‘ಇಂತೀ, ನಿನಗೆ ಸಲ್ಲದವಳು…!’ ಬಿಡುಗಡೆ ಸಮಾರಂಭ

ಕಾವ್ಯ ಪುನೀತ್ ಅವರ ‘ಇಂತೀ, ನಿನಗೆ ಸಲ್ಲದವಳು..!’ ಕವನ ಸಂಕಲನ, ಜನವರಿ 29 ರಂದು ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿ …

ಪುಸ್ತಕ : ಇಂತೀ, ನಿನಗೆ ಸಲ್ಲದವಳು..!
ಲೇಖಕರು : ಕಾವ್ಯ ಪುನೀತ್
ದಿನಾಂಕ : ಜನವರಿ 29 ಭಾನುವಾರ

ಯಾರಾದ್ರೂ ಯಾಕಾಗಿ ಅವರ ಸಮಯ ನಮಗಾಗಿ ಕೊಡ್ಬೇಕು ಹೇಳಿ ?? ಹಾಗೂ ಕೊಟ್ಟರು ಎಂದರೆ ಅವರ ಪ್ರೀತಿಯ ಹೊರೆಯ ಭಾರವನ್ನ ಎದೆಯಿಂದ ಇಳಿಸಿಕೊಳ್ಳುವುದಾದರು ಹೇಗೆ..??

ಹೀಗೆಯೇ ಅನಂತ ಕುಣಿಗಲ್ ಜೊತೆ “ಎದೆಯ ದನಿ ಕೇಳಿರೋ” ಪುಸ್ತಕದ ಬಗ್ಗೆ ಮಾತಾಡುತ್ತಾ ನನ್ನದೂ ಒಂದು ಕವನ ಸಂಕಲನ ಮಾಡ್ಬೇಕು ಅಂದೆ ಅಷ್ಟೇ. “ಸರಿ ಆಯ್ತು ರೆಡಿ ಮಾಡ್ಕೋ, ನನ್ನ ಪುಸ್ತಕಗಳ ಜೊತೆ ನಿನ್ನದು ಬಿಡುಗಡೆ ಆಗುತ್ತೆ” ಅಂದುಬಿಟ್ಟರು.

ಮುಖಪುಟ ರಚನೆ ಕೂಡ ಅವರದೇ ಕೈಚಳಕ. ಅದೆಷ್ಟು ಬಾರಿ ಅದೊಂಚೂರು ಹಿಂಗೆ ಬರಲಿ, ಇದೊಂದುಚೂರು ಹಿಂಗೆ ಇರಲಿ ಅಂದಾಗ “ಅತೃಪ್ತ ಆತ್ಮ ನಿಂದು” ಅಂತ ಬೈತಾ ಬೈತಾನೆ ಎಲ್ಲವನ್ನೂ ಮಾಡಿಕೊಟ್ಟದ್ದು ಅನಂತು. ಅದಷ್ಟೇ ಅಲ್ಲ ಪುಸ್ತಕದ ಪ್ರಿಂಟಿಗೆ ಅಗತ್ಯವಿರುವ ಒಂದೊಂದು ಕೆಲಸಕ್ಕೂ ಕೈಜೋಡಿಸಿ, ಅನಂತು ನನ್ನ ಮೇಲೆ ದೊಡ್ಡ ಋಣವನ್ನ ಹೇರಿ ಬಿಟ್ಟಿದ್ದಾರೆ.

ಶಾಂತ ಕುಮಾರಿ ಮೇಡಂನ ಒಂದೇ ಒಂದು ಮಾತಿನಲ್ಲಿ ಕೇಳಿದ್ದು ‘ಬೆನ್ನುಡಿ ಬರೆದುಕೊಡ್ತೀರಾ’ ಅಂತ. ಅದ್ಯಾಕೆ ಅವರು ಒಂದೇ ಸಲಕ್ಕೆ “ಓ.. ಯಸ್. ಖಂಡಿತಾ ಬರೆಯುತ್ತೇನೆ” ಅಂದು ಬಿಡಬೇಕು..! ವರ್ಷಾಂತ್ಯದ ಕೆಲಸಗಳ ಒತ್ತಡದ ನಡುವೆಯು ನಾನು ಕೇಳಿದ ಸಮಯಕ್ಕೆ ಸರಿಯಾಗಿ ಬರೆದುಕೊಟ್ಟು ಬಿಟ್ಟರೆ ಅವರ ಸರಳತೆಗೆ ಸಜ್ಜನಿಕೆಗೆ ಅಭಿಮಾನಿಯಾಗದೇ ನಾ ಹೇಗೆ ಉಳಿಯಲಿ.

ಒಂದೆರಡು ಮಾತಿನಲ್ಲಿ ಅನಿಸಿಕೆ ಬರೆದುಕೊಡಿ ತ್ರಿಭುವನ್ ಶ್ರೀಕಾಂತ್ ಸರ್ ಅಂದರೆ “ನಾನು ಯಾಕೆ? ಯಾರಾದ್ರೂ ಒಳ್ಳೆ ಸಾಹಿತಿಗಳಿಗೆ ಕೊಡಿ, ನಾನು ಬರೆಯೋದೇ ಇಲ್ಲ..” ಅಂತ ಹಟ ಹಿಡಿದವರು, ಹಠಾತ್ತನೆ “ಶುಭನುಡಿ” ಬರೆದೇ ಕೊಟ್ಟುಬಿಟ್ಟು, “ಅಂತೂ ಇಂತೂ ನನ್ನಿಂದ ಬರೆಸಿಕೊಂಡುಬಿಟ್ಟಿರಿ..” ಅಂತ ನನ್ನ ಅಚ್ಚುಮೆಚ್ಚಿನ ಬರಹಗಾರ ಹೇಳಿದರೆ ಖುಷಿಯ ಎಲ್ಲೆ ಮೀರದಿರಲು ಹೇಗೆ ಸಾಧ್ಯ.

ಇವೆಲ್ಲವೂ “ಇಂತೀ, ನಿನಗೆ ಸಲ್ಲದವಳಿಗೆ” ಸಂದ ಪ್ರೀತಿಗಳಲ್ಲದೇ ಮತ್ತೇನು. ಅವಳೀಗ ಸ್ವಲ್ಪ ನಿರಾಳ, ನಿಮ್ಮ ಓದಿಗೆ ಸಿಕ್ಕರೆ ಅವಳಿನ್ನೂ ಧನ್ಯ. ಇದೇ ತಿಂಗಳ 29ಕ್ಕೇ ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ.

ಸ್ಥಳ – ಸಮಯದ ವಿವರಗಳನ್ನು ಸದ್ಯದಲ್ಲೆ ಹಂಚಿಕೊಳ್ಳುತ್ತೇನೆ.

ಜನವರಿ 29 ಭಾನುವಾರ ನೆನಪಿರಲಿ, ಬರಲು ಅಣಿಯಾಗಿ ಸಿಗೋಣ.


  • ಕಾವ್ಯ ಪುನೀತ್

 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW