ಫೇಸ್ಬುಕ್ ಲ್ಲಿ ಹೀಗೂ ಇರ್ತಾರೆ, ಹುಷಾರು…ಈ ಫೇಸ್ಬುಕ್ ನಲ್ಲಿ ಮಿತ್ರತ್ವ ಸ್ವೀಕರಿಸುವಾಗ ಹುಷಾರಾಗಿರಿ…ಲೇಖಕ ಪ್ರೊ. ರೂಪೇಶ್ ಪುತ್ತೂರು ಅವರ ಅನುಭವದ ಕತೆಯನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ಇದೊಂದು ಕತೆ ಸಾಮಾಜಿಕ ಕಳಕಳಿಯಾಗಿದ್ದು ತಪ್ಪದೆ ಓದಿ…

ಈ ಫೇಸ್ಬುಕ್ ನಲ್ಲಿ ಮಿತ್ರತ್ವ ಕೇಳಿ ಬರುವವರು ಹಲವರಿರುತ್ತಾರೆ. ಒಂದು ಓದುಗರಾದ, ಸದಾ ಪ್ರೋತ್ಸಾಹ ಕೊಡುವ ನಿಮ್ಮಂತಹಾ ಧನಾತ್ಮಕವಾಗಿ ಮಿತ್ರತ್ವ ಹರಸುವವರು. ಇನ್ನೊಂದು ಋಣಾತ್ಮಕ ಮಿತ್ರತ್ವ ದೋಚುವವರು. ಈ ಋಣಾತ್ಮಕ ದೋಚುವವರು ಹೇಗೆಂದರೆ ೧, ೨, ೩ ಹೀಗೆ ತುಂಬಾ ತರಹದವರಿದ್ದಾರೆ.

೧. ತನ್ನ ಫೇಸ್ಬುಕ್/ ಮುಖ ಹೊತ್ತಗೆ ಖಾತೆಯಲ್ಲಿ ಬರೇ ನಂಬರ್ ಜಾಸ್ತಿ ಮಾಡಲು ನಮ್ಮನ್ನು ಸೇರಿಸಿ 5000 ಮಿತ್ರತ್ವ ಬೇಗ ತುಂಬಿಸಿ, ನಂತರ ಅವರಿಗೆ ಲಾಭವಾಗುವವ ರನ್ನು ಮಾತ್ರ ಅದರೊಳಗೆ ಇಟ್ಟು, ಉಳಿದವರನ್ನು ಅಮಿತ್ರವಾಗಿ ಬಿಡುವಂತವರು. 5000 ಸಂಖ್ಯೆ ಮಾಡುವವರು. ಇಂತವರಿಂದ ಅಷ್ಟೊಂದು ತೊಂದರೆ ಇಲ್ಲ ಎನ್ನಬಹುದು.

೨. ನಮ್ಮೊಂದಿಗೆ ಮುಖಹೊತ್ತಗೆ ಮಿತ್ರತ್ವ ಪಡೆದು , ಬಹುಬೇಗ ನಮ್ಮ ಬರಹಗಳಿಗೆ ಸನ್ನೆ ಹಾಕಿ, ನಮಗೆ ಹತ್ತಿರವಾದಂತವರಾಗಿ, ನಮ್ಮ ಪೋಕೇಟಿಗೆ ಕನ್ನ ಹಾಕುವವರು.

ಫೋಟೋ ಕೃಪೆ : google

ಈ ೨ನೇ ತರಹದವರಲ್ಲಿ ಒಬ್ಬರು 2011 ರಲ್ಲಿ ನನ್ನಲ್ಲಿ ದುಡ್ಡು ಕೇಳಿ ಹಿಂಸಿಸಿ ನಾನು ದುಡ್ಡು ಕೊಟ್ಟೆ. ಅದನ್ನು ತಿಳಿದು ಅವನ ಮಿತ್ರ ನನ್ನೊಂದಿಗೆ ಮಿತ್ರತ್ವ ಮಾಡಿ , ಅವರ ಕುಟುಂಬದ ಒಂದು ಮಗುವಿಗೆ ಆಪರೇಷನ್ ಇದೆ ಎಂದು ಸುಳ್ಳು ಹೇಳಿ ನನ್ನ ಕೆಲಸ ಮಾಡುವ ಸಂಸ್ಥೆಯ ಬಳಿ ಬಂದು ಗೋಗರೆದು ನನ್ನ ಸಹ-ಉದ್ಯೋಗಸ್ಥರಿಂದ ದುಡ್ಡು ಪಡೆದು ಹೊರಟು ಹೋದರು. ನಂತರ ಅವರು ಅಂತರ್ಜಾಲದಲ್ಲಿ ಲೀನವಾದರು(ಸಂಪೂರ್ಣ ಮರೆಯಾದರು). ಇದರಿಂದ ಸಾಲ ತೀರಿಸಲು ನನ್ನ ಒಂದು ಹಳೇ ಹಿರೋ ಹೊಂಡ ಬೈಕು ಮಾರುವಲ್ಲಿ ಗೆ ನನ್ನ ವಾರ್ತಾ ಪ್ರಸಾರ ಮುಕ್ತಾಯವಾಯಿತು. ಅದರ ನಂತರ ಸಾಲ ಕೇಳುವ ಯಾರಿಗೂ ಸಾಲ ಕೊಡದವನಾದೆ. ನಂತರ ಇಂದು ಈ ಕೊರೋನಾ ನನ್ನ ಕೈ ಕಾಲು ಕಟ್ಟಿ ಹಾಕಿತು.

ಮೊದ ಮೊದಲು ವಿವೇಕಾನಂದ ಎಚ್ ಕೆ  ಅವರ ಬರಹಗಳಿಗೆ ಒಂದು ವಾಕ್ಯ ಬರೆಯುತ್ತಿದ್ದ ನನಗೆ ಅವರ ಜೊತೆ ಪ್ರೋತ್ಸಾಹ ಕೊಟ್ಟ ನಿಮ್ಮಂತಹ ಅನೇಕರಲ್ಲಿ ಅಮರಜಾ ಮೇಡಂ ಕೂಡಾ ಒಬ್ಬರು. ಇಂದು ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. Cataplexy stroke/ ಸ್ನಾಯು ಲಕ್ವಾ ಹೊಡೆದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಮೆದುಳಿಗೆ ಶುದ್ದ ರಕ್ತ ತಲುಪದ ಸ್ಥಿತಿಯೂ ಇದೆ. ನಮ್ಮಿಂದ ಯಾವುದೇ ಆರ್ಥಿಕ ಸಹಾಯ ಅವರು ಕೇಳುತ್ತಿಲ್ಲ. ಒಬ್ಬಳೇ ಮಗಳು ಅವಳಿಗೂ ಆರೋಗ್ಯ ಸರಿ ಇಲ್ಲದ್ದರಿಂದ ಅಮ್ಮನನ್ನು ನೋಡಿಕೊಳ್ಳಲು ಅಸಾಧ್ಯ.

ಫೋಟೋ ಕೃಪೆ : google

ಸಂಗೀತ ಪ್ರವೀಣೆ, ವಿಶಾರದೆ ಆದ ಅಮರಜರವರು, ಮಗಳ ವಿದ್ಯಾಭ್ಯಾಸ ಕ್ಕೆ ಬೆಂಗಳೂರಿಗೆ ಬಂದು, ತುಂಬಾ ಖಾಸಗೀ ವಿದ್ಯಾಸಂಸ್ಥೆಗಳಲ್ಲಿ ಕೆಲಸ ಮಾಡಿದವರು. ಆದರೆ ಅಲ್ಲಿ ಅವರ ಹುಬ್ಬಳ್ಳಿ ಸ್ವಭಾವದ ಸಮಯ ಪರಿಪಾಲನೆ, ಪ್ರಾಮಾಣಿಕತೆ ಕೆಲವರಿಗೆ ಹಿಡಿಸದೆ,ಎಲ್ಲೂ ಸಾಲದ ಸಂಬಳದಿಂದ ಸಮಯ ವ್ಯರ್ಥವಾಗುವುದು ಕಂಡು, ಖಾಸಗೀ ಸಂಸ್ಥೆಗೆ ವಿದಾಯ ಹೇಳಿ ಕೊನೆಗೆ ತಾನೇ ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆದು, ಅಲ್ಲಿ ಮನೆಯಲ್ಲೇ ಮಕ್ಕಳಿಗೆ ಸಂಗೀತ ಹೇಳಿಕೊಡ ತೊಡಗಿದರು. ಈ ಮಧ್ಯೆ ಮಗಳಿಗೆ ಅನಾರೋಗ್ಯ ಕಾಡ ತೊಡಗಿದ್ದು ಅವರಿಗೆ ತುಂಬಾ ನೋವಾಗಿತ್ತು.

ಈ ಅಮರಜಾ ಮೇಡಂ, Facebook ನಲ್ಲಿ ತನಗೆ ಪರಿಚಿತರಾದ ಒಬ್ಬರಿಗೆ, ತನ್ನೂರಿನ ಹುಬ್ಬಳ್ಳಿ ಮನೆಯನ್ನು ಬಾಡಿಗೆಗೆ ಕೊಟ್ಟರು. ಕಳೆದು ಮೂರು ವರುಷದಿಂದ ಅವನು ಬಾಡಿಗೆ ಕೊಡದೆ ಮಾಡುವ ಗೂಂಡಾಗಿರಿ ಒಂದು ಕಡೆಯಾದರೆ, ಇನ್ನೊಂದು ಕಡೆ Facebook ನಲ್ಲಿ ಪರಿಚಯವಾದವರು ತನ್ನ ತಂಗಿಯಂತೆ, ತಮ್ಮನಂತೆ, ಅಣ್ಣನಂತೆ ಎಂದು ಹಲವರಿಗೆ 30-40 ಸಾವಿರದಂತೆ ಸಾಲ ಕೊಟ್ಟು , ಅದು ಲಕ್ಷಗಟ್ಟಲೆ ಆಗಿ, ಕಳೆದ ಐದಾರು ತಿಂಗಳಿಂದ ಸುರುವಾದ ಅನಾರೋಗ್ಯಕ್ಕೆ , Facebookನ ಪರಿಚಯದಿಂದ ಸಾಲ ಕೊಟ್ಟವರನ್ನು ಕೇಳಿ ಕೇಳಿ ಯಾರೂ ಕೊಡದೆ, ಇಂದು ಈ ಸ್ಥಿತಿಗೆ ಬಂದಿದ್ದಾರೆ. ಅಮರಜಾ ಮೇಡಂರನ್ನು ನೋಡಿ ನಾವು ಕಲಿಯಬೇಕಾದ ಪಾಠ ಹಲವಾರು ಇವೆ.
ಈ Facebook, WhatsApp, Instagram…. ಇದೆಲ್ಲಾ ಒಂದು ಭ್ರಮಾ ಲೋಕ. ಆ ಲೋಕದಲ್ಲಿ ನನ್ನಂತಹವನು ಏನೂ ಅಲ್ಲ. ಚೊಕ್ಕವಾಗಿ ಹೇಳುವುದಾದರೆ ಒಬ್ಬ ಗತಿಕೆಟ್ಟವ ಅನ್ನಬಹುದು. ಈ ಗತಿಕೇಡಿನಿಂದ ಪುನಃ ಅದಂಪತನದ ಕಂದಕಕ್ಕೆ ಭೀಕರವಾದ ಇಳಿಜಾರು ಇರುತ್ತದೆ. ಆ ಇಳಿಜಾರಿನಲ್ಲಿ ಜಾರುವಾಗ ಈ 5000ರದಲ್ಲಿ ಯಾರೂ ಬರೋಲ್ಲ. ಸಾಲ ಪಡೆದವರು ನಮ್ಮ ಕೊನೆ ಉಸಿರಿಗೆ ಆಳವಾಗಿ ಪ್ರಾರ್ಥಿಸುತ್ತಾರೆ ಎಂಬುದು ಸಾರ.“ನೀವು ಚೆನ್ನಾಗಿ ನೋಟ್ಸ್ ಬರೆಯುತ್ತೀರಿ. ಯಾಕೆ ಒಂದು ಪುಸ್ತಕ ಮಾಡಬಾರದು?” ಎಂದು ಕೇಳುವವರು ಯಾರೂ, ಪುಸ್ತಕ ಪ್ರಕಟವಾದಾಗ ಒಂದೇ ಒಂದು ಪುಸ್ತಕ ತೆಗೆದುಕೊಳ್ಳಲಿಲ್ಲ. Complimentary ಕಾಪಿಯನ್ನು ಜನ್ಮಸಿದ್ಧ ಹಕ್ಕು ಎಂದು ಪಡೆದು, ಹಾಕಿದ ದುಡ್ಡು ಗೋವಿಂದಾ ಗೋವಿಂದಾ ಆದದ್ದು ನನ್ನ ಸುಖಾನುಭವದಲ್ಲಿ ಒಂದು.

ನಾವು ರಕ್ತದಿಂದ ಬೆವರನ್ನಾಗಿ ಪರಿವರ್ತಿಸಿದ ಆದಾಯವನ್ನು ಯಾರಿಗಾದರೂ ಅಣ್ಣಾ ತಮ್ಮ ಎಂದು ದಾಖಲೆ ಇಲ್ಲದೆ ಕೊಟ್ಟಾಗ, ಇನ್ನೊಬ್ಬರ ಮಾತಿಗೆ ಮಾರುಳಾಗಿ, ಸತ್ಯ ಮರೆತು ಅಮಲಿನ ಪ್ರೇರಣೆಯಲ್ಲಿ ಅವರು ಹೇಳಿದಂಗೆ ನಾವು ನಡೆದಾಗ ಅನಾರೋಗ್ಯ – ಅಸಹಾಯಕತೆ ಯಾವಾಗ ಬರುತ್ತದೆ ಎಂದು , ಐದು ಸಾವಿರ ವರುಷ ಇತಿಹಾಸ ಇರುವ ಈ ಮಾನವನಿಗೆ ಕಂಡು ಹಿಡಿಯಲಾಗದ ವಾಸ್ತವತೆಯಿಂದ ದೂರಮಾಡುವುದೇ ಅಂತರ್ಜಾಲ ಎಂಬ ಮಾಯಾಲೋಕ ಎಂದು ಒಂದು ಕ್ಷಣ ಅರಿಯೋಣ.
ದಯವಿಟ್ಟು ಯಾರೂ ಯಾರಿಗೂ ಸಾಲ ಕೊಟ್ಟು , ದುಸ್ಥಿತಿಗೆ ಬರಬೇಡಿ. ಅಮರಜಾ ಮೇಡಂ ರವರಿಂದ ಸಾಲ ಪಡೆದ ಅಂತರ್ಜಾಲದ ಆತ್ಮಗಳಿಗೆ ಈ ಲೇಖನ ಸಮರ್ಪಿಸುತ್ತಿದ್ದೇನೆ.

ಅಮರಜಾ ಮೇಡಂ ಬೇಗ ಚೇತರಿಕೆ ಆಗಲಿ ಎಂದು ಪ್ರಾರ್ಥಿಸೋಣ.

ನಿಮ್ಮವ ನಲ್ಲ
ರೂಪು


  • ಪ್ರೊ.ರೂಪೇಶ್ ಪುತ್ತೂರು

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW