‘ಅರಳುವಾಗಲೆ ದುಂಬಿ’ ಕವನ

ಅಪ್ಪಯ್ಯ ಯಾದವ್ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಯವ್ವನದ ಹುಚ್ಚು ಹೊಳೆ
ಮನವ ತಲ್ಲಣ ಗೊಳಿಸೆ
ಗರಿಬಿಚ್ಚಿ ಹಾರಬೇಕೆಂದೆಣಿಸಬೇಡ

ಋತುಗಳೇರುತಲಿರಲು
ತನು ಮನವನೋಡದಿರು
ಬಾಗುವುದು ಮನವು
ಕಾಮನೆಗಳೆಡೆಗೆ

ಅರಳುವಾಗಲೆ ದುಂಬಿ
ಅರಸಿಬರಬಹುದಿಲ್ಲಿ
ದುಡುಕಿದರೆ ಅಪಹರಣ
ಮಾನಾಭಿಮಾನ

ಮಾವು ಹಂಬಲಿಸುತ್ತ
ರೆಂಬೆಯನೆ ಮುರಿದರೆ
ಅದರೊಡನೆ ಹೂ ಕಾಯಿ
ಉದುರದಿರದು

ಫಲವಾಗಲಿಲ್ಲವದು
ಕಾಯಬೇಕಿನ್ನು ಬಹುಕಾಲ
ಯೌವ್ವನದ ಹುಚ್ಚು ಹೊಳೆ
ದಡಮೀರಿ ಹರಿದರೆ
ಕೊಚ್ಚಿಹೋಗುವುದು ದಿಟ
ಕುರುಹುಗಳನೂ ಉಳಿಸದೇ


  • ಅಪ್ಪಯ್ಯ ಯಾದವ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading