‘ಮನಃಸಾಗರ’ ಪುಸ್ತಕ ಪರಿಚಯ – ಅಮೃತ ಎಂ ಡಿಕವಿಯತ್ರಿ ಆಶಾ ಹೆಗಡೆ ಚೊಚ್ಚಲ ಕೃತಿ ಮನಃಸಾಗರ ದಲ್ಲಿ ಪ್ರತಿ ಕವನಗಳು ತನ್ನದೇ ಆದ ಮೌಲ್ಯ, ಆದರ್ಶಗಳ ಒಳಗೊಂಡಿದ್ದು, ಓದುಗರನ್ನು ತನ್ನೆಡೆಗೆ ಸೆಳೆಯುತ್ತದೆ, ಪುಸ್ತಕದ ಕುರಿತು ಕವಿಯತ್ರಿ ಅಮೃತ ಎಂ ಡಿ ಅವರು ಬರೆದ ಪರಿಚಯ, ಮುಂದೆ ಓದಿ…

ಪುಸ್ತಕದ ಹೆಸರು : ಮನಃಸಾಗರ
ಲೇಖಕಿ : ಆಶಾ ಹೆಗಡೆ
ಪ್ರಕಾಶಕರು: ಪರ್ವ ಪುಸ್ತಕ ಪ್ರಕಾಶನ
ಪುಸ್ತಕದ ಬೆಲೆ : ೧೧೦

ಆಶಾ ಹೆಗಡೆ ನಾ ಕಂಡ ಉತ್ತಮ ಬರಹಗಾರ್ತಿ, ಮುಖಪುಟದಲ್ಲಿ ಆಗಾಗ ಕಾಣುವ ಬರಹಗಳ ಸವಿಯ ಕಂಡ ನನಗೆ ಅವರ ಚೊಚ್ಚಲ ಕೃತಿ ‘ಮನಃಸಾಗರ’ ಕೈ ಸೇರಿದ್ದು ಬಹಳ ಖುಷಿ ತಂದಿತು. ಕವನಗಳು ವಸ್ತುಸ್ಥಿತಿಯನ್ನು, ವಾಸ್ತವವನ್ನು ಜೀವಂತವಾಗಿ ಇರಿಸುವ ಪ್ರಮುಖ ಸಾಧನ ಎಂದೆ ನಾ ನಂಬಿದವಳು, ಅಂತಹ ಕವನಗಳು ಮನಃಸಾಗರ ಪುಸ್ತಕದ ಉದ್ದಕ್ಕೂ ಸಿಗುತ್ತಾ ಹೋಗುತ್ತವೆ.

ಡಾಕ್ಟರ್ ಬೈರಮಂಗಲ ರಾಮೇಗೌಡ ಅವರ ಮುನ್ನುಡಿಯೊಂದಿಗೆ, ಡಾ. ಎಮ್ ಆರ್ ಲಕ್ಷ್ಮೀನಾರಾಯಣ, ಅವರ ಬೆನ್ನುಡಿಯೊಂದಿಗೆ ತಮ್ಮ ಸ್ವಂತ ಪ್ರಕಾಶನವಾದ ಪರ್ವಪ್ರಕಾಶನದ ಹುಟ್ಟಿಗೆ ಕೂಡ ಈ ಕೃತಿ ಭಾಗಿಯಾಗಿದೆ. ತಂದೆ ತಾಯಿ ಮತ್ತು ದೊಡ್ಡಪ್ಪ ಅವರಿಗೆ ಕೃತಿಯನ್ನು ಸಮರ್ಪಣೆ ಮಾಡಿ ಓದುಗರ ಭಾವಲೋಕವನ್ನು ಸೆರೆ ಹಿಡಿಯುವ ಕೆಲಸವನ್ನು ಈ ಕವನ ಸಂಕಲನ ಮಾಡುತ್ತದೆ ಎಂಬ ನಂಬಿಕೆ ನನಗಿದೆ. ಎಲ್ಲವನ್ನು ಕೊಟ್ಟಾಗ ಅದರ ಆಚೆಗೆ ದುಡಿಯುವ, ಮಿಡಿಯುವ ಮನಸ್ಸಿದ್ದಾಗ ಇಂತಹ ಸತ್ಕಾರ್ಯಗಳು ಜರಗುತ್ತವೆ.ಕನ್ನಡ ಸಾರಸತ್ವ ಲೋಕಕ್ಕೆ ಈ ಕೃತಿಯು ಮುಕುಟಮಣಿಯಾಗಲಿ ಎಂಬ ಅಭಿಲಾಷೆ ನನ್ನದು.

ಬರೆಯುವ ಹುಚ್ಚು , ಬರವಣಿಗೆಯ ತುಡಿತ ಹೇಗಿತ್ತೆಂದರೆ ಅಹರ್ನಿಶಿಯನ್ನು ದಾಟಿ ಎಲ್ಲ ಸಂಯಮವನ್ನು ಕೂಡಿಸಿ, ಬರೆಯುವ ಗೀಳಿಗೆ, ಹುಚ್ಚಿಗೆ ಇಂದು ಈ ಕೃ ತಿ ಹೊರಬಂದಿದೆ. ಓದುವ ಅಭಿಲಾಷೆಯುಳ್ಳವ ಅಭ್ಯಾಸವುಳ್ಳವ ಎಂದು ಆಲಸ್ಯಕ್ಕಾಗಲಿ, ಬದುಕು ಕೊಟ್ಟ ಪರಿಪೂರ್ಣ ಜೀವನಕ್ಕಾಗಲಿ ಆತುಕೊಳ್ಳುವುದಿಲ್ಲ ಸದಾ ಕಾಲ ಏನನ್ನಾದರೂ ಯಾವುದರಲ್ಲಾದರೂ ತನ್ನನ್ನು ತಾನು ತೊಡಗಿಸಿಕೊಂಡು ಇಂತಹ ಕಾರ್ಯಗಳಿಗೆ ಕೈ ಹಾಕುತ್ತಾನೆ ಅಂತಹದ್ದೆ ಇರಾದೆಗಳುಳ್ಳ 45 ಕವನಗಳ ಹೂಗುಚ್ಛ ಈ ಮನಸಾಗರ.

 

ಏಕಾಂತ ಕುರಿತು ಕವಿ ಮನಸ್ಸು ಮಾತನಾಡುವಾಗ ಸೋಲು ಗೆಲುವಿಗು, ಬದುಕಿನ ಏರುಪೇರಿಗೂ ಇರುವ ಅಂತರ ಮೌನಕ್ಕೂ ಮಾತಿಗೂ ಇರುವ ಸತ್ವ ಎರಡು ಕೂಡ ಈ ಕವನದಲ್ಲಿ ವ್ಯಕ್ತವಾಗಿದೆ. ಕವಿಯೆ ಕವಿತೆಯೋ ಕವಿತೆಯೊಳು ಕವಿಯೊ ಕವನದಲ್ಲಿ ಸಿಕ್ಕ ಸಣ್ಣಪುಟ್ಟ ಸನ್ಮಾನಗಳಿಗೆ ಟೀಕೆಗಳಿಗೆ ಹಿಗ್ಗಿ ಕುಗ್ಗಬಾರದು ಪದ ಕಟ್ಟುವ ಕೆಲಸ ಸುಲಭದ್ದೇನಲ್ಲ ಒಳಗೊಳಗೆ ಬೆಂದು ನೊಂದು ಒಡಲಾಳವ ಭೇದಿಸಿ ಹುಟ್ಟಿದಂತಹ ಪದಗಳ ಭಾವವಾಗಿಸಿ ಬರೆಯುವುದು ಸುಲಭವೇನಲ್ಲ ಎಂಬಂತಹ ಸಾಹಿತ್ಯ ಸೇವೆ ಈ ಕವನದಲ್ಲಿ ಅಗಾಧವಾಗಿ ಕಾಡುವಂತಹ ಕವನವಾಗಿದೆ.

ಕಾಡುವ ಕಾಡು ಕವಿತೆಯಲ್ಲಿ ಪ್ರಕೃತಿಯು ತನ್ನನ್ನು ತಾನು ಹರವಿಕೊಂಡು ನಮ್ಮನ್ನು ತನ್ನೊಳಗೆ ಲೀನವಾಗಿಸಿಕೊಂಡು ಸೃಜಿಸುವ ಅಷ್ಟು ರಮ್ಯತೆಯನ್ನು ಸೆರೆ ಹಿಡಿದಿದೆ.

ಸೋತಿದ್ದು ಒಳ್ಳೆಯದೇ ಆಯಿತು ಬಿಡು ಸೋಲು, ನಮ್ಮ ಪ್ರಯತ್ನಕ್ಕೆ ಸರಿಯಾದ ಅಥವಾ ನಾವು ನಿರೀಕ್ಷೆ ಪಟ್ಟಂತಹ ಫಲಿತಾಂಶ ಸಿಗಲಿಲ್ಲವೆಂದರೆ ಬಹುಷಃ ಅದನ್ನು ನಾವು ಸೋಲಂದೆ ಪರಿಗಣಿಸಿ ಬಿಡುತ್ತೇವೆ ಆದರೆ ಅಕ್ಷರಶಃ ಸೋಲೆಂದರೆ ಅದಲ್ಲ ನಮ್ಮ ಪ್ರಯತ್ನ 100 ಪಟ್ಟಾಗಿದ್ದಾಗ ಗೆಲುವು 100 ಪಟ್ಟಾಗಿ ಬರಲೇಬೇಕು ಎಂದು ಅಪೇಕ್ಷಿಸುವ ನಮ್ಮ ಬುದ್ಧಿವಂತಿಕೆಯೆ ಸೋಲು, ಗೆಲುವೆಂದರೆ ಬಯಸಿದ ಫಲಿತಾಂಶ ದಕ್ಕುವುದಲ್ಲ ಆ ಫಲಿತಾಂಶದ ಫಲ ಎಷ್ಟು ಜನರಿಗೆ ಯಾವ ತೆರವಾಗಿ ಉಪಯುಕ್ತತವಾಗಿದೆ ಎಂಬುದರ ತಾತ್ಪರ್ಯ. ಸಾವಿರ ಸಲ ಸೋತವನಿಗೆ ಹುಟ್ಟುವ ಛಲ ,ಎಲ್ಲೂ ಎಂದು ನಿರಾಶ ಗೊಳ್ಳದ ಉತ್ಸಾಹ ಸದಾ ಗೆಲುವನ್ನೆ ಕಂಡವನಿಗೆ ಇರುವುದಿಲ್ಲ. ಗೆಲುವುಗಿಂತ ಸೋಲಿಗೆ ಸೋಲಿಗೆ ಮಹತ್ವ ಜಾಸ್ತಿ ಅಂತಹ ಸೋಲು ಗೆಲುವಿನ ಆಟವನ್ನು ಈ ಕವನ ಸೆರೆಹಿಡಿದಿದೆ.

ಹೀಗೆ ಪ್ರತಿ ಕವನವು ತನ್ನದೇ ಆದ ಮೌಲ್ಯ ಆದರ್ಶಗಳನ್ನು ತುಂಬಿಕೊಂಡು ಓದುಗನ ತನ್ನೆಡೆಗೆ ಸೆಳೆಯುತ್ತದೆ. ಇಲ್ಲದಕ್ಕಿಂತ ಹೆಚ್ಚಾಗಿ ಈ ಕೃತಿಯು ಒಂದು ಒಳ್ಳೆ ಸತ್ಕಾರ್ಯಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂಬುದು ನನ್ನ ಅಭಿಪ್ರಾಯ ಕೃತಿಯಿಂದ ಬಂದಂತಹ ಅಷ್ಟು ಲಾಭ ಒಂದು ಕಿವುಡ ಮೂಗರ ಆಶ್ರಮಕ್ಕೆ ಸಹಾಯ ಮಾಡುತ್ತಿದೆ ಎಂಬುವುದು ಹೆಮ್ಮೆಯ ವಿಚಾರ.

ಅಭಿನಂದನೆಗಳು ಆಶಾ ಅಕ್ಕ. ಉದಾತ್ತ ಆಲೋಚನೆಗಳು ನಿಮ್ಮನ್ನು ಉತ್ತುಂಗ ಸ್ಥಿತಿಯಲ್ಲಿ ಇರಿಸಲಿ. ಸದಾಕಾಲ ಕನ್ನಡಮ್ಮನ ಮಡಿಲಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ನಿಮ್ಮ ಸೇವೆ ನಿರಂತರವಾಗಿ ಅರ್ಪಿಸುತ್ತಿರಿ.


  • ಅಮೃತ ಎಂ ಡಿ ( ಕವಿಯತ್ರಿ, ಯುವ ಲೇಖಕಿ, ಶಿಕ್ಷಕಿ)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW