ಹಿರಿಯ ರಂಗಕರ್ಮಿ ಹೂಲಿ ಶೇಖರ್ ಅವರ ಜನ್ಮದಿನದ ಶುಭಾಶಯಗಳು…

ಹಿರಿಯ ರಂಗಕರ್ಮಿ, ನಾಟಕಕಾರ ಹೂಲಿ ಶೇಖರ್ ಸರ್ ನಿಮಗಿದೋ…

ಜನ್ಮದಿನದ ಶುಭಾಶಯಗಳು…

cropped-30411-bf2fb3_598d7b8de0f44f1280cea3ca2b5e61demv2.jpgನಾನು ಹೂಲಿ ಶೇಖರ್ ಅವರ ಬಗ್ಗೆ ಕೇಳಿದ್ದೆ , ತೆಳಿದಿದ್ದೆ… ಆದರೆ ಅವರನ್ನು ನೋಡಿರಲಿಲ್ಲ… ನನ್ನ ಸೌಭಾಗ್ಯವೇನೋ… ೨೦೧೯ ರ ಡಿಸೆಂಬರ್ ೧೫ ರಂದು ರಾಣೇಬೆನ್ನೂರಿನಲ್ಲಿ ರಂಗಕರ್ಮಿ, ಸಾಹಿತಿ ಶ್ರೀ ವೆಂಕಟೇಶ್ ಈಡಿಗ ಇವರ ಸಂಚಾಲಕತ್ವದ ರಂಗ ಕುಸುಮ ಕಲಾ ಕೇಂದ್ರ ಮತ್ತು ರಂಗ ಪ್ರಕಾಶನ (ರಿ. ) ಆಯೋಜಿಸಿದ ಕೃತಿ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ ಹಾಗೂ ರಂಗ ಸಂಭ್ರಮ – ೨೦೧೯ “ಕಾರ್ಯಕ್ರಮಕ್ಕೆ ನಾನು ಹಾಗೂ. ನಮ್ಮ ” ಸ್ನೇಹ ಜೀವಿ ಉಡುಪಿ “ತಂಡದ ರಂಗಭೂಮಿ ವಿದ್ಯಾರ್ಥಿಯರು ನಾಟಕ ಪ್ರದರ್ಶನ ನೀಡಲು ಹೋಗಿದ್ದೆವು. ಅಲ್ಲಿ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಶ್ರೀಯುತ ಹೂಲಿ ಶೇಖರ್ ಬಂದಿದ್ದರು. ಈ ಸಂದರ್ಭದಲ್ಲಿ ಅವರನ್ನು ಭೇಟಿಯಾದೆ, ಮಾತನಾಡಿಸಿದೆ, ಛಾಯಚಿತ್ರ ತಗೆಸಿಕೊಂಡೆ, ಸಂತೋಷಗೊಂಡೆ.

ಅಷ್ಟೇ ಅಲ್ಲಾ… ಅಲ್ಲಿ ನನಗೆ ಲಭ್ಯವಾದ …

” ಕರ್ನಾಟಕ ಕಲಾನಿಧಿ ರಂಗ ಪ್ರಶಸ್ತಿ ” ೨೦೧೯ ಇವರಿಂದಲೇ ಪ್ರದಾನವಾದುದು ಇನ್ನೂ ಸಂತಸ ತಂದಿತ್ತು..

ಅಲ್ಲದೆ ನಮ್ಮ ತಂಡ ಪ್ರಸ್ತುತ ಪಡಿಸಿದ ” ಅಣ್ಣಾ ವಾಲಿ ” ನಾಟಕವನ್ನು ನೋಡಿ ಬಹಳಸ್ಟು ಮೆಚ್ಚುಗೆ ವ್ಯಕ್ತ ಪಡಿಸಿ, ಪ್ರಶಂಸೆಯ ಮಾತುಗಳ್ಳನ್ನು ಆಡಿ, ನಮ್ಮೆಲ್ಲರನ್ನು ಹುರುದುಂಬಿಸಿ ಆಶಿರ್ವಾದಿಸಿದ್ದರು.

ಶ್ರೀಯುತರ ಉಪಸ್ಥಿತಿ ಮತ್ತು ಮೆಚ್ಚುಗೆ ನಮಗೆಲ್ಲರಿಗೂ ಅವಿಸ್ಮರಣೀಯವಾಗಿತ್ತು.

ಹಾಗೆಯೇ ಇವರ ಹೇಳಿಕೆಯಿಂದಲೇ ಮೈಸೂರಿನ ಕದಂಬ ರಂಗೋತ್ಸವದಲ್ಲಿ ಅಣ್ಣಾ ವಾಲಿ ನಾಟಕ ಮತ್ತೊಮ್ಮೆ ಪ್ರಯೋಗಗೊಳ್ಳುವಂತಾಯಿತು.

ಹೀಗೆ ಎಲ್ಲಾ ರಂಗ ಕಲಾವಿದ ರನ್ನು , ರಂಗ ತಂಡ ಗಳನ್ನು ಸದಾ ಪ್ರೋತ್ಸಹಿಸಿ.. ರಂಗಭೂಮಿ ಕ್ರಿಯೆಗಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿರುವ .ಹೂಲಿ ಶೇಖರ್ ಸರ್ ಇವರ ಇಂದು ಜನ್ಮ ದಿನ.

ಶ್ರೀಯುತರ ಬಗ್ಗೆ…

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿ ಎಂಬ ಗ್ರಾಮ ದಲ್ಲಿ ಜನಿಸಿ, ದಾಂಡೇಲಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಪಡೆದು ಬೆಂಗಳೂರಿನಲ್ಲಿ ವಾಸವಾಗಿರುವರು. ಇವರು ಓರ್ವ… ಕರ್ನಾಟಕ ಕಂಡಿರುವ ಶ್ರೇಷ್ಠ ಸಾಹಿತಿ, ಕವಿ, ಕಾದಂಬರಿಕಾರ , ಕಥೆಗಾರ , ನಟ , ನಿರ್ದೇಶಕ , ಸಂಘಟಕ, ಕಿರುತೆರೆ ಧಾರಾವಾಹಿಯ ಕತೆ ಚಿತ್ರಕತೆ, ಸಂಭಾಷಣೆ ರಚನಾಕಾರ, ಅದರಲ್ಲೂ ಮುಖ್ಯವಾಗಿ ಇವರು ಜನಪ್ರಿಯ ನಾಟಕಕಾರ. ಇವರು ಬರೆದ ನಾಟಕಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡು ದೇಶದ ನಾನಾ ಕಡೆಗಳಲ್ಲಿ ಪ್ರಯೋಗ ಗೊಂಡಿರುವುದು ಇವರ ನಾಟಕದ ರಚನಾ ಪ್ರಕಾರ ಕ್ಕೆ ಸಾಕ್ಷಿಯಾಗಿದೆ.

ಜಾನಪದ, ಪೌರಾಣಿಕ, ಐತಿಹಾಸಿಕ ಹಾಗೂ ಸಮಕಾಲಿನ ವಿಷಯಗಳನ್ನು ಒಳಗೊಂಡ ನಾಟಕದ ವಸ್ತುಗಳು ಮತ್ತು ಭಾಷಾ ಶೈಲಿ ಇವರ ನಾಟಕದ ಜನಪ್ರಿಯತೆಗೆ ಕಾರಣವಾಗಿದೆ.

ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಜೊತೆಗೆ , ರಾಜ್ಯ ಮತ್ತು ಹೊರ ರಾಜ್ಯದ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊoಡಿರುವರು.

ಹಾರೈಕೆ…

ಸರ್… ನಿಮ್ಮ ಕಲಾ ಸೇವೆ , ಸಾಹಿತ್ಯ ಸೇವೆ. ಹೀಗೆಯೇ ಮುಂದುವರಿಯಲಿ…. ಇನ್ನಷ್ಟು ಪ್ರಶಸ್ತಿ ಬರಲಿ. ನಮ್ಮಂತ ಕಿರಿಯ ಕಲಾವಿದರಿಗೆ ,ನೀವು ಮಾದರಿಯಾಗಿ, ಮಾರ್ಗದರ್ಶಕರಾಗಿ . ಪ್ರೋತ್ಸಹಕರಾಗಿರಿ ಎಂದು ಆಶಿಸುತ್ತೇನೆ.

ಇಂದು ನಿಮ್ಮ ಜನುಮ ದಿನ. ಈ ಸಂದರ್ಭದಲ್ಲಿ ದೇವರು ನಿಮಗೆ ಆಯುರಾರೋಗ್ಯ, ಸುಖ- ಸಂಪತ್ತು ನೀಡಿ, ಮುಂದಿನ ದಿನಗಳು ನೆಮ್ಮದಿ ಯಾಗಿ.. ಸಂತಸದಿಂದಿರಲಿ. ಎಂದು ಪ್ರಾರ್ಥಿಸುತ್ತೇನೆ. ಹಾಗೆಯೇ…….

ಸರ್, ತಮಗೆ ನಾನು ಮತ್ತು ನಮ್ಮ ಸ್ನೇಹಜೀವಿ ತಂಡದ ಪರವಾಗಿ ಪ್ರೀತಿ ಪೂರಕವಾಗಿ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದೇನೆ .

ನಮಸ್ಕಾರ,

ಗಣೇಶ್ ರಾವ್ ಎಲ್ಲೂರು.

amma

ಹೂಲಿಶೇಖರ್ ಅವರ ಹಿಂದಿನ ಬರಹಗಳು : 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW