರಪಟದಲ್ಲಿ ನೋಡಿದ್ದು ಇದೇ ಮೊದಲು. ಪುರಾತನ ದೇವಸ್ಥಾನಗಳ ಗೋಡೆ, ಕಂಬಗಳ ಮೇಲೆ, ಚಾವಣಿಯಲ್ಲಿ ವೃತ್ತಾಕಾರದ ಕುಸುರಿ ಕಲೆ ನೋಡಿದ್ದ ನೆನಪು ಮೆದುಳಲ್ಲಿ ಮಿಂಚಿತು.

ನನ್ನ ಸಹಪಾಠಿಯ ಮಗಳು ಕುಮಾರಿ “ಶೃತಿ ಕಟ್ಟಿ”ಯ ಕೈ ಚಳಕದ ಝಲಕ್ ಇವು. BCA ಪಧವಿದರೆಯಾದ “ಶೃತಿ”, ಬಿಡುವು ಸಿಕ್ಕಾದಾಗಲೆಲ್ಲ “ಮಂಡಲ ಕಲೆ”, “ಕಸೂತಿ”, ಬಳಸದೆ ಬಿಸಾಡಿದ ವಸ್ತುಗಳಿಂದ ಅಲಂಕಾರ, ವಿಶಿಷ್ಟ ರೂಪ ಕೊಟ್ಟು, ಚೆಂದನೆಯ ಕಲಾಕೃತಿ ರಚಿಸುವ ಚಾಣಾಕ್ಷೆ.

ಕಾಲೇಜು ಗೆಳತಿ/ಯರಿಗೆ, ತಂದೆ-ತಾಯಿಗೆ ತನ್ನದೆ ಶೈಲಿಯ “ಗಿಫ್ಟ್” ಕೊಡಲು ಕಂಡುಕೊಂಡ ದಾರಿಯಿದು. ಅವಳ ಕ್ರೀಯಾಶಿಲತೆಗೆ ಹಿಡಿದ ಕೈಗನ್ನಡಿ. “ಶೃತಿ”ಯ ಕಲೆ ನೋಡಿ ನಾನಂತೂ ಬೆರಗಾಗಿದ್ದು ಖರೆ. ಅವಳ ಕ್ರೀಯಾಶಿಲತೆಗೆ ಇನ್ನಷ್ಟೂ ಹೊಳಪು ತುಂಬಿದರೆ ಅದ್ಭುತ ಕಲೆಗಾರಿಕೆ ಮೈದಳೆಯುವುದು.

(ಕಲಾ ನಿಪುಣರು ಮಾರ್ಗದರ್ಶನ ಮಾಡಿದರೂ ಸಾಕು)

ಮೊಬೈಲ್ ಕವರ್, ವಿವಿಧ ಬಣ್ಣಗಳ ಚಿತ್ರಪಟಗಳು, ಗ್ರೀಟಿಂಗ್ ಕಾರ್ಡುಗಳು, ಕೈ ಚೀಲ, ಪೆನ್ ಸ್ಟ್ಯಾಂಡ್ ಮುಂತಾದವುಗಳ ಮೇಲೆ ವಿವಿಧ ಶೈಲಿಯ “ಮಂಡಲ ಕಲೆ” ಅರಳಿಸಿದ್ದಾಳೆ
ಶೃತಿ.

ಅಷ್ಟೇ ಅಲ್ಲದೇ..

ಹಳೆಯ ಕನ್ನಡಿಯ ಅಂಚಿಗೆ ಕಸೂತಿ, ಕಸವಾದ ಕಪ್ಪೆಚಿಪ್ಪುಗಳಿಂದ ಸಹ ಅಲಂಕಾರ ಹೊಮ್ಮಿಸಿದ್ದಾಳೆ.

“ಮಂಡಲ ಕಲೆ” ನನಗೆ ಪರಿಚಯಿಸಿದ್ದು ಅವಳೇ…

ಮಂಡಲ ಎಂದರೇ “ವೃತ್ತ” ಎಂದರ್ಥ.

“ಮಂಡಲ ಕಲೆ” ಪುರಾತನವಾದದ್ದು ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಅನಾದಿ ಕಾಲದಿಂದಲೂ “ಶ್ರದ್ಧಾಪೂರ್ವಕವಾಗಿ” ಬೆಳೆಸಿಕೊಂಡು ಬಂದ ಕಲೆ.

ನಾಲ್ಕನೇಯ ಶತಮಾನದಿಂದಲೇ ಟಿಬೆಟ್, ಭಾರತ, ಚೀನಾ, ಜಪಾನ್, ನೇಪಾಳ ಮೊದಲಾಗಿ ಹಲವು ಏಷಿಯಾ ದೇಶಗಳಲ್ಲಿ ಮಂಡಲಗಳ ರಚನೆ ಅಸ್ತಿತ್ವದಲ್ಲಿತ್ತು ಎಂಬ ಮಾಹಿತಿಯಿದೆ. ನಮ್ಮ ದೇಶದಲ್ಲಿನ ಅನೇಕ ಹಿಂದೂ ದೇವಾಲಯಗಳಲ್ಲಿ ಮತ್ತು ಬೌದ್ಧ ಧರ್ಮದ ದೇವಸ್ಥಾನಗಳಲ್ಲಿ ಅಲಂಕಾರಿಕವಾಗಿ ಬಳಸಿದ್ದಾರೆ.

ಧಾರ್ಮಿಕವಾಗಿ “ಮಂಡಲ” ಚಿತ್ರಗಳನ್ನು ಹೋಮ, ಹವನ, ಯಾಗ-ಯಜ್ಞಗಳ ಆಚರಣೆಯ ಸಂದರ್ಭದಲ್ಲಿ ಬಿಡಿಸುವುದು ವಾಡಿಕೆ. ಶಾಸ್ತ್ರೀಯವಾಗಿ ಧಾರ್ಮಿಕ ನಂಬಿಕೆಯಿಂದ ಮಂಡಲಗಳನ್ನು ರಚಿಸುವರು.

ಇದೇ ಸಿದ್ಧಾಂತ ಅನುಸರಿಸಿ ವಿಭಿನ್ನ ರೀತಿಯಲ್ಲಿ, ಕ್ರೀಯಾತ್ಮಕ ಶೈಲಿಯಲ್ಲಿ ನೋಡುಗನ ಮನಸೆಳೆವ ಚುಕ್ಕೆ, ಗೆರೆ ಸಂಯೋಜನಾತ್ಮಕ ವಿಶಿಷ್ಟ ಚಿತ್ರಕಲೆಯೇ “ಮಂಡಲ ಕಲೆ”.
“ಮಂಡಲ ಕಲೆ” ದೀರ್ಘ ಸಮಯ, ಏಕಾಗ್ರತೆ, ನಿಖರತೆ, ಕ್ರೀಯಾಶೀಲತೆ ಬಯಸುವ ಕಲೆ. ಇದೊಂದು ದಿವ್ಯ ಧ್ಯಾನ. ಸಂಶೋಧನೆಗಳ ಪ್ರಕಾರ ಸಮ, ಪಾರ್ಶ್ವ, ವೃತ್ತ ರೇಖಾಚಿತ್ರಗಳನ್ನು ಬಿಡಿಸುವುದು ಮತ್ತು ವಿವಿಧ ಬಣ್ಣ ತುಂಬುವ ದೀರ್ಘ ಕ್ರಿಯೆಯಿಂದ, “ಮಂಡಲ” ಹಾಕುವಾಗ ಸೂಕ್ಷ್ಮ ರೇಖೆಗಳನ್ನು ತಾಸುಗಟ್ಟಲೆ ಗಮನಿಸಿ ಕಲೆಯ ಮೇಲೆ ಸಂಪೂರ್ಣ ಏಕಾಗ್ರತೆ ನೆಟ್ಟಿರುವುದರಿಂದ ದೇಹದಲ್ಲಿ ಕಾರ್ಟಿಸೋಲ್ (cortisol) ಹಾರ್ಮೋನ್ ಮಟ್ಟವು ಕಡಿಮೆಯಾಗಿ, ಮೇಲಾಟೊನಿನ್(melatonin) ಎಂಬ ಹಾರ್ಮೋನ್ ಬಿಡುಗಡೆಯಾಗುವುದರಿಂದ ನಿದ್ರೆ ಹೆಚ್ಚಾಗುವುದು ಮತ್ತು ಮಾನಸಿಕ ಒತ್ತಡದಿಂದ ನಿರಾಳತೆ ದೊರಕುವುದು.

ನಿಯಮಿತವಾಗಿ “ಮಂಡಲ ಕಲೆ” ಅಭ್ಯಾಸ ಮಾಡಿದರೆ, ರೋಗನಿರೋಧಕ ಶಕ್ತಿ ಹೆಚ್ಚುವುದು, ರಕ್ತದೊತ್ತಡ ನಿಯಂತ್ರಣವಾಗುತ್ತೆ, ಆತಂಕ, ಒತ್ತಡರಹಿತ ಉತ್ತಮ ನಿದ್ರೆಯನ್ನು ಪಡೆಯಲು ಪರಿಣಾಮಕಾರಿಯಾಗಿದೆ. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಮಂಡಲ ಚಿತ್ರಿಸುವುದು ಮತ್ತು ಬಣ್ಣಗಳಿಂದ ಅಲಂಕರಿಸುವುದು ಒಂದು ಅತ್ಯುತ್ತಮ ಹವ್ಯಾಸವೆಂದು ಸಂಶೋಧನೆಗಳು ಸಾಬೀತುಪಡಿಸಿವೆ.

ಮನಸ್ಸಿಗೆ ಕಿರಿಕಿರಿ ಉಂಟಾದಾಗ, ಮನಸ್ಸು ತಿಳಿಗೊಳಿಸಲು… ಒಂದಷ್ಟು ಚಿತ್ರ ಬರೆದು ಆ ಒತ್ತಡವನ್ನು ಹೊರಹಾಕಲು, ಋಣಾತ್ಮಕ ಆಲೋಚನೆಗಳನ್ನು ದೂರವಾಗಿಸಲು “ಮಂಡಲ ಕಲೆ” ಒಂದು ಉತ್ತಮ ಮಾಧ್ಯಮ.

ಇದೇ ಕಾರಣಕ್ಕಾಗಿ ಮಂಡಲಗಳ ರಚನೆ ಮತ್ತು ಬಳಕೆ ವೈದ್ಯಕೀಯವಾಗಿ “ಮಂಡಲ ಆರ್ಟ್ ಥೆರಪಿ” ಎಂದು ಬಳಸಲಾಗುವುದು. ಮಾನಸಿಕವಾಗಿ ಕುಸಿದವರಿಗೆ, ಖಿನ್ನತೆ, ಆತಂಕ, ಒತ್ತಡ, ಮಾನಸಿಕ ಆಘಾತ, ನಿದ್ರಾಹೀನತೆ, ದುಃಖ, ವ್ಯಸನ ಪೀಡಿತರಿಗೆ ಚಿಕಿತ್ಸಾ ವಿಧಾನವಾಗಿ ಬಳಸಲಾಗುತ್ತೆ.

ಇಂತಹ ಅಮೋಘ “ಮಂಡಲ ಕಲೆ”ಯಲ್ಲಿ ಅಂಬೆಗಾಲಿಕ್ಕಿ ಬೆಳೆಯುತ್ತಿರುವ “ಶೃತಿ ಕಟ್ಟಿ”, ಇನ್ನಷ್ಟೂ ಕ್ರೀಯಾಶಿಲಳಾಗಿ ಹಲವು ಕಲಾಕೃತಿ,ಚಿತ್ರಕಲೆ ರಚಿಸಲಿ ಎಂದು ಹಾರೈಸುವೆ.
ನಿಪುಣ “ಮಂಡಲ ಕಲೆ”ಗಾರರು, ಚಿತ್ರಕಾರರು, ಕ್ರೀಯಾಶೀಲರು ಈ ಮೂಲಕ ಎಲ್ಲಾ ರೀತಿಯ ಮಾರ್ಗದರ್ಶನ ನೀಡಬಹುದು.

(About Hobbies, exhibition, marketing, teaching, other platforms.. etc)

ಕುಮಾರಿ “ಶೃತಿ ಕಟ್ಟಿ”ಯ ಕ್ರೀಯಾಶೀಲ ಕೈಚಳಕಕ್ಕೆ ನಿಮ್ಮ ಶುಭ ಹಾರೈಕೆಗಳಿರಲಿ.

All the best “ಶೃತಿ”. Shruti Katti

  • ಡಾ. ಪ್ರಕಾಶ ಬಾರ್ಕಿ – ವೃತ್ತಿಯಲ್ಲಿ ವೈದ್ಯರು, ಲೇಖಕರು, ಹಾವೇರಿ ಜಿಲ್ಲೆ, ಕಾಗಿನೆಲೆ

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW