‘ಗಾರ್ಗಿ’ ಸಿನಿಮಾ ಕುರಿತು ರಾಘವೇಂದ್ರ ಸಿ ಅವರು ಬರೆದ ಒಂದು ಪುಟ್ಟ ಪರಿಚಯ ನಿಮಗೆಲ್ಲರಿಗೂ ಇಷ್ಟವಾಗಬಹುದು. ತಪ್ಪದೆ ಓದಿ…ಇಷ್ಟ ಆದ್ರೆ ಒಮ್ಮೆ ಗಾರ್ಗಿ ಸಿನಿಮಾನೂ ನೋಡಿ…
ಅಬ್ಬಾ, ಇದೊಂದು ಚಿತ್ರ ನೋಡಿದ ಮೇಲೆ ಯಾಕೋ ಬಹಳ ಕಾಡುವಂತೆ ಅನ್ನಿಸುತ್ತಿದೆ. ನಮ್ಮ ಸುತ್ತಮುತ್ತಲಿನಲ್ಲೇ ಘಟನೆಗಳು ನಡೆಯುತ್ತಿದೆ ಎನ್ನುವಂತಹ ಅನುಭವ ನೀಡುವ ಈ ಚಿತ್ರ, ನೊಂದವರ ಸಂಸಾರಿಕ, ಸಾಮಾಜಿಕ, ಭಾವನಾತ್ಮಕ ತೊಳಲಾಟವನ್ನು ನೈಜವಾಗಿ ಅಚ್ಚುಕಟ್ಟಾಗಿ ತೋರಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಗಾರ್ಗಿ ಸಿನಿಮಾದ ಒಂದು ದೃಶ್ಯ
ಇನ್ನು ಯಾವಾಗಲೂ ವಿಶೇಷವಾದ ಕಥಾಹಂದರ ಆಯ್ಕೆ ಮಾಡಿಕೊಳ್ಳುವ ಸಾಯಿ ಪಲ್ಲವಿ ಅವರು ಈ ಬಾರಿ ‘ಗಾರ್ಗಿ’ ಸಿನಿಮಾದಲ್ಲಿ ಅದನ್ನು ಸಾಬೀತುಮಾಡಿದ್ದಾರೆ. ಉತ್ತಮವಾದ ಕಥೆ, ಪ್ರತಿಭಾವಂತ ಕಲಾವಿದರ ನಟನೆ, ಬಿಗಿಯಾದ ಚಿತ್ರಕಥೆ ಇರುವುದರಿಂದ ಈ ಸಿನಿಮಾ ಪ್ರೇಕ್ಷಕರಿಗೆ ತುಂಬಾ ಚೆನ್ನಾಗಿ ಹತ್ತಿರವಾಗುತ್ತದೆ ಸಾಯಿ ಪಲ್ಲವಿ ಅವರ ನೈಜ ನಟನೆ ಪ್ರೇಕ್ಷಕರಿಗೆ ತುಂಬಾ ಚೆನ್ನಾಗಿ ಕನೆಕ್ಟ್ ಆಗುತ್ತಾರೆ. ಇವರ ನಟನೆಗೆ ರಾಷ್ಟ್ರಪ್ರಶಸ್ತಿ ದೊರೆತರೂ ಆಶ್ಚರ್ಯವಿಲ್ಲ, ಯಾಕೆಂದರೆ ಚಿತ್ರಕಥೆ ಅವರನ್ನು ಆ ಮಟ್ಟಿಗೆ ಆವರಿಸಿದೆ. ಕನ್ನಡ ಕಲಿತು ಕನ್ನಡದಲ್ಲೇ ಡಬ್ ಮಾಡಿದ ಇವರ ಬದ್ಧತೆ ನಿಜಕ್ಕೂ ಪ್ರಶಾಂಸನೀಯ..
ಗಾರ್ಗಿ ಸಿನಿಮಾದ ಒಂದು ದೃಶ್ಯ
ಹೆಣ್ಣಿನ ಮೇಲೆ ಗಂಡಸರಿಂದ, ಸಮಾಜದಿಂದ ಆಗುವ ಇಂತಹ ಶೋಷಣೆಗಳನ್ನು ಕೇಳಿದಾಗ, ನೋಡಿದಾಗಲೆಲ್ಲಾ ಗಂಡಸರಾಗಿ ಹುಟ್ಟಿದ್ದಕ್ಕೆ ತುಂಬಾ ಮುಜುಗರ ಹಾಗೂ ಅಸಹ್ಯ ಆಗುತ್ತದೆ. ಸಾಮಾಜಿಕ ಚಿಂತನೆಗಳನ್ನು ಮೂಡಿಸುವ ಇಂತಹ ಚಿತ್ರಗಳು ಎಲ್ಲರೂ ಒಮ್ಮೆ ನೋಡಲೇ ಬೇಕು. ದಯವಿಟ್ಟು ತಪ್ಪದೇ ವೀಕ್ಷಿಸಿ.
- ರಾಘವೇಂದ್ರ ಸಿ (ಗೋಸಿರಿ ಪಂಚಗವ್ಯ ಹಾಗೂ ಸಾವಯವ ಉತ್ಪನ್ನ ಅಂಗಡಿ ಮಾಲೀಕರು, ಗೋಸಿರಿ ಸೇವಾ ಟ್ರಸ್ಟ್ ತಂಡದ ಆಯೋಜಕರು, ಮುಂದಿನ ದಿನಗಳಲ್ಲಿ ಗೋ ಸಂಪತ್ತನ್ನು ಈ ಟ್ರಸ್ಟ್ ಮೂಲಕ ಒಂದು ಮಾದರಿ ಗೋಶಾಲೆಯನ್ನು ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಹೊಂದಿರುವ ಯುವ ಸಮಾಜಕಾರ್ಯಕರ್ತರು) ತೀರ್ಥಹಳ್ಳಿ.