ಜಗತ್ವಿಖ್ಯಾತಿ ‘ಎಲಾನ್ ಮಸ್ಕ್’ ಹೇಳಿದ ಮಾತು…

” ಯಾವ ಕೆಲಸ ಮಾಡಲು ನಿಮಗೆ ಪ್ರೇರಣೆ ಬೇಕೋ, ಆ ಕೆಲಸ ಯಾವತ್ತೂ ಮಾಡಬೇಡಿ ” ಜಗತ್ವಿಖ್ಯಾತಿ ಎಲಾನ್ ಮಸ್ಕ್ ಹೇಳಿದ ಮಾತು. ಯಾಕೆ ಹೀಗೆ ಹೇಳುತ್ತಾರೆ ಎನ್ನುವುದಕ್ಕೆ ಯುವ ಬರಹಗಾರ ವಿಕಾಸ್ ಎಫ್ ಮಡಿವಾಳರ ಅವರು ಬರೆದ ಒಂದು ಚಿಂತನ ಲೇಖನ ತಪ್ಪದೆ ಓದಿ…

” ಯಾವ ಕೆಲಸ ಮಾಡಲು ನಿಮಗೆ ಪ್ರೇರಣೆ ಬೇಕೋ, ಆ ಕೆಲಸ ಯಾವತ್ತೂ ಮಾಡಬೇಡಿ ” ಜಗತ್ವಿಖ್ಯಾತಿ ಎಲಾನ್ ಮಸ್ಕ್ ಹೇಳಿದ ಮಾತು. ಸಾಮಾನ್ಯರಿಗೆ ಈ ಮಾತು ಸಹಜವೆನಿಸುತ್ತದೆ, ಆದರೆ ಸಾಧಿಸುವವರಿಗೆ ಈ ಮಾತು ಕೊಂಚ ತಲೆ ಕೆಡಿಸಿಬಿಡುತ್ತದೆ. ಪ್ರೇರಣೆ ಇಲ್ಲದೆ ಕೆಲಸ ಮಾಡಲು ಸಾಧ್ಯವೇ?. ಗುರಿ ಮುಟ್ಟಲು ಗುರುವೊಂದಿದ್ದರೆ ಸಾಲದು, ಅದನ್ನು ಸಾಧಿಸುವ ಛಲ ಇರಬೇಕು ಎಂದು ಅರಿತ ನಮಗೆ, ಈ ಮಾತು ತಲೆಗೆ ಹುಳ ಬಿಟ್ಟಂತೆ ಕಾಡುತ್ತದೆ….

ಪ್ರೇರಣೆ ಬಗ್ಗೆ ಚರ್ಚಿಸುವ ಮೊದಲು ಸ್ವಲ್ಪ ಎಲಾನ್ ಮಸ್ಕ್ ಅವರ ಜೀವನದ ಕಡೆ ಗಮನ ಹರಿಸೋಣ. ತಂದೆ ತಾಯಿ ವಿಚ್ಛೇಧನದಿಂದ ಹಿಡಿದು 179.8 ಬಿಲಿಯನ್ ಡಾಲರಗಳ ಒಡೆಯನಾದ ಕತೆ ಬಲು ರೋಮಾಂಚನೀಯ. 1971 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಎಲಾನ್ ನಿಗೆ ತೊಂದರೆಗಳು ಬೆನ್ನ ಹಿಂದೆ ಬಿದ್ದಿದ್ದವು. 1980 ರಲ್ಲಿ ಪಾಲಕರ ವಿಚ್ಛೇಧನದಿಂದ ಶುರುವಾಗಿ, ತಂದೆಯ ರಾಕ್ಷಸತ್ವ, ಸಹಪಾಠಿಗಳಿಂದ ಚೆಡಿಸುವಿಕೆಯಲ್ಲಿ ಬಾಲ್ಯ ಜೀವನ ಕಳೆಯಿತು. ಒಮ್ಮೆ ಅವರ ಶಾಲೆಯಲ್ಲಿ ಹಲವು ಹುಡುಗರು ಸೇರಿ ಎಲಾನ್ ರನ್ನು ಮೆಟ್ಟಿಲುಗಳಿಂದ ಜಾರುವಂತೆ ಕೆಳಗೆ ಎಸೆದು ಬಿಟ್ಟಾಗ ಮಸ್ಕ್ ಆಸ್ಪತ್ರೆಗೆ ದಾಖಲಾಗಿ ಹಲವಾರು ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಗಿ ಬಂದಿತ್ತಂತೆ…

ತಾಯಿಯ ಜೊತೆ ಎಲಾನ್ ಮಸ್ಕ್ (ಫೋಟೋ ಕೃಪೆ : CNBC)

ಮೋಜು ಮಸ್ತಿ, ಆಟ ಪಾಠದಲ್ಲಿ ಮುಳುಗುವ ವಯಸ್ಸಿನಲ್ಲಿ ಮಸ್ಕ್ ಕಂಪ್ಯೂಟರ್ ಪ್ರೋಗ್ರಾಮ್ ಗಳ ಬಗ್ಗೆ ಆಸಕ್ತಿ ವಹಿಸುತ್ತಾರೆ. ತಮ್ಮ ಹನ್ನೆರಡನೆಯ ವಯಸ್ಸಿಗೆ ‘ ಬ್ಲಾಸ್ಟರ್ ಟು ಪಿಸಿ ‘ ಹಾಗೂ ‘ ಆಫೀಸ್ ಟೆಕ್ನಾಲಜಿ ಮ್ಯಾಗಝಿನ್ ‘ ಎಂಬ ವಿಡಿಯೋ ಗೇಮ್ಗಳನ್ನು ನಿರ್ಮಿಸಿ ಸುಮಾರು 500 ಅಮೆರಿಕನ್ ಡಾಲರ್ ಗೆ ಮಾರಾಟ ಮಾಡುತ್ತಾರೆ. ಸ್ಪೇಸ್ ಎಕ್ಸ್, ಟೆಸ್ಲಾ ಮೋಟರ್ಸ್, ಹೈಪೆರ್ಲೊಪ್, ಸೋಲಾರ್ಸಿಟಿ ಇತ್ಯಾದಿ 7 ಕಂಪನಿಗಳಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸುವ ಮಸ್ಕ್ ಸಾಧಕನಿಗೂ ಒಂದು ಹೆಜ್ಜೆ ಮುಂದು ಇಟ್ಟು ಸಾಧನೆ ಎಂದರೆ ಏನು ಎಂದು ತೋರಿಸಿಕೊಡುತ್ತಾರೆ.

ಹಾಗಾದರೆ ಮಸ್ಕಿರಿಗೆ ಸೋಲು ಇರಲಿಲ್ಲವೇ?. ತಾವು ಇಡುವ ಪ್ರತಿ ಹೆಜ್ಜೆಯಲ್ಲೂ ಮಸ್ಕ್ ಸೋಲನ್ನು ಅನುಭವಿಸಿದ್ದರು. ಮೊದಲ ಸಲ ಸ್ಪೇಸ್ ಎಕ್ಸ್ ಕಂಪನಿಯಲ್ಲಿ ರಾಕೆಟನ್ನು ಮಂಗಳನ ಕಕ್ಷೆಗೆ ಬಿಟ್ಟಾಗ, ಅದು ಬೆಂಕಿ ಹತ್ತಿಕೊಂಡು ಉರಿದು ಬೂದಿಯಾಯಿತು. ಎರಡನೇ ಸಲ ರಾಕೆಟನ್ನು ಹಾರಿ ಬಿಟ್ಟಾಗ ಅದು ಆಫ್ ರೂಟಾಯ್ತು. ಮೂರನೇ ಸಲ ಹಾರಿ ಬಿಟ್ಟಾಗ ಮಂಗಳ ಕಕ್ಷೆಯಲ್ಲಿ ಆಫ್ ರೂಟಾಯ್ತು. ಸತತ ಮೂರು ಬಾರಿ ಸೋಲು ಅನುಭವಿಸಿದರೂ ಎದೆಗುಂದದ ಮಸ್ಕ್ ನಾಲ್ಕನೇ ಬಾರಿ ಗೆಲುವನ್ನ ಕಂಡರು.. ಮನೆ ಆಸ್ತಿ ಎಲ್ಲ ಮಾರಿ ಮಾಡಿದ ಪ್ರಯತ್ನಕ್ಕೆ, ತಕ್ಕ ಬೆಲೆ ಸಿಕ್ಕಿತು…

ತಂದೆಯ ಜೊತೆ ಎಲಾನ್ ಮಸ್ಕ್ (ಫೋಟೋ ಕೃಪೆ : people)

ಹಾಗಾದರೆ ಇಂತ ಸಾಧನೆ ಮಾಡಿದ ವ್ಯಕ್ತಿಗೆ ಪ್ರೇರಣೆ ಸಿಗಲಿಲ್ಲವೇ? ಎಲಾನ್ ಮಸ್ಕ್ ಹೇಳಿದ ಮಾತು ನಿಜವೇ ಎಂಬ ಪ್ರಶ್ನೆಗೆ ನನ್ನ ಉತ್ತರ, ಹೌದು ಎಲಾನ್ ಮಸ್ಕ್ ಅವರ ಮಾತು ನಿಜ. ಒಂದು ಕೆಲಸ ಮಾಡಲು ನಮಗೆ ಪ್ರೇರಣೆ ಬೇಕು. ಅದು ಒಳಗಿಂದ ಬಂದರೆ ನಾವು ಗುರಿಯನ್ನು ತಲುಪೆ ತಲುಪುತ್ತೇವೆ.

ಯೋಚನೆ ಮಾಡಿ, ಹೊರಗಿನ ಪ್ರೇರಣೆ ಅಂದರೆ ಏನು ಅಂತ. ನಮ್ಮಲ್ಲಿ ಒಂದು ಕೆಲಸ ಮಾಡಲು ಬೇಸರವಾದಾಗ ಒಂದು ಮೋಟಿವೆಷನಲ್ ವಿಡಿಯೋ ಅಥವಾ ಸ್ಪೀಚ್ ನೋಡುತ್ತೇವೆ. ಅದು ಜಾಸ್ತಿ ಅಂದರೆ ಒಂದು ದಿನ ನಮ್ಮನ್ನು ಮೋಟಿವೆಟ್ ಮಾಡುತ್ತದೆಯೇ ಹೊರತು ಜೀವನದುದ್ದಕ್ಕೂ ಅಲ್ಲ. ಅದನ್ನೆ ನಾವು ಹೊರಗಿನಿಂದ ಬರುವ ಪ್ರೇರಣೆ ಅಂತ ಕರೆಯುತ್ತೇವೆ.

ಹಾಗಾದರೆ ಒಳಗಿನಿಂದ ಬರುವ ಪ್ರೇರಣೆ ಯಾವುದು ಎಂಬುದು ನಮ್ಮನ್ನು ಕಾಡುವ ಪ್ರಶ್ನೆ. ಯಾವ ಗುರಿ ಸಾಧನೆಯಲ್ಲಿ ನಾವು ಸೋತಾಗ, ಅದರಿಂದ ಆದ ನೋವು, ಚುಚ್ಚು ಮಾತುಗಳು, ವಿಷಮ ಪರಿಸ್ಥಿತಿ ಇವೆಲ್ಲವನ್ನೂ ಎದುರಿಸಿ ನಾನು ಅದೇ ಜಾಗದಲ್ಲಿ ಸಾಧನೆ ಮಾಡುತ್ತೇನೆ. ಅವರಿಗೆ ತಕ್ಕ ಉತ್ತರ ಕೊಡುತ್ತೇನೆ ಎಂಬ ಛಲ ಹುಟ್ಟುತ್ತದೆಯಲ್ಲ ಅದೇ ಒಳಗಿನ ಪ್ರೇರಣೆ. ಒಂದು ಸಾರಿ ಆ ಛಲ ಹುಟ್ಟಿದರೆ, ನಾವು ಹಗಲು ರಾತ್ರಿ ಗುರಿಯ ಹಿಂದೆ ಬೀಳುತ್ತೇವೆ. ಗುರಿ ಸಾಧನೆಗಾಗಿ ಕಷ್ಟ ಪಡುತ್ತೇವೆ. ಕನಸಿನಲ್ಲೂ ಅದರ ಬಗ್ಗೆ ಯೋಚನೆ ಮಾಡುತ್ತೇವೆ ಹಾಗೂ ಕೊನೆಗೆ ಒಂದು ದಿನ ಸಾಧನೆ ಮಾಡಿ ತಿರುತ್ತೇವೆ. ಇದನ್ನೇ ಮಸ್ಕ್ ಹೇಳಿದ್ದು. ಒಂದು ಸಾರಿ ಒಳಗಡೆ ಪ್ರೇರಣೆ ಬಂದರೆ, ಹೊರಗಿನ ಪ್ರೇರಣೆಯ ಅವಶ್ಯಕತೆ ನಮಗೆ ಬೀಳುವುದಿಲ್ಲ. ಅದು ಗುರಿ ತಲುಪುವವರೆಗೂ ನಮ್ಮ ಜೊತೆಗೆ ನೆರಳಾಗಿ ಬರುತ್ತದೆ.


  • ವಿಕಾಸ್ ಎಫ್ ಮಡಿವಾಳರ – ಯುವ ಲೇಖಕ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW