ದೀರ್ಘಾಯುಷಿ ಬುಡಕಟ್ಟು ಜನಾಂಗ ಹುಂಝಾ’ದ ಕೆಲ ಅಚ್ಚರಿಯ ವಿಚಾರಗಳು ಭಾಗ-01 ರಲ್ಲಿವೆ. ಅವರ ದೀರ್ಘಾಯುಷ್ಯ ಗುಟ್ಟುಗಳಾದ ಆಹಾರ ಕ್ರಮ, ಜೀವನಶೈಲಿ ಬಗ್ಗೆ ಓದಿದ್ದಾಗಿದೆ. ಈಗ ಮುಂದಿನ ಭಾಗವನ್ನು ಡಾ ಪ್ರಕಾಶ ಬಾರ್ಕಿ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ದೀರ್ಘಾಯುಷಿ ಹುಂಝಾ ಬುಡಕಟ್ಟು ಜನಾಂಗ
ನಮ್ಮ “ದೇಶದ ಅನಧಿಕೃತ ಪಾನೀಯ ಚಹಾ”. ಚಹಾ, ಚಾಯ್, ಚಾ.. ಎಂದರೇ ಬಹು ಜನರಿಗೆ ಅಚ್ಚು ಮೆಚ್ಚಿನ ಪಾನೀಯ. ದಿನಕ್ಕೆ ಎರಡರಿಂದ ಮೂರು ಸಾರೆ ಕುಡಿಯುವವರು ಇದ್ದಂತೆ, ಗಂಟೆಗೊಮ್ಮೆ ಗುಟುಕು ಬೇಕೆ ಬೇಕು ಎನ್ನುವವರು ಇದ್ದಾರೆ. ಚಹಾ ಎಂದರೆ ನಮಗೊಂದು “ಆತ್ಮೀಯ ಅನುಬಂಧ” ಇದರೊಳಗಿನ “ಕೆಫಿನ್” ಮೆದುಳು ಮತ್ತು ನರ ಮಂಡಲ ಉತ್ತೇಜಿಸುವ ಅಂಶ, ಹಾಗೆಯೇ ಚಹಾ ಬೇಕೆ ಬೇಕು ಎಂಬ ಚಟ ಹುಟ್ಟುಹಾಕುವ (Addiction) ಗುಣವುಳ್ಳದ್ದು. ಆವಾಗ ಚಹಾ ಅಪಾಯಕಾರಿ. ಹೆಚ್ಚಾದರೆ ಅಮೃತವು ವಿಷವಂತೆ.
ಆದರೆ…
ಹುಂಝಾ ಜನಾಂಗದ “ಜನಪ್ರೀಯ ಪಾನೀಯ” ಯಾವುದು ಅಂತ ತಡಕಾಡಿದಾಗ ಸಿಕ್ಕಿದ್ದು ಅಲ್ಲಿಯೂ ಚಹಾವೇ.. ಆದರೆ ನಮ್ಮ ಹಾಗೆ ಸಕ್ಕರೆ, ಚಹಾ ಪುಡಿ, ಸಕ್ಕರೆ,ಹಾಲು ಬಳಸುವುದಿಲ್ಲ. ಅದು Addictive ಸಹ ಅಲ್ಲ, ಅದೊಂದು ಆರೋಗ್ಯಕರ ಪಾನೀಯ. ದೇಹಕ್ಕೆ ಸಂಪೂರ್ಣ ಲಾಭ ತರುವ ಚಹಾ. ದೀರ್ಘಾವಧಿ ಜೀವನದ ಗುಟ್ಟು.
ಅದುವೆ “ಹುಂಜಾ ಟೀ”.

ಫೋಟೋ ಕೃಪೆ :google
ಹುಂಝಾ ಟೀ”ಗೆ ಬಳಸುವ ಪದಾರ್ಥಗಳು :
1 ಕಪ್ ಚಹಾಗೆ…..
2 ಕಪ್ ನೀರು.
3 ಪುದಿನಾ ಎಲೆ.
1 ತುಳಸಿ ಎಲೆ.
1 ದಾಲ್ಚಿನ್ನಿಯ ಚಿಕ್ಕ ತುಂಡು.
1 ಏಲಕ್ಕಿ
5 ಗ್ರಾಂ ಶುಂಠಿ.
5 ಗ್ರಾಂ ಬೆಲ್ಲ.
ಇವೆಲ್ಲವುಗಳನ್ನು ಸುಮಾರು 10 ನಿಮಿಷ ಚೆನ್ನಾಗಿ ಕುದಿಸಿ. ನಂತರ ಸೋಸಿಕೊಂಡು, ಅರ್ಧ ಹೋಳು ನಿಂಬೆ ಹಣ್ಣಿನ ರಸ ಸೇರಿಸಬೇಕು. ಇವಾಗ ” ಹುಂಝಾ ಟೀ” ತಯಾರು. ರುಚಿ ರುಚಿಯಾಗಿ ಸವಿಯಬಹುದು. ಇದರಲ್ಲಿ “ಕೆಫಿನ್” ಇಲ್ಲ, Addictive ಅಲ್ಲವೆ ಅಲ್ಲ. ಚಹಾದ ಮೋಹದಿಂದ ಪಾರಾಗಬಹುದು.
ಅವಶ್ಯಕತೆಗೆ ತಕ್ಕಷ್ಟು ಹುಂಜಾ ಟೀ ತಯಾರಿಸಿಕೊಳ್ಳಬಹುದು ಹುಂಝಾ ಟೀ ಲಾಭಗಳು :
* ವಯೋ ನಿರೋಧಕ (Anti-aging)
* ಉತ್ಕರ್ಷಣ ನಿರೋಧಕ (Antioxidants)
* ದೇಹದ ತೂಕ ಕಡಿಮೆ ಮಾಡಲು ಸಹಾಯಕಾರಿ.
* ಕಡಿಮೆ ಕ್ಯಾಲೋರಿ ಹೊಂದಿದೆ.
* ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ (Boost immunity)
* ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುವುದು.
* ಉರಿಯೂತ ನಿರೋಧಕ (Reduces inflammation)
* ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿರುವುದು.
* ಅದ್ಭುತ ರುಚಿಕರ ಪಾನೀಯ.
ಸುಲಭವಾಗಿ ತಯಾರಿಸಬಹುದಾದ ಆರೋಗ್ಯಕರ “ಹುಂಜಾ ಟೀ”ಯನ್ನು ದಿನನಿತ್ಯ ಬಳಸಬಹುದು. ತಯಾರಿಸುವುದು ಸುಲಭ ಮತ್ತು ಎಲ್ಲವೂ ಅಡುಗೆ ಮನೆಯಲ್ಲಿ ಬಳಸುವ ಪದಾರ್ಥಗಳೆ. ಆರೋಗ್ಯಕರವು ಹೌದು.
Online ಮಾರುಟ್ಟೆಗೂ ಲಗ್ಗೆ ಇಟ್ಟಿರುವ “ಹುಂಝಾ ಟೀ”, ವಿವಿಧ ಹೆಸರುಗಳಿಂದ ಭರ್ಜರಿ ಮಾರಾಟವಾಗುತ್ತಿವೆ. ನೀವು ತರಿಸಿಕೊಳ್ಳಬಹುದು. ದೀರ್ಘಾವಧಿಯ ಜೀವನಕ್ಕೊಂದು ಆರೋಗ್ಯಕರ ಪಾನೀಯ…
- ಡಾ. ಪ್ರಕಾಶ ಬಾರ್ಕಿ – ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು , ಕಾಗಿನೆಲೆ
