‘ಹಸಿವು’ ಸಣ್ಣಕತೆ -ಪ್ರೊ. ರೂಪೇಶ್ ಪುತ್ತೂರು



ಬಡವನಿಗೆ ಹಸಿವು, ದಾಹ, ಅಪಮಾನ ಎಲ್ಲವನ್ನು ಎದುರಿಸುವ ಶಕ್ತಿ ಆ ಭಗವಂತ ನೀಡಿದ್ದಾನೆ ಅದು ಹೇಗೆ ಅನ್ನುವುದನ್ನು ಪ್ರೊ.ರೂಪೇಶ್ ಅವರು ಕತೆಯ ರೂಪದಲ್ಲಿ ಹೆಣೆದು ಓದುಗರ ಮುಂದಿಟ್ಟಿದ್ದಾರೆ. ಮುಂದೆ ಓದಿ…

ಅಸಹಾಯಕ/ #ಬಡವ ಕಾನು, ಕೂಲಿ ಕೆಲಸ ಮಾಡಿ ಹೇಗೋ ಜೀವನ ಮಾಡುತ್ತಿದ್ದ. ಪ್ರವೀಣ ಎಂಬವ ದಿನಸಿ ಅಂಗಡಿಯಲ್ಲಿ ಪೊಟ್ಟಣ ಕಟ್ಟುವ ಕೆಲಸ. ಇಬ್ಬರು ಮಿತ್ರರಾದರು. ಪ್ರವೀಣ ತನಗೆ ಸ್ವಂತ ಅಂಗಡಿ ತೆರೆಯಬೇಕು ಎಂಬ ಆಸೆ ಕಾನುವಿನಲ್ಲಿ ಹೇಳಿದ. ಕಾನು ತನ್ನ ಕೂಡಿಟ್ಟ ದುಡ್ಡು ಸಹಾಯ ಮಾಡಿ, ಪ್ರವೀಣನ ಅಂಗಡಿಯ ಸ್ಥಾಪನೆಗೆ ಸಹಾಯ ಮಾಡಿದ. ಪ್ರವೀಣ ಬೆಳೆಯ ತೊಡಗಿದಂತೆ ಕಾನುವಿನ ಸಾಲ ತೀರಿಸಿ ” ಯಾವಾಗ ಬೇಕಾದರೂ ನೀನು ನನ್ನ ಜೊತೆ ಸೇರಬಹುದು ” ಎಂದ ಪ್ರವೀಣ.

ಕೆಲ ವರುಷದ ನಂತರ ಕಾನುವಿಗೆ ಯಾವಾಗಲಾದರೂ ಸಿಗುವ, ಅನಿಷ್ಚಿತವಾದ ಈ ಕೂಲಿ ಕೆಲಸಗಿಂತ ಪ್ರವೀಣನ ಜೊತೆ ವ್ಯಾಪಾರ ಮಾಡೋಣ ಎಂದು ಒಂದು ದಿನ ಅವನನ್ನು ಕಾಣಲು ಹೋದ. ಒಳಗೆ ಹೋಗಿ ಕಾನುವಿನ ಉಪಸ್ಥಿತಿಯ ಬಗ್ಗೆ ತಿಳಿಸಿ ಬಂದ ಕೆಲಸದವರು ” ಮಾಲಿಕ ಇನ್ನೊಬ್ಬ ವ್ಯಾಪಾರಿಯೊಂದಿಗೆ ಸಂವಾದದಲ್ಲಿದ್ದಾನೆ, ಆಮೇಲೆ ಬನ್ನಿ” ಎಂದು ಕಾನುವನ್ನು ಭೇಟಿ ಮಾಡಿಸದೆ ಮರಳಿಸಿದರು.

ಕೆಲ ದಿನಗಳ ನಂತರ ಮತ್ತೊಮ್ಮೆ ಕಾನು ಪ್ರವೀಣನನ್ನು ಭೇಟಿಯಾಗಲು ಹೋದಾಗ, ಕಟ್ಟಡದೊಳಗೆ ಹೋಗಲು ಬಿಡದೆ ಕಾನುವನ್ನು ಮರಳಿಸಿದರು. ಮಗದೊಮ್ಮೆ ಕಾನು ಭೇಟಿಯಾಗಲು ಹೋದಾಗ, ಬೇರೆ ಬೇರೆ ತಳಿಯ ನಾಯಿಯನ್ನು ಅವನ ಹಿಂದೆ ಓಡಿಸಿ, ಅವನನ್ನು ಪರಚುವ – ಕಚ್ಚುವ ನಾಯಿಯನ್ನು ನೋಡಿ ಕೆಲಸದವರು ಖುಷಿ ಪಟ್ಟರು. ಇದು ಬಡವನಿಗೆ ಸಿಗುವ ಒಂದನೇ ವರ ಅಂದರೆ ಅಪಮಾನ. ಇದರಿಂದ ಸಹನೆ ಎಂಬ ಆಂತರಿಕಶಕ್ತಿ ವೃದ್ದಿಯಾಗುತ್ತದೆ.

ಫೋಟೋ ಕೃಪೆ : pethelpful

ಎರಡನೇ ವಾರ ಶ್ರೀಮಂತಿಕೆ

ತುತ್ತು ಅನ್ನ ಸಿಗದೆ ಸುಮಾರು ದಿನಗಳಾಗಿತ್ತು. ಯಾರಲ್ಲಿ ಬೇಡಲು ಇಷ್ಟವಾಗುತ್ತಿರಲಿಲ್ಲ. ದುಡಿದು ತಿನ್ನುವಾ ಎಂದರೆ, ಕೆಲಸ ಕೇಳಿದರೂ ಎಲ್ಲೂ ಸಿಗುತ್ತಿರಲಿಲ್ಲ. ಇಂತಹಾ ಸಂದರ್ಭದಲ್ಲಿ ದೂರದ ಒಂದು ಹೋಟೇಲಿನಲ್ಲಿ , ಘಮ ಘಮ ಪರಿಮಳದ ತಿಂಡಿ ತಿನ್ನುವವರನ್ನು ಕಾಫಿ ಕುಡಿಯುವವರನ್ನು ನೋಡಿ

ಅದು ನಾನೇ ತಿನ್ನುತ್ತಿರುವುದು
ಅದು ನಾನೇ ಕುಡಿಯುತ್ತಿರುವುದು
ಎಂದು ಕನಸು ಕಂಡು, ಸ್ವಲ್ಪ ದೂರ ಬಂದಾಗ ,
#ಹಸಿವು

ನೀನು ಕಂಡ ಕನಸಿನ ಸುಖ ಮುಗಿಯಿತು … ಇನ್ನು ನೈಜತೆಗೆ ಬಾ” ಎಂದಾಗ, ಆ ಹಸಿವಿನೊಂದಿಗೆ ಸಫಲವಾಗದ ಕನಸು ಬೆರೆತ ದುಃಖವನ್ನು ಬಲಾತ್ಕಾರವಾಗಿ ಧಮನಿಸಿ, ಸುಖದ ನಗು ಬೀರುವ ಒಂದು ಶ್ರಮ!!! ಅದು … ಆ ಶ್ರಮವೇ ಅಸಹಾಯಕನ ಶ್ರೀಮಂತಿಕೆ.



ಅಸಹಾಯಕನಾದ ಬಡವ ದೊಡ್ಡ ದೊಡ್ಡ ಕನಸುಗಳನ್ನು ಕಂಡು, ಅದು ಸಾಕ್ಷಾತ್ಕಾರ ಆಗದ ಭ್ರಮೆಯೆಂದು ತಿಳಿದ ನಂತರ ಅರಗಿಸುಕೊಳ್ಳುವುದರಲ್ಲಿ ಅವನ ಶ್ರೀಮಂತಿಕೆ ಇರುವುದು.

ನಿಮ್ಮವ ನಲ್ಲ
ರೂಪು


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW